ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, May 8, 2017

CRIME INCIDENTS 08-05-2017

ದಿನಾಂಕ 08-05-2017 ರಂದು ಧಾರವಾಡ ಜಿಲ್ಲಯಲ್ಲಿ ವರದಿಯಾದ ಪ್ರಕರಣಗಳು
1.ಗುಡಗೇರಿ ಪೊಲೀಸ್ ಠಾಣೆ: ತರ್ಲಘಟ್ಟ ಗ್ರಾಮದ ಮೋರಾರ್ಜಿ ವಸತಿ ಶಾಲೆಯಲ್ಲಿ ಇಟ್ಟಿದ್ದ ಸುಮಾರು 3 ಲಕ್ಷ ರೂಪಾಯಿ ಕಿಮ್ಮತ್ತಿನ ರೇಶನ್ ಹಾಗೂ ದಿನಸೀ ಸಾಮಾನುಗಳನ್ನು ಅದೇ ಶಾಲೆಯಲ್ಲಿ ವಾರ್ಡನ ಮತ್ತು ವಾಚಮನ್ ಹಾಗೂ ಅಡುಗೆ ಕೆಲಸ ಮಾಡುವ 06-07 ಜನ ಹೆಣ್ಣುಮಕ್ಕಳು ಕೂಡಿ ಸಮಾನ ಉದ್ದೇಶದಿಂದ ಕಳ್ಳತನ ಮಾಡಿ ಎರಡು ಟಾಟಾ ಮ್ಯಾಜಿಕ್ ಗಾಡಿಯಲ್ಲಿ ಹೇರಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 38-2017 ಕಲಂ 381 ಸಹ ಕಲಂ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
2.ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ 06-05-2017 ರಂದು ಬೆಳಗಿನ ಜಾವ 01-00 ಗಂಟೆಯಿಂದ  ಮುಂಜಾಣೆ 08-00 ಗಂಟೆಯ ನಡುವಿನ ಅವಧಿಯಲ್ಲಿ  ಪಿರ್ಯಾದಿಯಾದ ಕನಿಷ್ಕ ತಂದೆ ಕಂಡೇಶ್ವರ ನರೇಂದ್ರ ಸಾಃನರೇಂದ್ರ ಇವರ ಬಾಬತ ಸಾಯಿ ಅರಣ್ಯ ಹೊಟೆಲದಲ್ಲಿ ಇಟ್ಟ  TVS XL ಮೋಟರ ಸೈಕಲ ನಂ KA 25 EL 9295 ನೇದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 93/2017 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
3.ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ: ದಿಃ07-05-2017 ರಂದು ರಾತ್ರಿ 08-30 ಗಂಟೆ ಸುಮಾರಿಗೆ ಹುಬ್ಬಳ್ಳಿ ಧಾರವಾಢ ಬೈಪಾಸ ರಸ್ತೆ ಚಿಕ್ಕಮಲ್ಲಿಗವಾಡ ಬ್ರಿಡ್ಜ ಹತ್ತಿರ  ಲಾರಿ ನಂ MH 11 M 5598  ನೇದ್ದರ ಚಾಲಕನು ಅತೀವೇಗವಾಗಿ ನಿಷ್ಕಾಳಜಿತನದಿಂದ ಮಾನವನ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಬೆಳಗಾಂವ ಕಡೆಯಿಂದ ಹುಬ್ಬಳ್ಳಿ ಕಡೆಗೆ ಚಲಾಯಿಸಿ ಕೊಂಡು ಬಂದು ತನ್ನ ಮುಂದೆ ಹೋಗುತ್ತಿದ್ದ ಯಾವದೋ ಒಂದು ವಾಹನವನ್ನು ಓವರ ಟೇಕ ಮಾಡಿ  ಲಾರಿಯ  ವೇಗ ನಿಯಂತ್ರಣ ಮಾಡಲಾಗದೆ  ರಸ್ತೆ ಎಡ ಸೈಡಿನಲ್ಲಿ ಹುಬ್ಬಳ್ಳಿ ಕಡೆಯಿಂದ ಬೆಳಗಾಂವ ಕಡೆಗೆ ಹೋಗುತ್ತಿದ್ದ  ಕಾರ ನಂ ಕೆಎ 22 ಸಿ 6516 ನೇದ್ದಕ್ಕೆ ಅಪಘಾತ ಪಡಿಸಿದ ಅಪಘಾತದಲ್ಲಿ ಕಾರ ಪಲ್ಟಿ ಆಗುವಂತೆ ಮಾಡಿ ಕಾರನ್ನು ಜಖಂ ಗೋಳಿಸಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 94/2017 ಕಲಂ 279 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
4.ಹುಬ್ಬಳ್ಳಿ ಗ್ರಾ,ಮೀಣ ಪೊಲೀಸ್ ಠಾಣೆ: ದಿನಾಂಕ:07-05-2017 ರಂದು ಸಂಜೆ 5-30 ಗಂಟೆ ಸುಮಾರಿಗೆ ಹುಬ್ಬಳ್ಳಿ ಕಲಘಟಗಿ ರಸ್ತೆಯ ಮೇಲೆ ಅಂಚಟಗೇರಿ ಸಮೀಪ ವಾಟರ ಪಾರ್ಕ ಹತ್ತಿರ ಆರೋಪಿ ಸಹದೇವಪ್ಪ ನಿಂಗಪ್ಪ ಉಗ್ನಿಕೇರಿ ಸಾ:ಸಂಗೆದೇವರಕೊಪ್ಪ ತಾ: ಕಲಘಟಗಿ ಇತನು ಟ್ರ್ಯಾಕ್ಟರ ಟೆಂಪರವರಿ ನಂ; ಕೆ.ಎ-25/ಟಿ.ಜೆ-008394, ಇಂಜೀನ ನಂ: ಎನ8ಎಮ್.ಬಿ.00791, ಟ್ರೇಲರ ನಂ:ಕೆ.ಎ-25/ಟಿ-4422  ನೇದನ್ನು ಹುಬ್ಬಳ್ಲಿ ಕಡೆಯಿಂದ ಕಲಘಟಗಿ ಕಡೆಗೆ ಅತೀ ಜೋರನಿಂದ ಮತ್ತು ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಹೋಗಿ, ಟ್ರ್ಯಾಕ್ಟರ ಗಾಡಿಯ ವೇಗವನ್ನು ನೀಯಂತ್ರಣ ಮಾಡಲಾಗದೇ, ಪಲ್ಟಿ ಮಾಡಿ ಟ್ರ್ಯಾಕ್ಟರ ಟ್ರೇಲರ ಮತ್ತು ಇಂಜಿನಲ್ಲಿದ್ದ ಒಟ್ಟು 27 ಜನರಿಗೆ ಸಾದಾ ವ ಭಾರಿ ಗಾಯಪಡಿಸಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 106/2017 ಕಲಂ 279,337,338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.