ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, April 20, 2017

CRIME INCIDENTS 20-04-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 20/04/2017 ರಂದು ವರದಿಯಾದ ಪ್ರಕರಣಗಳು

1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ನಾಗರಹಳ್ಳಿ ಗ್ರಾಮದ ಶಂಕರಪ್ಪಾ ಕಾರಣ್ಣವರ  ಇವರಿಗೆ ಆರೋಪಿತರಾದ 1.ಬಸಪ್ಪಾ ಕಾರಣ್ಣವರ 2.ಶಂಕರಪ್ಪಾ ಕಾರಣ್ಣವರ ಹಾಗೂ ಇನ್ನೂ 10 ಜನರು ಕೊಡೊಕೊಂಡು ಹೊಡಿ ಬಡಿಮಾಡುತ್ತಾ ಬಂದಿದ್ದು ಜೈಲಿ ಗೆಕಳಿಸಬೇಕು ಅಂತಾ ಉದ್ದೇಶದಿಂದ  ಆವೇಳೆ ನಾವೆ ತಲೆಒಡೆದುಕೊಂಡು ಕೇಸಕೊಟ್ಟೀವಿ ನಿನ್ನ ಸರಕಾರಿನೌಕರಿ ನೀರಹನಿಸುತ್ತೇವೆ. ಅಂತಾ ಬಾಯಿಗೆ ಬಂದಂತೆ ಬೈದಾಡಿ ಕೈಯಿಂದ ವ ಬಡಿಗೆಯಿಂದ  ಹೊಡಿ ಬಡಿ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 59/2017 ಕಲಂ 143.147.148.323.324.504.506.149 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ  ಪೊಲೀಸ್ ಠಾಣಾ ವ್ಯಾಪ್ತಿಯ: ಕುಂದಗೋಳ-ರಾಮನಕೊಪ್ಪ ರಸ್ತೆ ಮೇಲೆ ಹಂಚಿನಾಳ ಗ್ರಾಮದ ಹತ್ತಿರ ಇದರಲ್ಲಿ ಆರೋಪಿತನಾದ ಲಾಲಸಾಬ ಮಹ್ಮದಗೌಸ ಚಾಂದಖಾನವರ. ಸಾ: ಹಂಚಿನಾಳ, ತಾ: ಕುಂದಗೋಳ ಈತನು ತಾನು ನಡೆಸುತ್ತಿದ್ದ ಕ್ರ್ಯೂಸರ ಗಾಡಿ ನಂ ಕೆ.ಎ-35/7528 ನೇದ್ದನ್ನು ಕುಂದಗೋಳ ಕಡೆಯಿಂದ ಹಂಚಿನಾಳ ಕಡೆಗೆ ಅತೀ ಜೋರಿನಿಂದ ವ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಯಲಿವಾಳ ಕಡೆಯಿಂದ ಬಿಳೆಬಾಳ ಕಡೆಗೆ ಹೊರಟ ಮೋಟಾರ ಸೈಕಲ ನಂ ಕೆ.ಎ-25/ಇ.ಡಿ-3847 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಪ್ರಭು ರಾಮಪ್ಪ ಹಾಗೂ ಮಂಜುನಾಥ ಮಹಾದೇವಪ್ಪ ಬಾಗಲ ಈತನಿಗೆ ಸಾಧಾ ವ ಭಾರೀ ಗಾಯಪೆಟ್ಟುಗಳಾಗುವಂತೆ ಮಾಡಿ ಮೋಟಾರ ಸೈಕಲ್ ಗೆ ಜಖಂಗೊಳಿಸಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 58/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ
3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಕಮಡೊಳ್ಳಿ ಗ್ರಾಮದ  ಆರೋಪಿತರಾದ 1) ಮಹ್ಮದಹುಸೇನ ರಾಯೇಸಾಬ ಅಲ್ಲೀಖಾನವರ, 2) ರಾಯೇಸಾಬ ಮೀರಾಸಾಬ ಗೈಬೂನವರ, 3) ಫಕ್ರುಸಾಬ ಹುಸೇನಸಾಬ ತಾಳಿಕೋಟಿ, 4) ಶಬ್ಬೀರ ಬಾಬಾಜಾನ ತಾಳಿಕೋಟಿ, 5) ಸಲೀಮ ಬಾಬಾಜಾನ ತಾಳಿಕೋಟಿ, 6) ಬುಡ್ಡೇಸಾಬ ಮಾಬುಸಾಬ ತಾಳಿಕೋಟಿ, 7) ಸುಲ್ತಾನಸಾಬ ಗೈಬೂನವರ, 8) ಖಾದರಸಾಬ ಸುಲ್ತಾನಸಾಬ ಗೈಬೂನವರ, ಸಾ: ಎಲ್ಲರೂ ಕಮಡೊಳ್ಳಿ ಇವರು ರಾಮಚಂದ್ರ ಬಡಗೇರ  ಅವರ ಅಣ್ಣ ನಾರಾಯಣ ಬಡಿಗೇರ ಇವರೊಂದಿಗೆ ಬಡಿಗತನ ಹಾಗೂ ವೆಲ್ಡಿಂಗ್ ಮಶೀನ್ ಗಳನ್ನು ಬೇರೆ ಎಲ್ಲಿಗಾದರೂ ತೆಗೆದುಕೊಂಡು ಹೋಗಿರಿ, ಅದರಿಂದ ಆಗುವ ಶಬ್ದದಿಂದ ತಮಗೆ ತೊಂದರೆಯಾಗುತ್ತದೆ ಹಾಗೂ ಗುಂಪುಕಟ್ಟಿಕೊಂಡು ಬಂದು ಗ್ಯಾರೇಜಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಅವರಿಗೆ ಅಡ್ಡಗಟ್ಟಿ ತರುಬಿ ಕೈಯಿಂದ ಹೊಡೆ ಬಡೆ ಮಾಡಿ, ಅವಾಚ್ಯ ಬೈದಾಡಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಂಣೆಯಲ್ಲಿ ಗುನ್ನಾನಂ 59/2017 ಕಲಂ 143.147.448.323.341.504.506.149 ಐಪಿಸಿ ನೇದ್ದರಲ್ಲಿ ಪ್ರಕರಣವವನ್ನು ದಾಖಲಿಸಿದ್ದು ಇರುತ್ತದೆ.
4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಸವದತ್ತಿ ರಸ್ತೆ ಹಾರೋಬೆಳವಡಿ ಗ್ರಾಮದ ಹತ್ತಿರವಿರುವ ಪೆಟ್ರೋಲ ಪಂಪ ಹತ್ತಿರ ರಸ್ತೆಮೇಲೆ ನಮೂದು ಮಾಡಿದ ಯಾವುದೋ ಒಂದು ಕಾರ ಚಾಲಕನು ತನ್ನ ಕಾರನ್ನು ಸವದತ್ತಿ ಕಡೆಯಿಂದ ಧಾರವಾಡ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಕಾರನ ವೇಗ ನಿಯಂತ್ರಣ ಮಾಡಲಾಗದೇ ರಸ್ತೆ ಎಡಸೈಡಿನಲ್ಲಿದ್ದ ಚನ್ನಮ್ಮ ತಂದೆ ಶಾಂತಪ್ಪ ಚವಡಣ್ಣವರ ವಯಾ-22 ವರ್ಷ, ಮಹಾಬಳೇಶ್ವರ ನಾಗಪ್ಪ ಹಿರಕೋಣ್ತಿ ವಯಾ-35 ವರ್ಷ ಇವರುಗಳಿಗೆ ಡಿಕ್ಕಿಪಡಿಸಿ ತೀರ್ವ ಗಾಯಪಡಿಸಿ ಮೃತಪಡಿಸಿದ್ದಲ್ಲದೇ ಮಂಜಪ್ಪ ಬಸಪ್ಪ ಚವಡಣ್ಣವರ ವಯಾ-27 ವರ್ಷ, ತಿರುಪತಿ ತಿಮ್ಮಪ್ಪ ಚವಡಣ್ಣವರ ವಯಾ-24 ವರ್ಷ, ಅಣ್ಣಪ್ಪ ಶಾಂತಪ್ಪ ಚವಡಣ್ಣವರ ವಯಾ-20 ವರ್ಷ ಇವರುಗಳಿಗೆ  ಡಿಕ್ಕಿಪಡಿಸಿ ಸಾದಾ ಗಾಯಪಡಿಸಿ ಟ್ರ್ಯಾಕ್ಟರ ಎಂಜಿನಗೂ ಸಹ ಡಿಕ್ಕಿಪಡಿಸಿ ಕಾರ ಸಮೇತ ಪರಾರಿಯಾಗಿ ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀನಪೊಲೀಸ್  ಠಾಣೆಯಲ್ಲಿ ಗುನ್ನಾನಂ 79/2017 ಕಲಂ 279.337.304(ಎ) ಹಾಗೂ ವಾಹನ ಕಾಯದೆ 134.187 ನೇದ್ದರಲ್ಲಿಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ವರೂರ ಹದ್ದಿಯ ವ್ಹಿ.