ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, June 23, 2017

CRIME INCIDENTS 23-06-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 23/06/2017 ರಂದು ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಹುಲಗಿನಕಟ್ಟಿ ಗ್ರಾಮದ  ಶ್ರೀದೇವಿ ಇವರ ವಾಸಿಸುವ ಮನೆಯ ಹಿತ್ತಿಲದಲ್ಲಿ ಈ ಹಿಂದೆ ಆರೋಪಿತರಾದ  1.ಅನೀಲ್ ಪಾಟೀಲ ಹಾಗೂ ಇನ್ನೂ 03 ಜನರು ಕೊಡಿಕೊಂಡು 14 ಎಕರೆ ಜಮೀನದಲ್ಲಿ 12 ಎಕರೆ ಜಮೀನನ್ನು ಖರೀದಿ ಹಿಡಿದು ಉಳಿದ 2 ಎಕರೆ ಜಮೀನನ್ನು ಪಿರ್ಯಾಧಿಯ ಮನೆಯವರಿಗೆ ಉಳುಮೆ ಮಾಡಲು ಬಿಟ್ಟುಕೊಡದೆ & ಯಾರ ಹಿರಿಯರ ಮಾತಿಗೂ ಬೆಲೆ ಕೊಡದೆ ತಾವೆ ಉಳುಮೆ ಮಾಡಿಕೊಂಡು ಬಂದಿದ್ದರಿಂದ ಪಿರ್ಯಾದಿಯ ಗಂಡನಾದ ಅಜಿತಗೌಡ ತಂದೆ ಅನಂತಗೌಡ ಪಾಟೀಲ 42 ವರ್ಷ ಸಾ..ಹುಲಗಿನಕಟ್ಟಿ ಇವನು ಸದರ 2 ಎಕರೆ ಜಮೀನನ್ನು ಆರೋಪಿತರು ಬಿಟ್ಟುಕೊಡದೆ ಇದ್ದುದಕ್ಕೆ ಮಾನಸಿಕ ಮಾಡಿಕೊಂಡು ಯಾವುದೋ ಕ್ರಿಮಿನಾಶಕ ಔಷದ ಸೇವನೆ ಮಾಡಿ ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ದಾಖಲಾದ ಕಾಲಕ್ಕೆ ಉಪಚಾರ ಹೊಂದುವ ಕಾಲಕ್ಕೆ   ದಿ..23-06-2017 ರಂದು ಬೆಳಗಿನ 05-55 ಗಂಟೆಯ ಸುಮಾರಿಗೆ ಮರಣೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ  ಪೊಲೀಸ್ ಠಾಣೆಯಲ್ಲಿ ಗುನ್ನಾನಂ 231/2017 ಕಲಂ 306 34.  ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.
2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ :ನಾಗನೂರ ಗ್ರಾಮದ  ಮೃತ ದೇವಿಕಾ ತಂದೆ ರಮೇಶ ಮೆಣಸಗಿ ವಯಾ 1 ವರ್ಷ 4 ತಿಂಗಳು ಸಾ|| ನಾಗನೂರ ಇವಳು ಆಡುತ್ತಾ ತಮ್ಮ ಮನೆಯ ಮುಂದಿನ ನೀರಿನ ಕಲ್ಲಿನ ಡೋಣಿಯಲ್ಲಿ ಬಿದ್ದು ನೀರು ಕಡಿದು ತ್ರಾಸ ಮಾಡಿಕೊಳ್ಳುವಾಗ ಅವಳನ್ನು ಅವರ ತಾಯಿ ನೋಡಿ ನೀರಿನಿಂದ ಹೊರಗೆ ತೆಗೆದು ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಹುಬ್ಬಳ್ಳಿಗೆ ಖಾಸಗಿ ವಾಹನದಲ್ಲಿ ಹಾಕಿಕೊಂಡು ಹೋಗಿ ದಾಖಲ್ ಮಾಡಿದವಳು ಉಪಚಾರದಿಂದ ಗುಣ ಹೊಂದದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣಿಯಲ್ಲಿ ಗುನ್ನಾನಂ ಯುಡಿನಂ 