ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, May 17, 2017

CRIME INCIDENTS 17-05-2017

ದಿನಾಂಕ 17-05-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿ: ಆರೋಪಿ ಮಂಜುನಾಥ ಇತನು ದಿನಾಂಕ 17-05-2017 ರಂದು ಬೆಳಗಿನ 7-15 ಗಂಟೆಯ ಸುಮಾರಿಗೆ ತಿರ್ಲಾಪೂರ ಗ್ರಾಮದ ದುರ್ಗಮ್ಮನ ಗುಡಿಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ತನ್ನ ಸ್ವಂತ ಪಾಯಿದೇಗೋಸ್ಕರ ಪಾಸ್ ವ ಪರ್ಮೀಟ್ ಇಲ್ಲದೆ ಸಾರಾಯಿ ಪಾಕೇಟ್ ಗಳನ್ನು ಮಾರಾಟ ಮಾಡುತ್ತಿದ್ದಾಗ ರೂ 2968 ರ 106 ಹೈವರ್ಡ್ಸ ವ್ಹಿಸ್ಕಿ 90 ಎಮ್ ಎಲ್ ದ ಟೆಟ್ರಾ ಪ್ಯಾಕೇಟ್ ಗಳ ಸಮೇತ ಸಿಕ್ಕಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 60-2017 ಕಲಂ 32, 34 ಅಬಕಾರಿ ಕಾಯಿದೆ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ಆರೋಪಿತನಾದ ಮಾರುತಿ ನಿಂಗಪ್ಪ ಮೇಲಿನಮನಿ @ ಮಾದರ ಸಾ. ಬ್ಯಾಹಟ್ಟಿ ಇವನು ಪಿರ್ಯಾದಿ ಪೂಜಾ ಮಾದರ ಇವಳಿಗೆ ಈಗ ಎರಡು ವರ್ಷಗಳ ಹಿಂದೆ ಲಗ್ನ ಮಾಡಿಕೊಂಡಿದ್ದಾಗಿನಿಂದ, ಅವಳಿಗೆ ವಿನಾಕಾರಣ, ಕೈಯಿಂದ ಹೊಡಿ ಬಡಿ ಮಾಡಿ, ದೈಹಿಕ ಮಾನಸಿಕ ಕಿರುಕುಳ ಕೊಡುತ್ತಾ ಬಂದಿದ್ದಲ್ಲದೇ, ದಿನಾಂಕ: 16-05-2017 ರಂದು ಸಾಯಂಕಾಲ 4-00 ಗಂಟೆಗೆ ಬ್ಯಾಹಟ್ಟಿ ಗ್ರಾಮದ ಪಿರ್ಯಾದಿಯ ಮನೆ ಮುಂದೆ ರಸ್ತೆ ಮೇಲೆ, ಆರೋಪಿ ಮಾರುತಿ ನಿಂಗಪ್ಪ ಮೇಲಿನಮನಿ@ಮಾದರ ಇವನು ಸುಮಿತ್ರಾ ಮಾದರ ಇವಳಿಗೆ ಮನೆಗೆ ಕರೆದುಕೊಂಡು ಬಂದಿದ್ದಕ್ಕೆ, ಪಿರ್ಯಾದಿ ಸುಮಿತ್ರಾಳಿಗೆ ಯಾಕ ಕರೆದುಕೊಂಡು ಬಂದಿ ಅಂತ ಕೇಳಿದ್ದಕ್ಕೆ ಸಿಟ್ಟಾಗಿ, ಅವಾಚ್ಯ ಬೈದಾಡಿ, ಕೈಯಿಂದ ಹೊಡಿ ಬಡಿ ಮಾಡಿ, ಗಂಗವ್ವ ಮೇಲಿನಮನಿ@ಮಾದರ ಇವಳು ಸಹ ಪಿರ್ಯಾದಿಗೆ ಅವಾಚ್ಯ ಬೈದಾಡಿ, ಎದೆ ಹಿಡಿದು ದೂಡಿದ್ದು ಹಾಗೂ ನಿಂಗಪ್ಪ ಮೇಲಿನಮನಿ@ಮಾದರ ಇವನು ಪಿರ್ಯಾದಿಗೆ ಅವಾಚ್ಯ ಬೈದಾಡಿದ್ದು, ಸುಮಿತ್ರಾ ಮಾದರ ಇವಳು ಸಹ ಪಿರ್ಯಾದಿಗೆ ಅವಾಚ್ಯ ಬೈದಾಡಿ, ತಲೆ ಕೂದಲು ಹಿಡಿದು ಜಗ್ಗಿ, ಕೈಯಿಂದ ಹೊಡೆದು, ಆರೋಪಿತರೆಲ್ಲರೂ ಪಿರ್ಯಾದಿಗೆ ಅಚಾಚ್ಯ ಬೈದಾಡಿ, ಜೀವದ ಬೆದರಿಕೆ ಹಾಕಿ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 