ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, May 12, 2017

CRIME INCIDENTS 12-05-2017ದಿನಾಂಕ 12/05/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1.ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 12-05-2017 ರಂದು ಬೆಳಗಿನ 6-00 ಗಂಟೆ ಸುಮಾರಿಗೆ ಅಳ್ನಾವರ ಬೆಣಚಿ ರಸ್ತೆಯ ಮೇಲೆ ಅಳ್ನಾವರದ ವಿಜಾಪೂರ ಪೆಟ್ರೋಲ ಬಂಕ ಹತ್ತಿರ ಲಾರಿ ನಂ ಜಿ.ಎ-04/ಟಿ-3251 ನೇದ್ದರ ಚಾಲಕನಾದ ಪ್ರದೀಪ ತಂದೆ ಗಣಪತಿ ಗಾವಡೆ ಸಾ|| ಮಾನಿಕವಾಡ ಹಾಲಿ|| ಶಿಂದೊಳ್ಳಿ ತಾ||ಖಾನಾಫೂರ ಜಿ|| ಬೆಳಗಾಂವ ಹಾಗೂ ಅವನ ಸಂಗಡ ಇದ್ದ ಆಪಾದಿತನಾದ ರವಿ ಕಲ್ಲಪ್ಪ ಪಾಟೀಲ ಸಾ|| ಶಿಂದೊಳ್ಳಿ ತಾ||ಖಾನಾಪೂರ ಜಿ|| ಬೆಳಗಾಂವ ಅವರು ಸೇರಿಕೊಂಡು ಯಾವುಧೆ ಪಾಸ ವ ಪರ್ಮೀಟ ಇಲ್ಲದೆ ಎಲ್ಲಿಂದಲೋ ಸುಮಾರು 12000 ರೂ ಕಿಮ್ಮತ್ತಿನ ಮರಳನ್ನು ಲಾರಿ ನಂಬರ ಜಿ.ಎ 04/ಟಿ-3251 ನೇದ್ದರಲ್ಲಿ ಲೋಡ ಮಾಡಿ ಕಳವು ಮಾಡಿಕೊಂಡು ಅಕ್ರಮವಾಗಿ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ  ರಾಮನಗರ ಕಡೆಯಿಂದ ಅಳ್ನಾವರ ಮಾರ್ಗವಾಗಿ ಬೆಣಚಿ ಕಡೆಗೆ ಸಾಗಾಟ ಮಾಡುತ್ತಿರುವಾಗ ಸಿಕ್ಕ ಬಗ್ಗೆ ಹಾಗೂ ಓಡಿ ಹೋದ ಆಪಾದಿತನಾದ ರವಿ ಕಲ್ಲಪ್ಪ ಪಾಟೀಲ ಸಾ|| ಶಿಂದೊಳ್ಳಿ ತಾ||ಖಾನಾಪೂರ ಅವರ ಮೇಲೆ ಗುನ್ನಾ ನಂ. 48/2017 ಕಲಂ 379.ಐ.ಪಿ.ಸಿ ಮತ್ತು 4(1) ಸಹಕಲಂ 21 ಎಮ್.ಎಮ್,ಡಿ.ಆರ್ ಆಕ್ಟ 1957 ಹಾಗೂ 3.32.44 ಕೆ.ಎಮ್.ಎಮ್.ಸಿ ರೂಲ್ಸ 1994 ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಅದೆ
