ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, July 1, 2017

CRIME INCIDENTS 01-07-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ01/07/2017 ರಂದು ವರದಿಯಾದ ಪ್ರಕರಣಗಳು

. 1.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಖಾನಾಪುರದಿಂದಾ ಕೊದಾನಪುರಕ್ಕೆ ಹೋಗುವ ರಸ್ತೆ ಮೇಲೆ ಕೊದಾನಪುರ ಕ್ರಾಸ ಹತ್ತಿರ ಆರೋಪಿತನಾದ ವಿಶ್ವನಾಥ ಹಿರೇಮಠ ಇತನು ತನ್ನ ಬಾಬತ್ತ ಲಾರಿ ನಂಬರಃ ಕೆಎಃ25/ಸಿ/6078 ನೇದ್ದನ್ನು ಖಾನಾಪುರ ಕಡೆಯಿಂದಾ ಕೊದಾನಪುರ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಹೋಗಿ ರಸ್ತೆ ಬಲ ಬದಿಯ ಸರುವಿನಲ್ಲಿ ಲಾರಿ ಪಲ್ಟಿ ಮಾಡಿ ಅಪಘಾತಪಡಿಸಿ ಲಾರಿ ಕ್ಲೀನರಗೆ ಭಾರಿಗಾಯಪಡಿಸಿದ್ದಲ್ಲದೆ ತಾನು ಸಾದಾ ಗಾಯಪಡಿಸಿದ್ದು ಇರುತ್ತದೆ  ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 94/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2.  ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ನಿಗದಿ  ಕಾಣೆಯಾದ ಶ್ರೀಮತಿ ರೇಣುಕಾ ಕೋಂ. ಫಕ್ಕೀರಪ್ಪ ಹರಿಜನ, ವಯಾ 25 ಜಾತಿ ಹಿಂದೂ ಮಾದರ ವೃತ್ತಿ ಮನೆ ಕೆಲಸ ಸಾ ಃ ನಿಗದಿ ಗ್ರಾಮ ತಾ ಃ ಜಿಲ್ಲಾ ಧಾರವಾಡ ಅವಳು ತನ್ನ ಮಕ್ಕಳಾದ 1] ಚೇತನಾ, 3 ವರ್ಷ  2] ಕಾರ್ತಿಕ, 11 ತಿಂಗಳು ಇವರನ್ನು ಕರೆದುಕೊಂಡು ತನ್ನ ದೊಡ್ಡವಳಿಗೆ ಆರಾಮ ಇಲ್ಲಾ ಅಂತಾ ಧಾರವಾಡ ಸಿವಿಲ್ ಆಸ್ಪತ್ರೆಗೆ ಹೋಗಿ ನೋಡಿಕೊಂಡು ಬರುತ್ತೇನೆ ಅಂತಾ ಹೇಳಿ ತನ್ನ ಮನೆಯಿಂದ ಹೋದವಳು ಇಲ್ಲಿಯವರೆಗೂ ಬಾರದೇ ಎಲ್ಲಿಯೋ ಹೋಗಿ ಮಕ್ಕಳೊಂದಿಗೆ ಕಾಣೆಯಾಗಿರುತ್ತಾಳೆ ಸದರಿಯವಳನ್ನು ಹಾಗೂ ಮಕ್ಕಳನ್ನು ತಮ್ಮ ಸಂಬಂಧಿಕರಲ್ಲಿ ಗ್ರಾಮದ ಸುತ್ತ ಮುತ್ತಲಿನ ಎಲ್ಲಾ ಕಡೆಗಳಲ್ಲಿ ಸಿಕ್ಕಿರುವುದಿಲ್ಲ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 78/2017 ಕಲಂ ಮಹಿಳೆ ಕಾಣೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3.ಅಳ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯ: ಮುಜಾಗೃತ ಕ್ರಮಗಾಗಿ ಗುನ್ನಾನಂ 77/2017 ಕಲಂ 107 ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.
4. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಬೇಲೂರು ಫ್ಯಾಕಟರಿ ಹತ್ತಿರ  ಕಾರ ನಂ ಕೆಎ25 ಎಮ್ ಬಿ  4565 ನೇದರ ಚಾಲಕನು ತನ್ನ ಕಾರನ್ನು ಹೈ ವ್ಹೇ ರಸ್ತೆಯ ಕಡೆಯಿಂದಾ  ಬೇಲೂರ ಎನ್ ಟಿಟಿಎಪ್ ಕಾಲೇಜಿನ ಕಡೆಗೆ ಅತೀ ಜೋರಿನಿಂದಾ ವ ನಿಷ್ಕಾಳಜೀತನದಿಂದಾ ನಡೆಯಿಸಿಕೊಂಡು ಬಂದು ಕಾಲೇಜ ಸಮಿಪ್ಪ ರಸ್ತೆಯ ಬಲ ಬದಿಯ ಕಚ್ಚಾ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ ಪೂಜಾಹಲಗತ್ತಿ ಇವಳಿಗೆ ಹಾಗೂ ಅವಳ ಗೆಳತಿಯರಿಗೆ ಡಿಕ್ಕಿ ಮಾಢಿ ಅಪಘಾತಪಡಿಸಿ ಪಿರ್ಯಾದಿಗೆ ಸಾದಾ ಗಾಯಪಡಿಸಿ ಗೆಳತಿಯರಿಗೆ ಬಾರಿಗಾಯ ಪಡಿಸಿ ತನ್ನ ಕಾರನ್ನು ನೀಲ್ಲಿಸದೆ ಹಾಗೆ ಹೋಗಿದ್ದು ಇರುತ್ತದೆ ಈ ಕುರಿತು ಗರಗ  ಪೊಲೀಸ್ ಠಾಣೆಯಲ್ಲಿ ಗುನ್ನಾನಂ 95/2017 ಕಲಂ  279.337.338 ಹಾಗೂ ವಾಹನ ಕಾಯ್ದೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.