ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ
WELCOME TO DHARWAD DISTRICT POLICE BLOG

Sunday, April 30, 2017

CRIME INCIDENTS 30-04-2017


ಧಾರವಾಡ ಜಿಲ್ಲೆಯಲ್ಲಿ ದಿನಾಂಕ 30/04/2017 ರಂದು ವರದಿಯಾದ ಪ್ರಕರಣಗಳು
1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ : 28-04-2017 ರ ರಾತ್ರಿ 14-00 ಗಂಟೆಯಿಂದ ದಿ; 29-04-2017 ರ ಬೆಳಗಿನ 09-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕೊಂಡಿಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯ  ಕಂಪ್ಯೂಟರ ಕೋಣಿಯ ಬಾಗಿಲದ ಕೀಲಿ ಮತ್ತು ಕೊಂಡಿಯನ್ನು ಮೀಟಿ ಮುರಿದು ಒಳಗೆ ಹೋಗಿ ಕೋಣೆಯಲ್ಲಿದ್ದ ಒಟ್ಟು 20,000/- ಮ್ಮತ್ತಿನ ಕಂಪ್ಯೂಟರ ಸಿಪಿಯು, ಕೀ ಬೋರ್ಡ ಪ್ರಿಂಟರ ಬ್ಯಾಟರಿ ಮತ್ತು ಸ್ಪಿಕರ ನೇದ್ದವುಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ  ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 64/2017 ಕಲಂ IPC 1860 (U/s-454,457,380) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಆರೋಪಿತ ಅನಂ 1ಅಶೋಕ ಮಣಕವಾಡ 2 ವಸಂತ ಮಣಕವಾಡ ನೇದವರು ಪಿರ್ಯಾದಿ ಮಲ್ಲಿಕಾಜುಱನ ಮಣಕವಾಡ ಇತನ ಸಹೋದರರು ಇದ್ದು ತಮ್ಮ ಪಿರ್ತಾರ್ಜಿತವಾದ ಆಸ್ತಿಯನ್ನು ಹಿರಿಯರು ಸಮಾನಾಗಿ ಪಾಲು ಮಾಡಿದ್ದರೂ ಸಹಿತ ಪಿರ್ಯಾದಿಯ ಹೆಸರಿನಲ್ಲಿ ಇರುವ ಸರ್ವೆ ನಂಬರ್ 266/2ಎ ನೇ ಜಮೀನದಲ್ಲಿ ತಮಗೂ ಸಹಿತ ಪಾಲು ಬೇಕು ಅಂತಾ ತಂಟೆ ತಕರಾರು ಮಾಡಿಕೊಂಡು ಬಂದಿದ್ದು ಇರುತ್ತದೆ ದಿನಾಂಕ 29-04-2017 ರಂದು ಸಾಯಂಕಾಲ 17-20 ಘಂಟೆಗೆ ನಮೂದ ಆರೋಪಿತರು ಟ್ರ್2ಯಾಕ್ಟರನ್ನು ತೆಗೆದುಕೊಂಡು ಪಿರ್ಯಾದಿಯ ಜಮೀನನ್ನು ಅತೀಕ್ರಮ ಪ್ರವೇಶ ಮಾಡಿ ಬಂದು ನೇಗಿಲ ಹೊಡೆಯುತ್ತಿದ್ದು ಈ ಬಗ್ಗೆ ಕೇಳಲು ಹೋದ ಪಿರ್ಯಾದಿಗೆ ಟ್ರಾಕ್ಟರನ್ನು ಹಾಯಿಸಿ ಕೆಡವಿ ಗಾಯಗೊಳಿಸಿದ್ದು ಅಲ್ಲದೇ ಪುನಃ ಪಿರ್ಯಾದಿಯನ್ನು ಅಡ್ಡಗಟ್ಟಿ ತರುಬಿ ಕೈಯಿಂದ ಬಡಿಗೆಯಿಂದ ಹೊಡಿ ಬಡಿ ಮಾಡಿ ಅವವಾಛ್ಯ ಬೈದಾಡಿ ಜೈಇವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 65/2017 ಕಲಂ IPC 1860 (U/s-323,324,341,447,504,506,34) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 28-04-2017 ರಂದು ಸಾಯಂಕಾಲ 5-00 ಗಂಟೆಗೆ ಅಂಚಟಗೇರಿ ಗ್ರಾಮದ, ಬಸ್ ನಿಲ್ದಾಣದ ಹತ್ತಿರ, ಹುಬ್ಬಳ್ಳಿ ಕಾರವಾರ ರಸ್ತೆ ಮೇಲೆ, ಪಿರ್ಯಾದಿಯು ಲಾರಿ ನಂ. ಕೆಎ-20-ಡಿ-6606 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ಕಾರವಾರ ರಸ್ತೆ ಹಿಡಿದುಕೊಂಡು ಚಲಾಯಿಸಿಕೊಂಡು ಹೋಗುತ್ತಿರುವಾಗ, ಇಬ್ಬರು ಅಪರಿಚಿತ ಆರೋಪಿತರು ಪಿರ್ಯಾದಿಯ ಲಾರಿಯನ್ನು ಅಡ್ಡಗಟ್ಟಿ ನಿಲ್ಲಿಸಿ, ಲಾರಿಯ ಕ್ಯಾಬಿನ್ ಒಳಗೆ ಹೊಕ್ಕು, ಪಿರ್ಯಾದಿ ಲಾರಿ ಚಾಲಕ ಅಂಕಲೆಪ್ಪ ಹೊಳೆಪ್ಪ ಮುಗಳಿ ಸಾ. ಕೊತಬಾಳ ತಾ. ರೋಣ ಇವರಿಗೆ ಚಾಕು ತೋರಿಸಿ, ಸಾಯಸ್ತಿನಿ ಅಂತ ಹೆದರಿಸಿ, ಪಿರ್ಯಾದಿಯ ಕಿಸೆಯಲ್ಲಿದ್ದ 14,000/- ರೂ. ಇದ್ದ ಪರ್ಸ ದರೋಡೆ ಮಾಡಿಕೊಂಡು, ಒಂದು ಆಟೋದಲ್ಲಿ ಅದರ ಚಾಲಕನೊಂದಿಗೆ ಪರಾರಿಯಾಗಿ ಹೋಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 101/2017 ಕಲಂ 392 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.