ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, May 22, 2017

CRIME INCIDENTS 22-05-2017


ಧಾರವಾಡ ಜಿಲ್ಲೆಯಲ್ಲ ದಿನಾಂಕ. 22-05-2017 ರಂದು ವರದಿಯಾದ ಪ್ರಕರಣಗಳು

1)ನವಲಗುಂದ ಪೊಲಿಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 22-05-2017 ರಂದು ಮದ್ಯರಾತ್ರಿ 02-00 ಗಂಟೆ ಸುಮಾರಿಗೆ ಯಾರೋ 3 ಜನ ಆರೋಪಿತರು ಸುಲಿಗೆ ಮಾಡುವ ಉದ್ದೇಶದಿಂದ ಪಿರ್ಯಾದಿಯ ನಾಗಪ್ಪ ಕರಿಕಟ್ಟಿ ಮನೆಗೆ ಬಂದು ಮನೆಯ ಮುಂದಿನ ಛಾವಣಿಯಲ್ಲಿ ಮಲಗಿದ್ದ ಮೃತ ಬಸಪ್ಪ ಭೀಮಪ್ಪ ಕರಿಕಟ್ಟಿ ಈತನಿಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಮನೆಯೊಳಗೆ ಹೋಗಿ 1,35,000/- ರೂ ಹಣ ಇದ್ದ ಟ್ರಂಕ್ ದೋಚಿಕೊಂಡು ಹೋಗುತ್ತಿದ್ದಾಗ ಇದನ್ನು ತಡೆಯಲು ಹೋದ ಗಾಯಾಳು ವ. ಮೃತನ ಹೆಂಡತಿ ಲಕ್ಷ್ಮೀ ಇವಳಿಗೂ ಸಹ ಮಾರಕಾಸ್ತ್ರಗಳಿಂದ ಹೊಡೆದು ಪರಾರಿ ಆಗಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸೂಕ್ತ ತನಿಖೆ ಕೈಗೊಂಡಿದ್ದು ಇರುತ್ತದೆ.

2)ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:- 22-05-2017 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಇದರಲ್ಲಿಯ ಆರೋಪಿತರ ಅಶೋಕ ತೋಟಪ್ಪ ಮಡ್ನೂರ , ನಿಂಗವ್ವ ಅಶೋಕ ಮಡ್ನೂರ, ಪರವತಗೌಡಾ ಪಾಟೀಲ, ಸಿದ್ದನಗೌಡ ಪಾಟೀಲ, ಸಂತೋಷ ಮಡ್ನೂರ, ಚಿದಾನಂದ ಮಡ್ನೂರ ಇವರೆಲ್ಲರು ಕಾಯ್ದೆಸಿರಿ ಮಂಡಳಿಯಾಗಿ ಗುಂಪು ಕಟ್ಟಿಕೊಂಡು ಪಿರ್ಯಾದಿಯ ಪಂಚಯ್ಯಾ ಸಾಲಿಮಠನ ಕಾಕಾನ ಮನೆಯ ಮುಂದೆ ಬಂದು ಅವಾಚ್ಯ ಬೈದಾಡಿ ಪಿರ್ಯಾದಿ ಕಾಕಾನ ಮಗನಿಗೆ ಬಡಿಗೆಯಿಂದ ಹೊಡಿ-ಬಡಿ ಮಾಡಿ ಬಿಡಿಸಿಕೊಳ್ಳಲು ಹೋದ ಪಿರ್ಯಾದಿಗೂ ಸಹ ಕುಂಟೆಯಿಂದ ಹೊಡೆದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3) ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಆರೋಪಿತ ಸಿದ್ದಪ್ಪ ಹುಲಗೊಪ್ಪ ಒಡ್ಡರ್ ಇತನು ದಿನಾಂಕ 14-05-2017 ರಂದು ಸಾಯಂಕಾಲ 19-00 ಘಂಟೆಗೆ ತಾನು ಚಲಾಯಿಸುತ್ತಿದ್ದ ಆಟೋ ನಂಬರ್ KA-37/6911 ನೇದ್ದನ್ನು ಅಣ್ಣಿಗೇರಿ ಕಡೆಯಿಂದ ಹಳ್ಳಿಕೇರಿ ಕಡೆಗೆ ಅತೀ ವೇಗ ಹಾಗು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಹಳ್ಳಿಕೇರಿ ಸಮೀಪದ ಈದ್ಗಾ ಹತ್ತಿರದ ಹಳ್ಳದ ಹತ್ತಿರ ರಸ್ತೆಯ ಬದಿಗೆ ಹಳ್ಳಿಕೇರಿ ಕಡೆಯಿಂದ ಅಣ್ಣಿಗೇರಿ ಕಡೆಗೆ ತನ್ನ ಮೋಟರ್ ಸೈಕಲ್ ನಂಬರ್ KA-25/EA 7509 ನೇದ್ದರಲ್ಲಿ ಬರುತ್ತಿದ್ದ ಪಿರ್ಯಾದಿ ಸಹೋದರನ ಮೋಟರ್ ಸೈಕಲ್ಗೆ ತಾನು ಚಲಾಯಿಸುತ್ತಿದ್ದ ಆಟೋವನ್ನು ಡಿಕ್ಕಿ ಮಾಡಿ ಅಪಘಾತ ಪಡಿಸಿ ಪಿರ್ಯಾದಿ ಸಹೋದರ ಹಾಗು ಅವರ ಹೆಂಡತಿಗೆ ಸಾದಾ ವ ಭಾರೀ ಪ್ರಮಾಣದ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

