ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, July 31, 2017

CRIME INCIDENTS 31-07-2017

ದಿನಾಂಕ.31-07-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1)ಅಣ್ಣಿಗೇರಿ ಪೊಲೀಸ್ ಠಾಣೆವ್ಯಾಪ್ತಿಯಲ್ಲಿ ದಿನಾಂಕ 30-07-2017 ರಂದು ಸಾಯಂಕಾಲ 18-30 ಘಂಟೆಗೆ ಆರೋಪಿತ ಸೈಯದಲಿ ಮಲೀಕಸಾಬ ದಾರುಬಾಯಿ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನಂಬರ್ KA-25/EV 2731 ನೆದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಮೋಟರ್ ಸೈಕಲನ್ನು ಗದಗ ಹುಬ್ಬಳ್ಳಿ ರಾಷ್ಟ್ರಿ ಹೆದ್ದಾರಿ 63 ರ ನಲವಡಿ ಗ್ರಾಮದ ಸಮೀಪ ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗ ಹಾಗು ಅಲಕ್ಷತನದಿಂದ ಚಲಾಯಿಸಿಕೊಂಡು ತನ್ನ ಎದುರಿಗೆ ಹೊರಟ ವಾಹನವನ್ನು ಓವರ್ಟೇಫ್ ಮಾಡಿಕೊಂರು ರಸ್ತೆಯ ಬಲಸೈಡಿನಲ್ಲಿ ಮೋಟರ್ ಸೈಕಲ್ ಚಲಾಯಿಸಿ ವೇಗವನ್ನು ನಿಯಂತ್ರಣ ಮಾಡದೇ ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ರಸ್ತೆಯ ತನ್ನ ಸೈಡಿನಲ್ಲಿ ಚಲಾಯಿಸಿಕೊಂಡು ಬರುತ್ತಿದ್ದ ಪಿರ್ಯಾದಿ ರಾಜಶೇಖರ ಪೂಜಾರ ಬಾಬತ್ ಇಂಡಿಕಾ ವಿ2 ಕಾರ್ ನಂಬರ್ KA-37/A 7164 ನೇದ್ದಕ್ಕೆ ತನ್ನ ಮೋಟರ್ ಸೈಕಲನ್ನು ಡಿಕ್ಕಿ ಮಾಡಿ ಅಪಘಾತ ಪಡಿಸಿ ತನಗೆ ಹಾಗು ತನ್ನ ಹಿಂಬದಿಯ ಮೋಟರ್ ಸೈಕಲ್ ಸವಾರನಿಗೆ ಸಾದಾ ಹಾಗು ಭಾರೀ ಸ್ವರೂಪದ ಗಾಯ ಪೆಟ್ಟು ಪಡಿಸಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಸಿದ್ದು ಇರುತ್ತದೆ.

2)ಅಣ್ಣಿಗೇರಿ ಪೊಲೀಸ್ ಠಾಣೆವ್ಯಾಪ್ತಿಯಲ್ಲಿ ಆರೋಫಿತನು ಮಲ್ಲೇಶ ಕರಿಯಪ್ಪ ಕೊಳೇಕರ್ ಇವನು ಪಿರ್ಯಾದಿ ಶೋಭಾ ಕೋಳೇಕರ್  ಹೆಂಡತಿಯೊಂದಿಗೆ ಸರಿಯಾಗಿ ಜೀವನ ಮಾಡದೇ ತಂಟೆ ತಕರಾರು ಮಾಡುತ್ತಾ ಬಂದಿದ್ದು ಇರುತ್ತದೆ ದಿನಾಂಕ 29-07-2017 ರಂದು ಸಾಯಂಕಾಲ 19-00 ಘಂಟೆಗೆ ಮಣಕವಾಡ ಗ್ರಾಮದ ಪಿರ್ಯಾದಿ ತವರು ಮನೆಗೆ ಬಂದು ಮನೆಯಲ್ಲಿ ಇದ್ದ ಪಿರ್ಯಾದಿ ತಾಯಿಗೆ ಅವಾಚ್ಯವಾಗಿ ಬೈದಾಡಿ ಕೈಯಿಂದ ಹೊಡಿ ಬಡಿ ಮಾಡಿ ಗಾಯ ಪಡಿಸಿದ್ದು ಅಲ್ಲದೇ ಪಿರ್ಯಾದಿ ತಾಯಿಯನ್ನು ಎಳೆದು ಹೊರಗಡೆ ತಂದು ಜನರ ಮುಂದೆ ಅವಳ ಸೀರೆಯನ್ನು ಹಿಡಿದು ಎಳೆದಾಡಿ ಮಾನಭಂಗ ಪಡಿಸಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಸಿದ್ದು ಇರುತ್ತದೆ.

