ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, June 30, 2017

CRIME INCIDENTS 30-06-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 30/06/2017 ರಂದು ವರದಿಯಾದ ಪ್ರಕರಣಗಳು

1 ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:, ಬ್ಯಾಹಟ್ಟಿ ಗ್ರಾಮದ ಶ್ರೀಮತಿ ಶಾಂತಾ ಹಿರೇಮಠ  ಮನೆಯಲ್ಲಿ ಆರೋಪಿತನಾದ ಚಂದ್ರಶೇಖರ ತಂದೆ ಬಸವರಾಜ ತಿರ್ಲಾಪೂರ @ ಹೇಸಮಿಸಿ ಸಾ: ಬ್ಯಾಹಟ್ಟಿ ತಾ: ಹುಬ್ಬಳ್ಳಿ ಇತನು ಪಿರ್ಯಾದಿ ಗಂಡನಾದ ಬಸಲಿಂಗಯ್ಯಾ ಗಂಗಯ್ಯಾ ಹರಕುಣಿಮಠ ವಯಾ 68 ವರ್ಷ ಸಾ; ಬ್ಯಾಹಟ್ಟಿ ತಾ;ಹುಬ್ಬಳ್ಳಿ ಜಿ:ಧಾರವಾಡ ಇತನಿಗೆ ಸದರಿ ಆರೋಪಿತನು ತಲೆ ಹಾಳಾಗು ಹಂಗ ಮಾಡಿದಿ ಅಂತಾ ಅಂದು ಅದನ್ನೆ ನೇಪ ಮಾಡಿಕೊಂಡು  ಕೊಲೆ ಮಾಡುವ ಉದ್ದೇಶದಿಂದ ಅವನ ಜೊತೆ ತಂಟೆ ತಗೆದು , ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ, ಕುಡಗೋಲದಿಂದ ಕುತ್ತಿಗೆ, ಬುಜಕ್ಕೆ,ಮುಖಕ್ಕೆ ವಗೈರ ಕಡೆಗೆ  ಹೊಡೆದು ಭಾರಿ ಗಾಯಪಡಿಸಿದಲ್ಲದೇ, ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಗುನ್ನಾನಂ 149/2017 ಕಲಂ 307.326.504.506 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 95/2017 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು  ಇರುತ್ತದೆ.

3 ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿ: ಗುಡಗೇರಿ ಗ್ರಾ,ದ  ಮೃತ ರಾಯನಗೌಡ ಪಾಟೀಲ ಇತನು ತನ್ನ ಗಂಡನು ತನ್ನ ಹಿರಿಯ ಮಗನ ಹೆಸರಿನಲ್ಲಿ ಕಾರ್ಪೋರೇಶನ್ ಬ್ಯಾಂಕ್ ಕೂಬಿಹಾಳದಲ್ಲಿ ಸುಮಾರು 3 ಲಕ್ಷ ರೂಗಳು, ಹಾಗೂ ತನ್ನ ಹೆಸರಿನಲ್ಲಿ ತರ್ಲಘಟ್ಟ ಗ್ರಾಮದ ಸೊಸೈಟಿಯಲ್ಲಿ ಸುಮಾರು 50 ಸಾವಿರ ರೂಗಳು, ಕೆ,ವ್ಹಿ,ಜಿ ಬ್ಯಾಂಕ್ ಇಂಗಳಗಿಯಲ್ಲಿ ಸುಮಾರು 01 ಲಕ್ಷ ರೂಗಳ ಸಾಲವನ್ನು ಬೆಳೆಸಾಲ ಅಂತಾ ಪಡೆದುಕೊಂಡಿದ್ದಲ್ಲದೇ ಅಲ್ಲಲ್ಲಿ ಕೈಗಡ ಅಂತಾ ಬಹಳಷ್ಟು ಸಾಲ ಮಾಡಿದ್ದರಿಂದ ಅದನ್ನು ಹೇಗೆ ತೀರಿಸಬೇಕು ಅಂತಾ ಮನಸ್ಸಿಗೆ ಹಚ್ಚಿಕೊಂಡು ತನ್ನಷ್ಟಕ್ಕೆ ತಾನೇ ಇದರಲ್ಲಿ ತಾಃವೇಃವಃ ಸ್ಥಳದಲ್ಲಿ ಉರುಲು ಹಾಕಿಕೊಂಡು ಮೃತ ಪಟ್ಟಿದ್ದಾನೆ ವಿನಃ ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ  ಲಲಿತಾ ನೇಕಾರ  ಫಿಯಾಱಧಿ ನೀಡಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿಯುಡಿನಂ 11/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ

4. ಗರಗ ಪೊಲೀಸ ಠಾಣಾ ವ್ಯಾಪ್ತಿಯ:ಗರಗ ಗ್ರಾಮದ ಮೃತ  ಫಕ್ಕೀರವ್ವ ಕೋಂ.ಶಿದ್ದಪ್ಪ.ಕರಗೂಳಿ ವಯಾ-85 ವರ್ಷ.ಸಾಃಗರಗ ಇವಳು ತನಗೆ ಸರಿಯಾಗಿ ಕಣ್ಣು ಕಾಣಿಸದೇ ಇದ್ದುದ್ದರಿಂದ  ತನ್ನ ಮನೆಯಲ್ಲಿದ್ದ ಪ್ಲಾಸ್ಟೀಕ ಚಂಬದಲ್ಲಿ ಹೊಲಕ್ಕೆ ಬೆಳೆಗೆ ಹೊಡೆಯಲು ಕ್ರಿಮಿನಾಶಕವನ್ನು ಕಲಿಸಿ ಇಟ್ಟ ಪ್ಲಾಸ್ಟೀಕ ಚಂಬನ್ನು ತೆಗೆದುಕೊಂಡು ಅದರಲ್ಲಿ ನೀರು ಕುಡಿದು ಅಸ್ತವ್ಯಸ್ತಳಾಗಿದ್ದಕ್ಕೆ ಉಪಚಾರಕ್ಕೆ ಅಂತಾ ಎಸ.ಡಿ.ಎಮ.ಆಸ್ಪತ್ರೆಗೆ ದಾಖಲು ಮಾಡಿದಾಗ ಅಲ್ಲಿ ಉಪಚಾರ ಹೊಂದುತ್ತಿದ್ದಾಗ ಉಪಚಾರವು ಫಲಿಸದೆ ಈ ದಿವಸ ದಿನಾಂಕಃ30-6-2017 ರಂದು ಮದ್ಯಾಹ್ನ-2-45 ಗಂಟೆ ಸುಮಾರಿಗೆ ಮೃತ ಪಟ್ಟಿದ್ದು  ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 28/2017 ಕಲಂ 174 ಸಿ.ಆರ್ ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

5. ನವಲಗುಂದ  ಪೊಲೀಸ್  ಠಾಣಾ ವ್ಯಾಪ್ತಿಯ: ಬ್ಯಾಹಟ್ಟಿ ತಿಲಾಱಪುರದ ಹತ್ತಿರ ಹೆಬ್ಬಳ್ಳಿ ಕ್ರಾಸ ಹತ್ತಿರ ಕಾರ್ ನಂ ಕೆಎ-25/ಪಿ-8754 ನೇದ್ದನ್ನು ಚಾಲಕನು ಬ್ಯಾಹಟ್ಟಿ ಕಡೆಯಿಂದ ತಿರ್ಲಾಪುರ ಕಡೆಗೆ ಅತಿಜೋರಿನಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಹೆಬ್ಬಳ್ಳಿ ಕ್ರಾಸ್ ಹತ್ತಿರ ತಿರ್ಲಾಪುರ ಕಡೆಯಿಂದ ನವಲಗುಂದ ಕಡೆಗೆ ಪಿರ್ಯಾದಿ ನಡೆಸುತ್ತಿದ್ದ ಟಿವಿಎಸ್ ಲೂನಾ ನಂ ಕೆಎ25/ಇಡಿ-8020 ನೇದ್ದಕ್ಕೆ ಡಿಕ್ಕಿ ಮಾಡಿ ವಿರಪ್ಪ ಬಡಗೇರ  ಇವರಿಗೆ ಹಾಗೂ ಇವರ  ಹೆಂಡತಿ ಭಾರಿ ಸ್ವರೂಪದ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ  ಗುನ್ನಾನಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
 
6. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಅಣ್ಣಿಗೇರಿ ಗ್ರಾಮದ ಆಸ್ಪತ್ರೆ ಹತ್ತಿರ  ಆರೋಪಿತ ಕೆ.ಎಸ್.ಆರ್.ಟಿ.ಸಿ ಬಸ್ ನಂಬರ ಕೆಎ-25/ಎಫ್-2831 ನೇದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಬಸನ್ನು ನವಲಗುಂದ ಕಡೆಯಿಂದ ಅಣ್ಣಿಗೇರಿ ಕಡೆಗೆ ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಆಸ್ಪತ್ರೆಗೆ ತೋರಿಸಿಕೊಳ್ಳಲು ಅಂತಾ ರಸ್ತೆಯ ಪಕ್ಕ ನಡದುಕೊಂಡು ಹೊರಟ ಬಸವಣ್ಣೆಪ್ಪ ತಂದೆ ಬನಪ್ಪ ಧನಿಗೊಂಡ ವಯಾ-65 ವರ್ಷ ಸಾ!! ಅಣ್ಣಿಗೇರಿ ತಾ!! ನವಲಗುಂದ ಇವರಿಗೆ ಡಿಕ್ಕಿ ಮಾಡಿ ಅಪಗಾತ ಪಡಿಸಿ ಸಾಧಾ ವ ಭಾರಿ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 96/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು  ಇರುತ್ತದೆ.
Thursday, June 29, 2017

CRIME INCIDENTS 29-06-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 29/06/2017 ರಂದು ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಈಚನಳ್ಳಿ ಗ್ರಾಮದ ಕಲಘಟಗಿ ಯಲ್ಲಾಪೂರ ರಸ್ತೆಯ ಸಮೀಪ ಈಚನಹಳ್ಳಿ ಕ್ರಾಸ್ ಹತ್ತೀರ ಇದರಲ್ಲಿ ಪಿರ್ಯಾದಿಯ ಮಗನಾದ ಚನ್ನಪ್ಪ ತಂದೆ ಶಿವಪ್ಪ ಹೊಸಮನಿ ವಯಾ 30 ವರ್ಷ ಸಾ..ದೇವಿಕೊಪ್ಪ ಇವನು ದಿ..28-06-2017 ರಾತ್ರಿ 21-00 ಗಂಟೆಯ ಸುಮಾರಿಗೆ ಮನೆಯಲ್ಲಿ ಊಟ ಮಾಡಿಕೊಂಡು ಕಿರುವತ್ತಿಯಲ್ಲಿರುವ  ಶ್ರೀಕೃಷ್ಣಾ ಹಾಲಿನ ಡೈರಿಗೆ ಕೆಲಸಕ್ಕೆ ಹೋಗುವದಾಗಿ ಹೇಳಿ ಹೋದವನಿಗೆ ಯಾರೋ ಆರೋಪಿತರು ಯಾವುದೋ ಉದ್ದೇಶಕ್ಕಾಗಿ ಯಾವುದೋ ಮಾರಕಾಸ್ತ್ರದಿಂದ ಗದ್ದಕ್ಕೆ ಹೊಡೆದು ಕೊಲೆ ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 234/2017 ಕಲಂ 302 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೂಂಡಿದ್ದು  ಇರುತ್ತದೆ.

2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಬೆಳಹಾರ ಗ್ರಾಮದ  ಮೃತನಾದ ಶೇಖಪ್ಪ ಶಿವಪ್ಪ ಚಲವಾದಿ, ವಯಾ 45 ವರ್ಷ ಜಾತಿಃ ಹಿಂದೂ ಚಲವಾದಿ ಉದ್ಯೊ ಕೂಲಿ ಕೆಲಸ ಸಾಃ ಬೆಳಹಾರ ತಾಃ ನವಲಗುಂದ ಈತನು ದಿನಾಂಕ 24-06-20117 ರಂದು ರಾತ್ರಿ 21-00 ಘಂಟೆಗೆ ಬೆಳಹಾರ ಗ್ರಾಮದ ಬಸ್ ಸ್ಟ್ಯಾಂಡ್ ಹತ್ತಿರ ಸಾರಾಯಿ ಕುಡಿದ ನಶೆಯಲ್ಲಿ  ಜೋಲಿ ಹೋಗಿ ನೆಲಕ್ಕೆ ಬಿದ್ದು ಅವನ ತಲೆಗೆ ಒಳನೋವು ಗಾಯಪಡಿಸಿಕೊಂಡಿದ್ದು ಉಪಚಾರ ಫಲಿಸದೇ ಮರಣ ಹೊಂದಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 09/2017 ಕಲಂ 174 ಸಿ.ಆರ್.ಪಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

3. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಬೇಲೂರ ಕೈಗಾರಿಕಾ ಪ್ರದೇಶದಲ್ಲಿರುವ ಪ್ಲಾಟ ನಂಬರಃ 583 ನೇದ್ದರಲ್ಲಿರುವ ಯುನಿ ಅಬೇಕ್ಸ ಅಲಾಯ ಪ್ರೋಡಕ್ಸಸ್ ಲಿಮಿಟೆಡದಲ್ಲಿ  ಆರೋಪಿತರಾದ 1.ಮಾನೇಜಿಂಗ ಡೈರಕ್ಟ  ನ್ಯೂ ಮುಂಬಯಿ  ಮಹಾರಾಷ್ಟ 2.ಚೀಪ್ ಎಕ್ಸಗೇಟಿವ ಆಫಿಸರ ಅಲಾಯ ಪ್ರೋಡಕ್ಸಸ್  ಬೇಲೂರ ಧಾರವಾಡ ಇವರು ಸನ್ 2013-14 ಪ್ಯಾಕ್ಟರಿಗೆ ಮಾಲ ಸಪ್ಲಾಯ ಬಗ್ಗೆ ಅಗ್ರೀಮೇಂಟ ಮಾಡಿಕೊಂಡು ದೀಪಕ ಗರಗ  ಇವರಿಗೆ  ಕೆಲಸವನ್ನು ಕೊಡದೆ ಅವನ ಮಾಲ ತೆಗೆದುಕೊಳ್ಳದೆ ಬೇರೆಯವರೊಂದಿಗೆ ಒಪ್ಪಂದ ಮಾಡಿಕೊಂಡು ಮೋಸ ಮತ್ತು ನಂಬಿಕೆ ದ್ರೋಹವನ್ನು ಮಾಡಿದ್ದು  ಇರುತ್ತದೆ ಈಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 92/2017 ಕಲಂ 406.420.500.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Wednesday, June 28, 2017

CRIME INCIDENTS 28-06-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 28/06/2017 ರಂದು ವರದಿಯಾದ ಪ್ರಕರಣಗಳು