4)  ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:13-05-2015 ರಂದು 10-30 ಗಂಟೆಯಿಂದ 1730 ಗಂಟೆ ನಡುವಿನ ಅವಧಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ , ಕಲಘಟಗಿ ಬ್ರ್ಯಾಂಚ್, ಕಲಘಟಗಿಯಲ್ಲಿ ಆರೋಪಿ ಸೆನಂ. 1] ರವಿ ರಾಮಚಂದ್ರ @ ರಾನೋಜಿ ಕಲಾ ಇತನು ಬ್ಯಾಂಕಿಗೆ ಸಂಪರ್ಕಿಸಿ  ಬಾಡಿಗೆಗಾಗಿ ಟ್ಯಾಕ್ಸಿ ಓಡಿಸಲು ತಾನು ಕಾರನ್ನು ಖರೀದಿಸಲು ಸುಳ್ಳು ದಾಖಲಾತಿಗಳ ಅರ್ಜಿಯನ್ನು ಸಲ್ಲಿಸಿ ಬ್ಯಾಂಕಿನಿಂದ 4 ಲಕ್ಷ ಸಾಲವನ್ನು ಪಡೆದಿದ್ದು ಮತ್ತು ಆರೋಪಿ ನಂ. 2 ] ನಿಂಗರಾಜ ರಾಜಪ್ಪ ಸಿದ್ದಪ್ಪನವರ ಇವನು ಆಸೆನಂ. 1 ನೇದವನಿಗೆ ಜಾಮೀನುದಾರನಾಗಿ ಅವನು ಸಹ ತನ್ನ ಬಗ್ಗೆ ಸುಳ್ಳು ದಾಖಲಾತಿಗಳನ್ನು ಸಲ್ಲಿಸಿ ಇಬ್ಬರೂ ಸೇರಿ ಸುಳ್ಳು ದಾಖಲಾತಿ ಗಳನ್ನು ಬ್ಯಾಂಕಿಗೆ ಸಲ್ಲಿಸಿ  ಬ್ಯಾಂಕಿನಿಂದ ಸಾಲವನ್ನು ಪಡೆದು ನಂತರ ಕಾರನ್ನು ಖರೀದಿಸಿದ ಬಗ್ಗೆ ಆರ್.ಸಿ ಪುಸ್ತಕವನ್ನು ಮತ್ತು ಕಾರನ್ನು ಪರಿವೀಕ್ಷಣೆಗೆ ಹಾಜರಪಡಿಸದೇ , ಪಡೆದ ಸಾಲವನ್ನು ಬ್ಯಾಂಕಿಗೆ ಮರಳಿಸದೇ ಬ್ಯಾಂಕಿಗೆ ಮೋಸ ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