ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, June 7, 2017

CRIME INCIDENTS 07-06-2017

ದಿನಾಂಕ 07-06-2017 ರಂದು ಧಾರವಾಡ  ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1.ಗರಗ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ:26-5-2017 ರಂದು 18-30 ಗಂಟೆ ಸುಮಾರಿಗೆ ಮೊಟರ ಸೈಕಲ ನಂ.ಕೆಎ/25/ಇಆರ್/9203 ನೇದ್ದರ ಸವಾರ ದಾದಾಪೀರ ನದಾಪ ತನ್ನ ಮೊಟಾರ ಸೈಕಲನ್ನು ಲೊಕೂರ ಕಡೆಯಿಂದ ಶಿಬಾರಗಟ್ಟಿ ಕಡೆಗೆ ಅತೀಜೊರಿನಿಂದ ವ ನಿಷ್ಕಾಳಜತಿತನದಿಂದ ಚಲಾಯಿಸಿಕೊಂಡು ಬಂದು ಶಿಬಾರಗಟ್ಟಿ ಕಡೆಯಿಂದ ಲೊಕೂರ ಕಡೆಗೆ ಬರುತ್ತಿದ್ದ ಪಿರ್ಯಾದಿ ಮಹಾಂತೇಶ ದೊಡವಾಡ ಇವರ ಮೊಟಾರ ಸೈಕಲ ನಂ.ಕೆಎ25/ಇಎಚ/9956 ನೇದ್ದಕ್ಕೆ ಡಿಕ್ಕಿ ಮಾಡಿ ಅಪಗಾತ ಪಡಿಸಿ ಮೊಟಾರ ಸೈಕಲ ಸವಾರನಿಗೆ ಹಾಗೂ ಅವನ ಹಿಂದೆ ಕುಳಿತ ಇನ್ನೊಬ್ಬನಿಗೆ ಸಾದಾ ವ ಭಾರಿ ಸ್ವರೂಪದ ಗಾಯ ಪಡಿಸಿ ತನ್ನ ಮೊಟಾರ ಸೈಕಲ ಹಿಂದೆ ಕುಳಿತವನಿಗೆ ಭಾರಿ ಸ್ವರೂಪದ ಗಾಯ ಪಡಿಸಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ 82/2017 ಕಲಂ IPC 1860 (U/s-279,337,338) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 07-06-2017 ರಂದು ಬೆಳಗಿನ ಜಾವ 05-00 0 ಗಂಟೆ ಸುಮಾರಿಗೆ ಹುಬ್ಬಳ್ಳಿ ಧಾರವಾಡ ಬೈಪಾಸ ರಸ್ತೆ ಯರಿಕೊಪ್ಪ ಗ್ರಾಮದ ರಮ್ಯಾರೆಸಿಡೆನ್ಸಿ ಹೊಟೇಲ ಹತ್ತಿರ ಟ್ಯಾಂಕರ ಲಾರಿ MH 10 AW 5000ನೇದ್ದರ ಚಾಲಕನಾದ ವಸಂತ ತಂದೆ ಪಾಪು ಜಾಧವ ಸಾಃಕೊಲ್ಲಾಪುರ ಇವನು  ತನ್ನ ಲಾರಿಯನ್ನು  ಹುಬ್ಬಳ್ಳಿ ಕಡೆಯಿಂದ ಬೆಳಗಾಂವ   ಕಡೆಗೆ   ಅತಿಜೋರಿನಿಂದ ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ಒಮ್ಮೆಲೇ ಯಾವುದೇ ಮಾರ್ಗಸೂಚಿಯನ್ನು ನೀಡದೇ ಲಾರಿಯನ್ನು ರಸ್ತೆ ಮದ್ಯದಲ್ಲಿ ನಿಲ್ಲಿಸಿ ಇದೇ ಮಾರ್ಗದಲ್ಲಿ ತನ್ನ ಹಿಂದೆ ಬರುತ್ತಿದ್ದ ಸರಕಾರಿ ಜೀಪ ನಂ KA 02 G 740 ನೇದ್ದು ಹಿಂದಿನಿಂದ ಡಿಕ್ಕಿಆಗುವಂತೆ ಮಾಡಿ ಅಪಘಾತ ಪಡಿಸಿ ಅಪಘಾತದಲ್ಲಿ ಜೀಪಿನಲ್ಲಿದ್ದವರಿಗೆ ಸಾದಾಗಾಯ ಪಡಿಸಿ ವಾಹನವನ್ನು ಜಖಂಗೊಳಿಸಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 117/2017 ಕಲಂ IPC 1860 (U/s-279,337) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ:ಯಲ್ಲಿ  ಮುಂಜಾಗ್ರತಾ ಕ್ರಮವಾಗಿ ಸಿ.ಆರ್.ಪಿ.ಸಿ ಅಡಿಯಲ್ಲಿ ಗುನ್ನಾ ನಂ. 214/2017  ನೇದ್ದು ಪ್ರಕರಣ ದಾಖಲಿಸಿದ್ದು ಇರುತ್ತದೆ.