ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, June 3, 2017

CRIME INCIDENTS 03-06-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 03-06-2017 ರಂದು ವರದಿಯಾದ ಪ್ರಕರಣಗಳು

ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 02-06-2017 ರಂದು ರಾತ್ರಿ 09-00 ಗಂಟೆ ಸುಮಾರಿಗೆ ಹುಬ್ಬಳ್ಳಿ ಧಾರವಾಡ ಬೈಪಾಸ ರಸ್ತೆ ಇಟ್ಟಿಗಟ್ಟಿ ಗ್ರಾಮದ ಮೈಕ್ರೊಪಿನಿಷ ಪ್ಯಾಕ್ಟರಿ ಹತ್ತಿರ ಟಿಪ್ಪರ ಲಾರಿ ನಂ KA 22 B 6444  ನೇದ್ದರ ಚಾಲಕನು  ಹುಬ್ಬಳ್ಳಿ ಕಡೆಯಿಂದ ಬೆಳಗಾಂವ   ಕಡೆಗೆ   ಅತಿಜೋರಿನಿಂದ ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು  ಇದೇ ಮಾರ್ಗದಲ್ಲಿ ರಸ್ತೆಯ ಎಡ ಸೈಡಿನಲ್ಲಿ ತನ್ನ ಮುಂದೆ ಹೋಗುತ್ತಿದ್ದ ಕಾರ ನಂ MH 09 DA 4329  ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ  ಅಪಘಾತಮಾಡಿ  ಲಾರಿಯನ್ನು ಎಡಹೋಳು ಮಗ್ಗಲಾಗಿ  ಕೆಡವಿ ಅಪಘಾತದಲ್ಲಿ ಲಾರಿ ಹಾಗೂ ಕಾರನ್ನು   ಜಖಂ  ಮಾಡಿದ್ದುಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:02-06-2017 ರಂದು ಸಂಜೆ 4-30 ಗಂಟೆ ಸುಮಾರಿಗೆ ಹುಬ್ಬಳ್ಳಿ ನವಲಗುಂದ ರಸ್ತೆಯ ಮೇಲೆ ಕುಸುಗಲ ಕರೆಯಮ್ಮದೇವಿ ಗುಡಿ ಹತ್ತಿರ ಆರೋಪಿ ಬೈಲಪ್ಪ ಬೀಮಪ್ಪ ಗೌರಿ ಸಾ: ಹೆಬಸೂರ ಇತನು ಟಾಟಾ ಎಸಿಇ ಗಾಡಿ ನಂ; ಕೆ.ಎ-25/ಎಎ-3316 ನೇದನ್ನು ಹುಬ್ಬಳ್ಳಿ ಕಡೆಯಿಂದ ನವಲಗುಂದ ಕಡೆಗೆ ಅತೀ ಜೋರಿನಿಂದ ಮತ್ತು ಅಜಾಗೂರಕತೆಯಿಂದ ನಡೆಸಿಕೊಂಡು ಹೋಗಿ, ಕುಸುಗಲ ಕಡೆಯಿಂದ ಹುಬ್ಬಳ್ಳಿ ಕಡೆಗೆ ಪಿರ್ಯಾದಿ ತನ್ನ ಸೈಡಿಗೆ ನಡೆಸಿಕೊಂಡು ಬರುತ್ತಿದ್ದ ಆಟೋ ರಿಕ್ಷಾ ನಂ: ಕೆ.ಎ-25/ಎಎ-6739 ನೇದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ, ತನ್ನ ಗಾಡಿಯನ್ನು ಪಲ್ಟಿ ಮಾಡಿ ಪಿರ್ಯಾದಿ ರಿಕ್ಷಾದಲ್ಲಿದ್ದ ಪಿರ್ಯಾದಿ ಮಗಳು ಕುಮಾರಿ ಪ್ರೀಯಾ ತಂದೆ ವಿ ರವಿಶಂಕರ ಮದ್ಲಿಯಾರ ವಯಾ 4 ವರ್ಷ ಇವಳಿಗೆ ಸಾದಾ ಗಾಯಪಡಿಸಿ ಮತ್ತು ಪಿರ್ಯಾದಿ ವ್ಹಿ ರವಿಶಂಕರ ವಿಠ್ಠಲರಾವ ಮದ್ಲಿಯಾರ ಸಾ: ಕುಸುಗಲ ಇವರಿಗೆ ಭಾರಿ ಗಾಯಪಡಿಸಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ; 02-06-2017 ರಂದು 00-30 ಗಂಟೆಯಿಂದ 01-00 ಗಂಟೆಯ ನಡುವಿನ ಅವಧಿಯಲ್ಲಿ ಹಾವೇರಿ ಹುಬ್ಬಳ್ಳಿ ರಸ್ತೆ ಮೇಲೆ ಛಬ್ಬಿ ಕ್ರಾಸ್ ಚರ ಮೂರ್ತೇಶ್ವರ ಮಠದ ಎದುರಿಗೆ ಯಾವುದೋ ಒಂದು ವಾಹನವನ್ನು ಅದರ ಚಾಲಕನು ಹಾವೇರಿ ಕಡೆಯಿಂದ ಹುಬ್ಬಳ್ಲಿ ಕಡೆಗೆ ಅತೀ ಜೋರಿನಿಂದ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಗಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ರಸ್ತೆ ಬದಿಗೆ ಹೊರಟಿದ್ದ ಅನಾಮಧೇಯ ಗಂಡಸ್ಸು ವಯಾ 35 ರಿಂದ 40 ವರ್ಷ ಅನ್ನುವವನಿಗೆ ಡಿಕ್ಕಿ ಮಾಡಿ ಅಪಗಾತಪಡಿಸಿ ಬಾರಿ ಗಾಯಪಡಿಸಿ ಸ್ಥಳದಲ್ಲಿಯೇ ಮರಣಪಡಿಸಿ ವಾಹನವನ್ನು ನಿಲ್ಲಿಸದೇ ಘಟನೆಯ ಸಂಗತಿಯನ್ನು ತಿಳಿಸದೇ ವಾಹನವನ್ನು ಹಾಗೇ ನಡೆಯಿಸಿಕೊಂಡು ಹೋಗಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-02-06-2017 ರಂದು ಮುಂಜಾನೆ 11-30 ಗಂಟೆಯಿಂದಾ 12-00 ಗಂಟೆಯ ನಡಯವಿನ ಅವಧಿಯಲ್ಲಿ ಕಲಘಟಗಿ ಶಹರದ ಕೆಇಬಿಗೆ ಸಂಭಂಧಪಟ್ಟಂತಹ ಬಸ್ಟ್ಯಾಂಡ ಹತ್ತೀರ ಇರುವ ಶಾಖಾ ಕಛೇರಿ ಹಾಗು ಉಪ ವಿಭಾಗ ಕಛೇರಿ ಯಲ್ಲಿ ದೇವಿಕೊಪ್ಪ ಗ್ರಾಮದ ಸುಮಾರು 100 ಜನರು ಕೂಡಿಕೊಂಡು ದೇವಿಕೊಪ್ಪ ಹದ್ದಿ ಚೆನ್ನಪ್ಪ ಧೂಲಿಕೊಪ್ಪ ಇವರ ಜಮೀನದಲ್ಲಿ ಕೆಇಬಿ ವಿದ್ಯುತ್ ತಂತಿ ತಗುಲಿ ಶಾಕ್ ದಿಂದ ಇಬ್ಬರು ಮತಪಟ್ಟಿದ್ದು ಒಬ್ಬಳು ಗಾಯಗೊಂಡಿದ್ದರ ಸಿಟ್ಟಿನಿಂದಾ ಗೂಡ್ಸ ಲಾರಿ ನಂ KA-25-D-9994 ನೇದ್ದರಲ್ಲಿ ಬಂದು ಕೆಇಬಿ ಕಛೇರಿಗಳಲ್ಲಿ ಒಳಹೊಕ್ಕು ಕಛೇರಿಯಲ್ಲಿಯ ಕಂಪ್ಯೂಟರ್, ಟೇಬಲ್, ಕಿಟಕಿ ಗ್ಲಾಸಗಳನ್ನು, ಒಡೆದು ಲುಕ್ಷಾಣಪಡಿಸಿ, ಕೆಇಬಿ ಕಛೇರಿಯಲ್ಲಿಯ ಕಡತಗಳನ್ನು ಬೆಂಕಿ ಹಚ್ಚಿ ಸುಟ್ಟು ಕೆಇಬಿ ಅಧಿಕಾರಿಗಳಿಗೆ ಹಿಡಿದು ಎಳೆದಾಡಿ ಅವಾಚ್ಯ ಬೈದಾಡಿ  ಕೈಯಿಂದಾ & ಬಡಿಗೆಗಳಿಂದಾ ಹೊಡಿಬಡಿ ಮಾಡಿ ಗಾಯಪಡಿಸಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಸರಕಾರಿ ಸ್ವತ್ತನ್ನು ಹಾಳು ಮಾಡಿದ್ದು ಇರುತ್ತದೆ.  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