3)ಗರಗ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿಃ 28-07-2017 ರಂದು ಮದ್ಯಾಹ್ನ್ 01.15  ಗಂಟೆ ಸುಮಾರಿಗೆ  ಅಮೀನಸಾಬ ಬುಡ್ಡೆಸಾಬ ಶೀರೂರ ಸಾಃ ಕೋಟೂರ ಇವನು ತನ್ನ ಮೋಟಾರ್ ಸೈಕಲ್  ನಂಬರಃ KA/26/Q/4358 ನೇದ್ದನ್ನು ಬೇಲೂರ ಕೈಗಾರಿಕಾ ಪ್ರದೇಶದ ಎಲ್.ಎನ್. ಆಯಿಲ್ ಕಂಪನಿ ಕಡೆಯಿಂದ ಕೋಟೂರ ಕಡೆಗೆ ರಸ್ತೆಯ ಮೇಲೆ ಅತೀವೇಗದಿಂದ ವ ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಸದರ್ನ ಪೆರೋ ಕಂಪನಿಯ ಹತ್ತಿರ ತನ್ನಷ್ಟಕ್ಕೆ ತಾನೆ ತನ್ನ ಮೋಟಾರ ಸೈಕಲನ್ನು ಸ್ಕೀಡ್ ಮಾಡಿ ಕೆಡವಿ ಅಪಘಾತ ಪಡಿಸಿಕೊಂಡು ತಾನೇ ತನ್ನ ತಲೆಗೆ ಭಾರಿ ಗಾಯ ಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಸಿದ್ದು ಇರುತ್ತದೆ.

4)ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 31-07-2017 ರಂದು ಬೆಳಗಿನ 05-30 ಗಂಟೆಗೆ ಹುಬ್ಬಳ್ಳಿ ನವಲಗುಂದ ರಸ್ತೆ ಮೇಲೆ ಕುಸುಗಲ್ಲ ಹದ್ದಿಯ ಇಂಗಳಹಳ್ಳಿ ಕ್ರಾಸ್ ಹತ್ತಿರ ಇದರಲ್ಲಿ ನಮೂದ ಮಾಡಿದ ಆರೋಪಿತರಾದ 1) ಯಲ್ಲಪ್ಪ ಉಡಚಪ್ಪ ಇಂಗಳಹಳ್ಳಿ ಸಾ!! ಇಂಗಳಹಳ್ಳಿ 2) ಹನಮಂತಪ್ಪ ನಿಂಗಪ್ಪ ತಿರ್ಲಾಪೂರ ಸಾ!! ಇಂಗಳಹಳ್ಳಿ 3) ಕುಮಾರ ತಿಮ್ಮಣ್ಣ ವಡ್ಡರ ಸಾ!! ಹುಬ್ಬಳ್ಳಿ 4) ಸಾಗರ ಉಡಚಪ್ಪ ಇಂಗಳಹಳ್ಳಿ ಸಾ!! ಹುಬ್ಬಳ್ಳಿ 5) ರವಿ ಅರ್ಜುನ ಅಳ್ನಾವರ ಸಾ!! ಹುಬ್ಬಳ್ಳಿ 6) ಸುನೀಲ ಸುರೇಶ ಧಾರವಾಡ ಸಾ!! ಹುಬ್ಬಳ್ಳಿ ಇವರುಗಳು ಹುಬ್ಬಳ್ಳಿ ಕಡೆಗೆ ಹಾಗೂ ನವಲಗುಂದ ಕಡೆಗೆ ಹೋಗುವ ವಾಹನಗಳನ್ನು ನಿಲ್ಲಿಸಿ ವಾಹನ ಚಾಲಕರುಗಳನ್ನು ಹೊಡೆದು ಹಣವನ್ನು ಕಸಿದುಕೊಂಡು ಡಕಾಯಿತಿ ಮಾಡುವ ಉದ್ದೇಶದಿಂದ ಕೈಯಲ್ಲಿ ಕಬ್ಬಿಣದ ಮಚ್ಚುಗಳನ್ನು ಹಾಗೂ ಚಾಕೂ, ಖಾರದ ಪುಡಿ ಹಿಡಿದುಕೊಂಡು ನಿಂತಾಗ, ಮೋಟರ್ ಸೈಕಲ್ ನಂ. ಕೆಎ-63-ಇ-1211 ಮತ್ತು ಮೋಟರ ಸೈಕಲ್ ನಂ. ಕೆಎ-25-ಇ.ಎನ್-8801 ಚಾಸ್ಸಿ ನಂ. MBLHA10DHA13757  ನೇದ್ದವುಗಳ ಸಮೇತ ಆರೋಪಿ ಸೇಜ್ ನಂ. 1 ರಿಂದ 4ನೇದವರು ಸಿಕ್ಕಿದ್ದು, ಆರೋಪಿ ಸೇಜ್ ನಂ. 5 & 6ನೇದವರು ಓಡಿ ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಸಿದ್ದು ಇರುತ್ತದೆ.

