ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, May 31, 2017

CRIME INCIDENTS 31-05-2017


ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 31-05-2017 ರಂದು ವರದಿಯಾದ ಪ್ರಕರಣಗಳು

1)ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 31-05-2017 ರಂದು 00-30 ಗಂಟೆಯಿಂದ 01-00 ಗಂಟೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡುವ ಉದ್ದೇಶದಿಂದ ನವಲಗುಂದ ಶಹರದ ಎಎಸ್ ಬಿ ಬ್ಯಾಂಕಿಗೆ ರಾಡ್ ಸುತ್ತಿಗೆ ಹಗ್ಗ ಸಮೇತ  ಬಂದು ಬ್ಯಾಂಕಿನ ಶೆಟರ್ಸ ಬಾಗಿಲ ಒಡೆದು ಅಲ್ಲಿದ್ದ ಸಿಸಿ ಕ್ಯಾಮರಾ ಕಿತ್ತು ಹಾನಿಪಡಿಸಿ ಕಳ್ಳತನ ಮಾಡಲು ಪ್ರಯತ್ನಿಸಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

2)ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 30-05-2017 ರಂದು 2230 ಗಂಟೆಗೆ ಕುಂದಗೋಳದಿಂದ ಕಡಪಟ್ಟಿ ಕಡೆಗೆ ಹೋಗುವ ರಸ್ತೆಯ ಮೇಲೆ ರೇಲ್ವೆ ಗೇಟ ಹತ್ತಿರ ಟ್ರ್ಯಾಕ್ಟರ ಇಂಜಿನ್ ನಂ: ಎ.ಪಿ 15 / ಎಕ್ಸ್: 3156 ನೇದ್ದು ಟ್ರೇಲರ ಸಮೇತ ಇದ್ದುದನ್ನು ಅದರ ಚಾಲಕನಾದ ಬಸಪ್ಪ ರಾಮಪ್ಪ ತಡಹಾಳ, ಸಾ: ಸಂಶಿ ತಾ: ಕುಂದಗೋಳ ಹಾಲಿ: ಬ್ಯಾಹಟ್ಟಿ ತಾ: ಹುಬ್ಬಳ್ಳಿ ಈತನು ಸದರ ಟ್ರ್ಯಾಕ್ಟರನ್ನು ಕಡಪಟ್ಟಿ ಕಡೆಯಿಂದ ಕುಂದಗೋಳ ಕಡೆಗೆ ಅತೀ ವೇಗ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನೇ ಪಿರ್ಯಾದಿಯು ನಡೆಸುತ್ತಿದ್ದ ರಿಕ್ಷಾ ನಂ: ಕೆಎ 25 / ಡಿ: 5558 ನೇದ್ದರ ಬಲಭಾಗಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ರಿಕ್ಷಾದ ಹಿಂದಿನ ಶೀಟಿನಲ್ಲಿ ಕುಳಿತ ದೇವರಾಜ ಮಲ್ಲಪ್ಪ ರೋಣ, ವಯಾ: 22 ವರ್ಷ, ಸಾ: ಗಂಗಾಧರನಗರ 6ನೇ ಕ್ರಾಸ್ ಹುಬ್ಬಳ್ಳಿ ಇವನಿಗೆ ಭಾರೀ ಗಾಯಪೆಟ್ಟುಗಳಾಗುವಂತೆ ಮಾಡಿದ್ದು, ಸದರಿಯವನಿಗೆ ಉಪಚಾರ ಕುರಿತು ಕಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿರುವಾಗ ದಿನಾಂಕ: 30-05-2017 ರಂದು ರಾತ್ರಿ 11-30 ಗಂಟೆಗೆ ಶರೇವಾಡ ಹತ್ತಿರ ಮರಣವಾಗುವಂತೆ ಮಾಡಿದ್ದು, ಈ ಕುರಿತು ಕುಂದಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.


3)ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 30-05-2017 ರಂದು ಸಾಯಂಕಾಲ 6-00 ಗಂಟೆಗೆ ಛಬ್ಬಿ ಕ್ರಾಸ್ ಹತ್ತಿರ, ಪೂನಾ ಬೆಂಗಳೂರು ರಸ್ತೆ ಮೇಲೆ, ರಸ್ತೆಯ ಬದಿಗೆ ಕೆಟ್ಟು ನಿಂತ ಮಹ್ಮದ ಸಾಧಿಕ @ ಸಾಧಿಕ ನಬಿಖಾನ ಉಸ್ತಾದಿ ಇವರ ಬಾಬತ್ ಟಾಟಾ ಎ.ಸಿ ವಾಹನ ನಂ. ಕೆಎ-25-ಸಿ-4255 ನೇದ್ದರ ಟಾಯರ್ ಬದಲಾಯಿಸತ್ತಿರುವಾಗ, ಆರೋಪಿ ಬಸ್ ನಂ. ಕೆಎ-25-ಸಿ-5808 ನೇದ್ದರ ಚಾಲಕನು ತನ್ನ ಬಸನ್ನು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ಬಸ್ ಮೇಲಿನ ನಿಯಂತ್ರಣ ತಪ್ಪಿ, ರಸ್ತೆಯ ಸೈಡಿಗೆ ನಿಂತಿದ್ದ ಪಿರ್ಯಾದಿ ಮಹ್ಮದ ಸಾಧಿಕ @ ಸಾಧಿಕ ನಬಿಖಾನ ಉಸ್ತಾದಿ ಮತ್ತು ಮುನ್ನಾ ಇಸ್ಮಾಯಿಲಸಾಬ ಇಂಗಳಗಿ ಇವರಿಗೆ ಸಾದಾ ಗಾಯಪಡಿಸಿ, ಮಂಜುನಾಥ @ ಮಂಜು ಮಾರಿಗೆಪ್ಪ ಕೊರವರ ಇವನಿಗೆ ಗಂಭೀರ ಗಾಯಪಡಿಸಿದ್ದು  ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

