ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, June 14, 2017

CRIME INCIDENTS 14-06-2017

ದಿನಾಂಕ 14-06-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿ: ಮಾನ್ಯ ಸಿಜೆ ಮತ್ತು ಜೆಎಮ್ ಎಫ್ ಸಿ ಕುಂದಗೋಳ ರವರ ವ್ಯಾಪ್ತಿಗೆ ಒಳಪಡುವ ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿ ಬೂ ತರ್ಲಘಟ್ಟ ಗ್ರಾಮದಲ್ಲಿ ದಿನಾಂಕ 06-06-2017 ರಂದು 8-00 ಗಂಟೆ ಸುಮಾರಿಗೆ ಆಪಾದಿತ ಸುರೇಶ ಇಡಿಗೇರ  ಇತನು ಫಿರ್ಯಾದಿ ಶ್ರೀರಾಮಲು ಇಡಿಗೇರ ಇವನೊಂದಿಗೆ ಚಹದ ಅಂಗಡಿಯ ಸಂಬಂಧ ತಂಟೆ ತಕರಾರು ಮಾಡುತ್ತಾ ಫಿರ್ಯಾದಿಗೆ ಹಾಗೂ ಫಿರ್ಯಾದಿಯ ಹೆಂಡತಿಗೆ ಕೈಯಿಂದ ಹೊಡಿಬಡಿ ಮಾಡುತ್ತಾ ಅವಾಚ್ಯವಾಗಿ ಬೈದಾಡುತ್ತಾ ಫಿರ್ಯಾದಿಗೆ ಬಡಿಗೆಯಿಂದ ಮೈಕೈಗೆ ಹೊಡಿಬಡಿ ಮಾಡಿ ಜೀವಧ ಧಮಕಿ ಹಾಕಿದ್ದು ಇರುತ್ತದೆ. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 45/2017 ಕಲಂ IPC 1860 (U/s-323,324,341,504,506) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ-13-06-2017 ರಂದು ರಾತ್ರಿ 11-00 ಗಂಟೆಯ ಸುಮಾರಿಗೆ ತಂಬೂರ ಗ್ರಾಮದ ಆರೋಪಿ ಬಸಪ್ಪ ದೇಶನೂರ  ಇತನ ಮನೆಯಲ್ಲಿ ಪಿರ್ಯಾಧಿಯ ಮಗನಾದ ಪ್ರಭುದಾಸ ತಂದೆ ಜಾರ್ಜ ರಾಮದುರ್ಗ 19 ವರ್ಷ ಸಾ..ತಂಬೂರ ಇವನು ಆರೋಪಿತನ ಕಿರಾಣಿ ಅಂಗಡಿಯ ಮುಂದೆ ಗುಟಕಾ ಹಾಕಿಕೊಳ್ಳಲು ಹೋದ ಕಾಲಕ್ಕೆ ಆರೋಪಿತನಾದ ಬಸಪ್ಪ ಅಪ್ಪಯ್ಯಾ ದೇಶನೂರ ಸಾ..ತಂಬೂರ ಇವನು ತನ್ನ ಹೆಂಡತಿಯಾಧ ಮಂಜುಳಾ ಇವಳ ಜೊತೆಗೆ ಪ್ರಭುದಾಸ ಇವನು ಅಕ್ರಮ ಸಂಭಂಧ ಇಟ್ಟುಕೊಂಡಿರುವನು ಅಂತಾ  ಸುಳ್ಳು ಸಂಶಯ ಮಾಡಿ ಪ್ರಭುದಾಸ ಇವನಿಗೆ ತನ್ನ ಮನೆಯೊಳಗೆ ಎಳೆದುಕೊಂಡು ಹೋಗಿ ಕೊಲೆ ಮಾಡುವ ಉದ್ದೇಶದಿಂದ ಕೊಯ್ತಾದಿಂದ ತಲೆಗೆ, ಎಡಗೈಗೆ ಹೊಡೆದು ಭಾರಿ ರಕ್ತಗಾಯಪಡಿಸಿದ ಅಪರಾಧ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 221/2017 ಕಲಂ 307 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ: 13-06-2017 ರಂದು 2125 ಗಂಟೆ ಸುಮಾರಿಗೆ ಹುಬ್ಬಳ್ಳಿ ಕಾರವಾರ ರಸ್ತೆ ಮೇಲೆ ಗಳಗಿನಕಟ್ಟಿ ಕ್ರಾಸ್ ಹತ್ತಿರ ಆರೋಪಿ ಹಸನ ಕಾಲವಾಡ ಇತನು ತಾನು ನಡೆಸುತ್ತಿದ್ದ ಕ್ಯಾಂಟರ್ ಲಾರಿ ನಂ. ಕೆಎ-47 / 2327 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ಕಾರವಾರ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷ್ಯತನದಿಂದ ನಡೆಸಿಕೊಂಡು ರಾಂಗ್ ಸೈಡ್ ನಡೆಸಿಕೊಂಡು ಬಂದು ಕಾರವಾರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಫಿರ್ಯಾದಿ ಕಾರ ನಂ. ಕೆಎ-22 ಎಂ.ಎ-1140 ನೇದ್ದಕ್ಕೆ ಡಿಕ್ಕಿ ಮಾಡಿ ಕಾರನ್ನು ಜಕಂಗೊಳಿಸಿದ್ದಲ್ಲದೇ ತನ್ನ ಕ್ಯಾಂಟರನ್ನು ಸಹ  ಜಕಂಗೊಳ್ಳುವಂತೆ  ಮಾಡಿದ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ.222/2017 ಕಲಂ 279 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ-19-03-2016 ರಂದು 1500  ಗಂಟೆಗೆ ಕಲಘಟಗಿ ಶಹರದ ಆರೋಪಿ ವಿಶ್ವನಾಥ ರಾಯನಗೌಡ ಪಾಟೀಲ್  ಸಾ:ಕಲಘಟಗಿ ಇವನು ತನ್ನ ಹೆಸರಿನಿಂದ ಪಾಟೀಲ್ ಡೆವಲಪರ್ಸ ಅಂತಾ ಆಫೀಸ ತೆರೆದು ಸಾರ್ವಜನಿಕರಿಗೆ ನೀವು ಇಟ್ಟ ಠೇವಣಿ ಹಣವನ್ನು ದ್ವಿಗುಣ ಮಾಡಿಕೊಡುತ್ತೆನೆ ಅಂತಾ ಹೇಳಿ ನಂಬಿಸಿ ಫಿರ್ಯಾದಿಯಿಂದ ಹಾಗೂ ಇತರೆ ಸಾರವಜನಿಕರಿಂದ ಹಣವನ್ನು ಇಸಿದುಕೊಂಡು ಅವರಿಗೆ ರಾಷ್ಟ್ರಿಕೃತ ಬ್ಯಾಂಕುಗಳ  ಮತ್ತು ಕೋ-ಆಪರೇಟಿವ್ ಬ್ಯಾಂಕ್ ಗಳ ಚೆಕ್ ಗಳನ್ನು ನೀಡಿ  ಹಣವನ್ನು ಮರಳಿ ನೀಡದೇ ಹೆಚ್ಚಿನ ಹಣವನ್ನು ಸಂಗ್ರಹ ಮಾಡಿಕೊಂಡು  ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಂಡು ಸುಮಾರು 27,00000/- ರೂ ಹಣವನ್ನು ಕೊಡದೇ ಮೋಸ ಮಾಡಿ ಪರಾರಿಯಾದ  ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 223/2017 ಕಲಂ KARNATAKA PROTECTION OF INTEREST DEPOSITORS EXORBITANT ACT 2004 (U/s-9); IPC 1860 (U/s-406,408,420) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


5. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿ:ಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 44/2017 ನೇದ್ದು ಪ್ರಕರಣ ದಾಖಲಾಗಿದ್ದು ಇರುತ್ತದೆ.