ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, June 6, 2017

CRIME INCIDENTS 06-06-2017

ದಿನಾಂಕ 06-06-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1.ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕಃ 06-06-2017 ರಂದು ಮುಂಜಾನೆ 11-30 ಗಂಟೆಯ ಸುಮಾರಿಗೆ ಆಪಾದಿತನಾದ ಮಕ್ತುಮಸಾಬ ತಂದೆ ದಸ್ತಗೀರಸಾಬ ಪಠಾಣ, ವಯಾ 30 ಜಾತಿ ಮುಸ್ಲಿಂ ಉದ್ಯೋಗ ಕೂಲಿ ಕೆಲಸ ಸಾ ಃ ಕತ್ರಿದಡ್ಡಿ ಗ್ರಾಮ ತಾ ಃ ಬೈಲ ಹೊಂಗಲ ಜಿಲ್ಲಾ ಬೆಳಗಾವಿ ಅಂಬುವನು ಅಳ್ನಾವರ ಹೊಸ ಬಸ್ ಸ್ಟ್ಯಾಂಡ್ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಂತುಕೊಂಡು ತನ್ನ ಸ್ವಂತ ಲಾಭಕ್ಕಾಗಿ ಯಾವುದೆ ಪಾಸ್ ವ ಪರವಾನಿಗೆ ಇಲ್ಲದೇ ಒಂದು ಕೈ ಚೀಲದಲ್ಲಿ 180 ಎಂ.ಎಲ್. ದ. 18 ಹೈವರ್ಡಸ್ ಚಿಯರ್ಸ ವಿಸ್ಕಿ ತುಂಬಿದ ಟೆಟ್ರಾ ಪಾಕೇಟುಗಳು ಅಃಕಿಃ 1008/- ರೂ. ಹಾಗೂ 180 ಎಂ.ಎಲ್. ದ. 22 ಬೆಂಗಳೂರು ಮಾಲ್ಟ್ ವಿಸ್ಕಿ ತುಂಬಿದ ಟೆಟ್ರಾ ಪಾಕೇಟುಗಳು ಅಃಕಿಃ  1034/- ರೂ. ಎರಡೂ ಸೇರಿ ಒಟ್ಟು 2042/- ರೂ. ಕಿಮ್ಮತ್ತಿನವುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ  ಉದ್ದೇಶದಿಂದ ಅನಧಿಕೃತವಾಗಿ ತನ್ನ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕಿದ್ದು ಇರುತ್ತದೆ. ಈ ಕುರಿತು ಅಳ್ನಾವರ್ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 56-2017 ಕಲಂ KARNATAKA EXCISE ACT, 1965 (U/s-32,34) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿ: ಆರೋಪಿ ಅ.ನಂ: 1ನಿಂಗಪ್ಪ ಹರಿಜನ ನೇದವನು ಪಿರ್ಯಾದಿ ಶ್ರೀಮತಿ ಹನಮವ್ವ ಇವಳನ್ನು ಮದುವೆಯಾಗಿ 8 ವರ್ಷಗಳಾಗಿದ್ದು, ಪಿರ್ಯಾದಿಯನ್ನು ಅವಳ ಗಂಡನ ಮನೆಯವರಾದ ಆರೋಪಿ ಅ.ನಂ: 1ನಿಂಗಪ್ಪ ಹರಿಜನ, 2-ಬಸವ್ವ ಹರಿಜನ, 3-ಹನುಮಂತಪ್ಪ ಹರಿಜನ, 4-ಶ್ರೀಮತಿ ರೇಣುಕಾ ಮತ್ತು  5-ಫಕ್ಕಿರಪ್ಪ ನೇದವರುಗಳು ಸುಮಾರು 4 ವರ್ಷಗಳವರೆಗೆ ಚನ್ನಾಗಿ ನೋಡಿಕೊಂಡು ನಂತರ ಅವಳಿಗೆ ತವರು ಮನೆಯಿಂದ ಹಣ ಬಂಗಾರ ತರುವಂತೆ ಮಾನಸೀಕ ಹಾಗೂ ದೈಹಿಕ ಕಿರುಕುಳ ಕೊಡುತ್ತಾ ಬಂದಿದ್ದಲ್ಲದೇ ಗಂಡನ ಮನೆಯಿಂದ ಹೊರಗೆ ಹಾಕಿ, ಪಿರ್ಯಾದಿಯೊಂದಿಗೆ ವಿವಾಹ ವಿಚ್ಚೇದನ ಪಡೆಯದೇ, ಹಾಗೂ ಅವಳ ಅನುಮತಿಯನ್ನು ಸಹ ಪಡೆಯದೇ ಆರೋಪಿ ಅ.ನಂ: 2-ಬಸವ್ವ ಹರಿಜನ, 3-ಹನುಮಂತಪ್ಪ ಹರಿಜನ, 4-ಶ್ರೀಮತಿ ರೇಣುಕಾ ಮತ್ತು  5-ಫಕ್ಕಿರಪ್ಪ, 6-ಭರಮಪ್ಪ ಮಾದರ, 7-ಗುರುಸಿದ್ದಪ್ಪ ಡೊಳ್ಳಿನ ಮತ್ತು 8-ಬಸಪ್ಪ ಪೂಜಾರಿ ನೇದವರುಗಳು ದಿನಾಂಕ: 04-06-2017 ರಂದು 1600 ಗಂಟೆಗೆ ಯರಗುಪ್ಪಿ ಗ್ರಾಮದ ಕರಿಯಮ್ಮದೇವಿ ದೇವಸ್ಥಾನದಲ್ಲಿ ಆರೋಪಿ ಅ.ನಂ: 1 ನೇದವನಿಗೆ ಚವಡಾಳ ಗ್ರಾಮದ ರೇಣುಕಾ ಅನ್ನುವವಳನ್ನು 2ನೇ ಮದುವೆ ಮಾಡಿ ಪಿರ್ಯಾದಿಗೆ ಮೋಸ ಮಾಡಿದ ಅಪರಾಧ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 80/2017 ಕಲಂ IPC 1860 (U/s-498A,494,420,34) ನೇದ್ದು ಪ್ರಕರಣ ದಾಖಲಾಗಿದ್ದು ಇರುತ್ತದೆ.


