ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, May 26, 2017

CRIME INCIDENTS 26-05-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 26-05-2017 ರಂದು ವರದಿಯಾದ ಪ್ರಕರಣಗಳು
1.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕಃ 23-05-2017 ರಂದು 1600 ಗಂಟೆ ಸುಮಾರಿಗೆ ಫಿರ್ಯಾದಿ ಗರೀಬಸಾಬ ಅಂಗಡಿ ಇವರ ಮನೆಯ ಮುಂದಿನ ಬಾಗಿಲದ ಗೋಡೆ ಮಳೆಗೆ ಬಿದ್ದಿದ್ದು ಅದನ್ನು ಪಿ:ದಿ ತಮ್ಮ ಮತ್ತು ತಮ್ಮನ ಮಗ ರಿಪೇರಿ ಮಾಡುತ್ತಿದ್ದಾಗ 1700 ಗಂಟೆ ಸುಮಾರಿಗೆ ಆಪಾದಿತರಾದ ಮಲ್ಲಿಕಸಾಬ ಅಂಗಡಿ ಹಾಗೂ 7 ಜನರು ಸಾಮೂಹಿಕವಾಗಿ ಅವಾಚ್ಯ ಬೈದಾಡುತ್ತಾ ಬಂದು ಕೈಯಿಂದ ಹೊಡಿಬಡಿ ಮಾಡುತ್ತಾ ಪಿ:ದಿಯ ತಮ್ಮ, ತಮ್ಮನ ಮಗ, ತಮ್ಮನ ಹೆಂಡತಿ ಮತ್ತು ತಂಗಿಗೆ ಅಡ್ಡಗಟ್ಟಿ ತರುಬಿ ತನ್ನ ಕೈಯಲ್ಲಿದ್ದ ಬಡಿಗೆಯಿಂದ ಹೊಡಿಬಡಿ ಹಲ್ಕಟ ಶಬ್ದಗಳಿಂದ ಬೈದಾಡಿ ಜೀವದ ಧಮಕಿ ಹಾಕಿದ್ದು ಇರುತ್ತದೆ. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 42/2017 ಕಲಂ IPC 1860 (U/s-143,147,323,324,341,504,506,149) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿ: ಆರೋಪಿರಾದ ರಮ್ಜಾನಿಸಾಬ ಮಕಾಂದಾರ ಹಾಗೂ ಹಸನಸಾಬ ಮಕಾಂದಾರ ಇವರು ದಿನಾಂಕ 24-05-2017 ರಂದು ಸಾಯಂಕಾಲ 05-00 ಗಂಟೆಯಿಂದ 05-30 ಗಂಟೆ ನಡುವಿನ ಅವಧಿಯಲ್ಲಿ ಪಿರ್ಯಾದಿ ಮೌಲಾಸಾಬ ವೈದ್ಯ ಇವರು ನವಲಗುಂದ ಶಾಸಕರ ಕಛೇರಿ ಮುಂದೆ ನಿಂತಾಗ ಅವಾಚ್ಯ ಬೈದಾಡಿ ಆರೋಪಿ 1 ನೇದವರು ಪಿರ್ಯಾದಿಗೆ ಕೈಯಿಂದ ಕಪಾಳಕ್ಕೆ ಹೊಡೆದಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 66/2017 ಕಲಂ IPC 1860 (U/s-34,504,323) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ: 25-05-2017 ರಂದು 1535 ಗಂಟೆ ಸುಮಾರಿಗೆ ಕಲಘಟಗಿ ತಡಸ ರಸ್ತೆ ಮೇಲೆ  ಪರಸಾಪೂರ ಕ್ರಾಸ್ ಹತ್ತಿರ ಇದರಲ್ಲಿ ನಮೂದ ಮಾಡಿದ ಆರೋಪಿತನು ತಾನು ನಡೆಸುತ್ತಿದ್ದ ಕ್ರೂಸರ್ ವಾಹನ ನಂ. ಕೆಎ-27 ಎ-5026 ನೇದ್ದರ ಚಾಲಕನು ಕಲಘಟಗಿ ಕಡೆಯಿಂದ ತಡಸ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ರಾಂಗ್ ಸೈಡ್ ಬಂದು ತಡಸ ರಸ್ತೆ ಕಡೆಯಿಂದ ಕಲಘಟಗಿ ರಸ್ತೆ ಕಡೆಗೆ ಬರುತ್ತಿದ್ದ ಫಿರ್ಯಾದಿ ತಮ್ಮನ ಮೋಟರ್ ಸೈಕಲ್ ನಂ. ಕೆಎ-25 ಇ ಎಫ್-9963 ನೇದ್ದಕ್ಕೆ ಡಿಕ್ಕಿ ಮಾಡಿ ಅದರ ಸವಾರನಿಗೆ ಭಾರೀ ಗಾಯಪಡಿಸಿ ದ್ದು ಮೋಟರ್ ಸೈಕಲ್ ಹಿಂದೆ ಕುಳಿತ  ನಾಗರಾಜ ಕನೋಜಿ ಇವನಿಗೆ ಭಾರೀ ಗಾಯಪಡಿಸಿದ್ದಲ್ಲದೇ ಕಲಘಟಗಿ ರಸ್ತೆ ಕಡೆಯಿಂದ  ತಡಸ ರಸ್ತ ಕಡೆಗೆ ಹೋಗುತ್ತಿದ್ದ ಮೋಟರ್ ಸೈಕಲ್ ನಂಬರ ಕೆ.ಎ 25/ ಇವಿ 6070 ನೇದ್ದಕ್ಕೆ ಡಿಕ್ಕಿ ಮಾಡಿ ಅದರ ಸವಾರ ಟೋಪಣ್ಣ  ತಿಪ್ಪಣ್ಣವರ ಇವನಿಗೆ ಬಾರಿ ಗಾಯಪಡಿಸಿದಲ್ಲದೇ. ಅವನ ಹಿಂದೆ ಮೋಟರ್ ಸೈಕಲ್ ಮೇಲೆ ಕುಳಿತ ಅವನ ಹೆಂಡತಿ ನೀಲವ್ವ  ಇವಳಿಗೆ ಭಾರೀ ಗಾಯಪಡಿಸಿದ್ದು, ಶ್ರೀಕಾಂತ ಇವನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಉಪಚಾರ ಫಲಿಸದೇ ನಿನ್ನೆ ದಿನ  ಸಾಯಂಕಾಲ 7-30 ಗಂಟೆಗೆ ಮರಣ ಹೊಂದುವಂತೆ ಮಾಡಿದ್ದಲ್ಲದೇ ಟೋಪಣ್ಣ ತಿಪ್ಪಣ್ಣವರ ಇವನು ಸಹ ಉಪಚಾರ ಫಲಿಸದೇ ನಿನ್ನೆ ದಿನ  ಸಾಯಂಕಾಲ 6-00 ಗಂಟೆಗೆ ಮರಣ ಹೊಂದುವಂತೆ ಮಾಡಿ ಗಾಯಾಳುಗಳಿಗೆ ಉಪಚರಿಸದೇ ಠಾಣೆಗೆ ಮಾಹಿತಿ ನೀಡದೇ ವಾಹನ ಸಮೇತ ಪರಾರಿಯಾಗಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 194/2017 ಕಲ INDIAN MOTOR VEHICLES ACT, 1988 (U/s-177,134,129,187); IPC 1860 (U/s-279,338,304(A)) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

