ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, May 15, 2017

CRIME INCIDENTS 15-05-2017

                ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 15-05-2017 ರಂದು ವರದಿಯಾದ ಪ್ರಕರಣಗಳು

1) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಇಂದು ದಿನಾಂಕ : 15-05-2017 ರಂದು ಬೆಳಿಗ್ಗೆ ಸಮಯ 09-00 ಗಂಟೆ ಸುಮಾರಿಗೆ ಪಿರ್ಯಾದಿ ನಿಂಗಪ್ಪ ರಾಮಪ್ಪಾ ದ್ಯಾಬೆನ್ನವರ ಸಾ: ಮೊರಬ  ಇತನು  ತನ್ನ ಜಮೀನಿನಲ್ಲಿ  ಕೆಲಸ ಮಾಡುತ್ತಿದ್ದಾಗ ಆರೋಪಿತರು ಬಸಪ್ಪ ಬೀಮಪ್ಪ ದ್ಯಬೆನ್ನವರ , ಹನುಮಂತಪ್ಪ ಬಸಪ್ಪ ದ್ಯಬೆನ್ನವರ  ಇವರು  ಏಕಾ-ಏಕಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಹೂ ದೌರ್ಜನ್ಯ ಮಾಡಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಂಡಿದ್ದು  ಇರುತ್ತದೆ.

2) ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಅಣ್ಣಿಗೇರಿ ಶಹರದಲ್ಲಿ ಆರೋಪಿತ ಜಾಷರಲಿ ಬೇಗ ಇತನು ದಿನಾಂಕ 15-05-2017 ರಂದು ನಸುಕಿನ 03-15 ಘಂಟೆಗೆ ಅಣ್ಣಿಗೇರಿ ಶಹರದ ಅಮೃತೇಶ್ವರ ದೇವಸ್ಥಾನದ ಸಮೀಪದ ಜ್ಯವೆಲರ್ಸ ಅಂಗಡಿಯ ಹತ್ತಿರ ಕವಿ ನೆರಳಿನಲ್ಲಿ ಅವಿತುಕೊಂಡು ತನ್ನ ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಯಾವುದೋ ಸ್ವತ್ತಿನ ಕಾಗ್ನೈ ಜೇಬಲ್ ಅಪರಾಧ ಮಾಡುವ ಉದ್ದೆದಿಂದ ತನ್ನ ಇರುವಿಕೆಯನ್ನು ಮರೆಮಾಚು ಮಾಡುವಾಗ ಸಿಕ್ಕಿದ್ದರಿಂದ ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಗುನ್ನಾ ನಂ. 76/2017 ಕಲಂ. 96(ಬಿ) ಕೆ.ಪಿ.ಆಕ್ಟ್ದಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಂಡಿದ್ದು ಇರುತ್ತದೆ.

3) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 14-05-2017 ರಂದು 1230 ಗಂಟೆಗೆ ರಂದು ಧಾರವಾಡ ನವಲಗುಂದ ರಸ್ತೆ ಶಿವಳ್ಳಿ ಗ್ರಾಮದ ಹತ್ತಿರವಿರುವ ಶಿವಲಿಂಗಪ್ಪ ಬಾರ್ಕಿ ಇವರ ಹೊಲದ ಹತ್ತಿರ ಆರೋಪಿ ಸಂಜೀವ ಶೇಖರಪ್ಪ ತಡಹಾಳ  ತನ್ನ  ಮೋಟರ್ ಸೈಕಲ್ ನಂ ಕೆಎ-25-ಎಸ್-6610 ನೇದ್ದನ್ನು ಸುಳ್ಳ ಕಡೆಯಿಂದ ಧಾರವಾಡ ಕಡೆಗೆ  ಮಂಜುನಾಥ ಕಲ್ಲಪ್ಪ ನಂದೆನ್ನವರ ಇತನು ಸ್ವಿಪ್ಟ ಡಿಸೈರ ಕಾರ ನಂ  ಕೆಎ-22-ಝಡ್-5519 ನೇದ್ದನ್ನು ಧಾರವಾಡ ಕಡೆಯಿಂದ ನವಲಗುಂದ ಕಡೆಗೆ  ತಮ್ಮ ತಮ್ಮ ವಾಹನಗಳನ್ನು ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಎದುರು ಬದುರಾಗಿ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ಆರೋಪಿ ನಂ 01 ನೇದವನು ಹಾಗೂ ಮೋಟರ್ ಸೈಕಲ ಹಿಂದೆ ಕುಳಿತ  ಮಂಜುನಾಥ ಕಲ್ಲಪ್ಪ ನಂದೆಣ್ಣವರ ಇವನಿಗೆ ಸಾದಾ ವ ಬಾರೀ ಗಾಯವಾಗಿದ್ದರಿಂದ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 101/2017 ಕಲಂ. 279,337,338 ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

4) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 12-05-2017 ರಂದು ರಾತ್ರಿ 9-00 ಗಂಟೆಗೆ ಗಂಗಿವಾಳ ಗ್ರಾಮದ ಪಿರ್ಯಾದಿಯ ಮನೆಯಿಂದ ಪಿರ್ಯಾದಿಯ ಮಗಳಾದ ಕು. ಸುಮಂಗಲಾ ತಂದೆ ಮಲ್ಲನಗೌಡ ಪಾಟೀಲ ವಯಾ. 18 ವರ್ಷ ಸಾ. ಗಂಗಿವಾಳ ಇವಳು ಮನೆಯಲ್ಲಿ ಯಾರಿಗೂ ಹೇಳದೇ ಕೇಳದೆ ಮನೆಯಿಂದ ಹೊರಗೆ ಹೋದವಳು ಇನ್ನುವರೆಗೆ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ ಅಂತ ಪಿರ್ಯಾದಿಯಲ್ಲಿರುವುದರಿಂದ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಮುಂದುವರೆದಿರುತ್ತದೆ.

5) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 15-05-2017 ರಂದು ಮುಂಜಾನೆ 11-30 ಗಂಟೆಗೆ ಅಂಚಟಗೇರಿ ಗ್ರಾಮದ ಬುಡನಾಳ ಕೆರೆಯ ಹತ್ತಿರ ಹುಬ್ಬಳ್ಳಿ ಕಾರವಾರ ರಸ್ತೆ ಮೇಲೆ ಆರೋಪಿ ಎನ್.ಡಬ್ಲೂ.ಕೆ.ಆರ್.ಟಿ.ಸಿ ಬಸ್ ನಂ. ಕೆಎ-25-ಎಫ್-2826 ನೇದ್ದರ ಚಾಲಕ ಎಸ್. ಎಸ್ ದಾಸರೆಡ್ಡಿ ಇವರು ಬಸ್ ನ್ನು ಹುಬ್ಬಳ್ಳಿ ಕಡೆಯಿಂದ ಕಲಘಟಗಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ, ಕಲಘಟಗಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಟ್ರ್ಯಾಕ್ಟರ ಇಂಜಿನ್ ನಂ. ಎ.ಪಿ-21-ಎ-9783 ಹಾಗೂ ಟ್ರೇಲರ ನಂ. ಎಪಿ-21-ಎ-9784 ನೇದ್ದಕ್ಕೆ ಡಿಕ್ಕಿ ಮಾಡಿ, ಟ್ರ್ಯಾಕ್ಟರ್ ಚಾಲಕ ಮಂಜುನಾಥ ನಿಂಗಪ್ಪ ಹೊನ್ನಿಹಳ್ಳಿ ಸಾ. ಉಗ್ನಿಕೇರಿ ಇವನಿಗೆ ಸ್ಥಳದಲ್ಲಿಯೇ ಮರಣಪಡಿಸಿ, ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಸಾದಾ ವ ಭಾರಿ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

6)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 10-05-2017 ರಂದು 1530 ಗಂಟೆಗೆ ದಾಸ್ತಿಕೊಪ್ಪ ಗ್ರಾಮದ  ಪೆಟ್ರೋಲ್ ಬಂಕ್  ಸಮೀಪ ಪಿರ್ಯಾದಿ ಮಂಜುನಾಥ ಶಿವಲಿಂಗಪ್ಪ ಯಲಿವಾಳ ಇತನು  ಮ್ಯಾಕ್ಸಿಕ್ಯಾಬ್ ನಂ. ಕೆಎ-27/4196 ನೇದ್ದನ್ನು  ಕಲಘಟಗಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ನಡೆಸಿಕೊಂಡು ಹೋಗುತ್ತಿರುವಾಗ ಆರೋಪಿ ಬಸವರಾಜ ಶಿವಪ್ಪ ಯಲಿವಾಳ ಇತನು ತನ್ನ ಸ್ಕಾರ್ಪಿಯೋ ನಂ. ಕೆಎ-41 ಪಿ-6657 ನೇದ್ದರಲ್ಲಿ  ಹಿಂದಿನಿಂದ ಬಂದು ಹಳೆಯ ದ್ವೇಷದಿಂದ ಪಿರ್ಯಾದಿ  ಮ್ಯಾಕ್ಸಿಕ್ಯಾಬ್ ನಂ. ಕೆಎ-27/4196 ನೇದ್ದನ್ನು ಅಡ್ಡಗಟ್ಟಿ ತರುಬಿದ್ದು, ಫಿ;ದಿಯು  ಯಾಕೆ ಅಡ್ಡಗಟ್ಟಿ ತರುಬಿ ಅಂತಾ ಕೇಳಿದ್ದಕ್ಕೆ ರಸ್ತೇಯೇನು ನಿಮ್ಮಪ್ಪಂದನ ಮಗನಾ ಅಂತಾ ಅವಾಚ್ಯ ಬೈದಾಡಿ ಕೈಯಿಂದ ಹೊಡಿಬಡಿ ಮಾಡಿದ್ದಲ್ಲದೇ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

