ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, May 24, 2017

CRIME INCIDENTS 23-05-2017


ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 23-05-2017 ರಂದು ವರದಿಯಾದ ಪ್ರಕರಣಗಳು

1) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 23-05-2017 ರಂದು 15-10 ಗಂಟೆ ಸುಮಾರಿಗೆ ನರೇಂಧ್ರ ಗ್ರಾಮದ ಹದ್ದಿ ಸಾಯಿಅರಣ್ಯ ಹೋಟೇಲ ಹತ್ತಿರ ಆರೋಪಿತನಾದ ಹನಮಂತ ತಂದೆ ತುಕಾರಾಮ ಕೋಟೂರ  ವಯಾ-47 ವರ್ಷ, ಜಾತಿ-ಹಿಂದು ಮರಾಠಾಉದ್ಯೋಗ-ಶೇತ್ಕಿ  ಸಾ: ದುರ್ಗದ ಕೇರಿ ನಡುಓಣಿ   ಇವನು ತನ್ನ ಸ್ವಂತ ಪಾಯ್ದೆಗೋಸ್ಕರ ಯಾವದೇ ಪಾಸು ಪರ್ಮಿಟ ಇಲ್ಲದೇ ಸರಕಾರದ ಬೊಕ್ಕಸಕ್ಕೆ ನಷ್ಟ ಮಾಡುವ ಉದ್ದೇಶದಿಂದ ಒಂದು  ಕೈ ಚೀಲದಲ್ಲಿ ಒಟ್ಟು 96 ಹೈರ್ವಡ್ಸ ಚೀಯರ್ಸ  ವಿಸ್ಕಿ ತುಂಬಿದ 90 ಎಂ, ಎಲ್ ಅಳತೆಯ ಸರಾಯಿ ಟೆಟ್ರಾ ಪಾಕೀಟಗಳು :ಕಿ 2720/-ರೂ ನೇದ್ದವುಗಳು ಎಲ್ಲಿಂದಲೋ ಖರೀದಿ ಮಾಡಿ ತಂದು ಅಕ್ರಮವಾಗಿ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


2) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ಮೃತನು ಹಿಂದೆ ಮಾರಿ ತನ್ನ ಬಾಬತ್ತ್ ಒಂದು ಎಕರೆ ಜಮೀಸನು ಹಾಗೂ ಇದ್ದ ಮನೆಯನ್ನು ಮಾರಾಟ ಮಾಡಿದ್ದನ್ನು ತನ್ನ ಮಗನಿಗೆ ಆಸ್ತಿ ಇರುವುದಿಲ್ಲಾ ಅಂತಾ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 22-05-2017, ರಾತ್ರಿ 10-30 ಗಂಟೆಯಿಂದ ದಿನಾಂಕ; 23-05-2017 ಬೆಳಿಗ್ಗೆ    06-00 ಗಂಟೆಯ ನಡುವೆ,ತನ್ನ ಮನೆಯ ಚಾವಣಿಯಲ್ಲಿಯ ಬೆಲಗಿಗೆ ಪತ್ತಲದಿಂದ ಕುತ್ತಿಗಿಗೆ ಉರಲು ಹಾಕಿಕೊಂಡು ಸತ್ತಿರುತ್ತಾನೆ ವಿನಃ ಅವನ ಮರಣದಲ್ಲಿ ಬೇರೆ ಸಂಶಯ ಇರುವುದಿಲ್ಲ ಅಂತಾ ವರದಿ ಇರುವುದರಿಂದ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.