2.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿ: ಆರೋಪಿ ಶಂಕ್ರಪ್ಪ ಮಲ್ಲಪ್ಪ ಸಂಗಟಿ ಈತನು ನವಲಗುಂದದ ವಿಜಯಾ ಬ್ಯಾಂಕ್ ಗೆ ಹೋಗಿ ತನ್ನ ಹೆಂಡತಿಯ ಉಳಿತಾಯ ಖಾತೆಯ ವಿವರ ಹಾಗೂ ಖಾತೆಯಲ್ಲಿನ ಹಣವನ್ನು ಕೊಡುವಂತೆ ಕೇಳಿದ್ದಕ್ಕೆ ಬ್ಯಾಂಕ್ ಸಿಬ್ಬಂದಿಯಾದ ಸಂದೀಪ್ ಇವನು ಬ್ಯಾಂಕ್ ನಿಯಮಾನುಸಾರ ಖಾತೆದಾರರು ಇಲ್ಲದೆ ಕೊಡಲು ಬರುವದಿಲ್ಲ ಅಂತ ಹೇಳಿದ್ದಕ್ಕೆ ಬ್ಯಾಂಕ್ ಮ್ಯಾನೇಜರ್ ವ. ಪಿರ್ಯಾದಿಯ ಹತ್ತಿರ ಹೋಗಿ ಅಲ್ಲಿ ಸಹ ಕೇಳಿದ್ದಕ್ಕೆ ಪಿರ್ಯಾದಿಯು ಕೊಡಲು ಬರುವದಿಲ್ಲ ಅಂತ ಹೇಳಿದ್ದಕ್ಕೆ ಪಿರ್ಯಾದಿಗೆ ಅವಾಚ್ಯ ಬೈದಾಡಿ ದೂಡಿ ಕುರ್ಚಿ, ಪೇಪರ್ ವೇಟ್, ಬೆಲ್, ಲ್ಯಾಂಡ್ ಪೋನ್ ಎಸೆದು ಗಾಯಾಳುವಿನ ಕಪಾಳಕ್ಕೆ ಕೈಯಿಂದ ಹೊಡೆದು ಸರಕಾರಿ ಕೆಲಸಕ್ಕೆ ಅಡೆ ತಡೆ ಮಾಡಿ ಜೀವದ ಧಮಕಿ ಹಾಕಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 53/2017 ಕಲಂ IPC 1860 (U/s-427,506,504,323,353) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
3.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ಪಿರ್ಯಾದಿದಾರಳ ತಂದೆ ದೂಳಪ್ಪ ತಂದೆ ನಿಂಗಪ್ಪ ಹಾಲಪ್ಪನವರ ಇವರ  ಬಾಬತ ಅಮ್ಮಿನಬಾವಿ ಗ್ರಾಮದ ಜಮೀನು ಸರ್ವೇ ನಂ 575/4/1+2, ಸರ್ವೇ ನಂ 467/1+2+3+4+5+6+7+8+9 ನೇದ್ದರ ಜಮೀನು ಇರುತ್ತದೆ  ಪಿರ್ಯಾದಿಯು ಅವಳ ತಂದೆಗೆ ಒಬ್ಬಳೇ ಮಗಳು ಇರುತ್ತಾಳೆ ಪಿರ್ಯಾದಿಯ ತಂದೆಯು ಅಲೆದಾಡುವ ಸ್ವಬಾವದನಿದ್ದರಿಂದ ಆರೋಪಿ ಮಲ್ಲಿಕಾಜುಱನ ಹುಲಗೂರ ಇತನು ದಿನಾಂಕ 16-08-1968 ರಂದು ಪಿರ್ಯಾದಿಯ ತಂದೆಯ ಕೊಟ್ಟಿ ಸಹಿ ಮಾಡಿ ಪಿರ್ಯಾದಿದಾರನ ಜಮೀನು ಮನೆ ಹಾಗೂ ಹಿತ್ತಲ ಜಾಗೆಯನ್ನು ತನ್ನ ಹೆಸರಿಗೆ ಖರೀದಿ ಮಾಡಿಕೊಂಡು ಕೊಟ್ಟಿ ಖರೀದಿ ದಾಖಲಾತಿಗಳನ್ನು ಸೃಷ್ಠಿ ಮಾಡಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 99/2017 ಕಲಂ IPC 1860 (U/s-466,465,467) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.