ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, June 26, 2017

CRIME INCIDENTS 26-06-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 26/06/2017 ರಂದು ವರದಿಯಾದ ಪ್ರಕರಣಗಳು

1. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಸಂಕ್ಲೀಪುರ ಗ್ರಾಮದಲ್ಲಿಯ ಬಸವೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಬೇವಿನ ಮರದ ಕೆಳಗೆ ಆರೋಪಿತರಾದ 1.ಸೋಮಣ್ಣ ಮರಿಬಸಪ್ಪಣ್ಣವರ 2.ಶಿವಣ್ಣಗೌಡ ಕಟ್ಟಿಗೌಡ್ರ 3.ಶಿವಮೂತಿಱ 4.ಶಿವಪ್ಪ ಇವರು ತಮ್ಮ ಫಾಯಿದೆಗೋಸ್ಕರ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ್ ಎಂಬ ಜೂಜಾಟವನ್ನು ಆಡುತ್ತಿದ್ದಾಗಿ ಸಿಕ್ಕಿದ್ದು ಅವರಿಂದ ರೂ 1700-00 ಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಗುಡಗೇರತಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 46/2017 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಪಾಳೆ ಗ್ರಾಮದ ಹತ್ತಿರ ಪೂನಾ ಬೆಂಗಳೂರು ರಸ್ತೆಯ, ಪಕ್ಕದ ಸರ್ವಿಸ್ ರಸ್ತೆಯ ಮೇಲೆ,  ಆರೋಪಿತರಾದ 1] ಶರೀಫ ಮೌಲಾಸಾಬ ಹಳೆಮನಿ ಸಾ. ಹಂಚಿನಾಳ ತಾ. ಕುಂದಗೋಳ ಹಾಲಿ ವಸ್ತಿ ಕೊಟಗೊಂಡುಹುಣಸಿ ಇವನು ಒಂದು ಪ್ಲಾಸ್ಟಿಕ್ ಹಿಡಿಕೆಯ ಕುರ್ಚಿ, ಒಂದು ಕಟರ್ 2] ಮುತ್ತುರಾಜ ವೆಂಕಟೇಶ ಟಗರಗುಂಟಿ ಸಾ. ಬಂಕಾಪೂರ ಚೌಕ್, ಇಂದಿರಾ ನಗರ ಹುಬ್ಬಳ್ಳಿ ಇವನು ಒಂದು ಚಾಕೂ, ಸಣ್ಣ ಹರಿತವಾದ ಕಟರ್ ನೊಂದಿಗೆ 3] ಮಂಜು ನಾಗಪ್ಪ ಮಾದರ ಸಾ. ಬಿಡನಾಳ ಹುಬ್ಬಳ್ಳಿ 4] ಮಹಾಂತೇಶ ಸಾ. ಬಿಡನಾಳ ಹುಬ್ಬಳ್ಳಿ 5] ಪ್ರವೀಣ ಸಾ. ಬಿಡನಾಳ ಹುಬ್ಬಳ್ಳಿ ಎಲ್ಲರೂ ಗುಂಪು ಕಟ್ಟಿಕೊಂಡು, ಕಾರ ನಂ. ಕೆಎ-37-ಎಂ-6222 ನೇದ್ದರಲ್ಲಿ ಕಾರದ ಪುಡಿ ಮತ್ತು ಒಂದು ಕೈ ಬೆರಳಿಗೆ ಹಾಕಿಕೊಳ್ಳುವ ಪಂಚ, ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು, ರಸ್ತೆಯ ಮೇಲೆ ಹೋಗುವ ವಾಹನಗಳನ್ನು ಅಡ್ಡಗಟ್ಟಿ, ನಿಲ್ಲಿಸಿ ದರೋಡೆ ಮಾಡುವ ಉದ್ದೇಶದಿಂದ, ಹೊಂಚು ಹಾಕಿ ನಿಂತುಕೊಂಡಾಗ, ಆರೋಪಿ ಶರೀಪ್ ಮೌಲಾಸಾಬ ಹಳೆಮನಿ ಮತ್ತು ಮುತ್ತುರಾಜ ವೆಂಕಟೇಶ ಟಗರಗುಂಟಿ ಇವರನ್ನು ಬೆನ್ನಟ್ಟಿ ಹಿಡಿದಿದ್ದು, ಆರೋಪಿತರಾದ ಮಂಜು ನಾಗಪ್ಪ ಮಾದರ, ಮಹಾಂತೇಶ, ಪ್ರವೀಣ ಇವರು ತಪ್ಪಿಸಿಕೊಂಡು ಓಡಿ ಹೋಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 143/2017 ಕಲಂ 399.402 ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.