ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, May 28, 2017

CRIME INCIDENTS 28-05-2017


ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 28-05-2017 ರಂದು ವರದಿಯಾದ ಪ್ರಕರಣಗಳು

ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 27-05-2017 ರಂದು ಮದ್ಯಾಹ್ನ 3-15 ಗಂಟೆ ಸುಮಾರಿಗೆ ಬಮ್ಮಿಗಟ್ಟಿ ಕಲಘಟಗಿ ರಸ್ತೆ ಮೇಲೆ ಬಮ್ಮಿಗಟ್ಟಿ ಸರ್ಕಾರಿ ಆಸ್ಪತ್ರೆ ಸಮೀಪ  ಮೋಟರ್ ಸೈಕಲ್ ನಂ.ಜಿಎ-03 ಜೆ-3070 ನೇದ್ದರ ಚಾಲಕನು ತಾನು ನಡೆಸುತ್ತಿದ್ದ ಮೋಟರ್ ಸೈಕಲ್ ನ್ನು ಬಮ್ಮಿಗಟ್ಟಿ ಕಡೆಯಿಂದ ಕಲಘಟಗಿ ಕಡೆಗೆ ಅತೀ ವೇಗ ವ ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ವೇಗದ ನಿಯಂತ್ರಣ ಮಾಡಲಾಗದೇ ಸ್ಕೀಡ್ಡಾಗಿ ಕೆಡವಿ ಮೋಟರ್ ಸೈಕಲ್ ಹಿಂದೆ ಕುಳಿತ ಲತಾ ಕೋಂ. ಗೋಪಾಲಸಿಂಗ್ ರಜಪೂತ ಎಂಬುವವಳಿಗೆ ತಲೆಯ ಹಿಂಬದಿಗೆ ರಕ್ತ ಗಾಯಪಡಿಸಿದ್ದಲ್ಲದೇ  ಬೆನ್ನಿಗೆ  ತೆರಚಿದ ಗಾಯಪಡಿಸಿ ಗಾಯಾಳುವಿಗೆ ಉಪಚಾರಕ್ಕೆ ಸಹಕರಿಸದೇ ಅಪಘಾತದ ಸುದ್ದಿ ಠಾಣೆಗೆ ತಿಳಿಸದೇ ಮೋಟರ್ ಸೈಕಲ್ ಸಮೇತ ಪರಾರಿಯಾಗಿ ಹೋಗಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಕೆ ಕೈಗೊಂಡಿರುತ್ತದೆ.


ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 28-05-2017 ರಂದು ಬೆಳಗಿನ 0200 ಗಂಟೆ ಸುಮಾರಿಗೆ ಹುಲ್ಲಂಬಿ ಗ್ರಾಮದ ಫಿರ್ಯಾದಿ ದತ್ತಾತ್ರಯ ವಿನಾಯಕ ಭಟ್ಟ  ಇತನ ಮನೆಯಲ್ಲಿಂದ  ಫಿರ್ಯಾದಿ  ತಂದೆ ವಿನಾಯಕ ಬಹಾಬಲೇಶ್ವರ ಭಟ್, 53 ವರ್ಷ ಸಾ: ಹುಲ್ಲಂಬಿ ಇವರಿಗೆ ಯಾರೋ ಯಾವುದೋ ಕಾರಣಕ್ಕೆ ಅಪಹರಣ ಮಾಡಿಕೊಂಡು ಹೋಗಿರಬಹುದು ಎಂದು ಹೇಳಿಕೆ ನೀಡಿದ್ದರಿಂದ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿರುತ್ತದೆ.