ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, June 2, 2017

CRIME INCIDENTS 02-06-2017


ಧಾರವಾಡ ಜಿಲ್ಲೆಯ ಠಾಣಾವ್ಯಾಪ್ತಿಯಲ್ಲಿ ದಿನಾಂಕ. 02-06-2017 ರಂದು ವರದಿಯಾದ ಪ್ರಕರಣಗಳು

1) ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 02-06-2017 ರಂದು 1330 ಗಂಟೆಗೆ ಕಮಡೊಳ್ಳಿ ಗ್ರಾಮದ ಇಂದಿರಾನಗರ ಪ್ಲಾಟ ಸಾರ್ವಜನಿಕ ರಸ್ತೆಯ ಬದಿಗೆ ಆರೋಪಿತನಾದ ಪರಶುರಾಮ ನಂಜಪ್ಪ ಹಣಬೆ ಸಾ: ಕಮಡೊಳ್ಳಿ ಈತನು ತನ್ನ ಪಾಯ್ದೆಗೋಸ್ಕರ ಓ.ಸಿ ಅಂಕಿಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣವನ್ನು ಪಣಕ್ಕೆ ಹಚ್ಚಿಸಿಕೊಂಡು ಓ.ಸಿ ಆಟ ಆಡುತ್ತಿರುವಾಗ ಸಿಕ್ಕಿದ್ದು ಅವನಿಂದ 2000-00 ಗಳು ಹಾಗೂ ಮೊಬೈಲ್ ವಶಪಡಿಸಿಕೊಂಡು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 02-06-2017 ರಂದು ಬೆಳಗಿನ 0930 ಗಂಟೆ ಸುಮಾರಿಗೆ ಧಾರವಾಡ ಕವಲಗೇರಿ ರಸ್ತೆ ಪಾಸ್ತೆ ಪೂಲ ಹತ್ತಿರ ಟಾಟಾ ಮ್ಯಾಜಿಕ ಪ್ಯಾಸೆಂಜರ ವಾಹನ ನಂ ಕೆಎ-35-ಬಿ-2140 ನೇದ್ದರ ಚಾಲಕನು ತನ್ನ ವಾಹನವನ್ನು ಕವಲಗೇರಿ ಕಡೆಯಿಂದ ಧಾರವಾಡ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವಾಹನದ ವೇಗ ನಿಯಂತ್ರಣ ಮಾಡಲಾಗದೇ ರಸ್ತೆ ಬಲಸೈಡಿನ ತೆಗ್ಗಿನಲ್ಲಿ ಪಲ್ಟಿ ಮಾಡಿ ಕೆಡವಿ ವಾಹನದಲ್ಲಿದ್ದ ಪಿರ್ಯಾದಿಗೆ ಹಾಗೂ ಇತರರಿಗೆ ಸಾದಾ ವ ಬಾರೀ ಗಾಯಪಡಿಸಿದ್ದಲ್ಲದೇ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-02-06-2017 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ದೇವಿಕೊಪ್ಪ ಗ್ರಾಮದ ಹದ್ದಿ ಮೃತ ಚೆನ್ನಪ್ಪ ಬಸಲಿಂಗಪ್ಪ ಧೂಳಿಕೊಪ್ಪ ಇವರ ಜಮೀನು ಸರ್ವೆ ನಂ 93 ಕ್ಷೇತ್ರ 4 ಎಕರೆ ಜಮೀನದಲ್ಲಿ ಕಳೇದ 8 ದಿನದ ಹಿಂದೆ ಕೆಇಬಿ ವಿದ್ಯುತ್ ಕಂಬದಿಂದ ವಿದ್ಯುತ್ ವಾಯರ್ ಕಟ್ಟಾಗಿ ಬಿದ್ದಿದ್ದರಿಂದ ಚೆನ್ನಪ್ಪ ಧೂಳಿಕೊಪ್ಪ ಇವರ ಮನೆಯ ಜನರು ಸಂಭಂಧಪಟ್ಟ ಕೆಇಬಿ ಅಧಿಕಾರಿಗಳಿಗೆ & ಲೈನ್ ಮನ್ ಗೆ ದೂರು ಕೊಟ್ಟರೂ ಸಹಾ ಕೆಇಬಿ ಅಧಿಕಾರಿಗಳು & ಸಂಭಂದಪಟ್ಟ ಲೈನಮನ್ ಸದರ ವಿದ್ಯುತ್ ತಂತಿಯನ್ನು ದುರಸ್ತಿ ಮಾಡದೆ ನಿರ್ಲಕ್ಷ್ಯತನ ಮಾಡಿದ್ದರಿಂದ ಚೆನ್ನಪ್ಪ ಧೂಳಿಕೊಪ್ಪ ಇವರು ತಮ್ಮ ಜಮೀನದಲ್ಲಿ ಬೆಳೆದ ಕಬ್ಬಿನ ಪೀಕಿಗೆ ಗೊಬ್ಬರವನ್ನು ಹಾಕುವ ಕಾಲಕ್ಕೆ ವಿದ್ಯುತ್ ತಗುಲಿ ಶಾಕ್ ಹೊಡೆದು ಸ್ಥಳದಲ್ಲಿಯೇ ಮರಣಹೊಂದುವಂತೆ ಮಾಡಿ, ಅದನ್ನು ನೋಡಿ ಬಿಡಿಸಿಕೊಳ್ಳಲು ಬಂದ ಪಿರ್ಯಾದಿಗೂ ಸಹಾ ವಿದ್ಯುತ್ ತಗುಲಿ ಮೈಕೈಗಳಾಗಿ ಗಾಯಗಳಾಗಿ ಚೀರಾಡುತ್ತಿದ್ದಾಗ ಅದನ್ನು ಕೇಳಿ ಪಕ್ಕದ ಜಮೀನದಲ್ಲಿ ಕೆಲಸ ಮಾಡುತ್ತಿದ್ದ ಬಸಪ್ಪ @ ಬಸವರಾಜ ತಂದೆ ಯಲ್ಲಪ್ಪ ಕ್ಯಾರಕೊಪ್ಪ ಸಾ..ದೇವಿಕೊಪ್ಪ ಇವನಿಗೂ ಸಹಾ ವಿದ್ಯುತ್ ತಗುಲಿ ಶಾಕ್ ಹೊಡೆದು ಸ್ಥಳದಲ್ಲಿಯೇ ಮರಣಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.

4) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 20-05-2017 ರಂದು 13-00 ಗಂಟೆ ಸುಮಾರಿಗೆ ಇದರಲ್ಲಿ ಪಿರ್ಯಾದಿ ಅನ್ನಕ್ಕ ಈಶ್ವರಪ್ಪ ಹುಂಬೇರಿಯ  ಅಕ್ಕ ಪಾರ್ವತೆವ್ವಳ ಸಂಗಡ ಅಪಹರಣವಾದ ಬಾಲಕಿ ಲಕ್ಷ್ಮಿ ತಂದೆ ಈಶ್ವರಪ್ಪ ಹುಂಬೇರಿ ವಯಾ 17 ವರ್ಷ ಈತಳು ನವಲಗುಂದ ಶಹರದ ಎಸ್ ಬಿ ಐ ಬ್ಯಾಂಕಿಗೆ ಹಣ ಡ್ರಾ ಮಾಡಿಕೊಳ್ಳಲು ಬಂದಾಗ ಹಣ ಡ್ರಾ ಮಾಡಿಕೊಂಡನಂತರ ಆಟೋ ರಿಕ್ಷಾ ತೆಗೆದುಕೊಂಡು ಬರಲು ಅಂತಾ ಹೋದಾಗ ಈತಳನನ್ನು ಸತೀಶ ಭೀಮಪ್ಪ ಕಾಳೆ ಸಾ!! ಧಾರವಾಡ ಸಾಧನಕೆರಿ ಅನ್ನುವವನ ಸಂಗಡ 6 ತಿಂಗಳ ಹಿಂದಿನಿಂದ ಪೋನ್ ನಲ್ಲಿ ಸಂಪರ್ಕ ಇದ್ದು ಈತನು ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಪುಸಲಾಯಿಸಿಕೊಂಡು ಅಪಹರಣ ಮಾಡಿಕೊಂಡು ಹೋಗಿರಬಹುದು ಅಂತಾ ಪಿರ್ಯಾದಿಯಲ್ಲಿ ನಮುದಿಸಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

5)ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 31-05-2017 ರಂದು ಮದ್ಯಾಹ್ನ 13-00 ಘಂಟೆಗೆ ಆರೋಪಿತ ಜಾಷರ  ಇಸ್ಮಾಯಿಲ್ ಸಾಬ ಮಾಲಬಾರ ಇತನು ಟ್ರ್ಯಾಕ್ಟರ್ ಇಂಜಿನ್ ನಂಬರ್ KA-25/TB 0268 ನೇದ್ದು ಅದಕ್ಕೆ ಟ್ರೇಲರ್ ಇದ್ದು ಸದರ ಟ್ರೇಲರಿಗೆ ರಜಿಸ್ಟ್ರೆಶನ್ ನಂಬರ್ ವಗೈರೆ ಇರುವುದಿಲ್ಲ. ಸದರ ವಾಹನದ ಚಾಲಕನು ತಾನು ಚಲಾಯಿಸುತ್ತಿದ್ದ ಟ್ರ್ಯಾಕ್ಟರನ್ನು ಅಣ್ಣಿಗೇರಿ ಕಡೆಯಿಂದ ಭದ್ರಾಪೂರ ಕಡೆಗೆ ಅತೀ ವೇಗ ಹಾಗು ಅಲಕ್ಷತನದಿಂದ ಚಲಾಯಿಸಿ ಯಾವುದೇ ಸಿಗ್ನಲ್ ಇಂಡಿಕೇಟರ್ ವಗೈರೆ ಮುನ್ಸೂಚನೆ ನೀಡದೇ ಸದರ ಟ್ರ್ಯಾಕ್ಟರನ್ನು ರಸ್ತೆಯ ಬಲ ಸೈಡಿನಲ್ಲಿ ಚಲಾಯಿಸಿ ಪಕ್ಕದಲ್ಲಿ ಹೊರಟ ಪಿರ್ಯಾದಿ ಚಲಾಯಿಸುತ್ತಿದ್ದ ಮೋಟರ್ ಸೈಕಲ್ ನಂಬರ್ KA26/R 8948 ನೇದ್ದಕ್ಕೆ ಟ್ರ್ಯಾಕ್ಟರನ್ನು ಡಿಕ್ಕಿ ಮಾಡಿ ಅಪಘಾತ ಪಡಿಸಿ ಪಿರ್ಯಾದಿಗೆ ಹಾಗು ಪಿರ್ಯಾದಿ ಹಿಂದೆ ಕುಳಿತ ಸ್ನೇಹಿತನಿಗೆ ಸಾದಾ ಹಾಗು ಭಾರೀ ಪ್ರಮಾಣದ ಗಾಯ ಪೆಟ್ಟು ಪಡಿಸಿ ಈ ಅಪಘಾತದ ಬಗ್ಗೆ ಮಾಹಿತಿಯನ್ನು ತಿಳಿಸದೇ ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಹೋಗಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.