ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ
WELCOME TO DHARWAD DISTRICT POLICE BLOG

Thursday, April 6, 2017

CRIME INCIDENTS 06-04-2017

ದಿನಾಂಕ 06/04/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ತಡಸ ಕ್ರಾಸ್ ಹತ್ತಿರ ಆರೋಪಿತನಾದ ಮಹೇಶ ಜಪಾನಸಿಂಗ್ ಭಾಟ್, ವಯಾ: 41 ವರ್ಷ ಸಾ: ಮುತ್ತಳ್ಳಿ ತಾ: ಶಿಗ್ಗಾಂವ ಈತನು ಯಾವುದೇ ಪಾಸ್ ವ, ಪರವಾಣಿಗೆ ಹೊಂದದೇ ಜಪ್ತಾದ ಸರಾಯಿ ಟೆಟ್ರಾ ಪಾಕೀಟಗಳನ್ನು ತನ್ನ ಪಾಯ್ದೆಗೋಸ್ಕರ ಮಾರಾಟ ಮಾಡುವ ಕುರಿತು ತೆಗೆದುಕೊಂಡು ಹೋಗುತ್ತಿರುವಾಗ ದಾಳಿ ಕಾಲಕ್ಕೆ ಸಿಕ್ಕದ್ದು ಅವನಿಂದ  ಹೈವಟಱ 180 ಎಂ ಎಲ್  630 ಮೌಲ್ಯದ  ಪಾಕೇಟಳು ಹಾಗೂ ಓಲ್ಡ ಟ್ರವೀನ ಟೇಟ್ರಾಪಾಕೇಟ 180 ಎಂ ಎಲ್ ಮೌಲ್ಯದ ರೂ 1240-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 42/2017 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ , ಕಲಘಟಗಿ ಬ್ರ್ಯಾಂಚ್, ಆರೋಪಿತರಾದ  1] ಸದಾನಂದ ಶಶಿಧರ ನೇಸರಗಿ  2 ] ನಿಂಗರಾಜ ರಾಜಪ್ಪ  ಇವರಿಬ್ಬರು ಬ್ಯಾಂಕಿಗೆ ಸಂಪರ್ಕಿಸಿ  ಬಾಡಿಗೆಗಾಗಿ ಟ್ಯಾಕ್ಸಿ ಓಡಿಸಲು ತಾನು ಕಾರನ್ನು ಖರೀದಿಸಲು ಸುಳ್ಳು ದಾಖಲಾತಿಗಳನ್ನು ಒದಗಿಸಿ ಅರ್ಜಿಯನ್ನು ಸಲ್ಲಿಸಿ ಬ್ಯಾಂಕಿನಿಂದ 5, 85,000/- ರೂಗಳನ್ನು ಸಾಲವನ್ನು ಪಡೆದಿದ್ದು ತನ್ನ ಬಗ್ಗೆ ಸುಳ್ಳು ದಾಖಲಾತಿಗಳನ್ನು ಸಲ್ಲಿಸಿ ಇಬ್ಬರೂ ಸೇರಿ ಸುಳ್ಳು ದಾಖಲಾತಿ ಗಳನ್ನು ಬ್ಯಾಂಕಿಗೆ ಸಲ್ಲಿಸಿ  ಬ್ಯಾಂಕಿನಿಂದ ಸಾಲವನ್ನು ಪಡೆದು ನಂತರ ಕಾರನ್ನು ಖರೀದಿಸಿದ ಬಗ್ಗೆ ಆರ್.ಸಿ ಪುಸ್ತಕವನ್ನು ಮತ್ತು ಕಾರನ್ನು ಪರಿವೀಕ್ಷಣೆಗೆ ಹಾಜರಪಡಿಸದೇ , ಪಡೆದ ಸಾಲವನ್ನು ಬ್ಯಾಂಕಿಗೆ ಮರಳಿಸದೇ ಬ್ಯಾಂಕಿಗೆ ಮೋಸ ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣಿಯಲ್ಲಿ ಗುನ್ನಾನಂ119/2017 ಕಲಂ 420.465.463.425. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತ ಭೀರಪ್ಪ ತಂದೆ ಫಕ್ಕೀರಪ್ಪ ಹೆಬ್ಬಳ್ಳಿ ವಯಾ-35 ವರ್ಷ ಇವನು ಈಗ 05-06 ತಿಂಗಳ ಹಿಂದೆ ಬ್ಯಾಂಕ ಆಪ್ ಇಂಡಿಯಾದಲ್ಲಿ ಒಟ್ಟು 3 ಲಕ್ಷ ರೂಪಾಯಿ ಸಾಲ ಮಾಡಿ ಬೀಜ ಗೊಬ್ಬರ ಹಾಗೂ ಕೃಷಿ ಸಲಕರಣೆಗಳು ಖರೀದಿ ಮಾಡಿ  ಮುಂಗಾರಿ ಹಾಗೂ ಹಿಂಗಾರಿ ಪೀಕು ಬಿತ್ತಿದ್ದು ಪೀಕು ಸರಿಯಾಗಿ ಬಾರದೇ ಲುಕ್ಸಾನ ಆಗಿದ್ದು ಮಾಡಿದ ಸಾಲ ಹೇಗೆ ತೀರಿಸುವದು ಅಂತಾ ಹಾಗೂ ಪೀಕು ಲುಕ್ಸಾನ ಆಗಿದ್ದನ್ನು ಮಾನಸಿಕ ಮಾಡಿಕೊಂಡು ಅದೇ ಮಾನಸಿಕ  ಅಸ್ಥಿತಿಯಲ್ಲಿ ದಿನಾಂಕ 06-04-2017 ರಂದು ಮದ್ಯಾಹ್ನ 1400 ಗಂಟೆಗೆ ವನಹಳ್ಳೀ ಗ್ರಾಮದ ತನ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಜಂತಿಗೆ ಸಿರೇಯಿಂದ ತನ್ನಷ್ಟಕ್ಕೆ ತಾನೇ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ಅಂತಾ ಮೃತನ ಹೆಂಡತಿ ಕಮಲವ್ವ ಹೆಬ್ಬಳ್ಳಿ ಫಿಯಾಱಧಿ ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 16/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಇ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.