ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, June 6, 2017

CRIME INCIDENTS 05-06-2017


ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 05-06-2017 ರಂದು ವರದಿಯಾದ ಪ್ರಕರಣಗಳು

1) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 04-06-2017 ರಂದು 2245 ಗಂಟೆ ಸುಮಾರಿಗೆ ನರೇಂದ್ರ ಗ್ರಾಮದ ಚನ್ನವೀರಗೌಡಾ ಪಾಟೀಲ ಇವರ ತೋಟದ ಮನೆಯ ಮುಂದೆ  ಸಾರ್ವ ಜನಿಕ ಸ್ಥಳದಲ್ಲಿ  ಒಟ್ಟು 08 ಜನ ಆರೋಪಿತರು ತಮ್ಮ ತಮ್ಮ ಸ್ವಂತ ಪಾಯ್ದೇಗೋಸ್ಕರ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಇಸ್ಪೀಟ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ  ಒಟ್ಟು ರೂ.12000-00 ಗಳು ಜಪ್ತ ಮಾಡಿದ್ದು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆವ್ಯಾಪ್ತಿಯಲ್ಲಿ ದಿನಾಂಕ: 04-06-2017 ರಂದು 14-30 ಗಂಟೆ ಸುಮಾರಕ್ಕೆ ಯಲಿವಾಳ ಬು.ಅರಳಿಕಟ್ಟಿ ರಸ್ತೆ ಮೇಲೆ ಅರಳಿಕಟ್ಟಿ ಸಮೀಪದ ಡಾಂಬರ ಪ್ಲಾಂಟ್ ಹತ್ತಿರ  ಆರೋಪಿತನಾದ ಹನಮಂತಗೌಡ ಬಸನಗೌಡ ಪಾಟೀಲ ಸಾ!! ಯಲಿವಾಳ ಇತನು ಕಾರ್ ನಂಬರ ಕೆಎ-25/ಎಮ್-6791 ನೇದ್ದನ್ನು ಯಲಿವಾಳ ಕಡೆಯಿಂದ ಬು.ಅರಳಿಕಟ್ಟಿ ಕಡೆಗೆ ಅತೀ ಜೋರಿನಿಂದ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ರಸ್ತೆ ಬದಿಗೆ ಕುಳಿತಿದ್ದ ಪಿರ್ಯಾಧಿ ಚಿಕ್ಕಮ್ಮ ಬಸವ್ವ ಕೊಂ ಬಸಪ್ಪ ಚಿಕ್ಕಣ್ಣವರ ಸಾ!! ಬು.ಅರಳಿಕಟ್ಟಿ ಅನ್ನುವವರಿಗೆ ಡಿಕ್ಕಿ ಮಾಡಿ ಬಾರಿ ಗಾಯಪಡಿಸಿ ಘಟನೆಯ ಸಂಗತಿಯನ್ನು ಠಾಣೆಗೆ ತಿಳಿಸದೇ ಗಾಡಿಯನ್ನು ಬಿಟ್ಟು ಹೋಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


3) ಕಲಘಟಗಿ ಪೊಲೀಸ್ ಠಾಣೆವ್ಯಾಪ್ತಿಯಲ್ಲಿ ದಿನಾಂಕ 04-05-2017 ರಂದು ಮುಂಜಾನೆ 11-50 ಗಂಟೆಯ ಸುಮಾರಿಗೆ ತಬಕದಹೊನ್ನಳ್ಳಿ   ಬಿರವಳ್ಳಿ ರಸ್ತೆಯ  ಮೇಲೆ ಬಿರವಳ್ಳಿ ಕ್ರಾಸ್ ಹತ್ತಿರ  ಇದರಲ್ಲಿ ನಮೂದ ಮಾಡಿದ ಆರೋಪಿತನ್ನು  ತಾನು ನಡೆಸುತ್ತಿದ್ದ ಮೋಟರ್ ಸೈಕಲ್ ನಂಬರ ಕೆ.ಎ 25/ ವಾಯ್ 0479 ನೇದ್ದನ್ನು ತಬಕದಹೊನ್ನಳ್ಳಿ ಕಡೆಯಿಂದ ಬಿರವಳ್ಳಿ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆ ಬದಿ ನಿಂತಿದ್ದ ಪಿರ್ಯಾದಿ ಮೋಟರ್ ಸೈಕಲ್  ನಂಬರ ಕೆ.ಎ 25/ ಇಜಿ 6651 ಡಿಕ್ಕಿ ಮಾಡಿ ಮೋಟರ್ ಸೈಕಲ್ ಮೇಲೆ ಕುಳಿತ ಗಂಗಾದರ ಬಡಿಗೇರ ಇವನಿಗೆ ಹಾಗೂ ಪಿರ್ಯಾದಿಗೆ ಸಾದಾ ವ ಬಾರಿ ಗಾಯಪಡಿಸಿ ವಾಹನ ಸಮೇತ ಪರಾರಿಯಾಗಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.