ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, June 4, 2017

CRIME INCIDENTS 04-06-2017ದಿನಾಂಕ 04-06-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 03-06-2017 ರಂದು 15-45 ಗಂಟೆ ಸುಮಾರಿಗೆ ಆರೋಪಿ ಮಲ್ಲಿಕಾಜುಱನ್ ತುರಮತರಿ ಸಾ: ಸವದತ್ತಿ ಇತನು ತನ್ನ ಮೋಟರ ಸೈಕಲ  ನಂಬರ ಕೆಎ 24 ಜೆ 7140 ನೇದ್ದನ್ನು ಗದಗ ಹುಬ್ಬಳ್ಳಿ ರಸ್ತೆಯ ಪಕ್ಕದಲ್ಲಿರುವ ಬಿಸ್ಮಿಲ್ಲಾ ಗ್ಯಾರೇಜನಿಂದ ಅತೀ ಜೋರಿನಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ರಸ್ತೆಯನ್ನು ಕ್ರಾಸ ಮಾಡಿಕೊಂಡು ಬಂದು, ಗದಗ ಕಡೆಯಿಂದ ಹುಬಬ್ಬಳ್ಳಿ ಕಡೆಗೆ ರಸ್ತೆಯ ಎಡಸೈಡಿಗೆ ಹೊರಟಿದ್ದ ಕಾರ ನಂಬರ ಕೆಎ-25/ಎಮ್.ಎ 2599 ನೇದ್ದಕ್ಕೆ ಡಿಕ್ಕಿ ಮಾಡಿ ಅಪಗಾತ ಪಡಿಸಿ ತನಗೆ ಹಾಗೂ ಮೋಟರ ಸೈಕಲ ಹಿಂದೆ ಕುಳಿತ ವಿಜಯ ಇವನಿಗೆ ಸಾಧಾ ವ ಭಾರಿ ಗಾಯ ಪಡಿಸಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 84/2017 ಕಲಂ IPC 1860 (U/s-279,337,338) ನೇದ್ದು ಪ್ರಕರಣ ದಾಖಲಾಗಿದ್ದು ಇರುತ್ತದೆ.

ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ-04-06-2017 ರಂದು ಮುಂಜಾನೆ 07-30 ಗಂಟೆಯ ಸುಮಾರಿಗೆ ಕೂಡಲಗಿ ಗ್ರಾಮದ ಹದ್ದಿ ಪಿರ್ಯಾದಿ ಜಮೀನು ಸರ್ವೆ ನಂ 106/2 ಕ್ಷೇತ್ರ 1 ಎಕರೆ ನೇದ್ದರಲ್ಲಿ ಬಿತ್ತನೆ ಮಾಡುವ ಕಾಲಕ್ಕೆ ಆರೋಫಿತರಾದ ಸಯ್ಯದಸಾಬ ಜಮಾದಾರ ಹಾಗೂ 3 ಜನರು ಕೂಡಿಕೊಂಡು ಪಿರ್ಯಾದಿ ವಿಜಯ ಗಾಣಗೇರ ಇವರ ಬಾಭತ್ ಜಮೀನದಲ್ಲಿ ಅತೀಕ್ರಮ ಪ್ರವೇಶ ಮಾಡಿ ಬಿತ್ತನೆ ಮಾಡುವದಕ್ಕೆ ಅಡ್ಡಿಪಡಿಸಿ ಅವಾಚ್ಯವಾಗಿ ಬೈದಾಡಿ ಈ ಬಗ್ಗೆ ಮಾನ್ಯ ನ್ಯಾಯಾಲಯದಲ್ಲಿ ದಾವೆ ನಂ 33/2017 ನೇದ್ದರಲ್ಲಿ ತಡೆಯಾಜ್ಞೆ ಇದ್ದರೂ  ಸಹಾ ಆರೋಪಿತರೆಲ್ಲರೂ ಕೊಡ್ಲಿಯಿಂದಾ ಹೊಡೆಯಲು ಬಂದಿದ್ದಲ್ಲದೆ ಈ ಹೊಲದಿಂದ ಹೋಗಲಿಲ್ಲಾ ಅಂದ್ರ ನಿನ್ನನ್ನು ಜೀವಂತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 209/2017 ಕಲಂ IPC 1860 (U/s-324,447,504,506,34) ನೇದ್ದು ಪ್ರಕರಣ ದಾಖಲಾಗಿದ್ದು ಇರುತ್ತದೆ.