Monday, May 29, 2017

CRIME INCIDENTS 29-05-2017


ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 29-05-2017 ರಂದು ವರದಿಯಾದ ಪ್ರಕರಣಗಳು

ಅಳ್ನಾವರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 28-05-2017 ರಂದು ರಾತ್ರಿ 11-00 ಗಂಟೆ ಸುಮಾರಿಗೆ ಕೋಗಿಲಗೇರಿ ಗ್ರಾಮದ ಆಪಾದಿತನಾದ ನಾರಾಯಣ ತಂದೆ ರಾಮಣ್ಣ ಕುಳೆಣ್ಣವರ ಸಾ|| ಕೋಗಿಲಗೇರಿ ಇವರ ಮನೆಯಲ್ಲಿ ನಾರಾಯಣ ತಂದೆ ರಾಮಣ್ಣ ಕುಳೆಣ್ಣವರ ವಯಾ 38 ವರ್ಷ ಸಾ|| ಕೋಗಿಲಗೇರಿ ತಾ|| ಜಿ|| ದಾರವಾಡ ಅವನು ತನ್ನ ಹೆಂಡತಿಯಾದ ಮೃತ ಲಕ್ಷ್ಮೀ ಕೋಂ ನಾರಾಯಣ ಕುಳೆಣ್ಣವರ ವಯಾ 28 ವರ್ಷ ಸಾ|| ಕೋಗಿಲಗೇರಿ ತಾ||ಜಿ|| ದಾರವಾಡ ಇವಳೊಂದಿಗೆ ವಿನಾಕಾರಣ ತಂಟೆ ತೆಗೆದು ಕೊಡ್ಲಿಯಂತಿರುವ ಬಾಚಿಯಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿ ಸ್ಥಳದಲ್ಲಿಯೆ ಕೊಲೆ ಮಾಡಿದ್ದು ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದು ಇರುತ್ತದೆ.

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:24-05-2017 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ಹೆಬಸೂರ ಗ್ರಾಮದ ವ್ಯಾಪ್ತಿಗೆ ಬರುವ ಪಿರ್ಯಾದಿ ಬಾಬತ್ತ ರಿ.ಸ.ನಂ: 680 ನೇದರಲ್ಲಿ ಇದರಲ್ಲಿ ಆರೋಪಿತರಾದ ಬೀಮರೆಡ್ಡಿ ಹೆಚ್ ರೆಡ್ಡಿ ಸಾ: ಧಾರವಾಡ ಹಾಲಿ ಹೆಬಸೂರ ಹಾಗೂ 07-08 ಜನರು ಸೇರಿ ಸಮಾನ ಉದ್ದೇಶ ಸಾಧಿಸುವ ಸಲುವಾಗಿ ಟೋಳಿಯನ್ನು ಕಟ್ಟಿಕೊಂಡು ರಿ.ಸ.ನಂ:680 ನೇದರ ಜಾಗೆಯಲ್ಲಿ ಹಾಕಿದ ಕಂಪೌಂಡನ್ನು ಹಾರಿ ಗುದ್ದಲಿಯಿಂದ ಒಡೆದು ಲುಕ್ಸಾನಪಡಿಸುತ್ತಿರುವಾಗ, ಪಿರ್ಯಾದಿ ಶ್ರೀನಿವಾಸ ಗಿರಿಯಪ್ಪ ಸಾವುಕಾರ ಸಾ: ಹೆಬಸೂರ ಇತನು ಯಾಕೆ ನಮ್ಮ ಜಾಗೆಯಲ್ಲಿರುವ ಕಂಪೌಂಡನ್ನು ಒಡೆದು ಲುಕ್ಸಾನಪಡಿಸುತ್ತಿದ್ದರಿ ಅಂತಾ ಕೇಳಿದಕ್ಕೆ ಎಲ್ಲರೂ ಸಿಟ್ಟಾಗಿ ಪಿರ್ಯಾದಿ ಬಾಬತ್ತ ಜಾಗೆಯಲ್ಲಿ ಅತೀಕ್ರಮ ಪ್ರವೇಶ ಮಾಡಿ, ಪಿರ್ಯಾದಿ ಜೊತೆ ತಂಟೆ ತಗೆದು ಎಲ್ಲೂ ಹೋಗದಂತೆ ಅಡ್ಡಗಟ್ಟಿ ನಿಲ್ಲಿಸಿ,ಕೈಯಿಂದ ಹೊಡಿಬಡಿ ಮಾಡಿದಲ್ಲದೇ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 30/03/2017 ರಂದು ಮಧ್ಯಾಹ್ನ 12-30 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಪಿರ್ಯಾಧಿಯು ನಿಂಗಪ್ಪ ಗಂಗಪ್ಪ ಮುಶನ್ನವರ  ಇವರು ನವಲಗುಂದ ಬಸನಿಲ್ದಾಣದಲ್ಲಿ ಇಟ್ಟಿದ್ದ ತನ್ನ ಬಾಬತ್ ಹಿರೋ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ ಕೆಎ-25/ಇಟಿ-0667 ಅ ಕಿ -40000 /- ರೂಪಾಯಿ ಕಿಮ್ಮತ್ತಿನದನ್ನು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು   ಇರುತ್ತದೆ. 

