ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, July 5, 2017

CRIME INCIDENTS 05-07-2017


ಧಾರವಾಡ ಜಿಲ್ಲೆಯಲ್ಲಿ ದಿನಾಂಕ 05/07/2017 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಜಾವುರ ಗ್ರಾಮದ ಮೃತ ಶಿವಾನಂದ ಈತನು ಈ ಹಿಂದೆ ಮಾಡಿದ ಸಾಲದ ಸಲುವಾಗಿ ಮತ್ತು ಈ ವರ್ಷ ಮಳೆ ಬೆಳೆ ಬಾರದೆ ಮಾನಸಿಕ ಮಾಡಿಕೊಂಡು ಈ ದಿನ ನಮ್ಮೂರಿನ ಕರೆ ಪಕ್ಕದಲ್ಲಿರುವ ಶಿವಾನಂದ ಬಸಪ್ಪ ಶಿರೂರವರ ಹೊಲದ ಬೇವಿನ ಮರಕ್ಕೆ ಉರುಲು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿದ್ದು ಇರುತ್ತದೆ ಹೊರತು ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ ಅಂತಾ ಮೃತನ ಹೆಂಡತಿ ಹುಚ್ಚವ್ವ ಶಿವಾನಂದ ಫಿಯಾಱಧಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 20/2017 ಕಲಂ 174 ಸಿ.ಆರ್ .ಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಸಂಶಿ ಗ್ರಾಮದ ಮೃತ ಬಸಣ್ಣೆವ್ವ ಕೊಂ ಚನ್ನಬಸಪ್ಪ ನಾವಿ ವಯಾ: 75 ವರ್ಷ ಸಾ: ಸಂಶಿ ತಾ: ಕುಂದಗೋಳ ಇವಳು ಮನೆಯಲ್ಲಿ ಚಹಾ ಕಾಯಿಸಲು ಅಂತಾ ಒಲೆ ಹತ್ತಿರ ಹೋಗಿ ಸೀಮೆ ಎಣ್ಣೆ ಹಾಕಿ ಬೆಂಕಿ ಕಡ್ಡಿ ಕರೆದು ಒಲೆ ಹಚ್ಚುತ್ತಿದ್ದಾಗ ಅಕಸ್ಮಾತ್ ಸೀಮೆ ಎಣ್ಣೆ ಅವಳು ಉಟ್ಟುಕೊಂಡಿದ್ದ ಸೀರೆ ಮೇಲೆ ಬಿದ್ದು ಮೈಗೆ ಬೆಂಕಿ ಹತ್ತಿ ಸುಟ್ಟ ಗಾಯಗಳಾಗಿ ಉಪಚಾರ ಕುರಿತು ಕುಂದಗೋಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಉಪಚಾರ ಫಲಿಸದೇ ಮೃತಪಟ್ಟಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ  ಯುಡಿನಂ 19/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

3.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾನಂ 98/2017 ಕಲಂ 107 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ


4.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾನಂ 135/2017, 136/2017 ಕಲಂ 107 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.