ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, May 19, 2017

CRIME INCIDENTS 19-05-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 19-05-2017 ರಂದು ವರದಿಯಾದ ಪ್ರಕರಣಗಳು

1) ಗರಗ ಪೊಲೀಸ ಠಾಣಾ ಹದ್ದಿ ಪೈಕಿ ಬೆಳಗಾವಿ-ಧಾರವಾಡ ಪಿ.ಬಿ.ರಸ್ತೆಯ ಮೇಲೆ ಮುಮ್ಮಿಗಟ್ಟಿ ಹೊಟೆಲ ನೀಲಕಮಲ ಎದುರಿಗೆ ದಿನಾಂಕಃ 18-05-2017 ರಂದು 20-45 ಅವರ್ಸಕ್ಕೆ ಅಪರಿಚಿತ ಕಾರ ಚಾಲಕನು ತನ್ನ ಕಾರನ್ನು ಬೆಳಗಾವಿ ಕಡೆಯಿಂದಾ ಧಾರವಾಡ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ [ಮೃತ] ಹಸೀನಾ ಕೋಂ ಸೈಫರ್ ಮುಜಾವರ. ಸಾಃ ಮುಂಬೈ ಇವಳಿಗೆ ಕಾರ ಢಿಕ್ಕಿ ಮಾಡಿ ಅಪಘಾತಪಡಿಸಿ ಮರಣ ಪಡಿಸಿ ಠಾಣೆಗೆ ಸುದ್ದಿ ತಿಳಿಸದೆ ಹೋಗಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಎದರುಗಾರ ಶಂಕ್ರಪ್ಪ ಮಲ್ಲಪ್ಪ ಮೇಟಿ ವಯಾ 38 ವರ್ಷ ಸಾ!! ನವಲಗುಂದ ಈತನು ದಿನಾಂಕ 10-05-2017 ರಂದು 15-50 ಗಂಟೆ ಸುಮಾರಿಗೆ ನವಲಗುಂದದ ವಿಜಯಾ ಬ್ಯಾಂಕ್ ಗೆ ಹೋಗಿ ತನ್ನ ಹೆಂಡತಿಯ ಉಳಿತಾಯ ಖಾತೆಯ ವಿವರ ಹಾಗೂ ಖಾತೆಯಲ್ಲಿನ ಹಣವನ್ನು ಕೊಡುವಂತೆ ಕೇಳಿದಾಗ ಬ್ಯಾಂಕ್ ಮ್ಯಾನೇಜರ್ ಬ್ಯಾಂಕ್ ನಿಯಮಾನುಸಾರ ಕೊಡಲು ಬರುವದಿಲ್ಲ ಅಂತ ಹೇಳಿದ್ದಕ್ಕೆ ಎದರುಗಾರನು ಮ್ಯಾನೇಜರ್ ಗೆ ಅವಾಚ್ಯ ಬೈದಾಡಿ ಬ್ಯಾಂಕ್ ಸಿಬ್ಬಂದಿಯಾದ ದಲ್ಲಿ ಸಂದೀಪ್ ಅನ್ನುವವರಿಗೆ ಕಪಾಳಕ್ಕೆ ಹೊಡೆದು ಸರಕಾರಿ ಕೆಲಸಕ್ಕೆ ಅಡೆತಡೆ ಮಾಡಿದ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಠಾಣೆಗೆ ಹಾಜರಾಗಿ ಪಿರ್ಯಾದಿ ನೀಡಿದ್ದನ್ನು ಗುನ್ನಾ ನಂ 53/2017 ನೇದ್ದಕ್ಕೆ ದಾಖಲು ಮಾಡಿಕೊಂಡು ಆರೋಪಿತನಿಗೆ ದಿನಾಂಕ 14-05-2017 ರಂದು ಎದರುಗಾರನಿಗೆ ದಸ್ತಗೀರ ಮಾಡಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದು ಇರುತ್ತದೆ. ಸದರಿ ಎದರುಗಾರನು ದಿನಾಂಕ 18-05-2017 ರಂದು ಮಾನ್ಯ ನ್ಯಾಯಾಲಯದ ಜಾಮೀನು ಮೇಲೆ ಬಂದಿರುತ್ತಾನೆ. ತನ್ನ ಮೇಲೆ ಪಿರ್ಯಾದಿ ಕೊಟ್ಟಿದ್ದರ ಸಿಟ್ಟಿನಿಂದ ಪುನಃ ಇಂತಹ ಕೃತ್ಯಗಳನ್ನು ಎಸಗುವ ಸಂಭವವಿದ್ದು ಸದರಿಯವನ ಮೇಲೆ ಮುಂಜಾಗೃತ ಕ್ರಮವಾಗಿ ಕಲಂ 107 ಸಿ.ಆರ್.ಪಿ.ಸಿ ಪ್ರಕಾರ  ಕ್ರಮ ಕೈಗೊಂಡಿದ್ದು ಇರುತ್ತದೆ.

