ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, June 10, 2017

CRIME INCIDENTS 09-06-2017

ದಿನಾಂಕ 09-06-2017 ರಂದು ವರದಿಯಾದ ಪ್ರಕರಣಗಳು

1.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿ: ಫಿರ್ಯಾಧಿದಾರಳಾದ ಜಯಲಕ್ಮಿ ಡೊಗ್ಗಲಿ ಇವಳು ಖುದ್ದಾಗಿ ಠಾಣೆಗೆ ಹಾಜರಾಗಿ ನೀಡಿದ ಬೆರಳಚ್ಚು ಮಾಡಿಸಿದ ಫಿರ್ಯಾದದಲ್ಲಿ ತನಗೆ  ಆಪಾದಿತನಾಧ ಮಲ್ಲಿಕಾಜುಱ ಡೊಗ್ಗಲಿ  ತನ್ನನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ದಿನಾಂಕಃ04/05/2017 ರಂದು ದುಂಡಿ ಬಸವೇಶ್ವರ ಕಲ್ಯಾಣ ಮಂಟಪ ಗುಲಗಂಜಿಕೊಪ್ಪದಲ್ಲಿ ಮದುವೆಯಾಗಿ ತನ್ನ ಜೊತೆ ದೈಹಿಕ ಸಂಪರ್ಕ ಹೊಂದಿದ್ದಲ್ಲದೇ ಇನ್ನೊಂದು ಮದುವೆಯಾಗಿ ತನಗೆ ಮೋಸ ಮಾಡಿದ್ದು ಇದ್ದು ಅದನ್ನು ಕೇಳಲು ಅಂತಾ ದಿನಾಂಕಃ 18/05/2017 ರಂದು ಅವರ ಮನೆಗೆ ಹೋದಾಗ ಅವರು ಅಂದೇ ತನಗೆ ಅವಾಚ್ಯ ಶಬ್ಧಗಳಿಂದ ಬೈದಾಡಿ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 43/2017 ಕಲಂ IPC 1860 (U/s-420,493,504,506)ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2.ಗರಗ ಪೊಲೀಸ್ ಠಾಣಾ ವ್ಯಾಪ್ತಿ: ಹದ್ದಿ ಪೈಕಿ ಬೆಳಗಾವಿ-ಧಾರವಾಡ ಪಿ.ಬಿ.ರಸ್ತೆಯ ಮೇಲೆ ಮುಮ್ಮಿಗಟ್ಟಿ ಅಂಡರ್ ಬ್ರಿಜ್ಜ ಮೇಲೆ ದಿನಾಂಕಃ 09-06-2017 ರಂದು 16-30 ಅವರ್ಸಕ್ಕೆ ಆರೋಪಿತನಾದ ಸುನೀಲ ತಂದೆ ಯಲ್ಲಪ್ಪಾ ಕೊಲಕಾರ. ಸಾಃ ಸುತಗಟ್ಟಿ ಇತನು ತನ್ನ ಬಾಬತ್ತ ಕಾರ ನಂಬರಃ ಕೆಎಃ22/ಜಡ್ಡ್/9491 ನೇದ್ದನ್ನು ಬೆಳಗಾವಿ ಕಡೆಯಿಂದಾ ಧಾರವಾಡ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಮುಮ್ಮಿಗಟ್ಟಿ ಅಂಡರ್ ಬ್ರಿಜ್ಜ್ ಮೇಲೆ ಕಾರನ್ನು ರಸ್ತೆ ವಿಭಜಕ ಕಟ್ಟೆಗೆ ಢಿಕ್ಕಿ ಮಾಡಿ ಕಟ್ಟೆ ಹತ್ತಿಸಿ ಲೈಟ ಕಂಬಕ್ಕೆ ಢಿಕ್ಕಿ ಮಾಡಿ ಕಾರ ಪಲ್ಟಿ ಮಾಡಿ ಅಪಘಾತಪಡಿಸಿ ಕಾರಿನಲ್ಲಿದ್ದ ಪಿರ್ಯಾದಿ ಗೀತಾ ದೊಡಮನಿಗೆ ಸಾದಾಗಾಯಪಡಿಸಿ ಪಿರ್ಯಾದಿ ಗಂಡ ಅಶೋಕ ಇತನಿಗೆ ಮರಣಪಡಿಸಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 83/2017 ಕಲಂ IPC 1860 (U/s-279,337,304(A)) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

