ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, June 13, 2017

CRIME INCIDENTS 13-06-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 13/06/2017 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಕುಂದಗೋಳ ಹೊರವಲಯದ ದೇವನೂರ ಕ್ರಾಸ್ ಹತ್ತಿರ ಒಬ್ಬ ವ್ಯಕ್ತಿಯು ಸುಮಾರು 30 ರಿಂದ 35 ವರ್ಷದವನು ಕುಂದಗೋಳ ಶಹರದ ಕಡೆಗೆ ತನ್ನ ಹಿರೋ ಹೊಂಡಾ ಸ್ಪ್ಲೆಂಡರ ಮೋಟಾರ ಸೈಕಲ್ ನ್ನು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಗೆ ನಡೆಯುತ್ತಾ ಹೊರಟಿದ್ದ  ನೀಲವ್ವಾ ಪಾಟೀಲ  ಇವರ ಕೊರಳಿಗೆ ಕೈಹಾಕಿ ಕೊರಳಲ್ಲಿದ್ದ ಬಂಗಾರದ ಮಂಗಳಸೂತ್ರವನ್ನು ಕಿತ್ತುಕೊಂಡಿದ್ದು, ಮಂಗಳಸೂತ್ರ ಹರಿದು ಸುಮಾರು 20 ಗ್ರಾಮ್ ತೂಕದ 50,000/-ರೂ ಕಿಮ್ಮತ್ತಿನದನ್ನು ಕಿತ್ತು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 81/2017 ಕಲಂ 392 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು  ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಭೋಗಾನೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ  ಆರೋಪಿತನಾದ ಶಂಕರಪ್ಪಾ ಕಳಿಮನಿ ಇತನು ಬರುವ ಹೋಗುವ ಜನರಿಗೆ ಸಾರ್ವಜನೀಕರಿಗೆ ಅವಾಚ್ಯ ಬೈದಾಡಿ ಹೆದರಿಸುತ್ತಾ ಅಪಾಯಕಾರಿ ರೀತಿಯಲ್ಲಿ ವರ್ತಿಸುತ್ತಾ ಭಯ ಭೀತಿಯನ್ನುಂಟು ಮಾಡುತ್ತಿದ್ದಾಗ ಸಿಕ್ಕಿದ್ದು  ಮುಂಜಾಗೃತ ಕ್ರಮವಾಗಿ ಗುನ್ನಾನಂ 77/2017 ಕಲಂ 110 (ಜಿ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಶಹರದ ಸ್ನೇಹಾ ಕಮುನಿಕೇಶನ್ ಅಂತಾ ಆಫೀಸ ಮಾಡಿ ಆರೋಪಿತರತರಾದ 1]ಮಂಜುನಾಥ ಫಕ್ಕೀರಪ್ಪ ಉಳ್ಳಾಗಡ್ಡಿ ಸಾ..ತಬಕದಹೊನ್ನಳ್ಳಿ 2] ರಾಜು ಚನಬಸಪ್ಪ ಪಟ್ಟಣಶೇಟ್ಟಿ ಸಾ..ತಬಕದಹೊನ್ನಳ್ಳಿ 3]ಶ್ರೀನಿವಾಸ ಲಮಾಣಿ ಸಾ..ಮಾಚಾಪೂರ ತಾಂಡಾ 4]ಶಿವಶಂಕರ ಮಣ್ಣಪ್ಪ ಬನವಣ್ಣವರ ಸಾ..ತಬಕದಹೊನ್ನಳ್ಳಿ ಇವರೆಲ್ಲರೂ ಕೂಡಿಕೊಂಡು ಸಾರ್ವಜನಿಕರಿಗೆ ಹಣವನ್ನು ದ್ವಿಗುಣ ಮಾಡಿಕೊಡುತ್ತೆವೆ ಅಂತಾ ಹೇಳಿ ಜನರಿಗೆ ನಂಬಿಸಿ ಅವರಿಂದ ಲಕ್ಷಗಟ್ಟಲೆ ಹಣವನ್ನು ಇಸಿದುಕೊಂಡು ಅವರಿಗೆ ರಾಷ್ಟ್ರಿಕೃತ ಬ್ಯಾಂಕುಗಳ ಚೆಕ್ ಗಳನ್ನು ನೀಡಿ ನಂತರ ಅವರಿಗೆ  ಸ್ವಲ್ಪ ಭಾಗಶಃ ಹಣವನ್ನು ನೀಡುತ್ತಾ ಬಂದು, ಬಹಳಷ್ಟು ಹಣ ಸಂಗ್ರಹವಾದ ನಂತರ ಜನರಿಗೆ ತಾನು ಮಾತು ಕೊಟ್ಟಂತೆ ಹಣ ನೀಡದೆ ಸಾರ್ವಜನಿಕರು ಕೊಟ್ಟ ಹಣವನ್ನು ದುರುಪಯೊಪಡಿಸಿಕೊಂಡು ನಂಬಿಕೆ ದ್ರೊಹ ಮಾಡಿ ಪಿರ್ಯಾದಿಯು ಇಟ್ಟ ಸುಮಾರು 825000/- ರೂ ಹಣವನ್ನು ಮೋಸ ಮಾಡಿದ್ದು, ಇದಲ್ಲದೆ ಇನ್ನು ಅನೇಕ  ಜನರಿಂದ  ಹಣವನ್ನು ಇಸಿದುಕೊಂಡು ಮೋಸ ಮಾಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 220/2017  ಕಲಂ IPC 1860 (U/s-120B,406,408,420); KARNATAKA PROTECTION OF INTEREST DEPOSITORS EXORBITANT ACT 2004 (U/s-9) ನೇದ್ದರಲ್ಲಿ  ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.