ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, May 16, 2017

CRIME INCIDENTS 16-05-2017

ದಿನಾಂಕ 16-05-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ಪಿರ್ಯಾದಿಯ ಅಣ್ಣ  ಅಲ್ತಮಷ ಶೇಖ ಈತನಿಗೆ ಯಾರೋ ಆಗದ 2 ಜನರು ಯಾವುದೋ ದುರುದ್ದೇಷ ಇಟ್ಟುಕೊಂಡು ಅವನಿಗೆ ಕೊಲೆ ಮಾಡುವ ಉದ್ದೇಶದಿಂದಲೇ ದಿನಾಂಕ 18.12.2016 ರಂದು ರಾತ್ರಿ 08-30 ಗಂಟೆ ಸುಮಾರಿಗೆ ಧಾರವಾಡ ಟೈವಾಕ ಪ್ಯಾಕ್ಟರಿ ರೋಡಿನಲ್ಲಿರುವ ವಿನಯ ಡೈರಿ ರಸ್ತೆಯ ಹತ್ತಿರ ಇರುವ ಕಲ್ಲಿನ ಕ್ರಷರ ಪ್ಯಾಕ್ಟರಿ ಹತ್ತಿರ ರಸ್ತೆ ಮೇಲೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಯಿಂದ ಮೈಕೈಗೆ ಹೊಡಿಬಡಿ ಮಾಡಿ ಕೊಲೆ ಮಾಡುವ ಉದ್ದೇಶದಿಂದಲೇ ಅದರಲ್ಲಿದ್ದ ಒಬ್ಬನು ತನ್ನ ಹತ್ತಿರ ಇರುವ ಚಾಕುವಿನಿಂದ ಎಡಗಡೆ ಹೊಟ್ಟೆಯ ಕೆಳಗಡೆ ಹೊಡೆದು ಭಾರಿ ಗಾಯಪಡಿಸಿ ಓಡಿ ಹೋಗಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 102-2017 ಕಲಂ IPC 1860 (U/s-323,307,504,34) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
2.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ಪಿರ್ಯಾದಿ ಶಕೀರಾ ಶುಂಟಿ ಇವರು ದಿನಾಂಕ 28.12.2016 ರಂದುಸಾಯಂಕಾಲ 07-00 ಗಂಟೆ ಸುಮಾರಿಗೆ ಧಾರವಾಡ ಸಾಧುನವರ ಎಸ್ಟೇಟ ಹತ್ತಿರ ಇರುವ ಸಿರಡಿ ನಗರದಲ್ಲಿರುವ ಆರೋಪಿ ಕಿರಣ ಬಂಕಾಪೂರ ಇತನ ಮನೆಯ ಮುಂದೆ ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಆರೋಪಿತನು ವಿನಾ ಕಾರಣ ತಂಟೆ ತೆಗೆದು ನಾಯಿಯನ್ನು ಚೂ ಬಿಟ್ಟಿದ್ದರಿಂದ ಯಾಕೆ ಈ ರೀತಿ ಮಾಡಿದಿ ನಿನಗೆ ಶಿಸ್ತು ಅನ್ನುವದು ಕೇಳಿದ್ದಕ್ಕೆ ನನಗೆ ಅವಾಚ್ಯ ಶಬ್ದಗಳಿಂದ  ಬ್ಯೆದಾಡಿ ಕ್ಯೆ ಯಿಂದ ಎದೆ ಹಿಡಿದು ದೂದಾಡಿ ಹೆಂಗಸಿನ ಮಾನ ಮರ್ಯಾದೆಗೆ ಅವಮಾನ ವಾಗುವಂತೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 103/2017 ಕಲಂ IPC 1860 (U/s-354,504,506) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.