ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, April 19, 2017

CRIME INCIDENTS 19-04-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 18/04/2017 ರಂದು ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಹಿಂಡಸಗೇರಿ ಗ್ರಾಮದ ಮೃತ ಕಲ್ಲಪ್ಪ ತಂದೆ ಬಸಪ್ಪ ಕರಬಸಣ್ಣವರ ವಯಾ 70 ವರ್ಷ ಸಾ|| ಹಿಂಡಸಗೇರಿ ಇವನಿಗೆ ಅಜಮಾಸ ಆರು ತಿಂಗಳ ಹಿಂದೆ ಲಕ್ವಾ ಹೊಡೆದಿದ್ದು ಅದಕ್ಕೆ ಇದ್ದ ಊರಲ್ಲಿ ಹಾಗೂ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಮತ್ತು ಅಂಕೋಲಾ ತಾಲೂಕ ಬಾಳಂಬರದಲ್ಲಿ ತೋರಿಸಿ ಮನೆಯಲ್ಲಿ ಉಪಚಾರ ಮಾಡಿಸಿಕೊಂಡು ಬಂದವನು ಅಡ್ಡಾಡಲು ಬಾರದೆ ಇದ್ದವನು ಮನೆಯಲ್ಲಿ ಯಾರು ಇಲ್ಲದ ವೇಳೆ ಅವನು ಮಲಗುವಲ್ಲಿ ಹಚ್ಚಿ ಇಟ್ಟ ಚೀಮಣಿಯನ್ನು ಅಕಸ್ಮಾತ ಕೈ ಬಡಿದು ಸುಡುವಾಗ ಅಕ್ಕ ಪಕ್ಕದ ಜನರು ಬಂದು ಬೆಂಕಿ ಆರಿಸಿ 108 ಅಂಬುಲೆನ್ಸ್ ಗಾಡಿಯಲ್ಲಿ ಹಾಕಿಕೊಂಡು ಕಲಘಟಗಿ ಸರಕಾರಿ ದಾವಾಖಾನೆಗೆ ತೋರಿಸಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲ್ ಮಾಡಿದವನು ಉಪಚಾರದಿಂದ ಗುಣ ಹೊಂದದೆ ಮೃತಪಟ್ಟಿದ್ದು ಅವನ ಮರಣದಲ್ಲಿ ಬೇರೆ ಯಾವ ಸಂಶಯ ವಿರುವುದಿಲ್ಲ ಅಂತಾ ಬಸವರಾಜ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 28/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.