ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, June 8, 2017

CRIME INCIDENTS 08-06-2017

ದಿನಾಂಕ 08/06/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿ: ಆರೋಪಿತನಾದ ಸಮೀರ ಕಳ್ಳಿಮನಿ ಈತನು  ದಿನಾಂಕ 07-06-2017 ರಂದು 23-30 ಗಂಟೆಯ ಸುಮಾರಿಗೆ ತಾನು ನಡೆಸುತ್ತಿದ್ದ  ಲಾರಿ ನಂ ಕೆ ಎ 25/ಸಿ-7720 ನೇದನ್ನು  ನವಲಗುಂದ ಕಡೆಯಿಂದ ನರಗುಂದ ಕಡೆಗೆ ಅತೀ ವೇಗದಿಂದ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ನಡೆಯಿಸಿಕೊಂಡು ಹೋಗಿ ನರಗುಂದ ಕಡೆಯಿಂದ ನವಲಗುಂದ ಕಡೆಗೆ ಬರುತ್ತಿದ್ದ ಪಿರ್ಯಾಧಿಯ ಅಣ್ಣ ರವಿ ಈತನ ಮೋಟಾರ್ ಸೈಕಲ್ ನಂ ಕೆ ಎ 31/ಹೆಚ್ -7805 ನೇದಕ್ಕೆ ಗೊಬ್ಬರಗುಂಪಿ ಕ್ರಾಸ್ ಹತ್ತಿರ ಡಿಕ್ಕಿ ಪಡಿಸಿ ಸದರ ಮೋಟಾರ್ ಸೈಕಲ್ ಸವಾರನಿಗೆ ಸ್ಥಳದಲ್ಲಿಯೇ ಮರಣವನ್ನುಂಟು ಪಡಿಸಿದ ಅಪರಾಧ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 75/2017 ಕಲಂ IPC 1860 (U/s-279,304(A)) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿ: ಆರೋಪಿತರಾದ 1. ಪಂಚಯ್ಯಾ ಸಾಲೀಮಠ, 2.ಈರಯ್ಯಾ ಸಾಲೀಮಠ, 3. ಮಲ್ಲಿಕಾಜುಱನ ಸಾಲೀಮಠ ಮತ್ತು 4.ಮಹಾಂತೇಶ ಸಾಲೀಮಠ  ಇವರೆಲ್ಲರೂ ದಿನಾಂಕ: 22-05-2017ರಂದು ಬೇಳಿಗ್ಗೆ 10-00 ಗಂಟೆಯ ಸುಮಾರಿಗೆ ಪಿರ್ಯಾದಿಯು ಖರಿದಿಸಿದ 15 ಗುಂಟೆ ಜಮೀನು ಸರ್ವೆ ನಂ: 180 ನೇದ್ದರ ಜಾಗೆಯನ್ನು ಪಿರ್ಯಾದಿ ಖರೀದಿ ಇಡಿದಿದ್ದರ ಸಿಟ್ಟಿನಿಂದ ಸದರ ಜಾಗೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಹೊಕ್ಕು ಅಲ್ಲಿದ್ದ ಮೇವಿನ ಓಟ್ಟಿನ ಬಣವಿ ಕೆಡವಿ ಲುಕ್ಸಾನು ಪಡಿಸಿದ್ದಲ್ಲದೆ ಹೀಗೇಕೆ ಮಾಡುತ್ತಿರಿ ಅಂತಾ ಕೇಳಿದ್ದಕ್ಕೆ ಪಿರ್ಯಾದಿ ಅಶೋಕ ಮಡನೂರ ಇವರೊಂದಿಗೆ ತಂಟೆ ತೆಗೆದು ಕೈಯಿಂದ ಹೊಡಿ-ಬಡಿ ಮಾಡಿದ್ದಲ್ಲದೆ ಚಾಕು ತೋರಿಸಿ ಜೀವದ ಧಮಕಿ  ಹಾಕಿ ತಂಟೆ ಮಾಡಿದ್ದು ನಂತರ ದಿನಾಂಕ 07-06-2017 ರಂದು ಸಹ ಪಿರ್ಯಾದಿಯ ತಮ್ಮನ ಮಗನಿಗೆ ಬೈದು ಕಳಿಸಿದ್ದನ್ನು ಕೇಳಿದ ಪಿರ್ಯಾದಿಯ ತಮ್ಮನ ಹೆಂಡತಿಗೆ ಸಹ ಅವಾಚ್ಯ ಶಬ್ದಗಲೀಂದ ಬೈದು ಕಳಿಸಿದ ಅಪರಾಧ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 76/2017 ಕಲಂ IPC 1860 (U/s-447,504,506,323,427,34) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ:ಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 136/2017 & 137/2017 ನೇದ್ದು ಪ್ರಕರಣ ದಾಖಲಾಗಿದ್ದು ಇರುತ್ತದೆ.