ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, May 13, 2017

CRIME INCIDENTS 13-05-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ.13-05-2017 ರಂದು ವರದಿಯಾದ ಪ್ರಕರಣಗಳು

1) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 12-05-2017 ರಂದು ಬೆಳಗಿನ 04-00 ಗಂಟೆಯ ಸುಮಾರಿಗೆ ಪಿರ್ಯಾಧ ಇಮಾಮಸಾಬ  ಹುಸೇನಸಾಬ ಬೈಲಹೊಲಿ ಸಾ: ನವಲಗುಂದ   ಇತನ  ಹೆಂಡತಿ ಶಾಯೀದ್ ಬೇಗಂ ವಯಾ:23 ವರ್ಷ ಸಾ:ನವಲಗುಂದ ಮನೆಯಲ್ಲಿ ಯಾರಿಗೂ ಹೇಳದೆ ಮನೆಯಲ್ಲಿದ್ದ 70000/- ರೂ ನಗದು ಮತ್ತು 3 1/2 ತೊಲೆ ಬಂಗಾರ ತೆಗೆದುಕೊಂಡು ಮನೆಯಲ್ಲಿ ಯಾರಿಗೂ ಹೇಳದೆ ಕಾಣೆಯಾಗಿದ್ದದ್ದು ಇರುತ್ತದೆ. ಎಂದು ಪಿರ್ಯಾಧಿ ಇರುವುದರಿಂದ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


2) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-13-05-2017 ರಂದು ಮುಂಜಾನೆ 11-30 ಗಂಟೆಯ ಸುಮಾರಿಗೆ ಕಾರವಾರ ಹುಬ್ಬಳ್ಳಿ ರಸ್ತೆಯ ಮೇಲೆ ಉಗ್ಗಿನಕೇರಿ ಗ್ರಾಮದ ಮಲ್ಲಿಕಾರ್ಜುನಗೌಡ ಗೂಳನಗೌಡ ಪಾಟೀಲ ಇವರ ಜಮೀನು ಎದುರಿಗೆ ಕಾರ ನಂ KA-28-P-2304 ನೇದ್ದರ ಚಾಲಕನು ಹುಬ್ಬಳ್ಳಿ ಕಡೆಯಿಂದಾ ಕಲಘಟಗಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ತನ್ನ ಮುಂದೆ ಹೊರಟ ವಾಹನಕ್ಕೆ ಓವರಟೇಕ್ ಮಾಡಿಕೊಂಡು ರಾಂಗ್ ಸೈಡಿನಲ್ಲಿ ನೆಡೆಸಿಕೊಂಡು ಬಂದು ಉಗ್ಗಿನಕೇರಿ ಕಡೆಯಿಂದಾ ಹುಬ್ಬಳ್ಳಿ ಕಡೆಗೆ ಹೊರಟ ಮೋಟಾರ್ ಸೈಕಲ್ ನಂ KA-31-J-3264 ನೇದ್ದರಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಮೋಟಾರ್ ಸೈಕಲ್ ಸವಾರನಾದ ಚಂದ್ರಕಾಂತ ತಂದೆ ಗೋವಿಂದ ನಾಯಕ್ 46 ವರ್ಷ ಸಾ..ಶಿರಸಿ ಇವನಿಗೆ ಗಂಭೀರ ಗಾಯಪಡಿಸಿ ಸ್ಥಳದಲ್ಲಿಯೇ ಮರಣಪಡಿಸಿ, ಮೋಟಾರ್ ಸೈಕಲ್ ಹಿಂದೆ ಕುಳಿತ ಜೈಯಿದ ತಂದೆ ಮಹಮ್ಮದಯಾಕೂಬ ಮಾವಿನಹಳ್ಳಿ ಸಾ..ಶಿರಸಿ ಇವನಿಗೂ ಸಹಾ ಗಂಭೀರ ಗಾಯಪಡಿಸಿದ್ದಲ್ಲದೆ ಕಾರಿನಲ್ಲಿದ್ದವರಿಗೂ ಸಹಾ ಗಾಯಪಡಿಸಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.