ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, July 3, 2017

CRIME INCIDENTS 03-07-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ03/07/2017 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಗುಡಿಸಾಗರ ಬಾಬುಗೌಡ ಜಕ್ಕಣಗೌಡ್ರ ಇವರ ಮನೆಯಲ್ಲಿ ಯಾರೋ ಕಳ್ಳರು ದಿನಾಂಕ 03-07-2017 ರಂದು ಸಮಯ ಬೆಳಗಿನ  ಅವಧಿಯಲ್ಲಿ ಗುಡಿಸಾಗರ ಗ್ರಾಮದ ಜೈನ ಬಸದಿಯ ತಾತ್ಕಾಲಿಕ ಶೆಡ್ಡಿನಲ್ಲಿ ಇರಿಸಿದ್ದ ಅ.ಕಿ-15,000 ಮೌಲ್ಯದ 24 ನೇ ತೀರ್ಥಂಕರ ಮತ್ತು ಮಹಾವೀರನ ಮೂರ್ತಿಗಳನ್ನು ಕೀಲಿ ಮುರಿದು ಕಳವು ಮಾಡಿಕೊಕಂಡು ಹೋಗಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 87/2017 ಕಲಂ 457 380 ಐಪಿಸ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಕುಂದಗೋಳ ಶಹರದ ನವರತ್ನ ಹೊಟೇಲ್ ಮುಂದೆ  ಆರೋಪಿತರಾದ 1) ಗಣೇಶ ವಿಠ್ಠಲ್ ಕೊಕಾಟೆ, 2) ಪಾಂಡುರಂಗ ಕೃಷ್ಣಾ ಕುಂಕೂರ, 3) ಗಣೇಶ ಈಶ್ವರಪ್ಪ ಚವ್ಹಾಣ. ಸಾ: ಎಲ್ಲರೂ ಕುಂದಗೋಳ ಇವರು ಹೊಟೇಲ್ ಮುಂದೆ ಹೋಗಿ ಬರುವ ಜನರಿಗೆ ಬೈಯ್ದಾಡಹತ್ತಿದ್ದಕ್ಕೆ ಪಿರ್ಯಾದಿ ಹಾಗೂ ಯಲ್ಲಪ್ಪ ಫಕ್ಕೀರಪ್ಪ ಭಜಂತ್ರಿ ಇವರು ಅವರಿಗೆ ಹೀಗೆಕೆ ಮಾಡುತ್ತಿರುವಿರಿ ಅಂತಾ ಬುದ್ದಿವಾದ ಹೇಳಿದ್ದಕ್ಕೆ ಅವರೇಲ್ಲರೂ ಸೇರಿ ಹಾಗೂ ಯಲ್ಲಪ್ಪ ಫಕ್ಕೀರಪ್ಪ ಭಜಂತ್ರಿ ಇವರಿಗೆ ಅವಾಚ್ಯ ಬೈಯ್ದಾಡಿ ಅಡ್ಡಗಟ್ಟಿ ತರುಬಿ ಕೈಯಿಂದ ಹೊಡೆ ಬಡೆ ಮಾಡಿ ಸಮವಸ್ತ್ರ ಹಿಡಿದು ಎಳೆದಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ಈಗ ಉಳಕೊಂಡ್ರಿ ಇನ್ನೊಮ್ಮೆ ಸಿಗ್ರಲೇ ನಿಮ್ಮನ್ನ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವಧ ಧಮಕಿ ಹಾಕಿದ್ದು ಇರುತ್ತದೆ ಈ, ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 100/2017 ಕಲಂ 323.341.353.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.