ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, April 10, 2017

CRIME INCIDENTS 10-04-2017

ದಿನಾಂಕ. 10-04-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ಆರೋಪಿ  ಅಕ್ಬರಸಾಬ ನದಾಫ ಸಾ:ನವಲಗುಂದ ಈತನು ದಿನಾಂಕ 12-03-2017 ರಂದು  ಸಂಜೆ 17-46 ಗಂಟೆಯ ಸುಮಾರಿಗೆ ತನ್ನ ಪೇಸಬುಕ್ಕ ಖಾತೆಯಲ್ಲಿ ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವ ರೀತಿಯಲ್ಲಿ ಪಾಕಿಸ್ತಾನ ರಾಷ್ಟ್ರಧ್ವಜ ಇರುವ ಗರುಡ ಭಾರತದ ರಾಷ್ಟ್ರಧ್ವಜ ಹೊಂದಿರುವ ಪಾರಿವಾಳದ ಮೇಲೆ ಕುಳಿತು ಕುಕ್ಕುತ್ತಿರುವ ರೀತಿಯಲ್ಲಿ ಚಿತ್ರ ತಯಾರಿಸಿ ಪೇಸಬುಕ್ಕನಲ್ಲಿ ಅಳವಡಿಸಿದ ಅಪರಾಧ. ಈ ಕುರಿತು ನವಲಗುಂದ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

2) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 09-04-2017 ರಂದು ಸಾಯಂಕಾಲ 6-00 ಗಂಟೆಗೆ ತಾರಿಹಾಳ ಇಂಡಸ್ಟ್ರೀಯಲ್ ಏರಿಯಾದ ಜೆ & ವಿ ಇಂಡಸ್ಟ್ರೀಸ್ ಕಂಪನಿಯ ಗೇಟ್ ಮುಂದೆ ನಿಂತಿದ್ದ ಸಾಕ್ಷಿದಾರ ಸೋಮಪ್ಪ ಹುಡೇದ ಇವರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಅಪರಿಚಿತ ಆರೋಪಿತರು ಜಗಳ ತೆಗೆದು, ಕೈಯಿಂದ ಹೊಡಿ ಬಡಿ ಮಾಡುತ್ತಿದ್ದಾಗ, ಬಾಯಿ ಆಗುವುದನ್ನು ಕೇಳಿ ಪಿರ್ಯಾದಿ ಅಬ್ದುಲ್ ರಹೆಮಾನ ಮತ್ತು ಸಾಕ್ಷಿದಾರ ಮಹ್ಮದ ಶಾಕೀರ ಹುಸೇನ್ ಇಬ್ಬರು ಬಂದು ಜಗಳ ಬಿಡಿಸಿದ್ದು, ಅರೋಪಿತರು ಸಿಟ್ಟಾಗಿ, ನಮ್ಮ ಜನರನ್ನು ಕರೆದುಕೊಂಡು ಬರ್ತಿವಿ, ನಿಮಗ ಬಿಡುವುದಿಲ್ಲ ಅಂತ ಧಮಕಿ ಹಾಕಿ ಹೋಗಿದ್ದು, ಅದೇ ದಿವಸ ದಿನಾಂಕ: 09-04-2017 ರಂದು ರಾತ್ರಿ 8-00 ಗಂಟೆಗೆ ಮೂರು ಬೈಕ್ ಗಳಲ್ಲಿ ಬಂದ 6 ಜನ ಅಪರಿಚಿತ ಆರೋಪಿತರು, ಗೇಟ್ ಮುಂದೆ ನಿಂತಿದ್ದ ಸಕ್ಷಿದಾರ ಸೋಮಪ್ಪ ಹುಡೇದ ಇವನಿಗೆ ಅವಾಚ್ಯ ಬೈದಾಡಿದ್ದು, ಅವರು ಹೆದರಿ ಓಡಿ ಪಿರ್ಯಾದಿದಾರ ಅಬ್ದುಲ್ ರೆಹಮಾನ ಮತ್ತು ಸಾಕ್ಷಿದಾರ ಮಹ್ಮದ ಶಾಕೀರ ಹುಸೇನ ಇವರ ರೂಂಗೆ ಹೋಗಿದ್ದು, 6 ಜನ ಆರೋಪಿತರು ಫ್ಯಾಕ್ಟರಿ ಕಾಂಪೌಂಡ್ ಒಳಗೆ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿದಾರ ಮತ್ತು ಸಾಕ್ಷಿದಾರರು ಇದ್ದ ರೂಂನ ಒಳಗೆ ಅಕ್ರಮ ಪ್ರವೇಶ ಮಾಡಿ, ಅಬ್ದುಲ್ ರೆಹಮಾನ ಮತ್ತು ಮಹ್ಮದ ಶಾಕೀರ ಹುಸೇನಗೆ ಕೈಯಿಂದ ಹೊಡಿ ಬಡಿ ಮಾಡಿ, ಅದರಲ್ಲಿ ಒಬ್ಬ ಆರೋಪಿತನು ಅಬ್ದುಲ್ ರೆಹಮಾನ ಇವರಿಗೆ ಇಟ್ಟಿಗೆಯ ತುಂಡಿನಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿದ್ದಲ್ಲದೇ, ಆರೋಪಿತರೆಲ್ಲರೂ ರೂಂನಲ್ಲಿದ್ದ ಫ್ಯಾನ್, ಇಲೆಕ್ಟ್ರಿಕ್ ಓವನ್, ಸಿ. ಡಿ ಪ್ಲೇಯರ್ ನ್ನು ಒಡೆದು ಲುಕ್ಸಾನಪಡಿಸಿದ್ದಲ್ಲದೇ, ಆರೋಪಿತರೆಲ್ಲರೂ ಪಿರ್ಯಾದಿ ಮತ್ತು ಸಾಕ್ಷಿದಾರರಿಗೆ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಮೃತನು ಈಶ್ವರಪ್ಪ ಪೂಜಾರ ತನಗಿದ್ದ ಎಡ್ಸ ಖಾಯಿಲೆ ಇದ್ದ ಮಾಹಿತಿ ತಿಳಿದು ಮಾನಸಿಕ ಮಾಡಿಕೊಂಡು ತನ್ನಷ್ಟಕ್ಕೆ ತಾನೆ ದಿನಾಂಕ 10-04-2017 ರಂದು 11-30 ಗಂಟೆಯಿಂದ 13-00 ಗಂಟೆ ನಡುವಿನ ಅವಧಿಯಲ್ಲಿ ತನ್ನ ಮನೆಯ ಅಡುಗೆ ಮನೆಯಲ್ಲಿ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ಅಂತಾ ಮೃತನ ಹೆಂಡತಿ ವರದಿ ನೀಡಿದ್ದು ಅದೆ . ೀ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

4) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:09-04-2017 ರಂದು ಸಂಜೆ 6-00 ಗಂಟೆಯಿಂದ 7-00 ಗಂಟೆಯ ನಡುವಿನ ಅವಧಿಯಲ್ಲಿ, ಬಸವಂತಪ್ಪ ಬಸಪ್ಪ ಹೊಸಮನಿ ಸಾ: ಗೋಕುಲ, ತಾ: ಹುಬ್ಬಳ್ಳಿ ರವರ ಜಮೀನದಲ್ಲಿ ಪೊತಿ ಮಂಜುನಾಥ ತಂದೆ ವೆಂಕಪ್ಪ ಡೋಣಿ ವಯಾ 30 ವರ್ಷ ಸಾ: ಗೋಕುಲ, ನಂದನಗೋಕುಲ ಓಣಿ ತಾ: ಹುಬ್ಬಳ್ಳಿ ಇತನು ಆಡುಗಳನ್ನು ಕಾಯುತ್ತಿರುವಾಗ ಸಿಡಿಲು ಬಡಿದು ಮೃತಪಟ್ಟಿರುತ್ತಾನೆ ವಿನಃ ಸದರಿಯವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ವರಧಿಗಾರಳ ವರದಿಯಲ್ಲಿ ನಮೂದಿಸಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.