3.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ: 09-06-2017 ರಂದು ಮಧ್ಯ ರಾತ್ರಿ 00-30 ಗಂಟೆಗೆ ಕಿರೆಸೂರ ಗ್ರಾಮದ ಪ್ರಭುಸ್ವಾಮಿ ಮಠದ ಮುಂದೆ ಬಯಲು ಜಾಗೆಯಲ್ಲಿ ಆರೋಪಿತರಾದ ಅಶೋಕ ಕಲ್ಲಮ್ಮನವರ ಹಾಗೂ 7 ಜನರು ಕೂಡಿಕೊಂಡು ಇಸ್ಪೆಟ್ ಎಲೆಗಳ ಸಹಾಯದಿಂದ ತಮ್ಮ ತಮ್ಮ ಫಾಯ್ದೆಗೋಸ್ಕರ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎನ್ನುವ ಇಸ್ಪೆಟ್ ಜೂಜಾಟವನ್ನು ಆಡುತ್ತಿದ್ದಾಗ ರೋಖ ರಕಂ 13770/- ರೂ, 52 ಇಸ್ಪೆಟ್ ಎಲೆಗಳು, ಒಂದು ಬೆಡ್ ಶೀಟ್ ಸಮೇತ ಸಿಕ್ಕಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 138/2017 ಕಲಂ KARNATAKA POLICE ACT, 1963 (U/s-87) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ: 09-06-2017 ರಂದು 18-00 ಗಂಟೆ ಸುಮಾರಕ್ಕೆ ಹುಬ್ಬಳ್ಳಿ ಕುಂದಗೋಳ ರಸ್ತೆ ಮೇಲೆ ಶೆರೆವಾಡ ಕ್ರಾಸ್ ಸಮೀಪದ ಸಂಶಿ 14 ಕಿ.ಮೀ ಅಂತಾ ಬರೆದ ಕಲ್ಲ ಹತ್ತಿರ ತವೇರಾ ವಾಹನ ನಂಬರ ಕೆಎ-18/ಎ-7585 ನೇದ್ದನ್ನು ಅದರ ಚಾಲಕನು ಕುಂದಗೋಳ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಹುಬ್ಬಳ್ಳಿ ಕಡೆಯಿಂದ ಕುಂದಗೋಳ ಕಡೆಗೆ ಹೊರಟಿದ್ದ ಮೋಟಾರ್ ಸೈಕಲ್ ನಂಬರ ಕೆಎ-25/ಇಟಿ-2835 ನೇದ್ದಕ್ಕೆ ಡಿಕ್ಕಿ ಮಾಡಿ ಅಪಗಾತಪಡಿಸಿ ಅದರ ಸವಾರನಾದ ಅಬ್ದುಲಖಾದರ ಜಾಫರಸಾಬ ಮುಲ್ಲಾ ಸಾ!! ಬಸಾಪೂರ ಹಾಗೂ ಮೋಟಾರ್ ಸೈಕಲ್ ಹಿಂದೆ ಕುಳಿತುಕೊಂಡಿದ್ದ ಹಸನಸಾಬ ಹಜರೇಸಾಬ ನಭೀನವರ ಸಾ!! ಬಸಾಪೂರ ಇವರುಗಳಿಗೆ ಭಾರಿ ಗಾಯಪಡಿಸಿ ಸ್ಥಳದಲ್ಲಿಯೇ ಮರಣಪಡಿಸಿ ಘಟನೆಯ ಸಂಗತಿಯನ್ನು ಠಾಣೆಗೆ ತಿಳಿಸದೇ ಗಾಡಿಯನ್ನು ಬಿಟ್ಟು ಓಡಿ ಹೋದ ಅಪರಾಧ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 139/2017 ಕಲಂ INDIAN MOTOR VEHICLES ACT, 1988 (U/s-134,187); IPC 1860 (U/s-279,304(A)) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.