5)ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ-31-07-2017 ರಂದು ರೇಣುಕಾ ಕೋಂ ಮಂಜುನಾಥ ಮುದ್ಲಿಂಗನ್ನವರ ಸಾ..ಸುರಶೇಟ್ಟಿಕೊಪ್ಪ ಇವರು ಠಾಣೆಗೆ ಹಾಜರಾಗಿ ತಮ್ಮ ವರದಿ ನೀಡಿದ್ದರಲ್ಲಿ ದಿನಾಂಕ-18-04-2017 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ತನ್ನ ಗಂಡನಾದ ಮಂಜುನಾಥ ತಂದೆ ಚೆನ್ನವೀರಪ್ಪ ಮುದ್ಲಿಂಗನ್ನವರ 26 ವರ್ಷ ಸಾ..ಸೂರಶೆಟ್ಟಿಕೊಪ್ಪ ಇವನು ಮನೆಯಿಂದಾ ಯಾರಿಗೂ ಹೇಳದೆ ಕೇಳದೆ ಮನೆ ಬಿಟ್ಟು ಹೋದವನು ಈವರೆಗೂ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಸದರಿಯವನಿಗೆ ಪತ್ತೆ ಮಾಡಿಕೊಡಬೇಕು ಅಂತಾ ಕೊಟ್ಟ ಪಿರ್ಯಾದಿಯನ್ನು ಸ್ವೀಕರಿಸಿಕೊಂಡು ಕಲಘಟಗಿ ಪಿಎಸ್ ಗುನ್ನಾ ನಂ 250/2017 ಕಲಂ ಮನುಷ್ಯ ಕಾಣೆ ನೇದ್ದಕ್ಕೆ ದಾಖಲಿಸಿಕೊಂಡಿದ್ದು ಇರುತ್ತದೆ. 

Saturday, July 29, 2017

CRIME INCIDENTS 29-07-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 29/07/2017 ರಂದು ವರದಿಯಾದ ಪ್ರಕರಣಗಳು

1.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಛಬ್ಬಿ ಗ್ರಾಮದ ಹೊಸಪೇಟಿಯವರ ಓಣಿಯ ರಸ್ತೆಯ ಪಕ್ಕದಲ್ಲಿ ಆರೋಪಿ ಸೋಮಪ್ಪ ಸಿದ್ದಲಿಂಗಪ್ಪ ತಲ್ಲೂರ ಸಾ. ಛಬ್ಬಿ ಇವನು ಯಾವುದೇ ಪಾಸ ವ ಪರ್ಮಿಟ್ ಇಲ್ಲದೇ ಒಂದು ಚೀಲದಲ್ಲಿ ಒಟ್ಟು 170 ಓರಿಜನಲ್ ಚಾಯ್ಸ್ 90 ಎಂ. ಎಲ್ ದ ಟೆಟ್ರಾ ಪೌಚಗಳು ಅ.ಕಿ 4760/- ನೇದ್ದವುಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಮಾಲ ಸಮೇತ ಸಿಕ್ಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 176/2017 ಕಲಂ 34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Friday, July 28, 2017