37/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3. ಧಾರವಾಡ ಗ್ರಾಮೀ ಪೊಲೀಸ್ ಠಾಣಾ ವ್ಯಾಪ್ತಿಯ: ಪ್ರಭೂನಗರ ಹೊನ್ನಾಪೂರ ಗ್ರಾಮದಲ್ಲಿ ಆರೋಪಿತನಾದ ಪ್ರಕಾಶ ಕಲಾಜಿ ಇವರು ಗ್ರಾಮ ಪಂಚಾಯತಿ ಹಾಗೂ ಇತರೇ ಸರಕಾರಿ ಇಲಾಖೆಯಿಂದ  ಯಾವುದೇ ಪುರ್ವಾನುಮತಿ ಪಡೆಯದೇ ಮತ್ತು ಯಾವುದೇ ಮುನ್ನಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ನಿಷ್ಕಾಳಜೀತನದಿಂದ ತನ್ನ ಮನೆಯ ಹಿಂದೆ ಸುಮಾರು 08 ಪೂಟ ಅಗಲದ ಮಣ್ಣಿನ ಹುಂಡಿಯನ್ನು ತೆಗೆದು ಅದರಲ್ಲಿ ನೀರು ನಿಲ್ಲಿಸಿ ಅದೇ ನೀರು ಉಪಯೋಗಿಸಿ ತನ್ನ ಮನೆಯ ಕಾಮಗಾರಿಯನ್ನು ಮಾಡುತ್ತಿದ್ದಾಗ ದಿನಾಂಕ:27-04-2017 ರಂದು ಸಾಯಂಕಾಲ 0500 ಗಂಟೆ ಸುಮಾರಿಗೆ ಪಿರ್ಯಾದಿದಾರನ ಮಗಳಾದ ಸೌಜನ್ಯ ತಂದೆ ಪ್ರಶಾಂತ ಬಡಿಗೇರ ವಯಾ-3 ½ ವರ್ಷ ಹುಂಡಿಯಲ್ಲಿ ಬಿದ್ದು ಮೃತಪಡುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 126/2017 ಕಲಂ 304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.
4. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಮೊರಬ ಗ್ರಾಮದ  ಆರೋಪಿತನಾದ ಮಂಜುನಾಥ ಸಗರದ ಸಾ|| ಮೊರಬ ಪಶು ಆಸ್ಪತ್ರೆ ಮೊರಬ ಕ್ಕೆ ಹೋಗಿ ಅಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ರಾಜಪ್ಪ ಮೂಲಿಮನಿ ಇವರ ಜೊತೆಗೆ ತಂಟೆ ತೆಗೆದು ಕೈಯಿಂದ ಅಲ್ಲೆಗೆ ಇಳಿದ ಸಂಧರ್ಭದಲ್ಲಿ ಕರ್ತವ್ಯದಲ್ಲಿದ್ದ  ಶಶಿಕಾಂತ ಓಣಿಕಾರಿ ಅವರ ಮೇಲೆ ಸಹ ಕೈಯಿಂದ ಅಲ್ಲೆ ಮಾಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 84/2017 ಕಲಂ 323.353.504 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
5. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಅಣ್ಣಿಗೇರಿ  ಗ್ರಾಮದ ಬುಡೇಸಾಬ ತನ್ನಂದ ಇವರ HONDA ACTIVE MOTOR CYCLE NO KA-25 X 4915 ಚೆಸ್ಸಿ ನಂ - ME4JF088205287 ಇಂಜಿನ್ ನಂ- JF08E838411  ಅಃಕಿ 20,000 ಯಾರೋ ಕಳ್ಳರೂ   ಕಳವು ಮಾಡಿಕೊಂಡ ಹೋಗಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 89/2017 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.