ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, May 24, 2017

CRIME INCIDENTS 24-05-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 24-05-2017 ರಂದು ವರದಿಯಾದ ಪ್ರಕರಣಗಳು

1) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿಃ23-05-2017 ರಂದು 20-50 ಗಂಟೆ ಸುಮಾರಿಗೆ ಹುಬ್ಬಳ್ಳಿ   ಧಾರವಾಡ ಬೈಪಾಸ ರಸ್ತೆ ಮನಸೂರ ಗ್ರಾಮದ  ಹದ್ದಿನಗುಡ್ಡದ ಹತ್ತಿರ ಲಾರ ನಂ kA 25 C 5429 ನೇದ್ದರ ಚಾಲಕನು ತನ್ನ ಲಾರಿಯನ್ನು ಕಚ್ಚಾ ರಸ್ತೆಯಿಂದ ಮುಖ್ಯ ರಸ್ತೆಗೆ ಕೂಡುವ ಸಲುವಾಗಿ ಯಾವದೇ ಮಾರ್ಗಸೂಚಿಯನ್ನು ನೀಡದೆ ಅತೀ ವೇಗ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ ಕೊಂಡು ಬಂದು ಪಿರ್ಯಾದಿ ಚಲಾಯಿಸುತಿದ್ದ  ಜೀಪ ನಂ Ka 25 G 551 ನೇದ್ದಕ್ಕೆ ಡಿಕ್ಕಿ ಪಡಿಸಿ ಅಪಘಾತದಲ್ಲಿ ಜೀಪನಲ್ಲಿದ್ದ ಪಿರ್ಯಾದಿಯಾದ ಜೀಪ ಚಾಲಕ ಶಂಕರ ತಂದೆ ಮಾರತಿ ಬೇವಿನಮರದ ನೇದವರಿಗೆ ಸಾದಾ ಗಾಯ ಹಾಗೂ  ಸಂಗಮೇಶ ಪಾಲಭಾವಿ ಸಾಃಪಿಎಸ್ಐ ಗರಗ ಪೊಲೀಸ್ ಠಾಣೆ ರವರಿಗೆ ಭಾರಿ ಗಾಯ ಪಡಿಸಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


2) ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಕಾಣೆಯಾದ ಮಹಿಳೆಯಾದ    ಚಾಂದಬೀ ಕೊಂ ಹಸನಸಾಬ ಕೋಲಕಾರ, ವಯಾ 24 ವರ್ಷ ಜಾತಿಃ ಮುಸ್ಲಿಂ ಉದ್ಯೊ ಮನೆಕೆಲಸ ಸಾಃ ಕೋಟುಮಚಗಿ ತಾಃ ಗದಗ ಇವಳು ಅಣ್ಣಿಗೇರಿಯ ತನ್ನ ಮಾವನ ಮನೆಯಿಂದ ದಿನಾಂಕ 05-05-2017 ರಂದು ಸಾಯಂಕಾಲ 16-00 ಘಂಟೆಗೆ ಬಯಲು ಶೌಚಾಲಯಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಇದುವರೆಗೂ ಮರಳಿ ಮನೆಗೆ ಬಾರದೇ ಎಲ್ಲಿಯೊ ಹೋಗಿ ಕಾಣೆಯಾಗಿದ್ದು   ಇರುತ್ತದೆ   ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.