CRIME INCIDENTS 28-07-2017
ಧಾರವಾಡ ಜಿಲ್ಲೆಯಲ್ಲಿ ದಿನಾಂಕ 28/07/2017 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿ: ಫಿರ್ಯಾದಿ ನಿಂಗಬಸವ್ವಾ ಬಸವರಾಜ ರಾಯಣ್ಣವರ ಇವಳ ತವರು ಮನೆ ಗುಡಿಸಾಗರ ಗ್ರಾಮವಿದ್ದು ಅಲ್ಲಿ ಪಕ್ಕದ ಮನೆಯವರು ಈ ಹಿಂದೆ ಫಿರ್ಯಾದಿದಾರಳ ತಾಯಿಯ ಸಂಗಡ ಬೈದಾಡಿ ಸಣ್ಣ ಪುಟ್ಟ ತಂಟೆಯಾಗಿದ್ದು ಇರುತ್ತದೆ. ಈಗ ಒಂದು ತಿಂಗಳು ಸುನ್ನೆ ತಿಂಗಳು ಇದ್ದುದರಿಂದ ಮತ್ತು ಫಿರ್ಯಾದಿದಾರಳು 6 ತಿಂಗಳು ಗರ್ಭಿಣಿ ಇದ್ದುದರಿಂದ ತನ್ನ ತವರು ಮನೆ ಗುಡಿಸಾಗರ ಗ್ರಾಮಕ್ಕೆ ಹೋಗಿದ್ದಳು ದಿನಾಂಕ 25-07-2017 ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ಫಿರ್ಯಾದಿದಾರಳು ತನ್ನ ತವರು ಮನೆ ಗುಡಿಸಾಗರದಲ್ಲಿ ಮನೆಯ ಮುಂದೆ ನಿಂತಾಗ ಪಕ್ಕದ ಮನೆಯ ಜನರಾದ 1) ಶಾಂತವ್ವಾ ಕೋಂ ಗುರಪ್ಪ ಗುಡಿಯಣ್ಣವರ 2) ಪ್ರವೀಣ ಗುರಪ್ಪ ಗುಡಿಯಣ್ಣವರ 3)ಸುದೀಪ ಗುರಪ್ಪ ಗುಡಿಯಣ್ಣವರ ಸಾ:ಎಲ್ಲರೂ ಗುಡಿಸಾಗರ ಇವರೆಲ್ಲರೂ ಕೂಡಿಕೊಂಡು ಬಂದವರೆ ಹಿಂದಿನ ತಂಟೆಯ ದ್ವೇಶ ಇಟ್ಟುಕೊಂಡು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಕಾಲಿನಿಂದ ಒದ್ದು ಹೊಡಿ ಬಡಿ ಮಾಡಿರುತ್ತಾರೆ. 1) ಶಾಂತವ್ವಾ ಗುರುಪ್ಪ ಗುಡಿಯಣ್ಣವರ ಈಕೆಯು ಫಿರ್ಯದಿಯ ಡುಬ್ಬಕ್ಕೆ ಕೈಯಿಂದ ಹೊಡೆದಿರುತ್ತಾಳೆ 2)ಪ್ರವೀಣ ಗುರಪ್ಪ ಗುಡಿಯಣ್ಣವರ ಈತನು ಫಿರ್ಯಾದಿಯ ಹೊಟ್ಟೆಗೆ ಒದ್ದು ಸೀರೆ ಹಿಡಿದು ಜಗ್ಗಾಡಿ ಮಾನಭಂಗ ಮಾಡಲು ಪ್ರಯತ್ನಿಸಿರುತ್ತಾನೆ. 3)ಸುದೀಪ ಈತನು ಫಿರ್ಯಾದಿಯ ಬೆನ್ನಿಗೆ ಕೈಯಿಂದ ಹೊಡಿ ಬಡಿ ಮಾಡಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 95/2017 ಕಲಂ IPC 1860 (U/s-323,325,354,504,34) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ:  ದಿನಾಂಕ 19-07-2017 ರಂದು ಮದ್ಯಾಹ್ನ 13-00 ಘಂಟೆಗೆ ಪಿರ್ಯಾದಿದಾರ ಮಂಜುನಾಥ ದುಗಱಪ್ಪ ವಾಲೀಕಾರ ಇತನು ತಮ್ಮ ಅತ್ತೆಯ ಮನೆಗೆ ಪಂಚಮಿ ಹಬ್ಬಕ್ಕೆ ಎಳ್ಳು ಮತ್ತು ಉಂಡೆಗಳನ್ನು ಕೊಡಲು ಅಂತಾ ಹೋದಾಗ ಆರೋಪಿತರಾದ ಅಮ್ರತಪ್ಪ ನವಲಗುಂದ, ಶಾಂತವ್ವಾ ನವಲಗುಂದ, ಮಂಜುನಾಥ ನವಲಗುಂದ, ಶೋಭಾ ನವಲಗುಂದ ಮತ್ತು ಪ್ರಶಾಂತ ಪೂಜಾರ ಇವರೆಲ್ಲರೂ ಕೂಡಿಕೊಂಡು ಪಿರ್ಯಾದಿದಾರನು ಪರಿಶಿಷ್ಟ ಜಾತಿಗೆ ಸೇರಿದವನು ಅಂತಾ ತಿಳಿದೂ ನೀವು ಹೊಲೆ ಮಾದಿಗರು ನಮ್ಮ ಮನೆತನದ ಗೌರವವನ್ನು ಹಾಳು ಮಾಡಿದಿರಿ ನಿಮ್ಮಿಂದ ನಮ್ಮ ಮನೆತನಕ್ಕೆ ಕಳಂಕ ಎಂದು ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ಬೈದಾಡಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 108/2017 ಕಲಂ IPC 1860 (U/s-504,34); Scheduled Castes and Scheduled Tribes (Prevention of Atrocities) Amendment Ordinance 2014 (U/s-3(1) (s)) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