Sunday, May 28, 2017

CRIME INCIDENTS 28-05-2017


ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 28-05-2017 ರಂದು ವರದಿಯಾದ ಪ್ರಕರಣಗಳು

ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 27-05-2017 ರಂದು ಮದ್ಯಾಹ್ನ 3-15 ಗಂಟೆ ಸುಮಾರಿಗೆ ಬಮ್ಮಿಗಟ್ಟಿ ಕಲಘಟಗಿ ರಸ್ತೆ ಮೇಲೆ ಬಮ್ಮಿಗಟ್ಟಿ ಸರ್ಕಾರಿ ಆಸ್ಪತ್ರೆ ಸಮೀಪ  ಮೋಟರ್ ಸೈಕಲ್ ನಂ.ಜಿಎ-03 ಜೆ-3070 ನೇದ್ದರ ಚಾಲಕನು ತಾನು ನಡೆಸುತ್ತಿದ್ದ ಮೋಟರ್ ಸೈಕಲ್ ನ್ನು ಬಮ್ಮಿಗಟ್ಟಿ ಕಡೆಯಿಂದ ಕಲಘಟಗಿ ಕಡೆಗೆ ಅತೀ ವೇಗ ವ ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ವೇಗದ ನಿಯಂತ್ರಣ ಮಾಡಲಾಗದೇ ಸ್ಕೀಡ್ಡಾಗಿ ಕೆಡವಿ ಮೋಟರ್ ಸೈಕಲ್ ಹಿಂದೆ ಕುಳಿತ ಲತಾ ಕೋಂ. ಗೋಪಾಲಸಿಂಗ್ ರಜಪೂತ ಎಂಬುವವಳಿಗೆ ತಲೆಯ ಹಿಂಬದಿಗೆ ರಕ್ತ ಗಾಯಪಡಿಸಿದ್ದಲ್ಲದೇ  ಬೆನ್ನಿಗೆ  ತೆರಚಿದ ಗಾಯಪಡಿಸಿ ಗಾಯಾಳುವಿಗೆ ಉಪಚಾರಕ್ಕೆ ಸಹಕರಿಸದೇ ಅಪಘಾತದ ಸುದ್ದಿ ಠಾಣೆಗೆ ತಿಳಿಸದೇ ಮೋಟರ್ ಸೈಕಲ್ ಸಮೇತ ಪರಾರಿಯಾಗಿ ಹೋಗಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಕೆ ಕೈಗೊಂಡಿರುತ್ತದೆ.


ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 28-05-2017 ರಂದು ಬೆಳಗಿನ 0200 ಗಂಟೆ ಸುಮಾರಿಗೆ ಹುಲ್ಲಂಬಿ ಗ್ರಾಮದ ಫಿರ್ಯಾದಿ ದತ್ತಾತ್ರಯ ವಿನಾಯಕ ಭಟ್ಟ  ಇತನ ಮನೆಯಲ್ಲಿಂದ  ಫಿರ್ಯಾದಿ  ತಂದೆ ವಿನಾಯಕ ಬಹಾಬಲೇಶ್ವರ ಭಟ್, 53 ವರ್ಷ ಸಾ: ಹುಲ್ಲಂಬಿ ಇವರಿಗೆ ಯಾರೋ ಯಾವುದೋ ಕಾರಣಕ್ಕೆ ಅಪಹರಣ ಮಾಡಿಕೊಂಡು ಹೋಗಿರಬಹುದು ಎಂದು ಹೇಳಿಕೆ ನೀಡಿದ್ದರಿಂದ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿರುತ್ತದೆ. 

Saturday, May 27, 2017

CRIME INCIDENTS 27-05-2017


ಧಾರವಾಡ ಜಿಲ್ಲೆಯಲ್ಲಿ ದಿನಾಂಕ.27-05-2017 ರಂದು ವರದಿಯಾದ ಪ್ರಕರಣಗಳು

1) ಧಾರವಾಡ ಗ್ರಾಮೀಣ ಪೊಲೀಸ್ ಠಾಣೆವ್ಯಾಪ್ತಿಯ ಮಾರಡಗಿ ಗ್ರಾಮದಲ್ಲಿ ಮೃತ ಸೈದುಸಾಬ ಮಕ್ತುಮಸಾಬ ದರಗದ ಇತನು ಎರಡು ವರ್ಷಗಳ ಹಿಂದೆ  ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿ ಬೆಳೆಸಾಲ ಹಾಗೂ ಜಮೀನು ಸಾಗುವಳಿ ಸಲುವಾಗಿ ಎರಡು ಲಕ್ಷ್ ರೂಪಾಯಿ  ಶಿವಳ್ಳಿ ಮಲಫ್ರಭಾ ಬ್ಯಾಂಕಿನಲ್ಲಿ ಸಾಲ ಮಾಡಿದ್ದು  ಸರಿಯಾಗಿ ಮಳೆ ಬಾರದ್ದರಿಂದ ಪೀಕು ಬಾರದ್ದಕ್ಕೆ ಸಾಲವನ್ನು ಹೇಗೆ ತೀರಿಸಬೇಕು ಅಂತಾ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ-27-05-2017 ರಂದು ಬೆಳಗಿನ ಜಾವ 04-00 ಗಂಟೆಯ ಸುಮಾರಿಗೆ ತನ್ನ ಮನೆಯಲ್ಲಿ ಯಾವುದೋ ಕ್ರಿಮಿನಾಶಕ ಎಣ್ಣೆಯನ್ನು ಸೇವನೆ ಮಾಡಿ ಅಸ್ವಸ್ಥಗೊಂಡು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಉಪಚಾರಕ್ಕೆ ಅಂತಾ ಹೋಗುವಾದ ಕಿಮ್ಸ್ ಆಸ್ಪತ್ರೆಯ ಸಮೀಪ 06-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಅಂತಾ ಮೃತನ ಮಗ ಕೊಟ್ಟ ವರದಿಯನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

2) ಕಲಘಟಗಿ  ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 26-05-2017 ರಂದು ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ಕಲಘಟಗಿ ಹಳ್ಳಿಯಾಳ ರಸ್ತೆಯ ಮೇಲೆ ಕೂಡಲಗಿ ಕೆರೆಯ ಹತ್ತರ ಇದರಲ್ಲಿ ಆರೋಪಿತ ಕೃಷ್ಣ ಕುರಬೆರಪ್ಪ ಗಬ್ಬೂರ ಇತನು ತಾನು ನಡೆಸುತ್ತಿದ್ದ ಕಾರ ತಾತ್ಕಾಲಿಕ ನಂ ಕೆ.ಎ 22/ ಟಿ.ಎ 011947 ನೇದ್ದನ್ನು ಕಲಘಟಗಿ ಕಡೆಯಿಂದ ಹಳ್ಳಿಯಾಳ ರಸ್ತೆ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ವಾಹನ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಎಡ ಬದಿ ವಾಹನವನ್ನು ಪಲ್ಟಿ ಮಾಡಿ ಕೆಡವಿ ವಾಹನದಲ್ಲಿದ ಪಿರ್ಯಾದಿಗೆ ಮತ್ತು ರವಿಗೆ ಗಾಯಪಡಿಸಿದ್ದಲ್ಲದೇ  ತಾನು ಸಹ ಸಾದಾ ವ ಬಾರಿ ಗಾಯಪಡಿಸಿಕೊಂಡ ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

