ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, June 15, 2017

CRIME INCIDENTS 15-06-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 15/06/2017 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಶಹರದಲ್ಲಿರುವ ಸರಕಾರಿ ಪ್ರೌಡ ಶಾಲೆಯ ಕಟ್ಟಡ ಮೇಲೆ ಇರುವ ಕಂಪ್ಯೂಟರ್ ಕೋಣೆಯ ಬೀಗವನ್ನು ಮುರಿದು ಒಳಹೊಕ್ಕು 1]ಒಂದು ಏಸರ್ ಕಂಪನಿಯ ಕಂಪ್ಯೂಟರ್ ಅ..ಕಿ..12,000/- 2]ಒಂದು ಸೋನಿ ಕಂಪನಿಯ ಕ್ಯಾಮರಾ ಅ..ಕಿ..3000/-, & 3] 2 ಸೆಟ್ ಹೋಮ್ ಥೇಟರ್ ಅ..ಕಿ..8,000/- ಒಟ್ಟು 23,000/- ರೂ ಕಿಮ್ಮತ್ತಿನೇದವುಗಳನ್ನು  ಯಾರು ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಕಲಘಟಗಿ  ಪೊಲೀಸ್ ಠಾಣೆಯಲ್ಲಿ ಗುನ್ನಾನಂ 225/2017 ಕಲಂ 454.457.308 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಗೊಮ್ಮಗೋಳ ಗ್ರಾಮದ  ಮೃತ ನಾಗಪ್ಪ ತಂದೆ ಹನುಮಪ್ಪ ಜಾವೂರ ವಯಾ-60 ವರ್ಷ ಸಾ|| ಗುಮ್ಮಗೋಳ ಈತನು ಜಮೀನು ಸಾಗುವಳಿಗಾಗಿ ಈಗ ಒಂದು ವರ್ಷದ ಹಿಂದೆ ನವಲಗುಂದ ಪಿ.ಎಲ್.ಡಿ  ಬ್ಯಾಂಕ್ ನಲ್ಲಿ 1,90,000 ರೂಪಾಯಿ ಸಾಲ ಮಾಡಿದ್ದು ಊರಲ್ಲಿ ಅಲ್ಲಲ್ಲಿ ಕೈಗಡ ಸಾಲ ಮಾಡಿದ್ದು  ಮತ್ತು ಈ ವರ್ಷ ಸರಿಯಾಗಿ ಮಳೆ ಬೆಳೆ ಬಾರದ್ದರಿಂದ ಮಾಡಿದ ಸಾಲ ಹೇಗೆ ತೀರಿಸುವದು ಅಂತಾ ಮನಸ್ಸಿಗೆ ಹಚ್ಚಿಕೊಂಡು ತನ್ನಷ್ಠಕ್ಕೆ ತಾನೇ ಯಾವುದೋ ವಿಷ ಸೇವನೆ ಮಾಡಿ ಅಸ್ವಸ್ಥಗೊಂಡಿದ್ದು ಉಪಚಾರಕ್ಕೆ ಅಂತಾ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದು ಅಲ್ಲಿ ಉಪಚಾರ ಫಲೀಸದೆ ದಿನಾಂಕ:-14-06-2017 ಮೃತಪಟ್ಟೊರುತ್ತಾನೆ  ವಿನಹ ಸದರಿ ನಮ್ಮ ತಂದೆಯ ಮರಣದಲ್ಲಿ ಬೇರೆ ಎನೂ ಯಾರ ಮೇಲೂ ಸಂಶಯ ಇರುವುದಿಲ್ಲ ಅಂತಾ ವರದಿಯಲ್ಲಿ  ಮಹಾತೇಶ ಜಾವುರ ಫಿಯಾಱಧಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 17/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ-ಕುಂದಗೋಳ ರಸ್ತೆ ಹತ್ತಿರ ಆರೋಪಿತನಾದ ಗಂಗಾಧರ ಪರಪ್ಪ ತುಪ್ಪದ. ಸಾ: ಕೊಟಗುಂಡ ಹುಣಸಿ, ಹಾಲಿ: ನೂಲ್ವಿ, ತಾ: ಹುಬ್ಬಳ್ಳಿ ಈತನು ತಾನು ನಡೆಸುತ್ತಿದ್ದ ಕಾರ ನಂ ಕೆ.ಎ-34/ಎ-3325 ನೇದ್ದನ್ನು ಶರೇವಾಡ ಕಡೆಯಿಂದ ಕುಂದಗೋಳ ಕಡೆಗೆ ಅತೀ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿ ವೇಗ ನಿಯಂತ್ರಣ ಮಾಡಲಾಗದೇ ರಸ್ತೆ ಎಡಬದಿಯ ತಗ್ಗಿನಲ್ಲಿ ಹೋಗಿ ನಿಲ್ಲುವಂತೆ ಮಾಡಿ ಅಪಘಾತಪಡಿಸಿ ಕಾರಿಗೆ ಜಖಂಗೊಳಿಸಿದ್ದು ಇರುತ್ತದೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 82/2017 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಹಳಿಯಾಳ ರೋಡ ಪಿಂಗಾರ ಹೋಟೆಲ ಹತ್ತಿರ ಸಾರ್ವಜನಿಕ ರಸ್ತೆ ಮೇಲೆ ಆರೋಪಿ ದ್ಯಾಮಣ್ಣ ಅಳಗವಾಡಿ ಈತನು ತನ್ನ ಸ್ವಂತ ಪಾಯ್ದೇಗೋಸ್ಕರ ಯಾವುದೇ ಪಾಸು ವ ಪರ್ಮಿಟು ಇಲ್ಲದೇ ಒಂದು ಸ್ಟಾರ ಕೈ ಚೀಲದಲ್ಲಿ ಒಟ್ಟು 36  ಓಲ್ಡ ಟವರನ್  ವಿಸ್ಕಿ ತುಂಬಿದ 180 ಎಂ.ಎಲ್ ಅಳತೆಯ ಸರಾಯಿ ಟೆಟ್ರಾ ಪಾಕೀಟಗಳು ಅ:ಕಿ:2484/-ನೇದ್ದವುಗಳನ್ನು ಎಲ್ಲಿಂದಲೋ ಅಕ್ರಮವಾಗಿ ತಂದು ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿರುವಾಗ   ಸಿಕ್ಕಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 121/2017 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.