ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, July 4, 2017

CRIME INCIDENTS 04-07-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ04/07/2017 ರಂದು ವರದಿಯಾದ ಪ್ರಕರಣಗಳು

1 ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ಬಸ್ ನಿಲ್ದಾಣ ಹತ್ತಿರ ಆರೋಪಿತನಾದ  ಕಿರಣ  ಶೆಟ್ಟಿ ಇವನು ನವಲಗುಂದ ಬಸ್ ನಿಲ್ದಾಣದ ಹತ್ತಿರ  ಸಾರ್ವಜನಿಕ ರಸ್ತೆಯ ಮೇಲೆ ತನ್ನ ಸ್ವಂತ ಪಾಯಿದೇಗೋಸ್ಕರ ಪಾಸ್ ವ ಪರ್ಮೀಟ್ ಇಲ್ಲದೆ ಸಾರಾಯಿ ಪಾಕೇಟ್ ಗಳನ್ನು ಮಾರಾಟ ಮಾಡುತ್ತಿದ್ದಾಗ 38 ಹೈವರ್ಡ್ಸ ವ್ಹಿಸ್ಕಿ 90 ಎಮ್ ಎಲ್ ದ ಟೆಟ್ರಾ ಪ್ಯಾಕೇಟ್ ಗಳ  ವಶಪಡಿಸಿಕೊಂಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 88/2017 ಕಲಂ 32,34, ಅಬಕಾರಿ ಕಾಯ್ದೆ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಜಾವುರ ಗ್ರಾಮದ ಬಸ್ ನಿಲ್ದಾಣ ಹತ್ತರಿ ಆರೋಪಿತನಾದ  ಹನಮಂತಪ್ಪ ಬೆಳ್ಳಿಕುಪ್ಪಿ ಎಂಬ ಜಾವೂರ ಗ್ರಾಮದ ಬಸ್ ನಿಲ್ದಾಣದ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ತನ್ನ ಸ್ವಂತ ಪಾಯಿದೇಗೋಸ್ಕರ ಪಾಸ್ ವ ಪರ್ಮೀಟ್ ಇಲ್ಲದೆ ಸಾರಾಯಿ ಪಾಕೇಟ್ ಗಳನ್ನು ಮಾರಾಟ ಮಾಡುತ್ತಿದ್ದಾಗ 39  ಹೈವರ್ಡ್ಸ ವ್ಹಿಸ್ಕಿ 90 ಎಮ್ ಎಲ್ ದ ಟೆಟ್ರಾ ಪ್ಯಾಕೇಟ್ ಗಳ  ವಶಪಡಿಸಿಕೊಂಡಿದ್ದು  ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 89/2017 ಕಲಂ 32,34, ಅಬಕಾರಿ ಕಾಯ್ದೆ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಮಿಶ್ರಿಕೋಟಿ ಗ್ರಾಮದ ರಾಯಸಾಬ ಮುಲ್ಲಾ ಇವರು ಮನೆಯಿಂದಾ ಇವರ  ಮಗಳಾದ ಅಪಸಾನಾ ತಂದೆ ರಾಯೇಸಾಬ ಮುಲ್ಲಾ 15 ವರ್ಷ ಸಾ..ಮಿಶ್ರಿಕೋಟಿ ಇವಳು ತನ್ನ ವಾಸದ ಮನೆಯಲ್ಲಿ ಒಬ್ಬಳೆ ಇದ್ದಾಗ ಆರೋಪಿತನಾದ ಆಶ್ಪಾಕ ತಂದೆ ಕಾಶೀಂಸಾಬ ಟೊನ್ನೀಮೀರನ್ನವರ ಇವನು ಹಜರತಅಲಿ ತಂದೆ ಕಾಶೀಂಸಾಬ ಟೊನ್ನೀಮೀರನ್ನವರ  ಹಾಗು ಸೈಯದ ತಂದೆ ಕಾಶೀಂಸಾಬ ಟೊನ್ನೀಮೀರನ್ನವರ ಇವರ ಕುಮ್ಮಕ್ಕಿನಿಂದಾ ಪುಸಲಾಯಿಸಿ ಒತ್ತಾಯದಿಂದ ಯಾವುದೋ ಉದ್ದೇಶಕ್ಕಾಗಿ ಅಪಹರಿಸಿಕೊಂಡು ಹೋಗಿದ್ದನ್ನು ಕೇಳಲು ಹೋಗಿದ್ದಕ್ಕೆ ಅವಾಚ್ಯ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 236/2017 ಕಲಂ 363.504.506.109.34. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಪಾಳಿ  ಗ್ರಾಮದ  ಮೃತ ವಿದ್ಯಾಸಾಗರ ವಿಜಯಕುಮಾರ ಹನಮಕ್ಕನವರ ವಯಾ. 15 ವರ್ಷ ಸಾ. ಛಬ್ಬಿ ಇವನು ತನ್ನ ಗೆಳೆಯರೊಂದಿಗೆ ಪಾಳೆ ಗ್ರಾಮದ ಶ್ರೀಮತಿ ಅನುಷಾ ಕೋಂ ಎಸ್.ವಿ ಪ್ರಸಾದ ಸಾ. ಹುಬ್ಬಳ್ಳಿ ಇವರ ಕಲ್ಲಿನ ಕ್ವಾರಿಯಲ್ಲಿ ನಿಂತಿದ್ದ ನೀರಿನಲ್ಲಿ ಈಜಲು ಹೋಗಿ, ಆಕಸ್ಮಾತ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಸದರಿಯವನು ನೀರಿನಲ್ಲಿ ಮುಳುಗಿ ಮೃತಪಟ್ಟಿರುವನೋ ಅಥವಾ ಬೇರೆ ಯಾವುದೋ ಕಾರಣದಿಂದ ಮೃತಟ್ಟಿರುವನೋ ಎನ್ನುವ ಬಗ್ಗೆ ಸಂಶಯವಿರುತ್ತದೆ ಅಂತಾ ವಿಜಯ ಕುಮಾರ ಹನಮಕ್ಕನವರ    ಫಿಯಾಱಧಿ ನೀಡಿದ್ದು  ಈ ಕುರಿತು ಹುಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 25/2017 ಕಲಂ 174 ಸಿ.ಆರ್.ಪಿ.ಸಿ. ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ತನಿಖೆಯನ್ನು ಕೈಗೂಂಡಿದ್ದು ಇರುತ್ತದೆ

5. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ತಂಬೂರ ಗ್ರಾಮದ ಮೃತ ಸತೀಶ ತಂದೆ ಬಾಲಕೃಷ್ಣ ಕಮ್ಮಾರ ವಯಾ 18 ವರ್ಷ ಇವನು ಚಿಕ್ಕಂದಿನಲ್ಲೆ ತನ್ನ ಅಜ್ಜಾ ಅಜ್ಜಿ ಮನೆಯಲ್ಲಿ ಇದ್ದವನಿಗೆ ಆಗಾಗ  ಹೊಟ್ಟೆ ನೋವು ಬರುತ್ತಿದ್ದು ಅದಕ್ಕೆ ದಾವಾಖಾನೆಗೆ ತೊರಿಸುತ್ತೇವೆ ಎಂದು ಹೇಳಿದಾಗ ನಾನು ದವಾಖಾನೆಗೆ ಬರುವದಿಲ್ಲಾ ಅಂತಾ ಹೇಳುತ್ತಾ ಇದ್ದವನಿಗೆ ನಮ್ಮ ತಾಯಿ ತನ್ನ ಊರಲ್ಲಿ ಕೊಟ್ಟ ಗೌಂಟಿ ಔಷದ ಸೇವನೆ ಮಾಡುತ್ತಾ ಇದ್ದವನು ತನಗಿದ್ದ ತೊಂದರೆಯಿಂದ ತನ್ನ ಜೀವನದಲ್ಲಿ ಬೇಸರಗೊಂಡು ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯಲ್ಲಿ ಹಗ್ಗದ ಸಹಾದಿಂದ ಜಂತಿಗೆ ಹಗ್ಗದ ಸಹಾದಿಂದ ುರಲು ಹಾಕಿಕೊಂಡು ಮೃತಪಟ್ಟಿದ್ದು ಅವನ ಮರಣದಲ್ಲಿ ಬೇರೆ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತನ ತಾಯಿಮಹಾದೇವಿ  ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 38/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ. 

6. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ನವಲಗುಂದ ಗ್ರಾಮದ ಮೃತ ಮಲ್ಲಿಕಾಜುಱನ ಯಲ್ಲಪ್ಪಾ ದೇವತ್ತರ ಇವರು  ಈ ಹಿಂದೆ ಮಾಡಿದ ಸಾಲದ ಸಲುವಾಗಿ ಮತ್ತು ಮಳೆ ಬೆಳೆ ಬಾರದಕ್ಕೆ ಮಾನಸಿಕ ಮಾಡಿಕೊಂಡು ಕೆಲಸ ಮಾಡುವ ಬಗ್ಗೆ ಸಿಟ್ಟು ಮಾಡಿದ್ದಕ್ಕೆ ಮನೆ ಬಿಟ್ಟು ಹೋಗಿ ಬೆಣ್ಣಿ ಹಳ್ಳದ ಪೂಲನಿಂದ ಬಿದ್ದು ಆತ್ಮಹತ್ಯ ಮಾಡಿಕೊಂಡಿರುತ್ತಾನೆ.ಹೊರತು ಅವನ ಮರಣದಲ್ಲಿ ಬೇರೆ ಏನೂ ಸಂಶಯವಿರುವುದಿಲ್ಲ ಅಂತಾ ಮೃತನ  ತಂದೆಯ ಯಲಪ್ಪಾ ಫಿಯಾಱದಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 19/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