ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, May 20, 2017

CRIME INCIDENTS 20-05-2017

ದಿನಾಂಕ 20/05/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ: 18-05-2017 ರಂದು ಮುಂಜಾನೆ 08-30 ಗಂಟೆ ಸುಮಾರಿಗೆ ಕೊಟಗೊಂಡಹುನಸಿ ವ್ಯಾಪ್ತಿಗೆ ಬರುವ ಪಿರ್ಯಾದಿ ಸೋಮಶೇಖರಗೌಡ ಪಾಟೀಲ ಇವರ ತಂದೆಯ ಬಾಬತ್ತ ರಿ.ಸ.ನಂ: 1/1ಬಿ. 1/2ಎ. 1/3ಬಿ ನೇದರ ಜಮೀನದಲ್ಲಿ ಇದರಲ್ಲಿ ಆರೋಪಿತರಾದ 1) ಚಂದ್ರಶೇಖರಗೌಡ ಸಿದ್ದನಗೌಡ ಪಾಟೀಲ @ ಕಲ್ಲನಗೌಡರ 2) ಪ್ರವೀಣಗೌಡ ಚಂದ್ರಶೇಕರಗೌಡ ಪಾಟೀಲ @ ಕಲ್ಲನಗೌಡರ ಸಾ: ಇಬ್ಬರೂ ಕೊಟಗೊಂಡಹುನಸಿ ಗ್ರಾಮ ಇವರು ಅತೀಕ್ರಮ ಪ್ರವೇಶ ಮಾಡಿ, ಆಸ್ತಿಯ ವಿಷಯವಾಗಿ ಕೆಲಸ ಮಾಡುತ್ತಿದ್ದ ಪಿರ್ಯಾದಿ ಮತ್ತು ಪಿರ್ಯಾದಿ ತಂದೆಯ ಜೊತೆ ತಂಟೆ ತಗೆದು  ಅವಾಚ್ಯ ಶಬ್ದಗಳಿಂದ ಬೈದಾಡಿ ಪಿರ್ಯಾದಿಗೆ ಅಡ್ಡಗಟ್ಟಿ ಎಲ್ಲೂ ಹೋಗದಂತೆ ತರುಬಿ ಕೈಯಿಂದ ಹೊಡಿ ಬಡಿ ಮಾಡಿದಲ್ಲದೇ, ತಂಟೆ ಬಿಡಿಸಲು ಬಂದ ಪಿರ್ಯಾದಿಯ ತಂದೆಗೂ ಕೈಯಿಂದ ಹೊಡಿದು, ಅದರಲ್ಲಿ ಆರೋಪಿ 02 ನೇದರವರು ಎದೆಯನ್ನು ಹಿಡಿದು ದೂಡಿ ನೆಲಕ್ಕೆ ಕೆಡವಿದಲ್ಲದೇ, ಜೀವದ ಧಮಕಿ ಹಾಕಿದ್ದು ಇರುತ್ತದೆ. ಈ ಕುರಿತು  ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 115/2017 ಕಲಂ IPC 1860 (U/s-323,341,447,504,506,34) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 22-02-2015 ರಂದು 1030 ಗಂಟೆಯಿಂದ 1730 ಗಂಟೆ ನಡುವಿನ ಅವಧಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕಲಘಟಗಿ, ಕಲಘಟಗಿ ಬ್ರ್ಯಾಂಚ್ ದಲ್ಲಿ ಆರೋಪಿ ನಿಂಗರಾಜ ರಾಜಪ್ಪ ಸಿದ್ದಪ್ಪನವರ ಇತನು  Maruti Swift DZire VDI ಕಾರ ಖರೀದಿಸಲು ಖೋಟ್ಟಿ ದಾಖಲಾತಿಗಳನ್ನು ಸೃಷ್ಠಿ ಮಾಡಿ ಬ್ಯಾಂಕಿಗೆ ನೀಡಿ ಕಾರ ಲೋನ್ 4 ಲಕ್ಷ ಪಡೆದುಕೊಂಡು ಬ್ಯಾಂಕಿಗೆ ಪ್ರತಿ ತಿಂಗಳು ಸಾಲದ ಕಂತು ಸರಿಯಾಗಿ ಪಾವತಿಸದೇ ಮತ್ತು ಮೂಲ ದಾಖಲಾತಿಗಳು ಮತ್ತು ಇನ್ಸೂರನ್ಸ ಪ್ರೀಮಿಯಂ ಪ್ರತಿ ಬ್ಯಾಂಕಿಗೆ ಕೊಡದೇ ಹಾಗೂ ಕಾರನ್ನು ಪರಿವೀಕ್ಷಣೆಗೆ ಹಾಜರಪಡಿಸದೇ ಬ್ಯಾಂಕಿಗೆ ಮೋಸ ಮಾಡಿದ್ದು ಇರುತ್ತದೆ. ಈ ಕುರತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 180/2017 ಕಲಂ IPC 1860 (U/s-420,425,463,465) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ:02-09-2015 ರಂದು 10-30 ಗಂಟೆಯಿಂದ 1730 ಗಂಟೆ ನಡುವಿನ ಅವಧಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕಲಘಟಗಿ ಬ್ರ್ಯಾಂಚ್ ಕಲಘಟಗಿಯಲ್ಲಿ ಆಸೆನಂ. 1] ಬಸೀರ ಅಹ್ಮದ ತಂದೆ ವಜೀರ ಬಾಷಾ ಹಪೀಜ್ ,ಚೈತನ್ಯ ನಗರ  ಕೆಲಗೇರಿ ರೋಡ, ಧಾರವಾಡ ಇತನು ಎಸ್. ಬಿ. ಎಂ ಬ್ಯಾಂಕಿಗೆ ಸಂಪರ್ಕಿಸಿ ಬಾಡಿಗೆಗಾಗಿ ಟ್ಯಾಕ್ಸಿ ಓಡಿಸಲು ತಾನು Swift Dzir VDi Car  ಖರೀದಿಸಲು ಸುಳ್ಳು ದಾಖಲಾತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಿ ಬ್ಯಾಂಕಿನಿಂದ 6 ಲಕ್ಷ ರೂಗಳ ಸಾಲವನ್ನು ಪಡೆದಿದ್ದು, ಆಸೆನಂ. 2] ನಿಂಗರಾಜ ರಾಜಪ್ಪ ಸಿದ್ದಪ್ಪನವರ ಇತನು ಆಸೆನಂ. 1 ನೇದವನಿಗೆ ಜಾಮೀನುದಾರನಾಗಿ ಅವನು ಸಹ ತನ್ನ ಬಗ್ಗೆ ಸುಳ್ಳು ದಾಖಲೆಗಳನ್ನು ಸಲ್ಲಿಸಿ ಬ್ಯಾಂಕಿನಿಂದ ಸಾಲವನ್ನು ಪಡೆದು ನಂತರ ಕಾರನ್ನು ಖರೀದಿಸಿದ ಬಗ್ಗೆ ಆರ್.ಸಿ ಪುಸ್ತಕವನ್ನು ಮತ್ತು ಕಾರನ್ನು ಪರಿವೀಕ್ಷಣೆ  ಕಾಲಕ್ಕೆ ಹಾಜರಪಡಿಸದೇ ಪಡೆದ  ಸಾಲವನ್ನು ಮರುಪಾವತಿಸದೇ ಬ್ಯಾಂಕಿಗೆ ಮೋಸ ಮಾಡಿದ್ದು ಇರುತ್ತದೆ. ಈ ಕುರತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 181/2017 ಕಲಂ IPC 1860 (U/s-420,425,463,465) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

