ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, May 5, 2017

CRIME INCIDENTS 05-05-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 05/05/2017 ರಂದು ವರದಿಯಾದ ಪ್ರಕರಣಗಳು
1. ಅಣ್ಣಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಬಸಾಪುರ ಗ್ರಾಮದ  ನವಲಗುಂದ ದಿಂದ ಬಸಾಪುರಕ್ಕೆ ನಾಗರಾಜ ಕಾಳೆ ಇವರು  ಬಸ್ಸಿನಲ್ಲಿ ಬರುವಾಗ ಬಸ್ಸಿನ ಕಂಡಿಕ್ಟರಾದ  ಆರೋಪಿತನಾದ ಸಿದ್ದಪ್ಪಾ ಕಾಂಬಳಿ ಇವರ  ಕೈಯಲ್ಲಿ ಕೊಟ್ಟಿದ್ದು 5 ರೂ ಹಣವನ್ನು ತೆಗೆದುಕೊಳ್ಳುವ ಸಲುವಾಗಿ ಕೇಳಿದ್ದಕ್ಕೆ ಆರೋಪಿತನು ಲೇ ಹೊಲೆ ಸೂಳೆ ಮಕ್ಕಳಾ ನಿಮಗ ಎಷ್ಟು ಸೊಕ್ಕ ಬಂದತೀ ನಿಮಗ ಎಲ್ಲಿ ಇಡಬೇಕು ಅಲ್ಲಿ ಇಡಬೇಕು ಅಂತಾ ಕೈಯಿಂದ ಕಪಾಳಕ್ಕೆ ಕಣ್ಣಿಗೆ ಹೊಡಿ ಬಡಿ ಮಾಡಿ ನೆಲಕ್ಕೆ ಕಡವಿ ಉಳ್ಳಾಡಿಸಿ ಕಾಲಿನಿಂದ ಎದೆಗೆ ಮತ್ತು ಸಿಕ್ಕ ಸಿಕ್ಕಲ್ಲಿ ಒದ್ದಿದ್ದು ಅಲ್ಲದೇ ಈಗಾಗಲೇ ಈ ಹಿಂದೆ ನಿಮಗ ಆಗಿದ್ದ ಗೊತ್ತೈತಿ ಇಲ್ಲಾ ಹಾಗೇ ನಿನ್ನನ್ನು ಕೊಲೆ ಮಾಡುತ್ತೆನೆ ಅಂತಾ ಜೀವದ  ಬೆಧರಿಕೆಯನ್ನು ಹಾಕಿದ್ದು ಜಾತಿ ನಿಂದನೆ  ಮಾಡಿದ ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 71/2017 ಕಲಂ IPC 1860 (U/s-323,504,506); The SC & ST (Prevention of Atrocities) Amendment Act 2015 (U/s-3(1)(s)) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2 ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಕುಂಡಿ ಗ್ರಾಮದ ಪರಶುರಾಮ ತಂದೆ ಕೃಷ್ಣಾ ದೋಸಿ ಸಾ..ಕಲಕುಂಡಿ ಇವರು ತಮ್ಮ ಮಗಳಾದ ರುಕ್ಮೀಣಿ ತಂದೆ ಪರಶುರಾಮ ದೋಸಿ 18 ವರ್ಷ ಸಾ..ಕಲಕುಂಡಿ ಇವಳು ದಿನಾಂಕ-02-05-2017 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ಕಲಘಟಗಿಯ ಧರ್ಮಸ್ಥಳ ಸಂಘಕ್ಕೆ ಹೋಗಿ ಹಣ ತಂಬಿ ಬರುವದಾಗಿ ಹೇಳಿ ಹೋದವಳು ಈವರೆಗೂ ಮನೆಗೆ ಬಾರದೆ ಎಲ್ಲಿಯೋ ಹೊಗಿ ಕಾಣೆಯಾಗಿದ್ದು  ೀ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 157/2017 ಕಲಂ ಹೆಣ್ಣು ಮಗಳು ಕಾಣಿ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ :ಕಲಘಟಗಿ ಹಳ್ಳಿಯಾಳ ರಸ್ತೆಯ ಮೇಲೆ ಮಂಗೇಶ ಕೆರೆಯ ಹತ್ತಿರ ಆರೋಪಿತನಾದ ಮಹಮ್ಮದ ಅಲಿ ಇತನು  ತಾನು ನಡೆಸುತ್ತಿದ್ದ ಲಾರಿ ನಂಬರ KA 22/ B 5055 ನೇದ್ದನ್ನು ಕಲಘಟಗಿ ರಸ್ತೆ  ಕಡೆಯಿಂದ ಹಳ್ಳಿಯಾಳ ರಸ್ತೆ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ವಾಹನ ಮೇಲಿನ ನೀಯಂತ್ರಣ ಕಳೆದುಕೊಂಡು ಎದುರಿಗೆ ಬರುತ್ತಿದ್ದ ಮಲ್ಲಪ್ಪಾ ಅಯ್ಯನವರ ಇವರ  ಟಿಪ್ಪರ ಲಾರಿ ನಂಬರ KA 25/ C 6227 ನೇದ್ದಕ್ಕೆ ಡಿಕ್ಕಿ ಮಾಡಿ ತನ್ನ ವಾಹನವನ್ನು ಜಕ್ಕಂ ಗೊಳಿಸಿದ್ದು ಇರುತ್ತದೆ ಈಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 158/2017 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.