Friday, May 26, 2017

CRIME INCIDENTS 26-05-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 26-05-2017 ರಂದು ವರದಿಯಾದ ಪ್ರಕರಣಗಳು
1.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕಃ 23-05-2017 ರಂದು 1600 ಗಂಟೆ ಸುಮಾರಿಗೆ ಫಿರ್ಯಾದಿ ಗರೀಬಸಾಬ ಅಂಗಡಿ ಇವರ ಮನೆಯ ಮುಂದಿನ ಬಾಗಿಲದ ಗೋಡೆ ಮಳೆಗೆ ಬಿದ್ದಿದ್ದು ಅದನ್ನು ಪಿ:ದಿ ತಮ್ಮ ಮತ್ತು ತಮ್ಮನ ಮಗ ರಿಪೇರಿ ಮಾಡುತ್ತಿದ್ದಾಗ 1700 ಗಂಟೆ ಸುಮಾರಿಗೆ ಆಪಾದಿತರಾದ ಮಲ್ಲಿಕಸಾಬ ಅಂಗಡಿ ಹಾಗೂ 7 ಜನರು ಸಾಮೂಹಿಕವಾಗಿ ಅವಾಚ್ಯ ಬೈದಾಡುತ್ತಾ ಬಂದು ಕೈಯಿಂದ ಹೊಡಿಬಡಿ ಮಾಡುತ್ತಾ ಪಿ:ದಿಯ ತಮ್ಮ, ತಮ್ಮನ ಮಗ, ತಮ್ಮನ ಹೆಂಡತಿ ಮತ್ತು ತಂಗಿಗೆ ಅಡ್ಡಗಟ್ಟಿ ತರುಬಿ ತನ್ನ ಕೈಯಲ್ಲಿದ್ದ ಬಡಿಗೆಯಿಂದ ಹೊಡಿಬಡಿ ಹಲ್ಕಟ ಶಬ್ದಗಳಿಂದ ಬೈದಾಡಿ ಜೀವದ ಧಮಕಿ ಹಾಕಿದ್ದು ಇರುತ್ತದೆ. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 42/2017 ಕಲಂ IPC 1860 (U/s-143,147,323,324,341,504,506,149) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿ: ಆರೋಪಿರಾದ ರಮ್ಜಾನಿಸಾಬ ಮಕಾಂದಾರ ಹಾಗೂ ಹಸನಸಾಬ ಮಕಾಂದಾರ ಇವರು ದಿನಾಂಕ 24-05-2017 ರಂದು ಸಾಯಂಕಾಲ 05-00 ಗಂಟೆಯಿಂದ 05-30 ಗಂಟೆ ನಡುವಿನ ಅವಧಿಯಲ್ಲಿ ಪಿರ್ಯಾದಿ ಮೌಲಾಸಾಬ ವೈದ್ಯ ಇವರು ನವಲಗುಂದ ಶಾಸಕರ ಕಛೇರಿ ಮುಂದೆ ನಿಂತಾಗ ಅವಾಚ್ಯ ಬೈದಾಡಿ ಆರೋಪಿ 1 ನೇದವರು ಪಿರ್ಯಾದಿಗೆ ಕೈಯಿಂದ ಕಪಾಳಕ್ಕೆ ಹೊಡೆದಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 66/2017 ಕಲಂ IPC 1860 (U/s-34,504,323) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ: 25-05-2017 ರಂದು 1535 ಗಂಟೆ ಸುಮಾರಿಗೆ ಕಲಘಟಗಿ ತಡಸ ರಸ್ತೆ ಮೇಲೆ  ಪರಸಾಪೂರ ಕ್ರಾಸ್ ಹತ್ತಿರ ಇದರಲ್ಲಿ ನಮೂದ ಮಾಡಿದ ಆರೋಪಿತನು ತಾನು ನಡೆಸುತ್ತಿದ್ದ ಕ್ರೂಸರ್ ವಾಹನ ನಂ. ಕೆಎ-27 ಎ-5026 ನೇದ್ದರ ಚಾಲಕನು ಕಲಘಟಗಿ ಕಡೆಯಿಂದ ತಡಸ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ರಾಂಗ್ ಸೈಡ್ ಬಂದು ತಡಸ ರಸ್ತೆ ಕಡೆಯಿಂದ ಕಲಘಟಗಿ ರಸ್ತೆ ಕಡೆಗೆ ಬರುತ್ತಿದ್ದ ಫಿರ್ಯಾದಿ ತಮ್ಮನ ಮೋಟರ್ ಸೈಕಲ್ ನಂ. ಕೆಎ-25 ಇ ಎಫ್-9963 ನೇದ್ದಕ್ಕೆ ಡಿಕ್ಕಿ ಮಾಡಿ ಅದರ ಸವಾರನಿಗೆ ಭಾರೀ ಗಾಯಪಡಿಸಿ ದ್ದು ಮೋಟರ್ ಸೈಕಲ್ ಹಿಂದೆ ಕುಳಿತ  ನಾಗರಾಜ ಕನೋಜಿ ಇವನಿಗೆ ಭಾರೀ ಗಾಯಪಡಿಸಿದ್ದಲ್ಲದೇ ಕಲಘಟಗಿ ರಸ್ತೆ ಕಡೆಯಿಂದ  ತಡಸ ರಸ್ತ ಕಡೆಗೆ ಹೋಗುತ್ತಿದ್ದ ಮೋಟರ್ ಸೈಕಲ್ ನಂಬರ ಕೆ.ಎ 25/ ಇವಿ 6070 ನೇದ್ದಕ್ಕೆ ಡಿಕ್ಕಿ ಮಾಡಿ ಅದರ ಸವಾರ ಟೋಪಣ್ಣ  ತಿಪ್ಪಣ್ಣವರ ಇವನಿಗೆ ಬಾರಿ ಗಾಯಪಡಿಸಿದಲ್ಲದೇ. ಅವನ ಹಿಂದೆ ಮೋಟರ್ ಸೈಕಲ್ ಮೇಲೆ ಕುಳಿತ ಅವನ ಹೆಂಡತಿ ನೀಲವ್ವ  ಇವಳಿಗೆ ಭಾರೀ ಗಾಯಪಡಿಸಿದ್ದು, ಶ್ರೀಕಾಂತ ಇವನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಉಪಚಾರ ಫಲಿಸದೇ ನಿನ್ನೆ ದಿನ  ಸಾಯಂಕಾಲ 7-30 ಗಂಟೆಗೆ ಮರಣ ಹೊಂದುವಂತೆ ಮಾಡಿದ್ದಲ್ಲದೇ ಟೋಪಣ್ಣ ತಿಪ್ಪಣ್ಣವರ ಇವನು ಸಹ ಉಪಚಾರ ಫಲಿಸದೇ ನಿನ್ನೆ ದಿನ  ಸಾಯಂಕಾಲ 6-00 ಗಂಟೆಗೆ ಮರಣ ಹೊಂದುವಂತೆ ಮಾಡಿ ಗಾಯಾಳುಗಳಿಗೆ ಉಪಚರಿಸದೇ ಠಾಣೆಗೆ ಮಾಹಿತಿ ನೀಡದೇ ವಾಹನ ಸಮೇತ ಪರಾರಿಯಾಗಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 194/2017 ಕಲ INDIAN MOTOR VEHICLES ACT, 1988 (U/s-177,134,129,187); IPC 1860 (U/s-279,338,304(A)) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