1  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಗೋವಿನಕೊಪ್ಪ ಗ್ರಾಮದ ದಿಃ28-06-2017 ರಂದು ಬೆಳಗಿನ ಜಾವ 06-00 ಗಂಟೆ ನಡುವಿನ ಅವದಿಯಲ್ಲಿ ಸಂತೋಪ ಭೀರಜಣ್ಣವರ ಇವರ  ಜಮೀಣಿನ ಪಕ್ಕದ ಜಮೀಣದಲ್ಲಿ  ಯಾರೋ ತಂದೆ ತಾಯಿ ಅಥವಾ ಮಗುವಿನ ಹೊಣೆಹೊತ್ತವರು ಶಿಶುವಿನ ರಣೆಯನ್ನು ತೊರೆದು ಬಿಡುವ ಉದ್ದೇಶದಿಂದ ಮೃತ ನವಜಾತ ಹೆಣ್ಣುಶಿಶುವನ್ನು  ಬಿಟ್ಟು ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 131/2017 ಕಲಂ 318 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಗದಗ ರಸ್ತೆಯ ಮೇಲೆ ಬಂಡಿವಾಡ ಹದ್ದಿಯ ನಳಂದಾ ಪಾಲಿಟೆಕ್ನಿಕ ಕಾಲೇಜ ಹತ್ತಿರ ಮೋಟಾರ ಸೈಕಲ ನಂಬರ ಕೆ.ಎ-02/ಇಡಬ್ಲು-3276 ನೇದನ್ನು ಅದರ ಸವಾರ ಮಹಾಂತೇಶ ಇತನು ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಅಜಾಗೂರಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ಹೊರಟಿದ್ದ ಮೋಟಾರ ಸೈಕಲ ನಂಬರ ಕೆ.ಎ-26/ಎಕ್ಸ್-2169 ನೇದಕ್ಕೆ ಡಿಕ್ಕಿ ಮಾಡಿ ಅದರ ಸವಾರ ಬೀರಪ್ಪ ಶಿವಪ್ಪ ಕುಳಗೇರಿ ವಯಾ 24 ವರ್ಷ ಸಾ: ಶಿರಹಟ್ಟಿ ಅನ್ನುವವನಿಗೆ ತಲೆಗೆ ಭಾರಿ ರಕ್ತ ಗಾಯಪಡಿಸಿ ಸ್ಥಳದಲ್ಲಿಯೇ ಮರಣಪಡಿಸಿ ಮೋಟಾರ ಸೈಕಲ ಹಿಂದೆ ಕುಳಿತಕೊಂಡಿದ್ದ ಪಿರ್ಯಾದಿ ವಿರೇಶ ಬಸಪ್ಪ ದಿವಟರ ವಯಾ 20 ವರ್ಷ ಸಾ: ಸೊರಟೂರ ತಾ: ಗದಗ ಅನ್ನುವನಿಗೆ ಭಾರಿ ಗಾಯಪಡಿಸಿ ತಾನೂ ಸಹಾ ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 145/2017 ಕಲಂ 279.337.338.304(ಎ)  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದ್ಯಾವನಕೊಂಡ ಗ್ರಾಮದ ದುಗಱಪ್ಪ ಹರಿಜನ ಇತನು ವಾಸಿಸುವ ಮನೆಯ ಮುಂದೆ ದುರ್ಗಾದೇವಿಗೆ ಬಿಟ್ಟ ಬಸವಿ ಕರುವು ತನ್ನ ಜಮೀನದಲ್ಲಿ ಬೆಳೆದ ಗೋವಿನ ಜೋಳದ & ಭತ್ತದ ಪೀಕನ್ನು ಮೇಯ್ದಿದ್ದರ ಸಿಟ್ಟಿನಿಮದಾ ಕಲ್ಲಿನಿಂದಾ ಹೊಡೆಯುತ್ತಿರುವಾಗ ಯಾಕೆ ಬಸವಿ ಕರುವಿಗೆ ಹೊಡೆಯುತ್ತಿರುವೆ ಓಣಿಯಲ್ಲಿ ಹುಡುಗರಿಗೆ ತಾಗಿತು ಅಂತಾ ಕೇಳಿದ ಪಿರ್ಯಾದಿಗೆ ಸಿಟ್ಟಾಗಿ ಅದನೇನ ಕೇಳತಿಲೆ ಹೊಲ್ಯಾಸೂಳೆ ಮಗನಾ ಅಂತಾ ಆರೋಪಿತರಾದ  ಈರಪ್ಪ ಶಂಕ್ರಪ್ಪ ಅಣ್ಣಗೇರಿ  ಹಾಗೂ ಇನ್ನೂ 07 ಜನರು ಕೊಡಿಕೊಂಡು ಇವನು ಜಾತಿ ಎತ್ತಿ ಬೈದಾಡಿ ಕೈಯಿಂದಾ ಹೊಡಿಬಡಿ ಮಾಡಿದ್ದಲ್ಲದೆ ಹೊಲಿಯಾ ಸೂಳೆ ಮಕ್ಕಳದ ಬಿಡಬ್ಯಾಡ ಅಂತಾ ಜಾತಿ ಎತ್ತಿ ಬೈದಾಡಿ, ಜೀವದ ಬೆದರಿಕೆ ಹಾಕಿದ್ದಲ್ಲದೆ, ಜನರು ಕೀಳು ಜಾತಿಯವರು ಅಂತಾ ಊರಲ್ಲಿ ಅವರ ಮನೆಯ ಜನರಿಗೆ ಅಂಗಡಿ ಮುಂಗಟ್ಟುಗಳಲ್ಲಿ ಯಾವುದೆ ವಸ್ತುಗಳನ್ನು ಕೊಡದಂತೆ & ಊರಿನಲ್ಲಿ ಯಾರೂ ಮಾತನಾಡದಂತೆ  ಬಹಿಷ್ಕಾರ ಹಾಕಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ ಠಾಣೆಯಲ್ಲಿ ಗುನ್ನಾನಂ 233/2017 ಕಲಂ IPC 1860 (U/s-143,147,323,504,506,149); SC AND THE ST  (PREVENTION OF ATTROCITIES) ACT, 1989 (U/s-3(1)(s),3(1)(z)) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಇಟ್ಟಿಗಟ್ಟಿ ಗ್ರಾಮದ  ಮೃತ ಕಾತುನಬಿ ತಂದೆ ಹುಸೇನಸಾಬ ನವಲಗುಂದ ವಯಾ 18 ವರ್ಷ ಜಾತಿ ಮುಸ್ಲಿಂ ಉದ್ಯೋಗ ಮನೆ ಕೆಲಸ ಸಾ:ಇಟಗಟ್ಟಿ ಸದರಿಯವಳು ಮಾಣಸಿಕ ಅಸ್ವಸ್ಥಳಿದ್ದು ಅಲ್ಲದೆ ಮೇಲಿಂದ ಮೇಲೆ ಪೀಡ್ಸ ಕಾಯಿಲೆಯು ಬರುತಿದ್ದು ಈ ಬಗ್ಗೆ ಧಾರವಾಡದ ನಿಮಾನ್ಸ ಆಸ್ಪತ್ರೆಯಲ್ಲಿ ಮತ್ತು ಪಾಂಡುರಂಗಿ ಆಸ್ಪತ್ರೆಯಲ್ಲಿ ಉಪಚಾರವನ್ನು ಕೊಡಿಸಿದರು ಸಹಿತಾ ಸದರಿಯವಳಿಗೆ ಇದ್ದ ಮಾಣಸಿಕತೆಯು ಕಡಿಮಿಯಾಗದೆ ಇದ್ದಾಗ ಅದನ್ನೆ ಮಾನಸಿಕ ಮಾಡಿಕೊಂಡು ದಿನಾಂಕ 27-06-2017 ರಂದು ಬೆಳಿಗ್ಗೆ 10,00 ಘಂಟೆಯ ಸುಮಾರಿಗೆ ತನ್ನಷ್ಠಕ್ಕೆ ತಾನೆ ಜೋಳಕ್ಕೆ ಕಲಸುವ ನುಷಿ ಪುಡಿಯನ್ನು ಸೇವಿಸಿ ಅಸ್ವಸ್ಥಳಾಗಿ ಉಪಚಾರ ಕುರಿತು ಕಿಮ್ಸ ಆಸ್ಪತ್ರೆಗೆ ಕರೆದುಕೊಂಡು ಬಂದು ಧಾಕಲ ಮಾಡಿದಾಗ ಉಪಚಾರವು ಪಲೀಸದೆ ದಿನಾಂಕ 27-06-2017 ರಂದು 16-10 ಘಂಟಿಗೆ ಮೃತ ಪಟ್ಟಿದ್ದು ಇರುತ್ತದೆ ಅಂತಾ ಮೃತಳ ತಂದೆಯ ಹಸನಸಾಬ ಫಿಯಾಱಧಿ ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲ ಯುಡಿ ನಂ 34/2017 ಕಲಂ 17 ಸಿ.ಆರ.ಪಿ ಸಿ ನೇದ್ದದರಲ್ಲಿ ದಾಖಲಿಸಿದದ್ದು ಇರುತ್ತದೆ.