Thursday, July 27, 2017

CRIME INCIDENTS 27-07-2017

ದಿನಾಂಕ. 27-07-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1)ಗರಗ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿಃ 27-07-2017 ರಂದು ಮುಂಜಾನೆ 07.10 ಗಂಟೆ ಸುಮಾರಿಗೆ KSRTC ಬಸ್ ನಂಬರಃ KA/22/F/1768 ನೇದ್ದನ್ನು  ಅದರ ಚಾಲಕ ನಾಗಪ್ಪ ಮರೆಪ್ಪ ಹಜೇರಿ  ಇವನು ಶಿಂಗನಹಳ್ಳಿಯಿಂದ ಧಾರವಾಡ ಕಡೆಗೆ ರಸ್ತೆಯ ಮೇಲೆ ನಡೆಸಿಕೊಂಡು ಬರುತ್ತಿರುವಾಗ ಸದರಿ ಬಸ್ಸನ ಎದರುಗಡೆಯಿಂದ ಶಿಂಗನಹಳ್ಳಿ ಕಡೆಗೆ ಮೋಟಾರ ಸೈಕಲ್ ಸವಾರನಾದ ಮಕ್ತುಂಸಾಬ ಕಾಸೀಮಸಾಬ ಹೊಳಿ ಸಾಃ ಶಿಂಗನಹಳ್ಳಿ ಇವನು ನಂಬರ ಪ್ಲೇಟ್ ಇಲ್ಲದ ತನ್ನ ಮೋಟಾರ ಸೈಕಲನ್ನು ಅತೀವೇಗದಿಂದ ವ ನಿಸ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯಕರ ರೀತಿಯಲ್ಲಿ ರಸ್ತೆಯಲ್ಲಿ ಅಡ್ಡ ತಿಡ್ಡಾಗಿ ನಡೆಸಿಕೊಂಡು ಬರುತ್ತಿದ್ದುದನ್ನು ನೋಡಿ  ಬಸ್ಸಿನ ಚಾಲಕ ತನ್ನ ಬಸ್ಸನ್ನು ರಸ್ತೆಯ ಎಡಬದಿಯಲ್ಲಿಯೇ ನಿಲ್ಲಿಸಿದಾಗ ಬಸ್ಸಿನ ಎಡಗಡೆ ಸೈಡಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ತಾನೇ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2)ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 26-07-2017 ರಂದು ರಾತ್ರಿ 9-30 ಗಂಟೆಯಿಂದ ದಿನಾಂಕ; 27-07-2017 ರಂದು ಬೆಳಗಿನ 8-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕರಡಿಗುಡ್ಡ ಗ್ರಾಮದಲ್ಲಿಯ ಪಿರ್ಯಾದಿಯ ಯಲ್ಲಪ್ಪ ವಿಠ್ಟಲ್ ಕುರಗುಂದ ರವರ ಪೋಟೊ ಸ್ಟೋಡಿಯೋದ ಬಾಗಿಲಕ್ಕೆ ಹಾಕಿದ ಕೀಲಿಯನ್ನು ಮುರಿದು ಒಳಗೆ ಪ್ರವೇಶ ಮಾಡಿ ಸ್ಟೋಡಿಯೊದಲ್ಲಿದ್ದ ಸಿಪಿಯು, ಮಾನಿಟರ್, ಯು.ಪಿ.ಎಸ್., ಪೋಟೊ ಪ್ರೀಂಟರ್, ಲ್ಯಾಮಿನೇಶನ್ ಮಶೀನ್ ಹಾಗೂ ಒಂದು ಟೇಬಲ್ ಪ್ಯಾನ ಒಟ್ಟು ಅ:ಕಿ: 23000/- ರೂ ಕಿಮ್ಮತ್ತಿನವುಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3)ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 26-07-2017 ರಂದು ಬೆಳಿಗ್ಗೆ 08-00 ಗಂಟೆ ಸುಮಾರಿಗೆ  ಒಟ್ಟು 06 ಜನ ಆರೋಪಿತ 1) Ningappa Hullappa Baddeppanavar , 2) Hanamantappa Hullappa Baddeppanavar, 3)Bharamappa Hullappa Baddeppanavar, 4) Premavva Baddeppanavar, 5) Laxmavva Bbaddeppanavar, Sannalaxamavva Baddeppanavar  ಇವರುಗಳು ಏಕೋದ್ದೆದಿಂದ ಸಂಗನಮತ ಮಾಡಿಕೊಂಡು ಪಿರ್ಯಾದಿಯಶೇಖಪ್ಪ ಸಿದ್ದಪ್ಪ ಕಪ್ಪತ್ತನವರ  ಮನೆಯ ಮುಂದೆ ಬಂದು ಹಾಯ್ದು ವಿದ್ಯುತ್ ಸಂಪರ್ಕ ತೆಗೆದುಕೊಳ್ಳುವ ವಿಷಯವಾಗಿ ಪಿರ್ಯಾದಿಗೆ ಮತ್ತು ಅವನ ಅಣ್ಣ ಮಲ್ಲಪ್ಪ ಇವನ ಜೊತೆ ತಂಟೆ ತೆಗೆದು ಕೈಯಿಂದ ಮತ್ತು ಬಡಿಗೆಯಿಂದ ಕಬ್ಬಿಣದ ರಾಡಿನಿಂದ ಕೊಡಲಿಯಿಂದ ಹೊಡಿ ಬಡಿ ಮಾಡಿ ಪಿರ್ಯಾದಿ ಅಣ್ಣನಿಗೆ ದುಖಾಪಾತ ಪಡಿಸಿ ಮತ್ತು ಅವ್ಯಾಚ್ಯ ಶಬ್ದಗಳಿಂದ ಬೈದು ಎಲ್ಲರೂ ಕೂಡಿಕೊಂಡು ಮಾರಾಕಾಸ್ತಗಳನ್ನು ತೋರಿಸುತ್ತಾ ನಿಮ್ಮನ್ನು ಕೊಲೆ ಮಾಡುತ್ತೆವೆ ಅಂತಾ ಜೀವಧ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

4) ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಆರೋಪಿತರು 1) Chambavva Siddappa Kappattanavar, 2) Mallappa Siddappa Kappattanavar, 3) Basavva Mallappa Kappattanavar, 4)Shekhappa Siddappa Kappattanavar, 5)Manjavva Shekhappa Kappattanavar, 6)Mahantesh Siddappa Kappattanavar, 7)Ningavva Mahantesh Kappattanavar, 8) Manjunath Mallappa Kappattanavar  ಇವರುಗಳು ಪಿರ್ಯಾದಿ ನಿಂಗಪ್ಪ ಬಡೇಪ್ಪನವರ  ಇವರ ಮನೆಯ ಹತ್ತಿರದ ಪಿರ್ಯಾದಿ ಸಂಬಂದಿಕರ ಮನೆ ಹಾಗು ಜಾಗೆಯ ಆಸ್ತಿಯನ್ನು ಖರೀದಿ ಮಾಡಿದ್ದು ಇರುತ್ತದೆ ಹಾಗು ಉಳಿದ ಪಿರ್ಯಾದಿ ಬಾಬತ್ ಮನೆ ಹಾಗು ಜಾಗೆಯನ್ನು ಪಿರ್ಯಾದಿಯಿಂದ ಬಡಿಸಿ ಖರೀದಿ ಮಾಡಬೇಕೆನ್ನುವ ಉದ್ದೆದಿಂದ ಆರೋಪಿತರು ದಿನಾಂಕ 26-07-2017 ರಂದು ಮುಂಜಾನೆ 07-45 ಘಂಟೆಗೆ ಪಿರ್ಯಾದಿಯ ಸಹೋದರನು ಅವರ ಮನೆಯ ಮುಂದೆ ಮುಖವನ್ನು ತೊಳೆದುಕೊಳ್ಳುವಾಗ ಆರೋಪಿತರು ಪಿರ್ಯಾದಿ ಸಹೋದರೊಂದಿಗೆ ಮುಖ ತೊಳೆಯುವ ಬಗ್ಗೆ ಹಾಗು ಬಾಂಡೆ ಸಾಮಾನುಗಳನ್ನು ತೊಳೆಯುವ ಬಗ್ಗೆ ತಂಟೆ ತೆಗೆದು ಗುಂಪು ಕಟ್ಟಿಕೊಂಡು ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ಹೋಗಿ ಪಿರ್ಯಾದಿ ಸಹೋದರನಿಗೆ ಅಡ್ಡಗಟ್ಟಿ ತರುಬಿ ಅವಾಚ್ಯವಾಗಿ ಬೈದಾಡಿ ಅವನಿಗೆ ಹಾಗು ಅವನ ಹೆಂಡತಿಗೆ ಕೈಯಿಂದ ಹಾಗು ಬಡಿಗೆಯಿಂದ ಹೊಡೆದು ಗಾಯಗೊಳಿಸಿ ಅವನ ಹೆಂಡತಿಯ ಸೀರೆಯನ್ನು ಹಿಡಿದು ಎಳೆದಾಡಿ ಮಾನಬಂಗ ಪಡಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


5) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 25-07-2017 ರಂದು ಮದ್ಯಾಹ್ನ 02-00 ಗಂಟೆಗೆ ಮೃತ ಶಾರದಾ ಕೋಂ ಗದಗೈಯ್ಯಾ ಹಿರೇಮಠ ವಯಾ 65 ವರ್ಷ ಸಾ|| ಉಗ್ನಿಕೇರಿ ತಾಲೂಕ ಕಲಘಟಗಿ ಇವಳು ದಿನಾಂಕ 25-07-2017 ರಂದು ಮದ್ಯಾಹ್ನ 02-00 ಗಂಟೆಯ ಸುಮಾರು ತಮ್ಮ ಮನೆಯ ಮುಂದಿನ ಕಟ್ಟೆಯ ಮೇಲಿಂದ ಅಕಸ್ಮಾತ ಜೋಲಿ ಹೋಗಿ ಕೆಳಗೆ ಬಿದ್ದು ತ್ರಾಸ ಮಾಡಿಕೊಳ್ಳುವಾಗ ಉಪಚಾರಕ್ಕೆ ಎಂದು ಹುಬ್ಬಳ್ಳಿಯ ಜ್ಯೋಶಿ ದವಾಖಾನೆಗೆ ತೋರಿಸಿ ಅಲ್ಲಿಂದ ಲೈಪಲೈನ ಆಸ್ಪತ್ರೆಗೆ ತೋರಿಸಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಉಪಚಾರಕ್ಕೆ ದಾಖಲ್ ಮಾಡಿದವಳು ಉಪಚಾರದಿಂದ ಗುಣ ಹೊದದೆ ಈ ದಿನ ದಿನಾಂಕ 27-07-2017 ರಂದು ಮದ್ಯಾಹ್ನ 14-00 ಗಂಟೆಗೆ ಮೃತಪಟ್ಟಿದ್ದು ಅವಳ ಮರಣದಲ್ಲಿ ಬೇರೆ ಯಾವ ಮತ್ತು ಯಾರ ಮೇಲೆ ಸಂಶಯ ಇರುವದಿಲ್ಲಾ ಅಂತಾ ಮೃತಳ ಮಗ ವರದಿ ಇದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರದಿರುತ್ತದೆ. 

