ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, June 17, 2017

CRIME INCIDENTS 17-06-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 17/06/2017 ರಂದು ವರದಿಯಾದ ಪ್ರಕರಣಗಳು

1.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಮಾದನಬಾವಿ ಗ್ರಾಮದ ಆರೋಪಿತನಾದ ಚನ್ನಬಸಪ್ಪ ಉಳವಪ್ಪ ಕೆರಳ್ಳಿ ಸಾಃ ಮಾದನಬಾವಿ ಇವನು ಬಸ್ ನಿಲ್ದಾಣ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಕುಳಿತು ಅಂಕಿ ಸಂಖ್ಯೆಗಳ ಆದಾರದ ಮೇಲೆ 1 ರೂಪಾಯಿಗೆ 80 ರೂಪಾಯಿಗಳನು ಕೂಡುವದಾಗಿ ಹೇಳುತ್ತಾ ಸಾರ್ವಜನಿಕರಿಂದಾ ಹಣ ಪಡೆದುಕೊಂಡು ಓ,ಸಿ ಚೀಟಿಯನು ಬರೆದುಕೂಡುತ್ತಾ ಓ,ಸಿ,ಎಂಬ ಜೂಜಾಟದಲ್ಲಿ ತೂಡಗಿದ್ದಾಗ ಸಿಕ್ಕಿದ್ದು ಅವನಿಂದ ರೂ 380-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 85/2017 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತ ಈರಯ್ಯ ತಂದೆ ಶಿವಪುತ್ರಯ್ಯ ತಿಗಡಿಮಠ ವಯಾ 50 ವರ್ಷ ಜಾತಿ ಹಿಂದು ಜಂಗಮ ಉದ್ಯೋಗ ಕೊಲಿ ಕೆಲಸ ಸಾ:ಗ್ವಾಡಗೇರಿ ತಾ:ಗೋಕಾಕ ಹಾಲಿವಸ್ತಿ ಕಲ್ಯಾಣ ನಗರ ಧಾರವಾಡ ಇತನು ಹಮೇಶಾ ಸರಾಯಿಯನ್ನು ಕುಡಿಯುವ ಚಟವನ್ನು ಹೊಂದಿದ್ದು ಅಲ್ಲದೆ ಸರಾಯಿಯನ್ನು ಕುಡಿಯಲು ಅಂತಾ ಕೈಗಡ ಸಾಲವನ್ನು ಮಾಡಿದ್ದು ಇದನ್ನೆ ಮಾನಸಿಕ ಮಾಡಿಕೊಂಡು ಜೀವನದಲ್ಲಿ ಜೀಗುಪ್ಸೆಗೊಂಡು ಧಾರವಾಡ ಹಳ್ಳಿಯಾಳ ರೋಡ ಹಳ್ಳಿಯಾಳ ಬ್ರಿಡ್ಜ ಹತ್ತಿರ ತನ್ನಷ್ಠಕ್ಕೆ ತಾನೆ ಯಾವೂದು ವಿಷಕಾರಕ ಎಣ್ಣಿಯನ್ನು ಸೇವಿಸಿ ಉಪಚಾರ ಕುರಿತು ಕಿಮ್ಸ ಆಸ್ಪತ್ರೆಗೆ ಧಾಕಲ ಮಾಡಿದಾಗ ಉಪಚಾರವು ಪಲೀಸದೆ ಮೃತ ಪಟ್ಟಿದ್ದು ಇರುತ್ತದೆ,  ಸಾವಿನಲ್ಲಿ ಯಾವುದೆ ಸಂಶಯ ವಗೈರಿ ಇರುವದಿಲ್ಲಾ ಅಂತಾ ಮೃತನ ಹೆಂಡತಿಯು  ರತ್ನವ್ವ ಫಿಯಾಱಧಿ ನೀಡಿದ್ದು  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 31/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.