3) ಗರಗ  ಠಾಣಾವ್ಯಾಪ್ತಿಯ ಗುಳೇದಕೊಪ್ಪ ಗ್ರಾಮದಲ್ಲಿ ಪಾಂಡುರಂಗ ಹನುಮಂತ ತಾವಡೆ ವಯಾ 72 ವರ್ಷ ಸಾಃ ಕಲಘಟಗಿ  ಇತನು ದಿನಾಂಕ 24-04-2017 ರಂದು 10-00 ಗಂಟೆಗೆ ಗುಳೇದಕೋಪ್ಪ ಗ್ರಾಮದ ತನ್ನ ಮಗಳ ಮನೆಯಿಂದಾ ಕಲಘಟಗಿಗೆ ಹೋಗುತ್ತೆನೆ ಅಂತಾ ಹೇಳಿ ಹೋದವರು ಕಾಣೆಯಾಗಿದ್ದು  ಇರುತ್ತದೆ,  ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಕಾಣೆ ಪ್ರಕರಣ ದಾಖಲಾಗಿದ್ದು ಇರುತ್ತದೆ.

4) ಗರಗ  ಠಾಣಾವ್ಯಾಪ್ತಿಯ  ಶಿಭಾರಗಟ್ಟಿ ಗ್ರಾಮದಲ್ಲಿ ಮೃತನಾದ ಭೀಮಪ್ಪ.ತಂದೆ ಸಣ್ಣಪ್ಪ.ಉಪ್ಪಾರ.@ ಸನದಿ.ವಯಾ-48 ವರ್ಷ.ಸಾ/ಶಿಭಾರಗಟ್ಟಿ ಇತನು ಈಗ 2 ವರ್ಷಗಳಿಂದ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ಸರಾಯಿ ಕುಡಿಯವದನ್ನು ಬಿಡು ಅಂದರೆ ಬಿಟ್ಟಿರಲಿಲ್ಲಾ ಸರಾಯಿ ಕುಡಿಯುವದಕ್ಕೆ ಹಣ ಕೇಳಿದ್ದಕ್ಕೆ ಹಣ ಇಲ್ಲಾ ಮನೆ ಖರ್ಚ ಹೇಗೆ ನಿಭಾಯಿಸುವದು ಅಂತಾ ಬೈದಿದಕ್ಕೆ ಮನಸ್ಸಿಗೆ ಹಚ್ಚಿಕೊಂಡು ದಿ:18-5-2017 ರಂದು ರಾತ್ರಿ-9-00 ರಿಂದ ದಿ:19-5-2017 ರ ಬೆಳಗಿನ 07-00 ಗಂಟೆಯ ನಡುವಿನ ವೇಳೆಯಲ್ಲಿ ತನ್ನಷ್ಟಕ್ಕೆ ತಾನೇ ಸಿಭಾರಗಟ್ಟಿ-ಉಪ್ಪಿನಬೆಟಗೇರಿಗೆ ಹೋಗುವ ರಸ್ತೆಯ ಬಾಜು ಇರುವ ಮೃತನ ಹೊಲದಲ್ಲಿಯ ಬೇವಿನ ಗಿಡಕ್ಕೆ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತ ಪಟ್ಟಿದ್ದು ಅದೆ. ಸದರಿಯವನ ಸಾವಿನಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾಂತಾ ವರದಿಗಾರಳ ವರದಿ ಇರುವುದರಿಂದ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.