4.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ: 24-05-2017 ರಂದು 1930 ಗಂಟೆಗೆ ಕಲಘಟಗಿ ಗಾಂಧಿನಗರದ ಬನಶಂಕರಿ ಕಿರಾಣಿ  ಅಂಗಡಿ ಸಮೀಪ  ಫಿ;ದಿ ಶಾಹೀಧ ಶಿರಹಟ್ಟಿ ಇವರ ಮಗ ಮೆಹಬೂಬ ಶಿರಹಟ್ಟಿ ಇತನು ಮಾಡಿದ ಕೈಗಡ ಸಾಲವನ್ನು ವಾಪಾಸು ಕೊಟ್ಟಿದ್ದರೂ ಸಹಿತ ಆರೋಪಿ ಸುರೇಶ ಶಂಕರ ಪಂಡಿತ  ಸಾ:ಕಲಘಟಗಿ ಇತನು ಇನ್ನೂ ಕೊಟ್ಟಿಲ್ಲ ಅಂತಾ ಫಿ:ದಿ ಹಿರಿಯ ಮಗ ಹಜರೇಸಾಬ ಶಿರಹಟ್ಟಿ ಇತನಿಗೆ ಹಲ್ಕಟ್ ಬೈದಾಡಿ, ಕೈಯಿಂದ ಮುಷ್ಟಿ ಮಾಡಿ ಹೊಡಿಬಡಿ ಮಾಡಿದ್ದಲ್ಲದೇ ಜೀವದ ಧಮಕಿ ಹಾಕಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 195/2017 ಕಲಂ IPC 1860 (U/s-323,324,504,506) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

5.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ: 25-05-2017 ರಂದು 1030 ಗಂಟೆಯ ಸುಮಾರಿಗೆ ಕಲಘಟಗಿ ತಡಸ ರಸ್ತೆ ಮೇಲೆ ಮಡಕಿಹೊನ್ನಳ್ಳಿ ಸಮೀಪ ಲಾರಿ ನಂ. ಟಿ.ಎನ್-29 ಬಿ.ಡಿ -0508 ನೇದ್ದರ ಚಾಲಕ ಕಂದಸ್ವಾಮಿ ತಂದೆ ಮಣಿ ಇತನು ದಾಂಡೇಲಿಯಿಂದ ಪೇಪರ ಲೋಡ ಮಾಡಿಕೊಂಡು ಕಲಘಟಗಿ ಮಾರ್ಗವಾಗಿ ತಡಸ ಕಡೆಗೆ ಅತೀ ವೇಗ ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಮಡಕಿಹೊನ್ನಳ್ಳಿ ದಾಟಿ ರಸ್ತೆ ತಿರುವಿನ ಇಳಿಜಾರು ರಸ್ತೆಯಲ್ಲಿ ವೇಗದ ನಿಯಂತ್ರಣ ಮಾಡಲಾಗದೇ ರಸ್ತೆ ಬಲಸೈಡನಲ್ಲಿ ಬಲಹೋಳು ಮಗ್ಗುಲಾಗಿ ಕೆಡವಿ ಲಾರಿಯನ್ನು ಜಕಂಗೊಳಿಸಿದ್ದಲ್ಲದೇ ತಾನು ಸಹ ಗಾಯಗೊಂಡು ಲಾರಿಯಲ್ಲಿದ್ದ ಪೇಪರ ಬಂಡಲ್ ಗಳ ಪೈಕಿ 10 ಪೇಪರ್ ಬಂಡಲ್ ಮತ್ತು 1 ಪೇಪರ್ ರೀಲ್ ಲುಕ್ಸಾನು ಪಡಿಸಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 196/2017 ಕಲಂ IPC 1860 (U/s-279,338,427) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

6. ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿ: ಯಲ್ಲಿ ಮುಂಜಾಗ್ರತ ಕ್ರಮವಾಗಿ  ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 53/2017 ನೇದ್ದನ್ನು ದಾಖಲಾಗಿದ್ದು ಇರುತ್ತದೆ.