ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, April 24, 2017

CRIME INCIDENTS 24-04-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 24/04/2017 ರಂದು ವರದಿಯಾದ ಪ್ರಕರಣಗಳು
1.ಗರಗ ಪೊಲೀಸ ಠಾಣಾ ವ್ಯಾಪ್ತಿಯ:ಧಾರವಾಡ-ಬೆಳಗಾವಿ ಪಿ.ಬಿ. ರಸ್ತೆಯ ಮೇಲೆ ಗರಗ ಕ್ರಾಸ ಹತ್ತಿರ ಯಾವುದೋ ಅಪರಿಚಿತ ವಾಹನದ ಚಾಲಕನು ತನ್ನ ವಾಹನವನ್ನು ಧಾರವಾಡ ಕಡೆಯಿಂದಾ ಬೆಳಗಾವಿ ಕಡೆಗೆ ಪಿ.ಬಿ.ರಸ್ತೆಯ ಮೇಲೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಗರಗ ಕ್ರಾಸ ಹತ್ತಿರ ರಸ್ತೆ ದಾಟುತ್ತಿದ್ದ [ಮೃತ] ಬಸವಂತಪ್ಪಾ ತಂದೆ ಫಕ್ಕೀರಪ್ಪಾ ಭಜಂತ್ರಿ. ಸಾಃ ಧಾರವಾಡ ಇತನಿಗೆ ಢಿಕ್ಕಿ ಮಾಡಿ ಅಪಘಾತಪಡಿಸಿ ಭಾರಿ ಗಾಯಗೊಳಿಸಿ ವಾಹನ ನಿಲ್ಲಿಸದೆ ಹೋಗಿದ್ದು. ಸದರಿ ಗಾಯಾಳು ಹೆಚ್ಚಿನ ಉಪಚಾರಕ್ಕಾಗಿ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲಾಗಿ ಉಪಚಾರ ಫಲಿಸದೆ ಮೃತಪಟ್ಟಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 58/2017 ಕಲಂ 279.304(ಎ) ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮುಗದ ಕ್ರಾಸ್ ಹತ್ತಿರ ಆರೋಪಿತನಾದ ಶಿವಶಂಕರ ಬಸಪ್ಪಾ ಕುಂಬಾರ  ವಯಾ-27 ವರ್ಷ, ಜಾತಿ-ಹಿಂದೂ ಕುಂಬಾರ ಉದ್ಯೋಗ-ಕೂಲಿ ಸಾಃಮುಗದ ಇವನು ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಉದ್ದೇಶದಿಂದ ತನ್ನ ಸ್ವಂತ ಪಾಯ್ದೇಗೋಸ್ಕರ ಯಾವುದೇ ಪಾಸು ವ ಪರ್ಮಿಟು ಇಲ್ಲದೇ  ಒಂದು ಕರೆ ಬ್ಯಾಗಿನಲ್ಲಿ  ಒಟ್ಟು 96 ಹೈವರ್ಡ್ಸ ಚೀಯರ್ಸ ವಿಸ್ಕಿ  ತುಂಬಿದ 90 ಎಂ.ಎಲ್ ಅಳತೆಯ  ಸರಾಯಿ ಟೆಟ್ರಾ  ಪಾಕೀಟಗಳ ಅ:ಕಿ: 2592/-  ರೂ  ನೇದ್ದವುಗಳನ್ನು ಮಾರಾಟ ಮಾಡುವ ಉದ್ದೇಶ ದಿಂದ ಸಾಗಾಟ ಮಾಡುತ್ತಿರುವಾಗ  ಸಿಕ್ಕಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 83/2017 ಕಲಂ 32.34 ನೇದ್ದರಲ್ಲಿಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಕಲಘಟಗಿ  ಗ್ರಾಮದ  ಶಿಲ್ಪಾ ಕೋಂ ಬಸಯ್ಯಾ ಚಿಕ್ಕಮಠ ಸಾ..ಕಲಘಟಗಿ ತನ್ನ ಗಂಡನಾದ ಬಸಯ್ಯಾ ತಂದೆ ಅಡವಯ್ಯಾ ಚಿಕ್ಕಮಠ 33 ವರ್ಷ ಸಾ..ಕಲಗಟಗಿ ಇವನು ಸಂತೋಷ ಲಾಡ್ ಇವರ ಮನೆಯಲ್ಲಿ ಮೀಟಿಂಗ್ ಇದೆ ಅಂತಾ ಹೇಳಿ ವಾಸದ ಮನೆಯಿಂದಾ ಹೋದವನು ಈವರೆಗೆ ಮರಳೀ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 144/2017 ಕಲಂ ಮನುಷ್ಯ ಕಾಣೆ ನೇದ್ದಕ್ಕೆ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.