ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, June 16, 2017

CRIME INCIDENTS 16-06-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 16/06/2017 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ನವಲಗುಂದ ಗ್ರಾಮದ ಮಹಾತೇಶ ತಮ್ಮಗೌಡ್ರ ಇವರು  ಕೆಲಸ ಮಾಡುವ KSWAN ಕಂಪನಿಯ ವತಿಯಿಂದ ತಹಶೀಲ್ದಾರ ಕಛೇರಿಯ ಆವರಣದಲ್ಲಿ ಹಾಕಿದ ಜನರೇಟರಗೆ ಜೋಡಿಸಿದ ಎಕ್ಸೈಡ ಕಂಪನಿಯ ಬ್ಯಾಟರಿ ಅ.ಕಿ 3500 ಕಿಮ್ಮತ್ತಿನದನ್ನು ಯಾರೋ ಕಳ್ಳರು ಜನರೇಟರ ಬ್ಯಾಟರಿ ಕಳ್ಳವು ಮಾಡಿಕೊಂಡು ಹೋಗಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 78/2017 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಯರಗುಪ್ಪಿ ಗ್ರಾಮದ   ಮೃತನಾದ ಹನಮಂತಪ್ಪ ನಿಂಗಪ್ಪ ಕರಿಗಾರ. ವಯಾ: 40 ವರ್ಷ, ಸಾ: ಯರಗುಪ್ಪಿ, ತಾ: ಕುಂದಗೋಳ ಈತನು ತನ್ನ ತಂದೆಯ ಹೆಸರಿನಲ್ಲಿರುವ ಹೊಲದ ಮೇಲೆ ಸೊಸೈಟಿಯಲ್ಲಿ ಮಾಡಿದ ಬೆಳೆಸಾಲ ಮತ್ತು ಕೈಗಡ ಹಾಗೂ ಮಹಿಳಾ ಸಂಘಗಳಲ್ಲಿ ಮಾಡಿದ ಸಾಲವನ್ನು ಹೇಗೆ ತೀರಿಸುವುದು ಅಂತಾ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ತನ್ನ ಮನೆಯಲ್ಲಿ ಯಾವುದೋ ವಿಷವನ್ನು ಸೇವನೆ ಮಾಡಿ ಮೃತಪಟ್ಟಿದ್ದು ಇರುತ್ತದೆ ಅಂತಾ ಮೃತನ ಹೆಂಡತಿ ಮಂಜುಳಾ  ಹನುಮಂತಪ್ಪಾ ಫಿಯಾಱಧಿ ನೀಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿ ನಂ 18/2017 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.