ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, April 17, 2017

CRIME INCIDENTS 17-04-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 17/04/2017 ರಂದು ವರದಿಯಾದ ಪ್ರಕರಣಗಳು
1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಮಣಕವಾಡ ಗ್ರಾಮದ ಆರೋಪಿತರಾದ 1.ಬಸವಣ್ಣಿವಪ್ಪಾ ಮೊರಬದ 2.ಅಡಿವೆಪ್ಪಾ ಲಗಳಿ 3. ಆನಂದ ಹೊಸರು 4.ಬಸವರಾಜ ಜಲ್ಲಿ 5.ಸೋಮರೆಡ್ಡಿಹುಲಿ 6.ಚಂಬಣ್ಣ ಪಾಟೀಲ್ 7.ಅರುಣ ಚಾಕಲಬ್ಬಿ 8.ಆನಂದ ಸುಂಕದ 9.ಮುತ್ತಪ್ಪಾ  ಭದ್ರಪುರ 10.ಕೆಂಚಪ್ಪಾ ಹರಟ್ಟಿ  ಇವರೆಲ್ಲರೂ ಕೊಡಿಕೊಂಡು ಗುಂಪು ಕಟ್ಟಿಕೊಂಡು ಮಣಕವಾಡ ಗ್ರಾಮದ ಹಳೇ ಪಂಚಾಯತಿ ಮುಂದುಗಡೆ  ಈಶ್ವರಪ್ಪಾ ಮರೆಪ್ಪನವರ ಅವರ  ಸಂಗಡಿಗರು ಅಂಬೇಡ್ಕರ ಭಾವಚಿತ್ರದ ಮೆರವಣಿಗೆಯನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಲೇ ಅವಾಚ್ಯ ಶಬ್ದಗಳಿಂದ ಬೈದಾಡಿ  ತರುಬಿ ಕೈಯಿಂದ ಮತ್ತು ಬಡಿಗೆ, ಕಬ್ಬಿಣದ ರಾಡು, ಕಲ್ಲುಗಳನ್ನು ಹಿಡಿದುಕೊಂಡು ಹೊಡಿ ಬಡಿ ಮಾಡಿ ಹೆಣ್ಣು ಮಕ್ಕಳ ಸೀರೆಯನ್ನು ಹಿಡಿದು ಎಳೆದಾಡಿದ್ದು ಅಲ್ಲದೇ ಊರಲ್ಲಿ ಮಠದ ಒಳಗಡೆ ಬರದಂತೆ ನಿಷೇದಿಸಿದ್ದು  ಹಾಗೂ ಕಟಿಂಗ ಅಂಗಡಿ ಮತ್ತು ಚಹಾ ಅಂಗಡಿ  ಪ್ರವೇಶ ಮಾಡದಂತೆ ನಿಷೇದಿಸಿದ್ದು ಹಾಗೂ ಜಾತಿ ನಿಂದನೇ ಮಾಡಿ ಅವ್ಯಾಚ್ಯ ಬೈದಾಡಿ ಜೀವಧ ಬೆಧರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 57/2017 ಕಲಂ  IPC 1860 (U/s-143,147,148,323,324,341,354,504,506,149); The SC & ST (Prevention of Atrocities) Amendment Act 2015 (U/s-3(1)(s)) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ
2. ಗರಗ ಪೊಲೀಸ ಠಾಣೆ ವ್ಯಾಪ್ತಿಯ:  ಹೊಸತೇಗೂರ ಗ್ರಾಮದ ಹತ್ತಿರ ಧಾರವಾಡದಿಂದಾ ಬೆಳಗಾವಿ ಕಡೆಗೆ ಹೋಗುವ ಪಿ.ಬ.ರಸ್ತೆಯ ಮೇಲೆ ದಿಲಾವರ ದಾಬಾ ಹತ್ತಿದ  ಚಾಲಕನಾದ ಸುನೀಲ ಕುಮಾರ ಕೆ ಇತನು  ತನ್ನ ಕಂಟೇನರ ಮಿನಿ ಲಾರಿ ನಂಬರಃ ಕೆಎಃ19/ಎಬಿ/8775 ನೇದ್ದನ್ನು ಧಾರವಾಡ ಕಡೆಯಿಂದಾ ಬೆಳಗಾವಿ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದು ರಸ್ತೆ ಬದಿಗೆ ನಿಂತ ಟಾಟಾ ಐರಿಷ ಪ್ಯಾಸೆಂಜರ ಗಾಡಿ ನಂಬರಃ ಕೆಎಃ25/ಜಡ್/4625 ನೇದ್ದಕ್ಕೆ ಹಿಂದೆ ಢಿಕ್ಕಿ ಮಾಡಿ ಅಪಘಾತಪಡಿಸಿ ಅದರಲ್ಲಿದ್ದ 3 ಜನರಿಗೆ ಸಾದಾ ವ ಭಾರಿ ಸ್ವರೂಪದ ಗಾಯಪಡಿಸಿದ್ದು ಇರುತ್ತದೆ ಈ ಕುರಿತು  ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 55/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3. ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ : ಬ್ಯಾಹಟ್ಟಿ ಗ್ರಾಮದ ಮೃತ  ಶ್ರೀಮತಿ ಮಹಾದೇವಿ ಕೋಂ ಮಲ್ಲಿಕಾರ್ಜುನ ಬೈಲಮ್ಮನವರ ವಯಾ. 40 ವರ್ಷ ಸಾ. ಬ್ಯಾಹಟ್ಟಿ ಇವರು ಜೀವನದಲ್ಲಿ ಜಿಗುಪ್ಸೆ ಹೊಂದಿ, ಮನೆಯಲ್ಲಿ ತನ್ನಷ್ಟಕ್ಕೆ ತಾನೇ ಮೈಮೇಲೆ ಸೀಮೆ ಎಣ್ಣಿ ಸುರುವಿಕೊಂಡು, ಬೆಂಕಿ ಹಚ್ಚಿಕೊಂಡು ಸುಟ್ಟುಕೊಂಡು ಮೃತಪಟ್ಟಿದ್ದು ವಿನಃ ಸದರಿಯವರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಮೃತರ ತಾಯಿ ಕಮಲವ್ವ ಕೋಂ ವೀರಪ್ಪ ಬಣಗಾರ ಸಾ. ಯಮನೂರ ವರದಿ ಕೊಟ್ಟಿದ್ದು, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ  ಯು.ಡಿ.ನಂ  15/2017 ಕಲಂ: 174 ಸಿ.ಆರ್.ಪಿ.ಸಿ ನೇದ್ದಕ್ಕೆ ದಾಖಲಿಸಿಕೊಂಡಿದ್ದು ಇರುತ್ತದೆ.
4.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಕಾರವಾರ ರಸ್ತೆ ಮೇಲೆ ಅಟೋ ರಿಕ್ಷಾ ನಂ. ಕೆಎ-63/0237 ನೇದ್ದರ ಚಾಲಕ ಅರುಣ ಚಂದ್ರಗೌಡ ಪಾಟೀಲ್ ಇವನು ಅಟೋ ರೀಕ್ಷಾವನ್ನು ಅತೀ ವೇಗ ವ  ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ವೇಗದ ನಿಯಂತ್ರಣ ಮಾಡಲಾಗದೇ ರಾಮನಾಳ ಕ್ರಾಸ್ ಹತ್ತಿರ ಪಲ್ಟಿ ಮಾಡಿ ಕೆಡವಿ ತಾನು ಗಾಯಗೊಂಡಿದ್ದಲ್ಲದೇ  ರೀಕ್ಷಾದಲ್ಲಿದ್ದ  ಗುರುಪಾದಪ್ಪ ರೇವಣೆಪ್ಪ ಹುಬ್ಬಳ್ಳಿ  ಇವನಿಗೆ ಹಾಗೂ ಎರಡು ಜನ  ಗಾಯಾಳುಗಳಿಗೆ ಉಪಚಾರಕ್ಕೆ ಸಹಕರಿಸದೇ ಪೊಲೀಸ್ ಠಾಣೆಗೆ ಮಾಹಿತಿ ನೀಡದೇ  ಅಟೋ ರೀಕ್ಷಾಸಮೇತ ಪರಿಯಾಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ.140/2017 ಕಲಂ 279.337.338. ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

5. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:  ಆರೆ ಕುರಹಟ್ಟಿ ಗ್ರಾಮದ ಆರೋಪಿತರಾದ 1.ಜಗದೀಶ ಗುಡಗೇರಿ 2.ಶಾಂತವ್ವ ಗುಡಗೇರಿ  ಇವರು  ಹನುಮಂತಪ್ಪ ಸುಳ್ಳದ ಇವರಿಗೆ ಕೊಟ್ಟ 50000 ರೂ ಕೈಗಡ ಸಾಲ ಮರಳಿ ಕೊಡಲು ಕೇಳಿದರ ಸಿಟ್ಟಿನಿಂದಾ ಮನೆಗೆ ಅತೀಕ್ರಮಣ ಪ್ರವೇಶ ಮಾಡಿ ಪಿರ್ಯಾದಿಗೆ ಕೈಯಿಂದ ಹೊಡಿ ಬಡಿ ಮಾಡಿ ಬಿಡಿಸಲು ಬಂದ ಹೆಂಡತಿಯ ಸೀರೆ ಜಗ್ಗಾಡಿ ಕೈಯಿಂದಿ ಹೊಡಿ ಬಡಿ ಮಾಡಿದಲ್ಲದೇ ಮಗನಿಗೂ ಹೊಡಿ ಬಡಿ ಮಾಡಿ ಅವಾಚ್ಯ ಬೈದಾಡಿ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 46/2017 ಕಲಂ 323.324.354.447.452.504.506.34 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.