ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, June 24, 2017

CRIME INCIDENTS 24-06-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 24/06/2017 ರಂದು ವರದಿಯಾದ ಪ್ರಕರಣಗಳು

1.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ : ಅಮ್ಮಿನಬಾವಿ ಗ್ರಾಮದ ಹನುಂತಪ್ಪ ನಾಯಕರ ಇವನು ದುರ್ಗಾ ಬಾರದಲ್ಲಿ ಮ್ಯಾನೇಜರ ಅಂತಾ ಕೆಲಸ ಮಾಡಿಕೊಂಡಿರುತ್ತಾನೆ. ಆರೋಪಿತರಾದ 1.ಮುರಗೇಶ ಗಡಾದ 2.ಈಶ್ವರ ದೇವರಮನಿ 3.ಫಕ್ಕಿರ ಗದಗ ಮತ್ತು 4.ಹನುಮಂತ ಬಾಣಗಿ  ಇವರೆಲ್ಲರೂ  ಇವನೂಂದಿಗೆ  ತಂಟೆ ತಕರಾರು ಮಾಡುತ್ತಾ ಬಂದಿದ್ದು  ಅಮ್ಮಿನಬಾವಿ ಗ್ರಾಮದ ಶ್ರಾವಣಿ ದಾಬಾದಲ್ಲಿ ಊಟ ಮಾಡಲು ಹೋದಾಗ ಅಲ್ಲಿಯೇ ಇದ್ದ ಆರೋಪಿತರೆಲ್ಲರೂ ಅದೇ ಸಿಟ್ಟನ್ನು ಇಟ್ಟುಕೊಂಡು  ತಂಟೆ ತೆಗೆದು ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಮತ್ತು ನಿಮ್ಮ ಬಾರ ಮಾಲಿಕಂದು ವಸೂಲಿ ಬಾಳ ಐತಿ ಅಂತಾ  ಅವಾಚ್ಯವಾಗಿ ಬೈಯ್ದಾಡಿ ಕೈಯಿಂದ ಹೊಡಿ ಬಡಿ ಮಾಡಿ ಜೀವದ ಧಮಕಿ ಹಾಕಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 130/2017 ಕಲಂ 506, 504,323, ಸಹ ಕಲಂ 34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
 
2.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 70/2017 ಕಲಂ 107 ಸಿ ಆರ್  ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

3.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ  ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾನಂ 127/17,128/17 & 129/17 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4.ಗರಗ ಪೊಲೀಸ್ ಠಾಣಾ ವ್ಯಾಪ್ತಿ: ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 90/2017   ಕಲಂ 107 ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.