ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, May 29, 2017

CRIME INCIDENTS 29-05-2017


ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 29-05-2017 ರಂದು ವರದಿಯಾದ ಪ್ರಕರಣಗಳು

ಅಳ್ನಾವರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 28-05-2017 ರಂದು ರಾತ್ರಿ 11-00 ಗಂಟೆ ಸುಮಾರಿಗೆ ಕೋಗಿಲಗೇರಿ ಗ್ರಾಮದ ಆಪಾದಿತನಾದ ನಾರಾಯಣ ತಂದೆ ರಾಮಣ್ಣ ಕುಳೆಣ್ಣವರ ಸಾ|| ಕೋಗಿಲಗೇರಿ ಇವರ ಮನೆಯಲ್ಲಿ ನಾರಾಯಣ ತಂದೆ ರಾಮಣ್ಣ ಕುಳೆಣ್ಣವರ ವಯಾ 38 ವರ್ಷ ಸಾ|| ಕೋಗಿಲಗೇರಿ ತಾ|| ಜಿ|| ದಾರವಾಡ ಅವನು ತನ್ನ ಹೆಂಡತಿಯಾದ ಮೃತ ಲಕ್ಷ್ಮೀ ಕೋಂ ನಾರಾಯಣ ಕುಳೆಣ್ಣವರ ವಯಾ 28 ವರ್ಷ ಸಾ|| ಕೋಗಿಲಗೇರಿ ತಾ||ಜಿ|| ದಾರವಾಡ ಇವಳೊಂದಿಗೆ ವಿನಾಕಾರಣ ತಂಟೆ ತೆಗೆದು ಕೊಡ್ಲಿಯಂತಿರುವ ಬಾಚಿಯಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿ ಸ್ಥಳದಲ್ಲಿಯೆ ಕೊಲೆ ಮಾಡಿದ್ದು ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದು ಇರುತ್ತದೆ.

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:24-05-2017 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ಹೆಬಸೂರ ಗ್ರಾಮದ ವ್ಯಾಪ್ತಿಗೆ ಬರುವ ಪಿರ್ಯಾದಿ ಬಾಬತ್ತ ರಿ.ಸ.ನಂ: 680 ನೇದರಲ್ಲಿ ಇದರಲ್ಲಿ ಆರೋಪಿತರಾದ ಬೀಮರೆಡ್ಡಿ ಹೆಚ್ ರೆಡ್ಡಿ ಸಾ: ಧಾರವಾಡ ಹಾಲಿ ಹೆಬಸೂರ ಹಾಗೂ 07-08 ಜನರು ಸೇರಿ ಸಮಾನ ಉದ್ದೇಶ ಸಾಧಿಸುವ ಸಲುವಾಗಿ ಟೋಳಿಯನ್ನು ಕಟ್ಟಿಕೊಂಡು ರಿ.ಸ.ನಂ:680 ನೇದರ ಜಾಗೆಯಲ್ಲಿ ಹಾಕಿದ ಕಂಪೌಂಡನ್ನು ಹಾರಿ ಗುದ್ದಲಿಯಿಂದ ಒಡೆದು ಲುಕ್ಸಾನಪಡಿಸುತ್ತಿರುವಾಗ, ಪಿರ್ಯಾದಿ ಶ್ರೀನಿವಾಸ ಗಿರಿಯಪ್ಪ ಸಾವುಕಾರ ಸಾ: ಹೆಬಸೂರ ಇತನು ಯಾಕೆ ನಮ್ಮ ಜಾಗೆಯಲ್ಲಿರುವ ಕಂಪೌಂಡನ್ನು ಒಡೆದು ಲುಕ್ಸಾನಪಡಿಸುತ್ತಿದ್ದರಿ ಅಂತಾ ಕೇಳಿದಕ್ಕೆ ಎಲ್ಲರೂ ಸಿಟ್ಟಾಗಿ ಪಿರ್ಯಾದಿ ಬಾಬತ್ತ ಜಾಗೆಯಲ್ಲಿ ಅತೀಕ್ರಮ ಪ್ರವೇಶ ಮಾಡಿ, ಪಿರ್ಯಾದಿ ಜೊತೆ ತಂಟೆ ತಗೆದು ಎಲ್ಲೂ ಹೋಗದಂತೆ ಅಡ್ಡಗಟ್ಟಿ ನಿಲ್ಲಿಸಿ,ಕೈಯಿಂದ ಹೊಡಿಬಡಿ ಮಾಡಿದಲ್ಲದೇ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 30/03/2017 ರಂದು ಮಧ್ಯಾಹ್ನ 12-30 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಪಿರ್ಯಾಧಿಯು ನಿಂಗಪ್ಪ ಗಂಗಪ್ಪ ಮುಶನ್ನವರ  ಇವರು ನವಲಗುಂದ ಬಸನಿಲ್ದಾಣದಲ್ಲಿ ಇಟ್ಟಿದ್ದ ತನ್ನ ಬಾಬತ್ ಹಿರೋ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ ಕೆಎ-25/ಇಟಿ-0667 ಅ ಕಿ -40000 /- ರೂಪಾಯಿ ಕಿಮ್ಮತ್ತಿನದನ್ನು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು   ಇರುತ್ತದೆ.