ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, June 10, 2017

CRIME INCIDENTS 10-06-2017

ದಿನಾಂಕ 10-06-2017 ರಂದು ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 08-06-2017 ರಂದು ಸಂಜೆ 7-30 ಗಂಟೆಯ ಸುಮಾರಿಗೆ ಜೋಡಳ್ಳಿ ಗ್ರಾಮದ ಪಿರ್ಯಾದಿ ವೀರಭದ್ರಪ್ಪ ಸುಳ್ಳದ ಇವರ ಮನೆಯ ಮುಂದೆ  ಆರೋಪಿತರಾದ 1.ರತ್ನವ್ವ ಸುಳ್ಳದ, 2.ಮಡಿವಾಳಪ್ಪ ಸುಳ್ಳದ & 3.ಕಲಮೇಶ ಸುಳ್ಳದ ಇವರೆಲ್ಲರು ಜಮೀನ ಹಂಚಿಕೆಯಾಗಿಲ್ಲಾ ಅನ್ನುವ ವಿಷಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಪಿರ್ಯಾದಿಯೊಂದಿಗೆ ಹಾಗೂ ಅವರ ಮನೆಯಜನರೊಂದಿಗೆ ತಂಟೆ ತಕರಾರು ಮಾಡುತ್ತಾ ಬಂದಿದ್ದಲ್ಲದೇ ಸದರ ದಿನಾಂಕದಂದು ಪಿರ್ಯಾದಿ ತಾಯಿ ಆರೋಪಿ ನಂಬರ 1 ನೇದವಳಿಗೆ  ಮುಸರಿ ನೀರು ಇಲ್ಲಿ ಯಾಕ ಚೆಲ್ಲಾಕತ್ತಿ ಅಂತಾ ಅಂದಿದ್ದಕ್ಕೆ ಸೀಟಾಗಿ ಪಿರ್ಯಾದಿ ತಾಯಿಗೆ ಕೈಯಿಂದ ಹೊಡಿ ಡಿಬ ಮಾಡಿದ್ದಲ್ಲದೇ  ಬೀಡಿಸಲು ಬಂದ ಪಿರ್ಯಾದಿಗೆ ಹಾಗೂ ಅವರ ತಂದೆಗೆ ಹೆಂಡತಿಗೆ ಮೂರು ಜನರು ಸೇರಿ ಕೈಯಿಂದ ಹಾಗೂ ಬಡಿಗೆಯಿಂದ  ಹೊಡಿಬಡಿ ಮಾಡಿದಲ್ಲದೇ ಅವಾಚ್ವ ಬೈದಾಡಿದ ಅಪರಾದ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 218/2017 ಕಲಂ IPC 1860 (U/s-34,504,323,324) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ:ಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ.    
 216/2017 & 217/2017 ಪ್ರಕರಣ ದಾಖಲಿಸಿದ್ದು ಇರುತ್ತದೆ.


3.ಅಳ್ನಾವರ್ ಪೊಲೀಸ್ ಠಾಣೆ:ಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 61/2017& 62/2017 ನೇದ್ದು ಪ್ರಕರಣ ದಾಖಲಿಸಿದ್ದು ಇರುತ್ತದೆ.