ಆರ್.ಎಲ್ ಫಾರ್ಮಹೌಸದ ಕಂಪೌಂಡ್ ಒಳಗಿನ ಗಾರ್ಡನದಲ್ಲಿಯ ಒಟ್ಟು 5 ಶ್ರೀಗಂಧದ ಮರಗಳನ್ನು ಕೊರೆದು ಅವುಗಳ ಬಡ್ಡಿ ಅ!!ಕಿ!! 30000 ರೂ ಕಿಮ್ಮತ್ತಿನವುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ  ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 92/2017 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
6. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ :ಶಿರಗುಪ್ಪಿ ಗ್ರಾಮದ ಮೃತ ಭೀಮರಾಜ ಶೆಟ್ಟರ ಇತನು ತನ್ನಷ್ಟಕ್ಕೆ ತಾನೇ ಅಂಗಡಿಯ ಎಂಗಲರ್ ಪಟ್ಟಿಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ವಿನಃ ಸದರಿಯವನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಪ್ರಭಾಕರ ಶೆಟ್ಟರ ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 16/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.
 7.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಗದಗ ರಸ್ತೆಯ ಮೇಲೆ ಬಂಡಿವಾಡ ಕ್ರಾಸ ಸಮೀಪ, ಇದರಲ್ಲಿ ಆರೋಪಿತನಾದ ಕನಕಪ್ಪ @ ಮುತ್ತು ಸಾ: ಕಿರೆಸೂರ ತಾ: ಹುಬ್ಬಳ್ಳಿ ಇತನು ಇಂಡಿಕಾ ಕಾರ ನಂ: ಕೆ.ಎ-02/ಎ.ಬಿ-9534 ನೇದನ್ನು ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಹೋಗಿ, ತನ್ನ ಮುಂದೆ ಹೋಗುತ್ತಿದ್ದ ಪಿರ್ಯಾದಿ ಶಂಕರಪ್ಪ ಹನಮಂತಪ್ಪ ಸಿಂಗಮ್ಮನವರ ಸಾ: ಬ್ಯಾಹಟ್ಟಿ ಇತನ ಬಾಬತ್ತ ಚಕ್ಕಡಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಚಕ್ಕಡಿಯಲ್ಲಿದ್ದ ಸಹೋದರರ ಮಕ್ಕಳಾದ 2) ಅಭಿಷೇಕ ಬಸಪ್ಪ ಸಿಂಗಮ್ಮನವರ 3) ಮಲ್ಲಿಕಾರ್ಜುನ ಕಲ್ಲಪ್ಪ ಸಿಂಗಮ್ಮನವರ 4) ಮಾರುತಿ ಕಲ್ಲಪ್ಪ ಸಿಂಗಮ್ಮನವರ ರವರಿಗೆ ಸಾದಾ ವ ಬಾರಿ ಗಾಯಪಡಿಸಿದಲ್ಲದೇ, ಎತ್ತುಗಳಿಗೆ ಸಾದಾ ಗಾಯಪಡಿಸಿ, ಚಕ್ಕಡಿಯನ್ನು ಸಂಪೂರ್ಣ ಜಖಂಗೊಳಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 93/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
8. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಾರವಾರ ಹುಬ್ಬಳ್ಳಿ ರಸ್ತೆಯ ಮೇಲೆ ತಡಸ ಕ್ರಾಸ್ ಸಮೀಪ ಖಾಸಗಿ ಬಸ್ ನಂ KA-01-AA-8744 ನೇದ್ದರ ಚಾಲಕನು ಕಾರವಾರ ಕಡೆಯಿಂದಾ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ತನ್ನ ಮುಂದೆ ಹೊರಟ ವಾಹನಕ್ಕೆ ಓವರಟೇಕ್ ಮಾಡಿಕೊಂಡು ರಾಂಗ್ ಸೈಡಿನಲ್ಲಿ ನೆಡೆಸಿಕೊಂಡು ಹೋಗಿ ದಾಸ್ತಿಕೊಪ್ಪ ಕಡೆಯಿಂದಾ ಮಡಕಿಹೊನ್ನಳ್ಳಿ ಕಡೆಗೆ ಪಿರ್ಯಾದಿಯ ಮಗನಾದ ಸಿದ್ದಾರ್ಥ ತಂದೆ ಶಿವಕಲ್ಲಪ್ಪ ಬಾಗಲಕೋಟಿ 22 ವರ್ಷ ಸಾ..ಕಾಮಧೇಣು ಇವನು ನೆಡೆಸಿಕೊಂಡು ಬರುತ್ತಿದ್ದ ಹೊಸ ಬಜಾಜ ಪಲ್ಸಾರ ಮೋಟಾರ್ ಸೈಕಲ್ ನಂ KA-25-TC-01 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಮೋಟಾರ್ ಸೈಕಲ್ ಸವಾರನಾಧ ಸಿದ್ದಾರ್ಥ ಇವನಿಗೆ ಮತ್ತು ಮೋಟಾರ್ ಸೈಕಲ್ ಹಿಂದೆ ಕುಳಿತ ಸುನೀಲ ತಂದೆ ಜಂಗಳೆಪ್ಪ ಹುಲ್ಲಂಬಿ ಸಾ.ದಾಸ್ತಿಕೊಪ್ಪ ಇವರಿಗೆ ತಲೆಗೆ ಮೈಕೈಗಳಿಗೆ ಭಾರಿಗಾಯಪಡಿಸಿ ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋದ ಕಾಲಕ್ಕೆ ಸಿದ್ದಾರ್ಥ ಇವನಿಗೆ ಉಪಚಾರ ಫಲಿಸಿದೆ ಮರಣಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 279.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
9.ಧಾರವಾಡ  ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಧಾರವಾಡ ಬೈಪಾಸ ರಸ್ತೆ ಯರಿಕೊಪ್ಪ ಗ್ರಾಮದ ಹತ್ತಿರ ಲಾರಿ ನಂ HR-61-B-8231 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ಧಾರವಾಡ  ಕಡೆಗೆ   ಅತಿಜೋರಿನಿಂದ ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ರಸ್ತೆಯ ಎಡ ಸೈಡಿನಲ್ಲಿ ಪ್ಲಟಿ ಮಾಡಿ ಕೆಡವಿ ಅಪಘಾತಮಾಡಿ ಲಾರಿ ಹಾಗೂ ಲಾರಿಯಲ್ಲಿದ್ದ ಮಾಲನ್ನು ಜಖಂ ಗೋಳಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 80/2017 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.