Wednesday, July 26, 2017

CRIME INCIDENTS 26-07-2017ದಿನಾಂಕ. 26-07-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1)ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಯರಿನಾರಾಯಣಪೂರ ಗ್ರಾಮದಲ್ಲಿ ದಿನಾಂಕ: 23-06-2017 ರಂದು ಮುಂಜಾನೆ 11-30 ಗಂಟೆಗೆ ಪಿರ್ಯಾದಿ ಮನೆಯಲ್ಲಿಂದ ಇದರಲ್ಲಿ ಕಾಣೆಯಾದ ಮರೆವ್ವ ಕೋಂ ಈಶ್ವರಪ್ಪ ಕಾಳಿ. ವಯಾ: 24 ವರ್ಷ, ಸಾ: ಯರಿನಾರಾಯಣಪೂರ, ತಾ: ಕುಂದಗೋಳ ಇವಳು ಹುಬ್ಬಳ್ಳಿಯ ತಾನು ಕಲಿಯುವ ಕಾಲೇಜಿಗೆ ಹೋಗಿ ಲೈಬ್ರರಿಯಲ್ಲಿಯ ಪುಸ್ತಕಗಳನ್ನು ಕೊಟ್ಟು ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವರು ಇದೂವರೆಗೂ ಬಾರದೇ ಕಾಣೆಯಾಗಿದ್ದು  ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಕಾಣೆ ಪ್ರಕರಣ ದಾಖಲಾಗಿದ್ದು ಇರುತ್ತದೆ.

2)ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 16-07-2017 ರಂದು 23-00 ಘಂಟೆಯಿಂದ ದಿನಾಂಕ 17-07-2017 ರಂದು ಮುಂಜಾನೆ 07-00 ಘಂಟೆಯ ನಡುವಿನ ಅವಧಿಯಲ್ಲಿ ಅಣ್ಣಿಗೇರಿಯ ಸಿಕ್ಕೆದೇಸಾಯಿ ರವರ ಖುಲ್ಲಾ ಜಾಗೆಯಲ್ಲಿ ನಿಲ್ಲಸಿದ್ದ ಪಿರ್ಯಾದಿ ಬಸವರಾಜ ದಿವಟರ್ ಬಾಬತ್ ಟ್ರ್ಯಾಕ್ಟರ್ ಇಂಜಿನ್ ರೆಜಿಸ್ಟ್ರೆನ್ ನಂಬರ್ CG-04/ZQ 7405 ಅಕಿ 100000/- ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


3)ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ದಿಃ26-07-2017 ರಂದು ಮದ್ಯಾಹ್ನ 3-30 ಗಂಟೆ ಸುಮಾರಿಗೆ ಯರಿಕೊಪ್ಪ ಟೋಲ್ ಗೇಟ್ ಕಡೆಯಿಂದ ಯರಿಕೊಪ್ಪ ಗ್ರಾಮದ ಕಡೆಗೆ  ಕಂಟೇನರ್  ಲಾರಿ ನಂ. ಎಚ.ಆರ್. 55 ಆರ್ 6559 ನೇದ್ದನು ಅದರ ಚಾಲಕ ಅಬ್ದುಲ್ ಮಜೀದ ತಂದೆ ನಜೀರ ಹುಸೇನ ಸಾ: ಕೊಲೇನ್ , ಪೋಂಚ್, ಪಂಚ್, ರಾಜ್ಯ ಜಮ್ಮು ಮತ್ತು ಕಾಶ್ಮೀರ್ ಈತನು ಅತೀ ಜೋರಿನಿಂದ ಅಲಕ್ಷತನದಿಂದ ನಡೆಸಿಕೊಂಡು ಬಂದು ಯರಿಕೊಪ್ಪ ಬೈಪಾಸ್ ಅಂಡರ್ ಬ್ರೀಜ್ ಹತ್ತಿರ ರಸ್ತೆಯ ಬದಿಗೆ ಹೊರಟ ಒಬ್ಬ ಅನಾಮಧೇಯ ಗಂಡಸು ಅಜಮಾಸ 40-45 ವಯಸ್ಸಿನವನಿಗೆ ಡಿಕ್ಕಿ ಮಾಡಿ  ಅಪಘಾತಪಡಿಸಿ ಮರಣಾಂತಿಕ ಘಾಯ ಪಡಿಸಿ  ಸ್ಥಳದಲ್ಲಿಯೇ ಮರಣ ಪಡಿಸಿದ್ದು ಇರುತ್ತದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 

