ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, May 25, 2017

CRIME INCIDENTS 25-05-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 25-05-2017 ರಂದು ವರದಿಯಾದ ಪ್ರಕರಣಗಳು

1) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 24-05-2017 ರಂದು ರಾತ್ರಿ 10-45 ಗಂಟೆಗೆ ಹುಬ್ಬಳ್ಳಿ ಗದಗ ರಸ್ತೆಯ ಮೇಲೆ, ಒಂಟ್ ಹನಮಪ್ಪನ ಗುಡಿಗೆ ಹೋಗುವ ದಾರಿಯ ಹತ್ತಿರ ಆರೋಪಿ ಯಾವುದೋ ಲಾರಿಯ ಚಾಲಕನು ತನ್ನ ಲಾರಿಯನ್ನು ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ, ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಾಲನೆ ಮಾಡಿಕೊಂಡು ಬಂದು, ಹುಬ್ಬಳ್ಳಿಯಿಂದ ಇಂಗಳಹಳ್ಳಿ ಕಡೆಗೆ, ಹುಬ್ಬಳ್ಳಿ ಗದಗ ರಸ್ತೆ ಹಿಡಿದು ಹೊರಟಿದ್ದ ಪಿರ್ಯಾದಿದಾರನ ಆಟೋ ರಿಕ್ಷಾ ನಂ. ಕೆಎ-25-ಡಿ-2938 ನೇದ್ದಕ್ಕೆ ಡಿಕ್ಕಿ ಮಾಡಿ, ಆಟೋ ಚಾಲಕ 1] ನಾಗರಾಜ ಹನಮಂತಪ್ಪ ವಾಲೀಕಾರ ಮತ್ತು ಆಟೋದ್ದಲ್ಲಿದ್ದ 2] ಪ್ರಕಾಶ ಹನಮಂತಪ್ಪ ವಾಲೀಕಾರ 3] ಪುಷ್ಪಾ@ರೇಷ್ಮಾ ಕೋಂ ಸಿದ್ದಪ್ಪ ನಿಡಗುಂದಿ 4] ಹೇಮಾ ತಂದೆ ಬಸವರಾಜ ನೆಟೆಗಲ್ ಇವರಿಗೆ ಸಾದಾ ವ ಭಾರಿ ಗಾಯಪಡಿಸಿ, ಅಪಘಾತದ ವಿಷಯವನ್ನು ಠಾಣೆಗೆ ತಿಳಿಸದೇ ಹಾಗಿದ್ದು ಈ ಕುರಿತು ಹುಬ್ಬಳ್ಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 

2) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:25-05-2017 ರಂದು ಮುಂಜಾನೆ 08-00 ಗಂಟೆ ಸುಮಾರಿಗೆ ಅಗಡಿ ಹುಬ್ಬಳ್ಳಿ ರಸ್ತೆಯ ಮೇಲೆ ಪೂನಾ ಬೆಂಗಳೂರ ರಸ್ತೆ ಸಮೀಪ, ಚಂದ್ರಗೌಡ ಪರ್ತಗೌಡ ಮರಿಗೌಡರ ಸಾ: ಅಗಡಿ ರವರ ಜಮೀನ ಹತ್ತಿರ ಆರೋಪಿ ಅರ್ಜುನ ತಂದೆ ಯಲ್ಲಪ್ಪ ಸುಬಂಜಿ ಸಾ: ಅಗಡಿ ಇತನು ಹೊಂಡಾ ಶೈನ ಮೋಟಾರ ಸೈಕಲ ನಂಬರ ಕೆ.ಎ-25/ಇಕ್ಯೂ-0773 ನೇದನ್ನು ಅಗಡಿ ಕಡೆಯಿಂದ ಪಿ.ಬಿ.ರಸ್ತೆಯ ಕಡೆಗೆ ಅತೀ ಜೋರಿನಿಂದ ಮತ್ತು ಅಜಾಗೂರಕತೆಯಿಂದ ಮಾನವೀಯ ಪ್ರಾಣಕ್ಕೆ ಅಫಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಹೋಗಿ, ಪಿ.ಬಿ.ರಸ್ತೆಯ ಕಡೆಯಿಂದ ಅಗಡಿ ಗ್ರಾಮದ ಕಡೆಗೆ ಮಂಜಯ್ಯಾ ಬಸಯ್ಯಾ ಹಿರೆಮಠ ಸಾ: ಅಗಡಿ ಇತನು ತನ್ನ ಎಡಗಡೆ ಸೈಡಿಗೆ ನಡೆಸಿಕೊಂಡು ಬರುತ್ತಿದ್ದ  ಮೋಟಾರ ಸೈಕಲ ನಂ: ಕೆ.ಎ-25/ಇಎಸ್-4964 ನೇದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ, ತನ್ನ ಮೋಟಾರ ಸೈಕಲ ಹಿಂದುಗಡೆ ಕುಳಿತ ಪಿರ್ಯಾದಿ ಬಸುವರಾಜ ರಾಮಣ್ಣ ಬ್ಯಾಹಟ್ಟಿ  ಮತ್ತು  ಮೋಟಾರ ಸೈಕಲ ನಂ: ಕೆ.ಎ-25/ಇಎಸ್-4964  ನೇದರ ಹಿಂದುಗಡೆ ಕುಳಿತ ದುರಗಪ್ಪ ಸೊರೇಪ್ಪ ಹರಿಜನ ಸಾ: ಅಗಡಿ ಇವರಿಗೆ ಸಾದಾ ವ ಭಾರಿ ಗಾಯಪಡಿಸಿ, ತನಗೂ ಭಾರಿ ಗಾಯಪಡಿಸಿಕೊಂಡಿದ್ದಲ್ಲದೇ,ಮೋಟಾರ ಸೈಕಲ ನಂ: ಕೆ.ಎ-25/ಇಎಸ್-4964 ನೇದರ ಸವಾರ ಮಂಜಯ್ಯಾ ಬಸಯ್ಯಾ ಹಿರೆಮಠ ವಯಾ 21 ವರ್ಷ ಸಾ: ಅಗಡಿ ಇತನಿಗೆ ಭಾರಿ ಗಾಯಪಡಿಸಿ ಮರಣಪಡಿಸಿದ್ದು ಈ ಕುರಿತು ಹುಬ್ಬಳ್ಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 

3) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:24-05-2017 ರಂದು 2015 ಗಂಟೆಗೆ ಕಲಘಟಗಿ ಧಾರವಾಡ ರಸ್ತೆ ಮೇಲೆ ಜೋಡಳ್ಳಿ ಸಮೀಪ ಟಾಟಾ ಏಸ್ ವಾಹನ ನಂ. ಕೆಎ-25 ಸಿ-8085 ನೇದ್ದರ ಚಾಲಕ ಸುರೇಶ ಗಿರಿಯಪ್ಪನವರ ಇತನು ತಾನು ನಡೆಸುತ್ತಿದ್ದ ವಾಹನವನ್ನು ಧಾರವಾಡ ಕಡೆಯಿಂದ ಕಲಘಟಗಿ ಕಡೆಗೆ ಅತೀ ವೇಗ  ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಜೋಡಳ್ಳಿ ಸಮೀಪ ರಸ್ತೆ ಬದಿ ನಡೆಯುತ್ತಾ ಹೊರಟಿದ್ದ ಫಿರ್ಯಾದಿ ತಾಯಿ ಶಾಂತವ್ವ ಕೋಂ. ಚನ್ನಬಸಪ್ಪ ಲಕಮಾಪುರ ಇವರಿಗೆ  ಡಿಕ್ಕಿ ಮಾಡಿ ಅಪಘಾತ ಪಡಿಸಿ ಭಾರೀ ಸ್ವರೂಪದ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 

4) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 24-05-2017 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಕಳಸನಕೊಪ್ಪ ಗ್ರಾಮದ ಪಿರ್ಯಾದಿ ಮನೆಯ ಮುಂದೆ ಆರೋಪಿ ಸಂಜು ಲಕ್ಷ್ಮಣ ಸೊಲ್ಲಾಪೂರ ಈತನು ತನ್ನ ಹೆಂಡತಿ ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೋತಿದ್ದ ರ ಸಿಟ್ಟಿನಿಂದ ಪಿರ್ಯಾದಿಯು ಮನೆಯಲ್ಲಿ ಒಬ್ಬಳೆ ಇದ್ದುದ್ದನ್ನು ನೋಡಿ ಅವಳ ಮನೆಯ ಮುಂದೆ ಬಂದು ಅವಾಚ್ಯ ಬೈದಾಡಿ ಕೈಯಿಂದ ಹೊಡಿಬಡಿ ಮಾಡಿ ನೀನು ಮುಂದಿನ ಚುನಾವಣೆಯಲ್ಲಿ ನನ್ನ ವಿರುದ್ದ ನಿಂತರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಅಂತಾ ಜೀವದ ಧಮಕಿ ಹಾಕಿ ಅವಳ ಮೈ ಕೈ ಮುಟ್ಟಿ ಎಳೆದಾಡಿ ನೈಟಿ ಹರಿದು ಅಪಮಾನಗೊಳಿಸಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

5)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 24-05-2017 ರಂದು 2000 ಗಂಟೆ ಸುಮಾರಿಗೆ ಕಳಸನಕೊಪ್ಪ ಗ್ರಾಮದ ಶಿವಾನಂದ ನಾಯಕ ಇವರ ಮನೆ ಮುಂದೆ  ನಮೂದ ಫಿರ್ಯಾದಿ ಸಂಜೀವ ಲಕ್ಷ್ಮಣ  ಸೊಲ್ಲಾಪೂರ  ಇವನು ಆಸೆನಂ. 1] ಶಿವಾನಂದ ಮಾರುತಿ ನಾಯಕ  ಇವನಿಗೆ ಈ ಹಿಂದೆ ಕೊಟ್ಟ  8000 ಇಟ್ಟಿಗೆಗಳನ್ನು ಕೊಡುವಂತೆ  ಕೇಳಲು ಹೋದ ಫಿ:ದಿಗೆ  ಹಲ್ಕಟ್ ಬೈದಾಡಿದ್ದಲ್ಲದೇ  ಆಸೆನಂ. 2] ಜ್ಯೋತಿ ಕೋಂ. ವಿಜಯ ನಾಯಕ  ಇವಳು  ಫಿ:ದಿಗೆ ಕಣ್ಣಾಗ ಖಾರ  ಉಗ್ಗಿದ್ದು, ಆಸೆನಂ. 1 ನೇದವನು ಬಡಿಗೆಯಿಂದ ಫಿ:ದಿಗೆ  ತಲೆಗೆ ಹೊಡೆದು, ಗಾಯಪಡಿಸಿದ್ದಲ್ಲದೇ ಹಲ್ಕಟ್ ಬೈದಾಡಿ ಜೀವದ ಧಮಕಿ ಹಾಕಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