ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, June 20, 2017

CRIME INCIDENTS 20-06-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 20/06/2017 ರಂದು ವರದಿಯಾದ ಪ್ರಕರಣಗಳು

 1.ಅಳ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯ: ಚಂದ್ರಗಿರಿ ಗ್ರಾಮದ ಕರೆಮ್ಮ ದೇವಸ್ಥಾನದಲ್ಲಿ ಗ್ರಾಮ ಸಭೆಯನ್ನು ಕರೆಯಲಾಗಿದ್ದು ಸಾರ್ವಜನಿಕರು ಮತ್ತು ಅದ್ಯಕ್ಷರು ಹಾಗೂ ಸರ್ವ ಸದಸ್ಯರು ಎಲ್ಲರೂ ಕೂಡಿದ್ದರು.  ಗ್ರಾಮ ಸಭೆ ಪ್ರಾರಂಭಕ್ಕಿಂತ 10 ನಿಮಿಷ ಮೊದಲು ಗ್ರಾಮ ಪಂಚಾಯತ ಸದಸ್ಯರಾದ ಮೇಲೆ  ಆರೋಪಿತನಾದ 1.ಪರಪ್ಪ ನಾಯಕ ಇತನು  ನನ್ನನ್ನು ಮನೆ ಉತಾರ ಕೊಡು ಅಂತಾ ಕೇಳಿದಾಗ ಪಿ.ಡಿ.ಓ., ರವರು ರಜೆ ಇದ್ದಾರೆ ಅಂತಾ ನಾನು ತಿಳಿಸಿದಾಗ ಸದರಿ ಅವಾಚ್ಯ ಶಬ್ದಗಳಿಂದ ಬೈದಾಡಿ  ಒಂದು ವಾರ ಆಯಿತು ಏಕೆ ಸಹಿ ಮಾಡಿಸಿಲ್ಲಾ ಅಂತಾ ನನ್ನ ಕಾಲು ಹಿಡಿದು ಎಳೆದು ನೆಲಕ್ಕೆ ಕೆಡವಿ ನನ್ನ ಕಿರು ಬೆರಳನ್ನು ಕಚ್ಚಿ ಗಂಬೀರ ಗಾಯಗೊಳಿಸಿದ್ದು ಅಲ್ಲದೇ ನನ್ನ ಕುತ್ತಿಗೆಯನ್ನು ಜೋರಾಗಿ ಹಿಸುಕಿ ಕೊಲೆ ಮಾಡಲು ಪ್ರಯತ್ನ ಮಾಡುತ್ತಿದ್ದಾಗ ಅಲ್ಲಿಯೇ ಇದ್ದಂತಹ ನಮ್ಮ ಸಿಬ್ಬಂದಿಗಳಾದ ವಿಜಯ ಹಾಗು ಭೀಮಸಿ ವಾಜಂತ್ರಿ ಹಾಗೂ ಸದಸ್ಯರಾದ ಶ್ರೀ ಬಿ. ಐ. ದೊಡಮನಿ, ಇವರು ಆತನ ಕೈಯಿಂದ ನನ್ನನ್ನು ಬಿಡಿಸಿ ಆತನನ್ನು ಹೊರಗೆ ಎಳೆದುಕೊಂಡು ಹೋಗಿ ಸಮಾಧಾನಪಡಿಸಿದ್ದು  ಈ ಕುರಿತು ಅಳ್ನಾವರ ಪೊಲೀಸ ಠಾಣೆಯಲ್ಲಿ ಗುನ್ನಾನಂ 68/2017 ಕಲಂ 323.332.504.506 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 84/2017 ಕಲಂ 107 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