114/2017 ಕಲಂ IPC 1860 (U/s-498A,323,504,506,34) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ:06-11-2015 ರಂದು 1030  ಗಂಟೆಯಿಂದ 1730 ಗಂಟೆ ನಡುವಿನ ಅವಧಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕಲಘಟಗಿ ಬ್ರ್ಯಾಂಚ್ ಕಲಘಟಗಿಯಲ್ಲಿ ಆಸೆನಂ. 1] ರಾಘವೇಂದ್ರ ಬಸವರಾಜ  ಪಾಟೀಲ್  ಸಾ: ಕೆಲಗೇರಿ ರೋಡ  ಧಾರವಾಡ ಇತನು ಬ್ಯಾಂಕಿಗೆ ಸಂಪರ್ಕಿಸಿ ಬಾಡಿಗೆಗೆ ಟ್ಯಾಕ್ಸಿ ಓಡಿಸಲು  ತಾನು ಕಾರನ್ನು ಖರೀದಿಸಲು ಸುಳ್ಳು ದಾಖಲಾತಿಗಳನ್ನು ಒದಗಿಸಿ ಅರ್ಜಿಯನ್ನು ಸಲ್ಲಿಸಿ ಬ್ಯಾಂಕಿನಿಂದ 6,00,000/- ರೂಗಳನ್ನು ಸಾಲವಾಗಿ ಪಡೆದಿದ್ದು ಮತ್ತು ಆರೋಪಿ ನಂ. 2 ]   ನಿಂಗರಾಜ ರಾಜಪ್ಪ ಸಿದ್ದಪ್ಪನವರ ಮಾಲತೇಶ ನಿಲಯ ಚೈತನ್ಯ ನಗರ ಧಾರವಾಡ ಇವನು ಆಸೆನಂ. 1 ನೇದವನಿಗೆ ಜಾಮೀನುದಾರನಾಗಿ ಅವನು ಸಹ ತನ್ನ ಬಗ್ಗೆ ಸುಳ್ಳು ದಾಖಲಾತಿಗಳನ್ನು ಸಲ್ಲಿಸಿ ಇಬ್ಬರೂ ಸೇರಿ ಸುಳ್ಳು ದಾಖಲಾತಿಗಳನ್ನು ಸಲ್ಲಿಸಿ ಇಬ್ಬರು ಸೇರಿ ಸುಳ್ಳು ದಾಖಲಾತಿಗಳನ್ನು ಬ್ಯಾಂಕಿಗೆ ಸಲ್ಲಿಸಿ ಬ್ಯಾಂಕಿನಿಂದ ಸಾಲವನ್ನು ಪಡೆದು ನಂತರ ಕಾರನ್ನು ಖರೀದಿಸಿದ ಬಗ್ಗೆ ಆರ್. ಸಿ ಪುಸ್ತಕದಲ್ಲಿ & ಕಾರನ್ನು ಪರೀವಿಕ್ಷಣೆಗೆ ಹಾಜರಪಡಿಸದೇ ಪಡೆದ ಸಾಲವನ್ನು ಬ್ಯಾಂಕಿಗೆ ಮರುಪಾವತಿಸದೇ ಬ್ಯಾಂಕಿಗೆ ಮೋಸ ಮಾಡಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 175-2017 ಕಲಂ IPC 1860 (U/s-420,465,425,463) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

4.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 176/2017  ರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

5.ಕಂದಗೋಳ ಪೊಲೀಸ್ ಠಾಣಾ ವ್ಯಾಪ್ತಿ: ಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 71/2017 ರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

6.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 112/2017, 113/2017  ರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.