3.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ:05-06-2017 ರಂದು ಮುಂಜಾನೆ 11-30 ಗಂಟೆ ಸುಮಾರಿಗೆ ಇಂಗಳಹಳ್ಳಿ ಗ್ರಾಮದ ಪಿರ್ಯಾದಿಯ ಮನೆಯ ಮುಂದೆ, ಆರೋಪಿತರಾದ ತಾಜುಸಾಬ ನಾಯ್ಕರ, ಹಾಶಮ್ ಪೀರ ನಾಯ್ಕರ ಮತ್ತು ಶ್ರೀಮತಿ ರಾಜಾಬೀ ತಾಜುಸಾಬ ನಾಯ್ಕರ ಇವರೆಲ್ಲರೂ ಸಮಾನ ಉದ್ದೇಶ ಇಟ್ಟುಕೊಂಡು ರಿ.ಸ.ನಂ: 359 ನೇದರ ಜಮೀನ ವಿಷಯವಾಗಿ ಪಿರ್ಯಾದಿ ಮತ್ತು ಪಿರ್ಯಾದಿ ಗಂಡನ ಜೊತೆ ತಂಟೆ ತಗೆದು, ಅವಾಚ್ಯ ಶಬ್ದಗಳಿಂದ ಬೈದಾಡಿ ಪಿರ್ಯಾದಿ ಶ್ರೀಮತಿ ಮೈಬೂನಬೀ ಕೊಂ ಅಬ್ದುಲಸಾಬ ನಾಯ್ಕರ ಸಾ: ಇಂಗಳಹಳ್ಳಿ ಇವಳಿಗೆ ಎಲ್ಲೂ ಹೋಗದಂತೆ ಅಡ್ಡಗಟ್ಟಿ ತರುಬಿ, ಬಡಿಗೆಯಿಂದ ಮತ್ತು ಕೈಯಿಂದ ಹೊಡಿ ಬಡಿ ಮಾಡಿದಲ್ಲದೇ ತಂಟೆ ಬಿಡಿಸಲು ಬಂದ ಪಿರ್ಯಾದಿಯ ಗಂಡನಿಗೂ ಕೈಯಿಂದ ಹೊಡಿ ಬಡಿ ಮಾಡಿ ಜೀವದ ಬೇದರಿಕೆ ಹಾಕಿದ ಅಪರಾಧ.  ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 133/2017 ಕಲಂ IPC 1860 (U/s-323,324,341,504,506,34) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.