4.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿಃ18-05-2017 ರಂದು ಮುಂಜಾಣೆ 11-30  ಗಂಟೆಗೆ ಪಿರ್ಯಾದಿಯ ಮಗಳಾದ ಆಫ್ರಿನ ತಂದೆ ಅಲ್ಲಿಸಾಬ ನಧಾಫ ವಯಾಃ19 ವರ್ಷ ಉದ್ಯೋಗಃವಿದ್ಯಾರ್ಥಿನಿ ಜಾತಿಃಮುಸ್ಮೀಂ ಸಾಃಪ್ರಭುನಗರ ಹೊನ್ನಾಪುರ ಇವಳು ಧಾರವಾಡದ ಅಂಜುಮನ ಕಾಲೇಜಿಗೆ ದ್ವೀತಿಯ ಪಿಯುಸಿ ರಿಜಲ್ಟ ನೋಡಿ ಕೊಂಡು ಬರುವದಾಗಿ ಮನೆಯಲ್ಲಿ ತಿಳಿಸಿ ಹೋಗಿ ಈ ವರೆಗೂ ಮನೆಗೆ ಮರಳಿ ಬಾರದೇ ಎಲ್ಲಿಗೋ ಹೋಗಿ ಕಾಣೆಯಾಗಿದ್ದು ಇರುತ್ತದೆ ಎಂದು ವರದಿ ಇರುವುದರಿಂದ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಾಣೆ ಪ್ರಕರಣ ದಾಖಲಾಗಿದ್ದು ಇರುತ್ತದೆ.

5. ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 20-05-2017 ರಂದು ಬೆಳಿಗ್ಗೆ  6-00 ಗಂಟೆಯ ಸುಮಾರಿಗೆ ಪೋತಿ ದ್ಯಾಮಪ್ಪ ಹನುಮಂತಪ್ಪ ವನಕನ್ನವರ ಇತನು ಈಗ  5 ರಿಂದ 6 ವರ್ಷಗಳ ಹಿಂದೆ ತನ್ನ ತಂದೆ ಮತ್ತು ಚಿಕ್ಕಪ್ಪ ದೊಡ್ಡಪ್ಪಂದಿರು ನವಲಗುಂದ ವಿಜಯಾಬ್ಯಾಂಕ್ ನಲ್ಲಿ ಜಮೀನು ಸಾಗುವಳಿಗಾಗಿ ಸುಮಾರು 8 ರಿಂದ 10 ಲಕ್ಷದವರೆಗೆ ಸಾಲ ಮಾಡಿದ್ದು ಮತ್ತು ತಾನು ಸಹ ಅಲ್ಲಲ್ಲಿ ಕೈಗಡ ಸಾಲ ಮಾಡಿದ್ದು ಇದನ್ನು ತೀರಿಸಲು ಆಗಲಿಲ್ಲವೆಂದು ಹಾಗೂ ಈ ವರ್ಷ ಸರಿಯಾಗಿ  ಮಳೆ ಬೆಳೆ ಬಾರದ್ದರಿಂದ ಮಾಡಿದ ಸಾಲ ತೀರಿಸಲಾಗಲಿಲ್ಲವೆಂದು ಮನಸ್ಸಿಗೆ ಹಚ್ಚಿಕೊಂಡು ಯಾವುದೋ ವಿಷಸೇವನೆ ಮಾಡಿ ಮೃತ ಪಟ್ಟಿದ್ದು ಅದೆ ಹಾಗೂ ಸದರಿ ನನ್ನ ಗಂಡನ ಮರಣದಲ್ಲಿ ಬೇರೆ ಏನೂ ಯಾರ ಮೇಲೂ ಸಂಶಯವಿರುವುದಿಲ್ಲ ಅಂತಾ ವರದಿಗಾರಳು ವರದಿಯಲ್ಲಿ ನಮೂದಿಸಿದ್ದರಿಂದ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.