4.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ: 24-05-2017 ರಂದು 1930 ಗಂಟೆಗೆ ಕಲಘಟಗಿ ಗಾಂಧಿನಗರದ ಬನಶಂಕರಿ ಕಿರಾಣಿ  ಅಂಗಡಿ ಸಮೀಪ  ಫಿ;ದಿ ಶಾಹೀಧ ಶಿರಹಟ್ಟಿ ಇವರ ಮಗ ಮೆಹಬೂಬ ಶಿರಹಟ್ಟಿ ಇತನು ಮಾಡಿದ ಕೈಗಡ ಸಾಲವನ್ನು ವಾಪಾಸು ಕೊಟ್ಟಿದ್ದರೂ ಸಹಿತ ಆರೋಪಿ ಸುರೇಶ ಶಂಕರ ಪಂಡಿತ  ಸಾ:ಕಲಘಟಗಿ ಇತನು ಇನ್ನೂ ಕೊಟ್ಟಿಲ್ಲ ಅಂತಾ ಫಿ:ದಿ ಹಿರಿಯ ಮಗ ಹಜರೇಸಾಬ ಶಿರಹಟ್ಟಿ ಇತನಿಗೆ ಹಲ್ಕಟ್ ಬೈದಾಡಿ, ಕೈಯಿಂದ ಮುಷ್ಟಿ ಮಾಡಿ ಹೊಡಿಬಡಿ ಮಾಡಿದ್ದಲ್ಲದೇ ಜೀವದ ಧಮಕಿ ಹಾಕಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 195/2017 ಕಲಂ IPC 1860 (U/s-323,324,504,506) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

5.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ: 25-05-2017 ರಂದು 1030 ಗಂಟೆಯ ಸುಮಾರಿಗೆ ಕಲಘಟಗಿ ತಡಸ ರಸ್ತೆ ಮೇಲೆ ಮಡಕಿಹೊನ್ನಳ್ಳಿ ಸಮೀಪ ಲಾರಿ ನಂ. ಟಿ.ಎನ್-29 ಬಿ.ಡಿ -0508 ನೇದ್ದರ ಚಾಲಕ ಕಂದಸ್ವಾಮಿ ತಂದೆ ಮಣಿ ಇತನು ದಾಂಡೇಲಿಯಿಂದ ಪೇಪರ ಲೋಡ ಮಾಡಿಕೊಂಡು ಕಲಘಟಗಿ ಮಾರ್ಗವಾಗಿ ತಡಸ ಕಡೆಗೆ ಅತೀ ವೇಗ ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಮಡಕಿಹೊನ್ನಳ್ಳಿ ದಾಟಿ ರಸ್ತೆ ತಿರುವಿನ ಇಳಿಜಾರು ರಸ್ತೆಯಲ್ಲಿ ವೇಗದ ನಿಯಂತ್ರಣ ಮಾಡಲಾಗದೇ ರಸ್ತೆ ಬಲಸೈಡನಲ್ಲಿ ಬಲಹೋಳು ಮಗ್ಗುಲಾಗಿ ಕೆಡವಿ ಲಾರಿಯನ್ನು ಜಕಂಗೊಳಿಸಿದ್ದಲ್ಲದೇ ತಾನು ಸಹ ಗಾಯಗೊಂಡು ಲಾರಿಯಲ್ಲಿದ್ದ ಪೇಪರ ಬಂಡಲ್ ಗಳ ಪೈಕಿ 10 ಪೇಪರ್ ಬಂಡಲ್ ಮತ್ತು 1 ಪೇಪರ್ ರೀಲ್ ಲುಕ್ಸಾನು ಪಡಿಸಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 196/2017 ಕಲಂ IPC 1860 (U/s-279,338,427) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

6. ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿ: ಯಲ್ಲಿ ಮುಂಜಾಗ್ರತ ಕ್ರಮವಾಗಿ  ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 53/2017 ನೇದ್ದನ್ನು ದಾಖಲಾಗಿದ್ದು ಇರುತ್ತದೆ.