7)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:-12-05-2017 ರಂದು1700 ಗಂಟೆಯಿಂದ ದಿನಾಂಕ:15-05-2017 ರಂದು 1015 ಗಂಟೆಯ ನಡುವಿನ ಅವಧಿಯಲ್ಲಿ ಕ್ಷೇತ್ರ ಸಂಪನ್ಮೂಲ, ಕ್ಷೇತ್ರ ಸಂಪನ್ಮೂಲ ಕೇಂದ್ರ ಕಲಘಟಗಿಯಲ್ಲಿ  ಕಛೇರಿ ಹಿಂಭಾಗದ ಕೋಣೆಯ ಬೀಗವನ್ನು ಮೀಟಿ ಕೋಣೆಯಲ್ಲಿರುವ 1/2 ಎಚ್.ಪಿ ನೀರು ಎತ್ತುವ ಮೋಟರ್  ಅ.ಕಿ. 2500/- ರೂಗಳ ಕಿಮ್ಮತ್ತಿನದನ್ನು  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು  ಈ ಕುರಿತು ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿರುತ್ತದೆ.

8)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-14-05-2017 ರಂದು 15-50 ಗಂಟೆಯ ಸುಮಾರಿಗೆ ಬಿದರಗಟ್ಟಿ ತಬಕದಹೊನ್ನಳ್ಳಿ ರಸ್ತೆಯ ಮೇಲೆ ಮಲ್ಲಯ್ಯನ ದೇವಸ್ಥಾನದ ಹತ್ತೀರ ಟ್ರ್ಯಾಕ್ಟರ ನಂ KA-34-D-4169 ನೇದ್ದನ್ನು ಬಸವರಾಜ ಯಲ್ಲಪ್ಪ ತಮ್ಮನ್ನವರ ಸಾ..ತಬಕದಹೊನ್ನಳ್ಳಿ ಇವನು ಬಿದರಗಡ್ಡಿ ಕಡೆಯಿಂದಾ ತಬಕದಹೊನ್ನಳ್ಳಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ನೆಡೆಸಿಕೊಂಡು ಬಂದು ವೇಗದ ನಿಯಂತ್ರಣ ಮಾಡಲಾಗದೆ ಒಮ್ಮೇಲೆ ಬ್ರೆಕ್ ಹಾಕಿ ಪಲ್ಟಿ ಮಾಡಿ ಕೆಡವಿ ಟ್ರ್ಯಾಕ್ಟರ ಇಂಜಿನ್ ಮೇಲೆ ಕುಳಿತ ಕೃಷ್ಣಾ ಮಾದೇವಪ್ಪ ತಮ್ಮನ್ನವರ 16 ವರ್ಷ ಸಾ..ತಬಕದಹೊನ್ನಳ್ಳಿ ಇವನಿಗೆ ಎಡಗಾಲಿಗೆ ಭಾರಿ ಗಾಯಪಡಿಸಿದ್ದು  ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

9)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ದಿನಾಂಕ-15-05-2017 ರಂದು ಮುಂಜಾನೆ 11-30 ಗಂಟೆಯ ಸುಮಾರಿಗೆ ಕಲಘಟಗಿ ಧಾರವಾಡ ರಸ್ತೆಯ ಮೇಲೆ ಧಾರವಾಡ ಕ್ರಾಸ್ ಸಮೀಪ ಗೂಡ್ಸ ಲಾರಿ ನಂ KA-03-AA-4354 ನೇದ್ದರ ಚಾಲಕನು ಧಾರವಾಡ ಕಡೆಯಿಂದಾ ಕಲಘಟಗಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ತನ್ನ ಮುಂದೆ ಹೊರಟ ಮೋಟಾರ್ ಸೈಕಲ್ ಓವರಟೇಕ್ ಮಾಡಿಕೊಂಡು ರಾಂಗ್ ಸೈಡಿನಲ್ಲಿ ಬಂದು ಕಲಘಟಗಿ ಕಡೆಯಿಂದಾ ಧಾರವಾಡ ಕಡೆಗೆ ಹೊರಟ ಪಿರ್ಯಾಧಿ ಬಾಬತ್ ಕಾರ ನಂ KA-25-Z-1612 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಮೋಟಾರ್ ಸೈಕಲ್ ಗೂ ಸಹಾ ಡಿಕ್ಕಿ ಮಾಡಿ ಅಪಘಾತಪಡಿಸಿ ತನ್ನ ಲಾರಿಯನ್ನು ಸಹಾ ಎಡಹೋಳು ಮಗ್ಗಲಾಗಿ ಕೆಡವಿ ಸದರ ಲಾರಿಯಲ್ಲಿದ್ದ ರಂಗನಾಥ ಸೋಳಂಕೆ ಎಂಬುವನಿಗೆ ಗಾಯಪಡಿಸಿ, ಮೋಟಾರ್ ಸೈಕಲ್  ಸವಾರನಾದ ಮುದಕಪ್ಪ ಯಲ್ಲಪ್ಪ ಹರಿಜನ ಸಾ..ಸಂಗೇದೇವರಕೊಪ್ಪ ಇವನಿಗೆ  ಸಹಾ ಗಾಯಪಡಿಸಿ ವಾಹನಗಳನ್ನು ಜಕಂಗೊಳಿಸಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.