ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, April 26, 2017

CRIME INCIDENTS 26-04-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 26/04/2017 ರಂದು ವರದಿಯಾದ ಪ್ರಕರಣಗಳು
1 ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹೆಬಸೂರ ಬಸ್ ನಿಲ್ದಾಣದ ಹತ್ತಿರ, ಹುಬ್ಬಳ್ಳಿ ನವಲಗುಂದ ರಸ್ತೆ ಮೇಲೆ, ಆರೋಪಿತನಾದ  ವಾಸಿಂಅಕ್ರಮ ಮಾಬುಸಾಬ ಹೂಲಿ ಸಾ. ಹೆಬಸೂರ ಇವನು ತನ್ನ ಮೋಟರ ಸೈಕಲ್ ನಂ. ಕೆಎ-25-ಇ.ಎಕ್ಸ್-0489 ನೇದ್ದನ್ನು ಹೆಬಸೂರ ಬಸ್ ನಿಲ್ದಾಣದ ಕಡೆಯಿಂದ, ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ, ರಸ್ತೆ ಸೈಡ ಹಿಡಿದು ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿಯ ಸಹೋದರ ಜಾಫರಖಾನ ನೂರಸಾಬ ಪೀರಖಾನ ಇವರಿಗೆ ಡಿಕ್ಕಿ ಮಾಡಿ ಬಲಗಾಲಿಗೆ ತೀವ್ರ ಗಾಯಪಡಿಸಿ, ಅಫಘಾತದ ವಿಷಯವನ್ನು ಠಾಣೆಗೆ ತಿಳಿಸದೇ ಹಾಗೆ ಹೋಗಿದ್ದು ಇರುತ್ತದೆ  ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 96/2017 ಕಲಂ 279.338. ವಾಹನ ಕಾಯ್ದೆ 134.187. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2.  ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಮುಕ್ಕಲ್ಲ ರಸ್ತೆಯ ಮೇಲೆ ಸೋಮನಕೊಪ್ಪ ಗ್ರಾಮದ ಸಮೀಪ ಕುದರಿಗುಂಡ ಕ್ರಾಸ್ ಹತ್ತಿರ ಇದರಲ್ಲಿ  ಆರೋಪಿತನಾದ  ಬಸವರಾಜ ತಂದೆ ಯಲ್ಲಪ್ಪ ಇಟಿಗಟ್ಟಿ  ಸಾ; ಹಿಂಡಸಗೇರಿ ಇವನು ತಾನು ನಡೆಸುತ್ತಿದ್ದ ಕ್ರೂಸರ ವಾಹನ ನಂಬರ ಕೆ.ಎ 25/ ಸಿ 5853 ನೇದ್ದನ್ನು ಕಲಘಟಗಿ ರಸ್ತೆ ಕಡೆಯಿಂದ  ಮುಕ್ಕಲ್ಲ ರಸ್ತೆ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವಾಹನ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಬಾಜುಕ್ಕೆ ಕಚ್ಚಾ ರಸ್ತೆ ಮೇಲೆ ನಡಕೊಂತ ಹೋರಟ್ಟಿದ ಪಿರ್ಯಾದಿ ಚಿಕ್ಕಪ್ಪನ ಮಗ ಈರಪ್ಪ ದ್ಯಾಮಪ್ಪ ಕುಂಬಾರ ಸಾ: ಸೋಮನಕೋಪ್ಪ ಇವನಿಗೆ ಡಿಕ್ಕಿ ಮಾಡಿ  ತಲೆಗೆ ಮೈ ಕೈಗೆ ಸಾದಾ ವ ಬಾರಿ ಗಾಯಪಡಿಸಿ  ಉಪಚಾರಕ್ಕೆ ಕೀಮ್ಸ್ ಆಸ್ಪತ್ರೆಗೆ ಧಾಖಲು ಮಾಡಿ ಅಲ್ಲಿಂದ ಹೆಚ್ಚಿನ  ಉಪಚಾರಕ್ಕೆ ಹುಬ್ಬಳ್ಳಿಯ ಸುಶೃತಾ ಆಸ್ಪತ್ರೆಗೆ ಕರೆದುಕೊಂಡು   ಹೋಗುವಾಗ ಕೀಮ್ಸ್ ಆಸ್ಪತ್ರೆ ಹುಬ್ಬಳ್ಳಿಯ ಮುಂದೆ ಹೊರಗಡೆ ಆವರಣದಲ್ಲಿ ಮರಣ ಹೊಂದುವಂತೆ  ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 145/2017 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ
3.. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ದಿನಾಂಕ 26-04-2017 ರಂದು ಸಂಜೆ 4-30 ಗಂಟೆಯ ಸುಮಾರಿಗೆ ಹುಬ್ಬಳ್ಳಿ ಕಾರವಾರ ರಸ್ತೆಯ ಮೇಲೆ ಭಾರತ ದಾಬಾ ಸಮೀಪ  ಆರೋಪಿ ಸಂಜೆಯ ತಂದೆ ಕೃಷ್ಣಾ ಜಾದವ ಸಾ: ಹೋನ್ನಾವರ ಇವನು  ತಾನು ನಡೆಸುತ್ತಿದ್ದ ಕಾರ ನಂಬರ MH. 46/ Z 8595 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ಕಾರವಾರ ರಸ್ತೆ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ರಾಂಗ್ ಸೈಡ್ ನಡೆಸಿಕೊಂಡು ಬಂದು ಕಾರವಾರ ರಸ್ತೆ ಕಡೆಯಿಂದ ಹುಬ್ಬಳ್ಳಿ ರಸ್ತೆ ಕಡೆಗೆ ಬರುತ್ತಿದ್ದ ಪಿರ್ಯಾದಿ ದೋಡ್ಡಪನ ಮಗ ವಿರುಪಾಕ್ಷಪ್ಪ  ಶಿವಪ್ಪ ಮುದಿಗೌಡ್ರ  ಸಾ; ದೇವಿಕೋಪ್ಪ ಇವನ ಮೋಟರ್ ಸೈಕಲ್ ನಂಬರ KA 25/ EL 2883 ಗೆ ಡಿಕ್ಕಿ ಮಾಡಿ ಅದರ ಸವಾರ ವಿರುಪಾಕ್ಷಪ್ಪ ಇವನಿಗೆ ಭಾರಿ ಗಾಯಪಡಿಸಿ ಸ್ಥಳದಲ್ಲಿಯೇ ಮರಣ ಪಡಿಸಿದ ಅಪರಾದ ಮೋಟರ್ ಸೈಕಲ್ ಸವಾರ ಹೇಲ್ಮೇಟ್ ಹಾಕದೇ ವಾಹನ ನಡೆಸಿದ ಅಪರಾದ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 146/2017 ಕಲಂ 279, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.