3.  ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದುಮ್ಮವಾಡ ಗ್ರಾಮದ ಮೃತ ಕರೆಪ್ಪ ತಂದೆ ಯಲ್ಲಪ್ಪ ಮಾರತಾಂಡಪನವರ ವಯಾ 50 ವರ್ಷ ಸಾ: ದುಮ್ಮವಾಡ ಈತನು ಕುಡಿಯುವ ಚಟದವನಿದ್ದು ತನ್ನ ಹೆಂಡತಿ ಮತ್ತು ಮನೆಯ ಜನರು ಕುಡಿಯಬೇಡ ಅಂತ ಎಷ್ಟೇ ಬುದ್ದಿ ಹೇಳಿದರೂ ಕೇಳದೇ ಇದ್ದವನು ದಿನಾಂಕ: 19/06/2017 ರಂದು 2.40 ಗಂಟೆ ಸುಮಾರಿಗೆ ದುಮ್ಮವಾಡ ಗ್ರಾಮದ ನೀರಲಕಟ್ಟಿಯವರ ಮನೆಯ ಮುಂದಿನ ರಸ್ತೆಯ ಪಕ್ಕ ಗಟಾರದಲ್ಲಿ ಕುಡಿದ ನಿಶೆಯಲ್ಲಿ ಜೋಲಿಹೊಡೆಯುತ್ತ ಬಂದು ಆಕಸ್ಮಾತಾಗಿ ಬಿದ್ದು ತಲೆಗೆ ಒಳಪೆಟ್ಟು ಹಚ್ಚಿಕೊಂಡು ತ್ರಾಸ್ ಮಾಡಿಕೊಳ್ಳುವಾಗ ಉಪಚಾರಕ್ಕೆ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ತಂದು ದಾಖಲು ಮಾಡಿದವನು ಉಪಚಾರದಿಂದ ಗುಣಹೊಂದದೇ ದಿನಾಂಕ: 20/06/2017  ರಂದು ಮುಂಜಾನೆ ಮರಣದಲ್ಲಿ ಬೇರೆ ಯಾವ ಮತ್ತು ಯಾರ ಮೇಲೆಯೂ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಮೃತನ ಹೆಂಡತಿ  ಸರಸ್ವತಿ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 36/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ತಾವರಗೇರಿ ಗ್ರಾಮದ  ಬಸವರಾಜ ಶಿವಪ್ಪ ಜಿನ್ನೂರ ಇವರ ಹೊಲದಲ್ಲಿರುವ ಮನೆಯ ಸಮೀಪ ಫಿರ್ಯಾದಿಯು ಯಲ್ಲವ್ವ ಜಿನ್ನೂರ ಇವರ ಜಮೀನು ಲಾವಣಿ ತರೀಖ ಸಿಟ್ಟಿನಿಂದ ಇದರಲ್ಲಿಯ ಆರೋಪಿತರಾದ 1] ಚನ್ನಪ್ಪ ಚನ್ನಬಸಪ್ಪ ಜಿನ್ನೂರ 2] ಬಸವಂತಪ್ಪ ಚನ್ನಪ್ಪ ಜಿನ್ನೂರ ಇವರು ಕೈಯಲ್ಲಿ ಕೊಡ್ಲಿ, ಕುಡುಗೋಲು ಹಿಡಿದುಕೊಂಡು ಬಂದು ಹಲ್ಕಟ್ ಬೈದಾಡುತ್ತಾ ಕೊಡ್ಲಿಯಿಂದ ಪಿರ್ಯಾದಿ ತಲೆಗೆ, ಎರಡು ಕಾಲಿಗೆ ಹೊಡೆದಿದ್ದಲ್ಲದೇ ಬಿಡಿಸಲು ಬಂದ ತಮ್ಮನಾದ  ,ಮಂಜುನಾಥ ಶಿವಪ್ಪ ಜಿನ್ನೂರ ಇವನಿಗೂ ಕೊಡ್ಲಿಯಿಂದ ಎಡಗಾಲು ಮೊಣಕಾಲ ಕೆಳಗೆ ಹೊಡೆದು ಗಾಯಪಡಿಸಿದ್ದಲ್ಲದೇ ಕುಡುಗೋಲು ತೋರಿಸಿ ನಿಮ್ಮನ್ನು ನೋಡುತ್ತೇನೆ ಅಂತಾ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಕಲಘಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 228/2017 ಕಲಂ 324.326.504.506.34. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಕೊಟಗೊಂಡಹುಣಸಿ ಹದ್ದಿಯ ಕುಂದಗೋಳ ಕ್ರಾಸ್ ಹತ್ತಿರ ಆರೋಪಿತನಾದ ಶಂಕ್ರಯ್ಯಾ ಗಂಗಯ್ಯಾ ಹಿರೇಮಠ ಸಾ!! ಅಗಡಿ ಇತನು ತನ್ನ ಪಾಯ್ದೆಗೋಸ್ಕರ ಒಂದು ರೂಪಾಯಿಗೆ 80 ರೂಪಾಯಿಗಳನ್ನು ಸಾರ್ವಜನಿಕರಿಗೆ ಕೊಡುವುದಾಗಿ ಹೇಳಿ ಅಂಕಿ ಸಂಖ್ಯೆಗಳಾಧಾರದ ಮೇಲಿಂದ ಓ.ಸಿ ಎಂಬ ಜೂಜಾಟವನ್ನು ಆಡಿಸುತ್ತಿದ್ದಾಗ ಸದರಿಯವನ ತಾಬಾದಲ್ಲಿಂದ ಒಟ್ಟು ರೋಖ ರಕ್ಕಂ 625 ರೂಪಾಯಿಗಳು, ಒಂದು ಬಾಲ್ ಪೆನ್, ಒಂದು ಓ.ಸಿ ಅಂಕಿ ಸಂಖ್ಯೆ ಬರೆದ ಬಿಳಿ ಹಾಳೆ ಸಹಿತ ಸಿಕ್ಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 141/2017 ಕಲಂ 78 (3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಉಪ್ಪಿನಬೆಟಗೇರಿ ಗ್ರಾಮದ ಬಸ್ಸಸ್ಟ್ಯಾಂಡ ಹತ್ತಿರ ರಸ್ತೇಯ  ಆರೋಪಿತರಾದ 1.ಸಲೀಂ ದೊಡ್ಡವಾಡ 2.ಯುವರಾಜ ಕಲಾಲ ಇವರಿಬ್ಬರೂ ತಮ್ಮ ತಮ್ಮ ಫಾಯ್ಸೆಗೋಸ್ಕರ ಕಲ್ಯಾಣಿ ಮಾರ್ಕೆಟದ ಅಂಕಿ ಸಂಖ್ಯೆಗಳ ಆಧಾರದ ಮೇಲೆ 1 ರೂಪಾಯಿಗೆ 80 ರೂಪಾಯಿಗಳನ್ನು ಕೊಡುವದಾಗಿ ಜನರಿಗೆ ಹೇಳುತ್ತಾ ಓ.ಸಿ. ಅಂಬುವ ಜೂಜಾಟವನ್ನು ಆಡಿಸುತ್ತಾ ಅಂಕಿ ಸಂಖ್ಯೆಗಳನ್ನು ಬರೆದುಕೊಡುತ್ತಾ ಬರೆದುಕೊಳ್ಳುತ್ತಾ ಹಣವನ್ನು ತೆಗೆದುಕೊಳ್ಳುತ್ತಿದ್ದಾಗ ಒಬ್ಬನು ಓಡಿ ಹೋಗಿ ಒಬ್ಬನು ಸಿಕ್ಕಿದ್ದು ಅವನಿಂದ ರೂ 410-00 ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗು ನ್ನಾನಂ 87/2017 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.