ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, June 30, 2017

CRIME INCIDENTS 30-06-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 30/06/2017 ರಂದು ವರದಿಯಾದ ಪ್ರಕರಣಗಳು

1 ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:, ಬ್ಯಾಹಟ್ಟಿ ಗ್ರಾಮದ ಶ್ರೀಮತಿ ಶಾಂತಾ ಹಿರೇಮಠ  ಮನೆಯಲ್ಲಿ ಆರೋಪಿತನಾದ ಚಂದ್ರಶೇಖರ ತಂದೆ ಬಸವರಾಜ ತಿರ್ಲಾಪೂರ @ ಹೇಸಮಿಸಿ ಸಾ: ಬ್ಯಾಹಟ್ಟಿ ತಾ: ಹುಬ್ಬಳ್ಳಿ ಇತನು ಪಿರ್ಯಾದಿ ಗಂಡನಾದ ಬಸಲಿಂಗಯ್ಯಾ ಗಂಗಯ್ಯಾ ಹರಕುಣಿಮಠ ವಯಾ 68 ವರ್ಷ ಸಾ; ಬ್ಯಾಹಟ್ಟಿ ತಾ;ಹುಬ್ಬಳ್ಳಿ ಜಿ:ಧಾರವಾಡ ಇತನಿಗೆ ಸದರಿ ಆರೋಪಿತನು ತಲೆ ಹಾಳಾಗು ಹಂಗ ಮಾಡಿದಿ ಅಂತಾ ಅಂದು ಅದನ್ನೆ ನೇಪ ಮಾಡಿಕೊಂಡು  ಕೊಲೆ ಮಾಡುವ ಉದ್ದೇಶದಿಂದ ಅವನ ಜೊತೆ ತಂಟೆ ತಗೆದು , ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ, ಕುಡಗೋಲದಿಂದ ಕುತ್ತಿಗೆ, ಬುಜಕ್ಕೆ,ಮುಖಕ್ಕೆ ವಗೈರ ಕಡೆಗೆ  ಹೊಡೆದು ಭಾರಿ ಗಾಯಪಡಿಸಿದಲ್ಲದೇ, ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಗುನ್ನಾನಂ 149/2017 ಕಲಂ 307.326.504.506 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 95/2017 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು  ಇರುತ್ತದೆ.

3 ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿ: ಗುಡಗೇರಿ ಗ್ರಾ,ದ  ಮೃತ ರಾಯನಗೌಡ ಪಾಟೀಲ ಇತನು ತನ್ನ ಗಂಡನು ತನ್ನ ಹಿರಿಯ ಮಗನ ಹೆಸರಿನಲ್ಲಿ ಕಾರ್ಪೋರೇಶನ್ ಬ್ಯಾಂಕ್ ಕೂಬಿಹಾಳದಲ್ಲಿ ಸುಮಾರು 3 ಲಕ್ಷ ರೂಗಳು, ಹಾಗೂ ತನ್ನ ಹೆಸರಿನಲ್ಲಿ ತರ್ಲಘಟ್ಟ ಗ್ರಾಮದ ಸೊಸೈಟಿಯಲ್ಲಿ ಸುಮಾರು 50 ಸಾವಿರ ರೂಗಳು, ಕೆ,ವ್ಹಿ,ಜಿ ಬ್ಯಾಂಕ್ ಇಂಗಳಗಿಯಲ್ಲಿ ಸುಮಾರು 01 ಲಕ್ಷ ರೂಗಳ ಸಾಲವನ್ನು ಬೆಳೆಸಾಲ ಅಂತಾ ಪಡೆದುಕೊಂಡಿದ್ದಲ್ಲದೇ ಅಲ್ಲಲ್ಲಿ ಕೈಗಡ ಅಂತಾ ಬಹಳಷ್ಟು ಸಾಲ ಮಾಡಿದ್ದರಿಂದ ಅದನ್ನು ಹೇಗೆ ತೀರಿಸಬೇಕು ಅಂತಾ ಮನಸ್ಸಿಗೆ ಹಚ್ಚಿಕೊಂಡು ತನ್ನಷ್ಟಕ್ಕೆ ತಾನೇ ಇದರಲ್ಲಿ ತಾಃವೇಃವಃ ಸ್ಥಳದಲ್ಲಿ ಉರುಲು ಹಾಕಿಕೊಂಡು ಮೃತ ಪಟ್ಟಿದ್ದಾನೆ ವಿನಃ ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ  ಲಲಿತಾ ನೇಕಾರ  ಫಿಯಾಱಧಿ ನೀಡಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿಯುಡಿನಂ 11/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ

4. ಗರಗ ಪೊಲೀಸ ಠಾಣಾ ವ್ಯಾಪ್ತಿಯ:ಗರಗ ಗ್ರಾಮದ ಮೃತ  ಫಕ್ಕೀರವ್ವ ಕೋಂ.ಶಿದ್ದಪ್ಪ.ಕರಗೂಳಿ ವಯಾ-85 ವರ್ಷ.ಸಾಃಗರಗ ಇವಳು ತನಗೆ ಸರಿಯಾಗಿ ಕಣ್ಣು ಕಾಣಿಸದೇ ಇದ್ದುದ್ದರಿಂದ  ತನ್ನ ಮನೆಯಲ್ಲಿದ್ದ ಪ್ಲಾಸ್ಟೀಕ ಚಂಬದಲ್ಲಿ ಹೊಲಕ್ಕೆ ಬೆಳೆಗೆ ಹೊಡೆಯಲು ಕ್ರಿಮಿನಾಶಕವನ್ನು ಕಲಿಸಿ ಇಟ್ಟ ಪ್ಲಾಸ್ಟೀಕ ಚಂಬನ್ನು ತೆಗೆದುಕೊಂಡು ಅದರಲ್ಲಿ ನೀರು ಕುಡಿದು ಅಸ್ತವ್ಯಸ್ತಳಾಗಿದ್ದಕ್ಕೆ ಉಪಚಾರಕ್ಕೆ ಅಂತಾ ಎಸ.ಡಿ.ಎಮ.ಆಸ್ಪತ್ರೆಗೆ ದಾಖಲು ಮಾಡಿದಾಗ ಅಲ್ಲಿ ಉಪಚಾರ ಹೊಂದುತ್ತಿದ್ದಾಗ ಉಪಚಾರವು ಫಲಿಸದೆ ಈ ದಿವಸ ದಿನಾಂಕಃ30-6-2017 ರಂದು ಮದ್ಯಾಹ್ನ-2-45 ಗಂಟೆ ಸುಮಾರಿಗೆ ಮೃತ ಪಟ್ಟಿದ್ದು  ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 28/2017 ಕಲಂ 174 ಸಿ.ಆರ್ ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

5. ನವಲಗುಂದ  ಪೊಲೀಸ್  ಠಾಣಾ ವ್ಯಾಪ್ತಿಯ: ಬ್ಯಾಹಟ್ಟಿ ತಿಲಾಱಪುರದ ಹತ್ತಿರ ಹೆಬ್ಬಳ್ಳಿ ಕ್ರಾಸ ಹತ್ತಿರ ಕಾರ್ ನಂ ಕೆಎ-25/ಪಿ-8754 ನೇದ್ದನ್ನು ಚಾಲಕನು ಬ್ಯಾಹಟ್ಟಿ ಕಡೆಯಿಂದ ತಿರ್ಲಾಪುರ ಕಡೆಗೆ ಅತಿಜೋರಿನಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಹೆಬ್ಬಳ್ಳಿ ಕ್ರಾಸ್ ಹತ್ತಿರ ತಿರ್ಲಾಪುರ ಕಡೆಯಿಂದ ನವಲಗುಂದ ಕಡೆಗೆ ಪಿರ್ಯಾದಿ ನಡೆಸುತ್ತಿದ್ದ ಟಿವಿಎಸ್ ಲೂನಾ ನಂ ಕೆಎ25/ಇಡಿ-8020 ನೇದ್ದಕ್ಕೆ ಡಿಕ್ಕಿ ಮಾಡಿ ವಿರಪ್ಪ ಬಡಗೇರ  ಇವರಿಗೆ ಹಾಗೂ ಇವರ  ಹೆಂಡತಿ ಭಾರಿ ಸ್ವರೂಪದ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ  ಗುನ್ನಾನಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
 
6. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಅಣ್ಣಿಗೇರಿ ಗ್ರಾಮದ ಆಸ್ಪತ್ರೆ ಹತ್ತಿರ  ಆರೋಪಿತ ಕೆ.ಎಸ್.ಆರ್.ಟಿ.ಸಿ ಬಸ್ ನಂಬರ ಕೆಎ-25/ಎಫ್-2831 ನೇದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಬಸನ್ನು ನವಲಗುಂದ ಕಡೆಯಿಂದ ಅಣ್ಣಿಗೇರಿ ಕಡೆಗೆ ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಆಸ್ಪತ್ರೆಗೆ ತೋರಿಸಿಕೊಳ್ಳಲು ಅಂತಾ ರಸ್ತೆಯ ಪಕ್ಕ ನಡದುಕೊಂಡು ಹೊರಟ ಬಸವಣ್ಣೆಪ್ಪ ತಂದೆ ಬನಪ್ಪ ಧನಿಗೊಂಡ ವಯಾ-65 ವರ್ಷ ಸಾ!! ಅಣ್ಣಿಗೇರಿ ತಾ!! ನವಲಗುಂದ ಇವರಿಗೆ ಡಿಕ್ಕಿ ಮಾಡಿ ಅಪಗಾತ ಪಡಿಸಿ ಸಾಧಾ ವ ಭಾರಿ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 96/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು  ಇರುತ್ತದೆ.