Tuesday, July 25, 2017

CRIME INCIDENTS 25-07-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 25/07/2017 ರಂದು ವರದಿಯಾದ ಪ್ರಕರಣಗಳು

1 ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಕಲಘಟಗಿ ರಸ್ತೆ ನುಗ್ಗಿಕೇರಿ ಗ್ರಾಮದ ಸಮೀಪ ರಸ್ತೆಯ ಲಾರಿ ನಂ ಕೆಎ-25-ಸಿ-5713 ನೇದರ ಚಾಲಕನು ತನ್ನ ಟಿಪ್ಪರ ಲಾರಿಯನ್ನು ಧಾರವಾಡ ಕಡೆಯಿಂದ ಕಲಘಟಗಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಕಲಘಟಗಿ ಕಡೆಯಿಂದ ಧಾರವಾಡ ಕಡೆಗೆ ರಸ್ತೆ ಎಡಸೈಡಿನಲ್ಲಿ ಬರುತ್ತಿದ್ದ  ಆನಂದ ಜೋಶಿ ಇವರ ವಿ.ಆರ್.ಎಲ್  ಕಂಪನಿಯ ಲಾರಿ ನಂ ಕೆಎ-25-ಎ-5953 ನೇದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ತನಗೆ ಹಾಗೂ ತನ್ನ ಲಾರಿಯಲ್ಲಿದ್ದ ದೊಡ್ಡಪ್ಪ ಬಸಪ್ಪ ತೊಲಗಿ ಇವನಿಗೆ ಸಾದಾ ವ ಬಾರೀ ಗಾಯಪಡಿಸಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 153/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
 
2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಅಜಂನಬಾವಿ ಗ್ರಾಮದ  ನೀಲವ್ವ ಪಾಯಣ್ಣವರ ಇವರ ಮನೆ ಮುಂದೆ ಇದರಲ್ಲಿ ಆರೋಪಿತರಾದ 1) ಭರಮವ್ವ ಕೋಂ ರಾಮಣ್ಣ ಅಡಿವೆಪ್ಪನವರ ಸಾ: ಕುಂದಗೋಳ 2) ಮಲ್ಲಪ್ಪ ಮಹಾದೇವಪ್ಪ ಬಾರಕೇರ. ಸಾ: ಕುಬಿಹಾಳ, ಹಾಲಿ ವಸ್ತಿ ಲಕ್ಷ್ಮೇಶ್ವರ, 3) ಶಾಂತವ್ವ ಕೋಂ ರಾಮಣ್ಣ ಹುಲಗೂರ. ಸಾ: ಕುಂದಗೋಳ 4) ಸುನಂದವ್ವ ಕೋಂ ಫಕ್ಕೀರಪ್ಪ ಪೂಜಾರ. ಸಾ: ಕುಂದಗೋಳ 5) ಬಸಪ್ಪ ಮಹಾದೇವಪ್ಪ ಬಾರಕೇರ. ಸಾ: ಕುಬಿಹಾಳ, ಹಾಲಿ: ನೂಲ್ವಿ 6) ನೀಲವ್ವ ಕೋಂ ಬಸಪ್ಪ ಬಾರಕೇರ. ಸಾ: ಕುಬಿಹಾಳ, ಹಾಲಿ: ನೂಲ್ವಿ 7) ಯಮನಪ್ಪ ಸೋಮಪ್ಪ ಪಾಯಕ್ಕನವರ ಸಾ: ಕುಂದಗೋಳ 8) ಟೋಪಣ್ಣ ರಾಮಣ್ಣ ಹುಲಗೂರ. ಸಾ: ಕುಂದಗೋಳ 9) ರಾಜೇಶ್ವರಿ ಕೋಂ ಯಮನಪ್ಪ ಪಾಯಕ್ಕನವರ ಸಾ: ಕುಂದಗೋಳ 10) ಹನಮಂತಪ್ಪ ಮಹಾದೇವಪ್ಪ ಬಾರಕೇರ. ಸಾ: ಕುಬಿಹಾಳ ಇವರೇಲ್ಲರೂ ಗೈರ ಕಾಯ್ದೇಶಿರ ಮಂಡಳಿಯಾಗಿ ಸಂಗನಮತ ಮಾಡಿಕೊಂಡು ಪಿರ್ಯಾದಿಗೆ ಹಾಗೂ ಪಿರ್ಯಾದಿಯ ಗಂಡನಿಗೆ ಕೋರ್ಟಿನಲ್ಲಿ ಸಾಕ್ಷಿ ಹೇಳಿದ್ದಕ್ಕೆ ಅವಾಚ್ಯ ಬೈಯ್ದಾಡಿ, ಜೀವಧ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 116/2017 ಕಲಂ 143.147.504.506.149 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.