Thursday, May 25, 2017

CRIME INCIDENTS 25-05-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 25-05-2017 ರಂದು ವರದಿಯಾದ ಪ್ರಕರಣಗಳು

1) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 24-05-2017 ರಂದು ರಾತ್ರಿ 10-45 ಗಂಟೆಗೆ ಹುಬ್ಬಳ್ಳಿ ಗದಗ ರಸ್ತೆಯ ಮೇಲೆ, ಒಂಟ್ ಹನಮಪ್ಪನ ಗುಡಿಗೆ ಹೋಗುವ ದಾರಿಯ ಹತ್ತಿರ ಆರೋಪಿ ಯಾವುದೋ ಲಾರಿಯ ಚಾಲಕನು ತನ್ನ ಲಾರಿಯನ್ನು ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ, ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಾಲನೆ ಮಾಡಿಕೊಂಡು ಬಂದು, ಹುಬ್ಬಳ್ಳಿಯಿಂದ ಇಂಗಳಹಳ್ಳಿ ಕಡೆಗೆ, ಹುಬ್ಬಳ್ಳಿ ಗದಗ ರಸ್ತೆ ಹಿಡಿದು ಹೊರಟಿದ್ದ ಪಿರ್ಯಾದಿದಾರನ ಆಟೋ ರಿಕ್ಷಾ ನಂ. ಕೆಎ-25-ಡಿ-2938 ನೇದ್ದಕ್ಕೆ ಡಿಕ್ಕಿ ಮಾಡಿ, ಆಟೋ ಚಾಲಕ 1] ನಾಗರಾಜ ಹನಮಂತಪ್ಪ ವಾಲೀಕಾರ ಮತ್ತು ಆಟೋದ್ದಲ್ಲಿದ್ದ 2] ಪ್ರಕಾಶ ಹನಮಂತಪ್ಪ ವಾಲೀಕಾರ 3] ಪುಷ್ಪಾ@ರೇಷ್ಮಾ ಕೋಂ ಸಿದ್ದಪ್ಪ ನಿಡಗುಂದಿ 4] ಹೇಮಾ ತಂದೆ ಬಸವರಾಜ ನೆಟೆಗಲ್ ಇವರಿಗೆ ಸಾದಾ ವ ಭಾರಿ ಗಾಯಪಡಿಸಿ, ಅಪಘಾತದ ವಿಷಯವನ್ನು ಠಾಣೆಗೆ ತಿಳಿಸದೇ ಹಾಗಿದ್ದು ಈ ಕುರಿತು ಹುಬ್ಬಳ್ಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 

2) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:25-05-2017 ರಂದು ಮುಂಜಾನೆ 08-00 ಗಂಟೆ ಸುಮಾರಿಗೆ ಅಗಡಿ ಹುಬ್ಬಳ್ಳಿ ರಸ್ತೆಯ ಮೇಲೆ ಪೂನಾ ಬೆಂಗಳೂರ ರಸ್ತೆ ಸಮೀಪ, ಚಂದ್ರಗೌಡ ಪರ್ತಗೌಡ ಮರಿಗೌಡರ ಸಾ: ಅಗಡಿ ರವರ ಜಮೀನ ಹತ್ತಿರ ಆರೋಪಿ ಅರ್ಜುನ ತಂದೆ ಯಲ್ಲಪ್ಪ ಸುಬಂಜಿ ಸಾ: ಅಗಡಿ ಇತನು ಹೊಂಡಾ ಶೈನ ಮೋಟಾರ ಸೈಕಲ ನಂಬರ ಕೆ.ಎ-25/ಇಕ್ಯೂ-0773 ನೇದನ್ನು ಅಗಡಿ ಕಡೆಯಿಂದ ಪಿ.ಬಿ.ರಸ್ತೆಯ ಕಡೆಗೆ ಅತೀ ಜೋರಿನಿಂದ ಮತ್ತು ಅಜಾಗೂರಕತೆಯಿಂದ ಮಾನವೀಯ ಪ್ರಾಣಕ್ಕೆ ಅಫಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಹೋಗಿ, ಪಿ.ಬಿ.ರಸ್ತೆಯ ಕಡೆಯಿಂದ ಅಗಡಿ ಗ್ರಾಮದ ಕಡೆಗೆ ಮಂಜಯ್ಯಾ ಬಸಯ್ಯಾ ಹಿರೆಮಠ ಸಾ: ಅಗಡಿ ಇತನು ತನ್ನ ಎಡಗಡೆ ಸೈಡಿಗೆ ನಡೆಸಿಕೊಂಡು ಬರುತ್ತಿದ್ದ  ಮೋಟಾರ ಸೈಕಲ ನಂ: ಕೆ.ಎ-25/ಇಎಸ್-4964 ನೇದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ, ತನ್ನ ಮೋಟಾರ ಸೈಕಲ ಹಿಂದುಗಡೆ ಕುಳಿತ ಪಿರ್ಯಾದಿ ಬಸುವರಾಜ ರಾಮಣ್ಣ ಬ್ಯಾಹಟ್ಟಿ  ಮತ್ತು  ಮೋಟಾರ ಸೈಕಲ ನಂ: ಕೆ.ಎ-25/ಇಎಸ್-4964  ನೇದರ ಹಿಂದುಗಡೆ ಕುಳಿತ ದುರಗಪ್ಪ ಸೊರೇಪ್ಪ ಹರಿಜನ ಸಾ: ಅಗಡಿ ಇವರಿಗೆ ಸಾದಾ ವ ಭಾರಿ ಗಾಯಪಡಿಸಿ, ತನಗೂ ಭಾರಿ ಗಾಯಪಡಿಸಿಕೊಂಡಿದ್ದಲ್ಲದೇ,ಮೋಟಾರ ಸೈಕಲ ನಂ: ಕೆ.ಎ-25/ಇಎಸ್-4964 ನೇದರ ಸವಾರ ಮಂಜಯ್ಯಾ ಬಸಯ್ಯಾ ಹಿರೆಮಠ ವಯಾ 21 ವರ್ಷ ಸಾ: ಅಗಡಿ ಇತನಿಗೆ ಭಾರಿ ಗಾಯಪಡಿಸಿ ಮರಣಪಡಿಸಿದ್ದು ಈ ಕುರಿತು ಹುಬ್ಬಳ್ಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 

3) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:24-05-2017 ರಂದು 2015 ಗಂಟೆಗೆ ಕಲಘಟಗಿ ಧಾರವಾಡ ರಸ್ತೆ ಮೇಲೆ ಜೋಡಳ್ಳಿ ಸಮೀಪ ಟಾಟಾ ಏಸ್ ವಾಹನ ನಂ. ಕೆಎ-25 ಸಿ-8085 ನೇದ್ದರ ಚಾಲಕ ಸುರೇಶ ಗಿರಿಯಪ್ಪನವರ ಇತನು ತಾನು ನಡೆಸುತ್ತಿದ್ದ ವಾಹನವನ್ನು ಧಾರವಾಡ ಕಡೆಯಿಂದ ಕಲಘಟಗಿ ಕಡೆಗೆ ಅತೀ ವೇಗ  ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಜೋಡಳ್ಳಿ ಸಮೀಪ ರಸ್ತೆ ಬದಿ ನಡೆಯುತ್ತಾ ಹೊರಟಿದ್ದ ಫಿರ್ಯಾದಿ ತಾಯಿ ಶಾಂತವ್ವ ಕೋಂ. ಚನ್ನಬಸಪ್ಪ ಲಕಮಾಪುರ ಇವರಿಗೆ  ಡಿಕ್ಕಿ ಮಾಡಿ ಅಪಘಾತ ಪಡಿಸಿ ಭಾರೀ ಸ್ವರೂಪದ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 

4) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 24-05-2017 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಕಳಸನಕೊಪ್ಪ ಗ್ರಾಮದ ಪಿರ್ಯಾದಿ ಮನೆಯ ಮುಂದೆ ಆರೋಪಿ ಸಂಜು ಲಕ್ಷ್ಮಣ ಸೊಲ್ಲಾಪೂರ ಈತನು ತನ್ನ ಹೆಂಡತಿ ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೋತಿದ್ದ ರ ಸಿಟ್ಟಿನಿಂದ ಪಿರ್ಯಾದಿಯು ಮನೆಯಲ್ಲಿ ಒಬ್ಬಳೆ ಇದ್ದುದ್ದನ್ನು ನೋಡಿ ಅವಳ ಮನೆಯ ಮುಂದೆ ಬಂದು ಅವಾಚ್ಯ ಬೈದಾಡಿ ಕೈಯಿಂದ ಹೊಡಿಬಡಿ ಮಾಡಿ ನೀನು ಮುಂದಿನ ಚುನಾವಣೆಯಲ್ಲಿ ನನ್ನ ವಿರುದ್ದ ನಿಂತರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಅಂತಾ ಜೀವದ ಧಮಕಿ ಹಾಕಿ ಅವಳ ಮೈ ಕೈ ಮುಟ್ಟಿ ಎಳೆದಾಡಿ ನೈಟಿ ಹರಿದು ಅಪಮಾನಗೊಳಿಸಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

5)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 24-05-2017 ರಂದು 2000 ಗಂಟೆ ಸುಮಾರಿಗೆ ಕಳಸನಕೊಪ್ಪ ಗ್ರಾಮದ ಶಿವಾನಂದ ನಾಯಕ ಇವರ ಮನೆ ಮುಂದೆ  ನಮೂದ ಫಿರ್ಯಾದಿ ಸಂಜೀವ ಲಕ್ಷ್ಮಣ  ಸೊಲ್ಲಾಪೂರ  ಇವನು ಆಸೆನಂ. 1] ಶಿವಾನಂದ ಮಾರುತಿ ನಾಯಕ  ಇವನಿಗೆ ಈ ಹಿಂದೆ ಕೊಟ್ಟ  8000 ಇಟ್ಟಿಗೆಗಳನ್ನು ಕೊಡುವಂತೆ  ಕೇಳಲು ಹೋದ ಫಿ:ದಿಗೆ  ಹಲ್ಕಟ್ ಬೈದಾಡಿದ್ದಲ್ಲದೇ  ಆಸೆನಂ. 2] ಜ್ಯೋತಿ ಕೋಂ. ವಿಜಯ ನಾಯಕ  ಇವಳು  ಫಿ:ದಿಗೆ ಕಣ್ಣಾಗ ಖಾರ  ಉಗ್ಗಿದ್ದು, ಆಸೆನಂ. 1 ನೇದವನು ಬಡಿಗೆಯಿಂದ ಫಿ:ದಿಗೆ  ತಲೆಗೆ ಹೊಡೆದು, ಗಾಯಪಡಿಸಿದ್ದಲ್ಲದೇ ಹಲ್ಕಟ್ ಬೈದಾಡಿ ಜೀವದ ಧಮಕಿ ಹಾಕಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ

Wednesday, May 24, 2017

CRIME INCIDENTS 24-05-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 24-05-2017 ರಂದು ವರದಿಯಾದ ಪ್ರಕರಣಗಳು

1) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿಃ23-05-2017 ರಂದು 20-50 ಗಂಟೆ ಸುಮಾರಿಗೆ ಹುಬ್ಬಳ್ಳಿ   ಧಾರವಾಡ ಬೈಪಾಸ ರಸ್ತೆ ಮನಸೂರ ಗ್ರಾಮದ  ಹದ್ದಿನಗುಡ್ಡದ ಹತ್ತಿರ ಲಾರ ನಂ kA 25 C 5429 ನೇದ್ದರ ಚಾಲಕನು ತನ್ನ ಲಾರಿಯನ್ನು ಕಚ್ಚಾ ರಸ್ತೆಯಿಂದ ಮುಖ್ಯ ರಸ್ತೆಗೆ ಕೂಡುವ ಸಲುವಾಗಿ ಯಾವದೇ ಮಾರ್ಗಸೂಚಿಯನ್ನು ನೀಡದೆ ಅತೀ ವೇಗ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ ಕೊಂಡು ಬಂದು ಪಿರ್ಯಾದಿ ಚಲಾಯಿಸುತಿದ್ದ  ಜೀಪ ನಂ Ka 25 G 551 ನೇದ್ದಕ್ಕೆ ಡಿಕ್ಕಿ ಪಡಿಸಿ ಅಪಘಾತದಲ್ಲಿ ಜೀಪನಲ್ಲಿದ್ದ ಪಿರ್ಯಾದಿಯಾದ ಜೀಪ ಚಾಲಕ ಶಂಕರ ತಂದೆ ಮಾರತಿ ಬೇವಿನಮರದ ನೇದವರಿಗೆ ಸಾದಾ ಗಾಯ ಹಾಗೂ  ಸಂಗಮೇಶ ಪಾಲಭಾವಿ ಸಾಃಪಿಎಸ್ಐ ಗರಗ ಪೊಲೀಸ್ ಠಾಣೆ ರವರಿಗೆ ಭಾರಿ ಗಾಯ ಪಡಿಸಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


2) ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಕಾಣೆಯಾದ ಮಹಿಳೆಯಾದ    ಚಾಂದಬೀ ಕೊಂ ಹಸನಸಾಬ ಕೋಲಕಾರ, ವಯಾ 24 ವರ್ಷ ಜಾತಿಃ ಮುಸ್ಲಿಂ ಉದ್ಯೊ ಮನೆಕೆಲಸ ಸಾಃ ಕೋಟುಮಚಗಿ ತಾಃ ಗದಗ ಇವಳು ಅಣ್ಣಿಗೇರಿಯ ತನ್ನ ಮಾವನ ಮನೆಯಿಂದ ದಿನಾಂಕ 05-05-2017 ರಂದು ಸಾಯಂಕಾಲ 16-00 ಘಂಟೆಗೆ ಬಯಲು ಶೌಚಾಲಯಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಇದುವರೆಗೂ ಮರಳಿ ಮನೆಗೆ ಬಾರದೇ ಎಲ್ಲಿಯೊ ಹೋಗಿ ಕಾಣೆಯಾಗಿದ್ದು   ಇರುತ್ತದೆ   ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 

CRIME INCIDENTS 23-05-2017


ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 23-05-2017 ರಂದು ವರದಿಯಾದ ಪ್ರಕರಣಗಳು

1) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 23-05-2017 ರಂದು 15-10 ಗಂಟೆ ಸುಮಾರಿಗೆ ನರೇಂಧ್ರ ಗ್ರಾಮದ ಹದ್ದಿ ಸಾಯಿಅರಣ್ಯ ಹೋಟೇಲ ಹತ್ತಿರ ಆರೋಪಿತನಾದ ಹನಮಂತ ತಂದೆ ತುಕಾರಾಮ ಕೋಟೂರ  ವಯಾ-47 ವರ್ಷ, ಜಾತಿ-ಹಿಂದು ಮರಾಠಾಉದ್ಯೋಗ-ಶೇತ್ಕಿ  ಸಾ: ದುರ್ಗದ ಕೇರಿ ನಡುಓಣಿ   ಇವನು ತನ್ನ ಸ್ವಂತ ಪಾಯ್ದೆಗೋಸ್ಕರ ಯಾವದೇ ಪಾಸು ಪರ್ಮಿಟ ಇಲ್ಲದೇ ಸರಕಾರದ ಬೊಕ್ಕಸಕ್ಕೆ ನಷ್ಟ ಮಾಡುವ ಉದ್ದೇಶದಿಂದ ಒಂದು  ಕೈ ಚೀಲದಲ್ಲಿ ಒಟ್ಟು 96 ಹೈರ್ವಡ್ಸ ಚೀಯರ್ಸ  ವಿಸ್ಕಿ ತುಂಬಿದ 90 ಎಂ, ಎಲ್ ಅಳತೆಯ ಸರಾಯಿ ಟೆಟ್ರಾ ಪಾಕೀಟಗಳು :ಕಿ 2720/-ರೂ ನೇದ್ದವುಗಳು ಎಲ್ಲಿಂದಲೋ ಖರೀದಿ ಮಾಡಿ ತಂದು ಅಕ್ರಮವಾಗಿ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


2) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ಮೃತನು ಹಿಂದೆ ಮಾರಿ ತನ್ನ ಬಾಬತ್ತ್ ಒಂದು ಎಕರೆ ಜಮೀಸನು ಹಾಗೂ ಇದ್ದ ಮನೆಯನ್ನು ಮಾರಾಟ ಮಾಡಿದ್ದನ್ನು ತನ್ನ ಮಗನಿಗೆ ಆಸ್ತಿ ಇರುವುದಿಲ್ಲಾ ಅಂತಾ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 22-05-2017, ರಾತ್ರಿ 10-30 ಗಂಟೆಯಿಂದ ದಿನಾಂಕ; 23-05-2017 ಬೆಳಿಗ್ಗೆ    06-00 ಗಂಟೆಯ ನಡುವೆ,ತನ್ನ ಮನೆಯ ಚಾವಣಿಯಲ್ಲಿಯ ಬೆಲಗಿಗೆ ಪತ್ತಲದಿಂದ ಕುತ್ತಿಗಿಗೆ ಉರಲು ಹಾಕಿಕೊಂಡು ಸತ್ತಿರುತ್ತಾನೆ ವಿನಃ ಅವನ ಮರಣದಲ್ಲಿ ಬೇರೆ ಸಂಶಯ ಇರುವುದಿಲ್ಲ ಅಂತಾ ವರದಿ ಇರುವುದರಿಂದ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.