5.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ನೂಲ್ವಿ ಗ್ರಾಮದ  ಪಿರ್ಯಾದಿ ಶ್ರೀಮತಿ ಮಾದೇವಿ ಕೊಂ ಭರಮಗೌಡ ನಡುವಿನಮನಿ ಸಾ: ಸುರಶೇಟ್ಟಿಕೊಪ್ಪ ತಾ: ಕಲಘಟಗಿ ಹಾಲಿ ನೂಲ್ವಿ ತಾ;ಹುಬ್ಬಳ್ಳಿ ಜಿ:ಧಾರವಾಡ ಇವರ ಮಗಳಾದ ಶ್ರೀಮತಿ ನಿರ್ಮಲಾ ಕೊಂ ಮಲ್ಲಿಕಾರ್ಜುನ ಹರಕುಣಿ ವಯಾ 23 ವರ್ಷ ಸಾ: ನೂಲ್ವಿ ತಾ: ಹುಬ್ಬಳ್ಳಿ ಜಿ: ಧಾರವಾಡ ಇವಳು ಮನೆಯಿಂದ ನೂಲ್ವಿ ಮಾರ್ಕೇಟಗೆ ಕಾಯಿಪಲ್ಲೆ ತರಲು ಅಂತಾ ಹೋದವಳು ಮರಳಿ ಬಾರದೇ ಕಾಣಿಯಾಗಿದ್ದು  ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 146/2017 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6 ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ  ಗುನ್ನಾನಂ 91/2017 92/2017 ಕಲಂ 107 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 

7. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಗದಗ ರಸ್ತೆಯ ಮೇಲೆ ಬಂಡಿವಾಡ ಹದ್ದಿಯ ನಳಂದಾ ಪಾಲಿಟೆಕ್ನಿಕ ಕಾಲೇಜ ಹತ್ತಿರ ಮೋಟಾರ ಸೈಕಲ ನಂಬರ ಕೆ.ಎ-02/ಇಡಬ್ಲು-3276 ನೇದನ್ನು ಅದರ ಸವಾರ ಮಹಾಂತೇಶ ಇತನು ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಅಜಾಗೂರಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ಹೊರಟಿದ್ದ ಮೋಟಾರ ಸೈಕಲ ನಂಬರ ಕೆ.ಎ-26/ಎಕ್ಸ್-2169 ನೇದಕ್ಕೆ ಡಿಕ್ಕಿ ಮಾಡಿ ಅದರ ಸವಾರ ಬೀರಪ್ಪ ಶಿವಪ್ಪ ಕುಳಗೇರಿ ವಯಾ 24 ವರ್ಷ ಸಾ: ಶಿರಹಟ್ಟಿ ಅನ್ನುವವನಿಗೆ ತಲೆಗೆ ಭಾರಿ ರಕ್ತ ಗಾಯಪಡಿಸಿ ಸ್ಥಳದಲ್ಲಿಯೇ ಮರಣಪಡಿಸಿ ಮೋಟಾರ ಸೈಕಲ ಹಿಂದೆ ಕುಳಿತಕೊಂಡಿದ್ದ ಪಿರ್ಯಾದಿ ವಿರೇಶ ಬಸಪ್ಪ ದಿವಟರ ವಯಾ 20 ವರ್ಷ ಸಾ: ಸೊರಟೂರ ತಾ: ಗದಗ ಅನ್ನುವನಿಗೆ ಭಾರಿ ಗಾಯಪಡಿಸಿ ತಾನೂ ಸಹಾ ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 145/2017 ಕಲಂ 279.337.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.